ಪಿಡಿಓ ಅಧಿಕಾರಿ ಹುದ್ದೆ ಪಡೆದ ಕನ್ನಡತಿ ಧಾರಾವಾಹಿ ನಟಿ ರಂಜನಿ ರಾಘವನ್..

0 views

ಕನ್ನಡ ಕಿರುತೆರೆಯಲ್ಲಿ ಸದ್ಯ ವಿಭಿನ್ನ ಕತೆ ಹಾಗೂ ನೈಜ್ಯ ನಟನೆ ಮತ್ತು ಸಂಭಾಷಣೆ ಮೂಲಕ ಜನರ ಮನ ಗೆದ್ದ ಧಾರಾವಾಹಿ ಕನ್ನಡತಿ ಧಾರಾವಾಹಿ ನಟಿ ರಂಜನಿ ರಾಘವನ್ ಇದೀಗ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ.. ಹೌದು ಅಷ್ಟಕ್ಕೂ ಅಸಲಿ ವಿಚಾರವೇನು ಇಲ್ಲಿದೆ ನೋಡಿ.. ಕನ್ನಡ ಕಿರುತೆರೆಯಲ್ಲಿ ಪುಟ್ಟ ಗೌರಿ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಒಂದೇ ಧಾರಾವಾಹಿಗೆ ನಿರೀಕ್ಷೆಗೂ ಮೀರಿದ ಯಶಸ್ಸು ಪಡೆದರು.. ಪುಟ್ಟ ಗೌರಿ ಎಂದೇ ಖ್ಯಾತರಾದರು.. ಆದರೆ ಧಾರಾವಾಹಿ ಬಹಳಷ್ಟು ವರ್ಷ ಎಳೆದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆದರು.. ಆದರೆ ಅದೆಲ್ಲವನ್ನೂ ಸಕಾರಾತ್ಮಕವಾಗಿಯೇ ತೆಗೆದುಕೊಂಡ ನಟಿ ರಂಜನಿ ರಾಘವನ್ ಆ ಟ್ರೋಲ್ ಗಳನ್ನು ಸಹ ಸಂತೋಷದಿಂದ ಅವರ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿಯೇ ಶೇರ್ ಮಾಡಿಕೊಳ್ಳುತ್ತಿದ್ದರು..

ನಂತರ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ರಂಜನಿ ರಾಘವನ್ ರಾಜಹಂಸ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದರು.. ಸದ್ಯ ಕಿರುತೆರೆಗೆ ಮರಳಿದ ರಂಜನಿ ಕನ್ನಡತಿ ಧಾರಾವಾಹಿ ಮೂಲಕ ಕಿರುತೆರೆ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆನ್ನಬಹುದು‌‌.. ತನ್ನ ಕನ್ನಡ ಭಾಷೆಯ ಮೂಲಕವೇ ಜನರ ಮನಗೆದ್ದ ಭುವನೇಶ್ವರಿ ಅಲಿಯಾಸ್ ಸೌಪರ್ಣಿಕಾ.. ಅಲಿಯಾಸ್ ಭುವಿ ಹಾಗೂ ಹರ್ಷ ಖ್ಯಾತಿಯ ಕಿರಣ್ ರಾಜ್ ಜೋಡಿ ಮೋಡಿ ಮಾಡಿದ್ದು ಕನ್ನಡ ಕಿರುತೆರೆಯ ಟಾಪ್ ಹತ್ತು ಧಾರಾವಾಹಿಗಳ ಪೈಕಿ ಕನ್ನಡತಿ ಧಾರಾವಾಹಿಯೂ ಕೂಡ ಒಂದಾಗಿದೆ..

ಇನ್ನು ಧಾರಾವಾಹಿಯ ನಡುವೆಯೇ ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ರಂಜನಿ ಬಹಳ ಪ್ರಬುದ್ಧ ಮನಸ್ಸಿನವರೂ ಹೌದು.. ಈ ಹಿಂದೆ ಲಾಕ್ ಡೌನ್ ಆದ ಸಮಯದಲ್ಲಿ ಹದಿನೈದು ದಿನಗಳ ಕಾಲ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುವ ಮೂಲಕ ಬೆಂಗಳೂರು ಪೊಲೀಸರಿಗೆ ನೆರವಾಗಿದ್ದರು.. ಕೊರೊನಾ ಕುರಿತು ಸಾಕಷ್ಟು ಅಭಿಯಾನ ಮಾಡಿದ್ದ ನಟಿ ರಂಜನಿ ಅನೇಕ ಬಡವರಿಗೆ ತಮ್ಮ ಕೈಲಾದ ರೀತಿಯಲ್ಲಿ ನೆರವಾಗಿದ್ದರು.. ಇನ್ನು ಇದೀಗ ತಮ್ಮ ಗುಣಕ್ಕೆ ತಕ್ಕ ಹಾಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಾಗಿದ್ದಾರೆ.. ಹೌದು ಈ ಕುರಿತು ಖುದ್ದು ರಂಜನಿ ಅವರೇ ಫೋಟೋ ಹಂಚಿಕೊಂಡಿದ್ದು ಸಂತೋಷ ಹಂಚಿಕೊಂಡಿದ್ದಾರೆ..

ಆದರೆ ಅಸಲಿ ವಿಚಾರ ಏನಪ್ಪಾ ಅಂದರೆ ರಂಜನಿ ಅವರು ಪಿ ಡಿ ಓ ಆಗಿರುವುದು ನಿಜ ಜೀವನದಲ್ಲಲ್ಲ.. ಬದಲಿಗೆ ಸಿನಿಮಾದಲ್ಲಿ.. ಹೌದು ಅದಾಗಲೇ ನಟ ದಿಗಂತ್ ಅವರೊಟ್ಟಿಗೆ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾದಲ್ಲಿ ರಂಜನಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ..

ಆದರೀಗ ಹೊಸದೊಂದು ಸಿನಿಮಾದಲ್ಲಿ ಐದು ನಿರ್ದೇಶಕರು ನಿರ್ದೇಶನ ಮಾಡುತ್ತಿರುವ ಪ್ರಯೋಗಾತ್ಮಕ ಸಿನಿಮಾವೊಂದರಲ್ಲಿ ರಂಜನಿ ಅಭಿನಯಿಸುತ್ತಿದ್ದು ಅದರಲ್ಲಿ ಪಿ ಡಿ ಓ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.. ಆ. ಅಲಮೇಲಮ್ಮ ಖ್ಯಾತಿಯ ನಟ ರಿಷಿ ನಾಯಕನಾಗಿ ಅಭಿನಯಿಸುತ್ತಿದ್ದು ಚಿತ್ರೀಕರಣ ನಡೆಯುತ್ತಿದೆ..

ಸದ್ಯ ರಂಜನಿ ರಾಘವನ್ ಅವರು ಚಿತ್ರೀಕರಣದ ಫೋಟೋ ಹಂಚಿಕೊಂಡಿದ್ದು.. ಫೋಟೋದಲ್ಲಿ ಪಿಡಿಓ ಎಂಬ ನಾಮಫಲಕ ನೋಡಿ ನಿಜ ಜೀವನದಲ್ಲಿ ಎಂದುಕೊಂಡು ಅಭಿಮಾನಿಗಳು ಹೊಸ ವೃತ್ತಿಗೆ ಶುಭವಾಗಲಿ ಎಂದೂ ಸಹ ಹಾರೈಸಿದ್ದಾರೆ.‌. ಇನ್ನು ಸಿನಿಮಾದಲ್ಲಿ ಬ್ಯುಸಿ ಆದರೂ ಕೂಡ ಇತ್ತ ಧಾರಾವಾಹಿಯಲ್ಲಿಯೂ ಅಭಿನಯಿಸುತ್ತಿದ್ದು ಎಂದಿನಂತೆ ಕನ್ನಡತಿಯಾಗಿ ಪ್ರತಿದಿನ ಕಿರುತೆರೆ ಪ್ರೇಕ್ಷಕರಿಗೆ ಕನ್ನಡ ಪಾಠ ಮುಂದುವರೆಸಲಿದ್ದಾರೆ..