ನಿಜ ಜೀವನದಲ್ಲಿ ಸಿಹಿ ಸುದ್ದಿ ಹಂಚಿಕೊಂಡ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಂಠಿ.. ಶುಭ ಹಾರೈಸಿದ ಅಭಿಮಾನಿಗಳು‌‌..

0 views

ಪುಟ್ಟಕ್ಕನ ಮಕ್ಕಳು ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದು.. ಸಧ್ಯ ಜೀ ಕನ್ನಡದಲ್ಲಿ ಮಾತ್ರವಲ್ಲದೇ ಕನ್ನಡ ಕಿರುತೆರೆಯಲ್ಲಿಯೇ ರೇಟಿಂಗ್ ವಿಚಾರದಲ್ಲಿ ನಂಬರ್ ಒನ್ ಧಾರಾವಾಹಿಯಾಗಿದ್ದು ಮನೆಮಾತಾಗಿದೆ.. ಧಾರಾವಾಹಿ ಮಾತ್ರವಲ್ಲ.. ಧಾರಾವಾಹಿಯಲ್ಲಿನ ಪ್ರತಿಯೊಬ್ಬ ಕಲಾವಿದರೂ ಸಹ ಬಹಳ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದ್ದು ತಮ್ಮ ವೃತ್ತಿ ಬದುಕಿನಲ್ಲಿ ದೊಡ್ಡ ಬದಲಾವಣೆಯೇ ಆಗಿದೆ ಎನ್ನಬಹುದು.. ಇನ್ನು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಮನೆಮಾತಾಗಿರುವ ಕಂಠಿ ಪಾತ್ರಧಾರಿ ನಟ ಧನುಷ್ ಸಧ್ಯ ತಮ್ಮ ನಿಜ ಜೀವನದಲ್ಲಿನ ಸಂತೋಷದ ವಿಚಾರವೊಂದನ್ನು ಹಂಚಿಕೊಂಡು ಸಂಭ್ರಮ ಪಟ್ಟಿದ್ದಾರೆ.

ಹೌದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರೀ ಅವರನ್ನು ಸೇರಿದಂತೆ ಪ್ರತಿಯೊಂದು ಪಾತ್ರಕ್ಕೂ ಅಭಿಮಾನಿಗಳಿದ್ದಾರೆನ್ನಬಹುದು.. ಇನ್ನು ಈ ಧಾರಾವಾಹಿಯಲ್ಲಿ ನಯಾಕನಾಗಿ ಅಭಿನಯಿಸಿರುವ ಕಂಠಿ ಸಧ್ಯ ಕಿರುತೆರೆ ಪ್ರೇಕ್ಷಕರ ಅದರಲ್ಲಿಯೂ ಮಹಿಳಾ ಪ್ರೇಕ್ಷಕರ ನೆಚ್ಚಿನ ನಟ ಎನ್ನಬಹುದು.. ಹಳ್ಳಿಯಲ್ಲಿನ ಖದರ್ ಹೀರೋ ಆಗಿ ಕಾಣಿಸಿಕೊಂಡಿರುವ ಕಂಠಿ ತಮ್ಮ ಮೊದಲ ಧಾರಾವಾಹಿಯಲ್ಲಿಯೇ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಕಂಠಿ ಧಾರಾವಾಹಿಯ ಕುರಿತು ಆಗಾಗ ಅಪ್ಡೇಟ್ ಗಳನ್ನು ಮಾಡುತ್ತಾ ಅಭಿಮಾನಿಗಳೊಟ್ಟಿಗೆ ಮಾತನಾಡುತ್ತಿರುತ್ತಾರೆ.‌. ಸಧ್ಯ ಇದೀಗ ಧಾರಾವಾಹಿಯನ್ನು ಹೊರತು ಪಡಿಸಿ ತಮ್ಮ ವ್ಯಯಕ್ತಿಕ ಜೀವನದ ವಿಚಾರವೊಂದನ್ನು ಹಂಚಿಕೊಂಡು ಸಂಭ್ರಮ ಪಟ್ಟಿದ್ದಾರೆ..

ಹೌದು ಕಿರುತೆರೆಯಾಗಲಿ ಬೆಳ್ಳಿತೆರೆಯಾಗಲಿ ಕಲಾವಿದರುಗಳು ಸಾಕಷ್ಟು ಕನಸು ಕಟ್ಟಿಕೊಂಡು ಹೊಸ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಹುಡುಕುವರು.. ಅದೇ ರೀತಿ ಅವಕಾಶಗಳಿಗಾಗಿ ಸಾಕಷ್ಟು ಅಲೆದ ನಂತರವೇ ಧನುಷ್ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ ಪಾತ್ರದಲ್ಲಿ ಅಭಿನಯಿಸಲು ಅವಕಾಶ ದೊರೆಯಿತು.. ಹೌದು ಈ ಹಿಂದೆ ಧನುಷ್ ಅವರೇ ಹೇಳಿಕೊಂಡಂತೆ ನನಗೆ ಯಾವ ರೆಫರೆನ್ಸ್ ಇಂದಾಗಲಿ ಅಥವಾ ರೆಕಮೆಂಡೇಷನ್ ನಿಂದಾಗಲಿ ಈ ಅವಕಾಶ ಸಿಕ್ಕಿಲ್ಲ.. ನಾನು ಆಡಿಷನ್ ನಲ್ಲಿ ಭಾಗವಹಿಸಿಯೇ ನನ್ನ ಸ್ವಂತ ಪರಿಶ್ರಮದಿಂದಲೇ ಈ ಅವಕಾಶ ಪಡೆದುಕೊಂಡಿದ್ದೇನೆ.. ಎಂದಿದ್ದರು.

ಹೌದು ಧಾರಾವಾಹಿಯಲ್ಲಿ ಯಾರ ಪರಿಚಯವೂ ಇಲ್ಲದ ಧನುಷ್ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್ ನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯ ಮೂಲಕವೇ ಈ ಧಾರಾವಾಹಿಯಲ್ಲಿ ನಾಯಕನ ಪಾತ್ರದ ಅವಕಾಶವನ್ನು ಪಡೆದಿದ್ದರು.. ಇನ್ನು ಈಗ ತಾನೇ ತನ್ನ ಕನಸಿನ ವೃತ್ತಿ ಬದುಕನ್ನು ಆರಂಭಿಸಿ ಜೀವನ ಕಟ್ಟಿಕೊಳ್ಳುತ್ತಿರುವ ಧನುಶ್ ಇದೀಗ ತಮ್ಮ ವ್ಯಯಕ್ತಿಕ ಜೀವನದಲ್ಲಿ ಹೊಸದೊಂದು ಮೆಟ್ಟಿಲನ್ನೇರಿದ್ದಾರೆನ್ನಬಹುದು..

ಹೌದು ಧಾರಾವಾಹಿಗಳಲ್ಲಿ ಅಭಿನಯಿಸಲು ಬರುವವರು ಎಲ್ಲರೂ ಸಿರಿವಂತರೇನೂ ಆಗಿರುವುದಿಲ್ಲ.. ಅವರಲ್ಲಿ ಬಹಳಷ್ಟು‌ ಮಂದಿ ಮಧ್ಯಮ ವರ್ಗದಿಂದ ಬಂದವರೇ ಆಗಿರುತ್ತಾರೆ.. ಅದೇ ರೀತಿ‌ ಧನುಷ್ ಅವರೂ ಸಹ ಮಧ್ಯಮ ವರ್ಗದ ಹಿನ್ನೆಲೆ ಇಂದ ಬಂದವರು.. ಆದರೆ ನಟನೆಯಲ್ಲಿಯೇ ತಮ್ಮ ಜೀವನ ಕಟ್ಟಿಕೊಳ್ಳಬೇಕೆಂದು ನಿರ್ಧರಿಸಿ ಸಾಕಷ್ಟು‌ ಪ್ರಯತ್ನಗಳ‌ ನಂತರ ಪುಟ್ಟಕ್ಕನ ಮಕ್ಕಳು ಅವಕಾಶ ಪಡೆದರು.. ಇದೀಗ ಯಶಸ್ಸಿನ ಜೊತೆಗೆ ಆರ್ಥಿಕವಾಗಿಯೂ ಒಳ್ಳೆಯ ಸಂಭಾವನೆ ಪಡೆಯುತ್ತಿರುವ ಕಂಠಿ‌ ಇದೀಗ ತಮ್ಮ ಸಂಪಾದನೆ ಇಂದಲೇ ತಮ್ಮ ಜೀವನದ ಮೊದಲ ಕಾರ್ ಅನ್ನು ಕೊಂಡುಕೊಂಡಿದ್ದಾರೆ.. ಹೌದು ಹತ್ತು ಲಕ್ಷದ ಹ್ಯುಂಡೈ ಕಾರ್ ಅನ್ನು ಕೊಂಡು ಕೊಂಡಿರುವ ನಟ ಧನುಶ್ ತನ್ನ ಅಮ್ಮನ ಕೈಯಲ್ಲಿ ತಮ್ಮ ಜೀವನದ ಮೊದಲ ಕಾರ್ ಅನ್ನು ಪಡೆದುಕೊಂಡಿದ್ದಾರೆ..

ನಿಜಕ್ಕೂ ಮದ್ಯಮ ವರ್ಗದ ಜನರ ಪಾಲಿಗೆ ಇದೊಂದು ದೊಡ್ಡ ಕನಸೂ ಹೌದು.. ಹೆತ್ತ ತಾಯಿಯ ಕೈಯಿಂದ ಶೋರೂಂ ನಲ್ಲಿ ಕಾರ್ ಪಡೆದುಕೊಳ್ಳುವಂತೆ ಮಾಡುವುದು ನಿಜಕ್ಕೂ ಸಂತೋಷದ ಜೊತೆಗೆ ಭಾವನಾತ್ಮಕ ಕ್ಷಣವೂ ಆಗಿರುತ್ತದೆ.. ಇನ್ನು ತನ್ನ ತಾಯಿ ಕಾರ್ ಕವರ್ ತೆರೆಯುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಧನುಷ್ ಸಂತೋಷ ಹಂಚಿಕೊಂಡಿದ್ದಾರೆ.ಮ್ ಜೀವನದಲ್ಲಿ ಹೊಸ ಸಂಗಾತಿಯ ಆಗಮನವೆಂದು ಅಭಿಮಾನಿಗಳೊಟ್ಟಿಗೆ ಸಂಭ್ರಮ ಹಂಚಿಕೊಂಡಿದ್ದಾರೆ.. ಪ್ರತಿಭೆಯುಳ್ಳ ಕಲಾವಿದರುಗಳು ಹೀಗೆ ಬೆಳೆಯುತ್ತಿರಲಿ.. ಕಂಠಿ ಪಾತ್ರಧಾರಿ ಧನುಷ್ ತಮ್ಮ ಜೀವನದಲ್ಲಿ ಮತ್ತಷ್ಟು ಯಶಸ್ಸು ಕಾಣುವಂತಾಗಲಿ..