ಕನ್ನಡತಿ ಧಾರಾವಾಹಿ ನೋಡಿದ ಹೆಣ್ಣು ಮಗಳಿಂದ ತಂದೆಯ ಅಂತಿಮ ಕಾರ್ಯ.. ಕೊನೆಗೆ ಆಗಿದ್ದೇನು ಗೊತ್ತಾ?

0 views

ಧಾರಾವಾಹಿಗಳು ಕೇವಲ ಮನರಂಜನೆ ಮಾತ್ರವಲ್ಲ.. ಕೆಲವೊಮ್ಮೆ ಜೀವನಕ್ಕೆ ಬಹಳ ದೊಡ್ಡ ದೊಡ್ಡ ಪಾಠಗಳನ್ನು ಕಲಿಸಿ ಪ್ರೇರಣೆಯಾಗುತ್ತವೆ.. ಅಂತಹುದೇ ಒಂದು ಧಾರಾವಾಹಿ ಕನ್ನಡತಿ.. ಹೌದು ಕನ್ನಡತಿ ಧಾರಾವಾಹಿ ನೋಡಿ ಪ್ರೇರಣೆಗೊಂಡ ಹೆಣ್ಣು ಮಗಳೊಬ್ಬಳು ತನ್ನ ತಂದೆಯ ಅಂತಿಮ ಕಾರ್ಯವನ್ನು ನೆರವೇರಿಸಿದ್ದಾಳೆ..

ಹೌದು ಕೆಲ ದಿನಗಳ ಹಿಂದಷ್ಟೇ ಕನ್ನಡತಿ ಧಾರಾವಾಹಿಯಲ್ಲಿ ಭುವಿ ತನ್ನ ತಂದೆಯ ಅಂತಿಮ ಕಾರ್ಯವನ್ನು ನೆರವೇರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿತ್ತು.. ಗಂಡಾದರೇನು.. ಹೆಣ್ಣಾದರೇನು.. ಮಕ್ಕಳು ಮಕ್ಕಳೇ.. ಎಂದು ಬಹುತೇಕ ಎಲ್ಲರೂ ಭುವಿ‌ ಮಾಡಿದ ಕಾರ್ಯಕ್ಕೆ ಬೆಂಬಲ ಸೂಚಿಸಿದ್ದರು..

ಇದೀಗ ಅಂತಹುದೇ ಒಂದು ಘಟನೆ ನಿಜ ಜೀವನದಲ್ಲಿಯೂ ನಡೆದಿದೆ.. ಹೌದು ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಈ ಘಟನೆ ನಡೆದಿದೆ.. ಧಾರಾವಾಹಿ ಪ್ರೇರಣೆಯಿಂದ ಹೆಣ್ಣು ಮಗಳು ತನ್ನ ತಂದೆಯ ಅಂತಿಮ ಕಾರ್ಯ ನೆರವೇರಿಸಿದ್ದಾಳೆ.. ಕಾರವಾರ ತಾಲುಕಿನ ಕುರ್ನಿಪೇಟೆ ಎಂಬ ಹಳ್ಳಿಯಲ್ಲಿ ವಾಸವಾಗಿರುವ ಚಂದ್ರಕಾಂತ್ ಬುದೊ ಎಂಬವವರ ಮಗಳೇ ಈ ಕಾರ್ಯ ಮಾಡಿದ್ದಾರೆ.. ಚಂದ್ರಕಾಂತ್ ಎಂಬುವವರು ತಮಗೆ ಗಂಡು ಮಕ್ಕಳು ಆಗಲಿ ಎಂದು ನಿರೀಕ್ಷಿಸಿದ್ದು ಒಟ್ಟು ಒಂಬತ್ತು ಹೆಣ್ಣು ಮಕ್ಕಳೇ ಆಗಿವೆ.. ಕೊನೆಗೆ ಬೇಸರ ಪಟ್ಟುಕೊಳ್ಳದೇ ಎಲ್ಲರಿಗೂ ಒಳ್ಳೆಯ ಶಿಕ್ಷಣ ಕೊಡಿಸಿ ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ..

ಐವತ್ತೇಳು ವರ್ಷದ ಚಂದ್ರಕಾಂತ್ ನಿನ್ನೆ ಶುಕ್ರವಾರ ಅನಾರೋಗ್ಯದ ಕಾರಣದಿಂದಾಗಿ ಇಹಲೋಕ ತ್ಯಜಿಸಿದ್ದಾರೆ.. ಚಂದ್ರಕಾಂತ್ ಅವರ ಅಂತಿಮ ಕಾರ್ಯವನ್ನು ಗಂಡು ಮಕ್ಕಳು ಮಾಡಬೇಕಿತ್ತು.. ಆದರೆ ಅವರಿಗೆ ಗಂಡು ಮಕ್ಕಳಿಲ್ಲದ ಕಾರಣ ಅಳಿಯಂದಿರು ಅಥವಾ ಸಂಬಂಧಿಕರು ಯಾರಾದರೂ ಕಾರ್ಯ ನೆರವೇರಿಸಬೇಕಿತ್ತು.. ಆದರೆ ಯಾರೂ ಸಹ ಕಾರ್ಯ ಮಾಡಲು ಮುಂದೆ ಬಾರಲಿಲ್ಲ.. ಆ ಸಮಯದಲ್ಲಿ ಧೃಡ ನಿರ್ಧಾರ ತೆಗೆದುಕೊಂಡ ಚಂದ್ರಕಾಂತ್ ಅವರ ನಾಲ್ಕನೇ ಮಗಳು ಸರೋಜಾ ಮುಂದೆ ಬಂದಿದ್ದು ನಾನೇ ನನ್ನ ತಂದೆಯ ಕಾರ್ಯ ಮಾಡುವೆ ಎಂದಿದ್ದಾರೆ.. ಮೊದಲು ಯಾರಾದರೂ ಸಂಬಂಧಿಕರು ಕೊನೆ ಕಾರ್ಯ ಮಾಡಲಿ ಎಂದಿದ್ದ ಜನರು ಕೊನೆಗೆ ಮಗಳ ನಿರ್ಧಾರವನ್ನೇ ಒಪ್ಪಿದ್ದಾರೆ. ಅವಳೇ ಮಾಡಲಿ ಎಂದು ಬೆಂಬಲಿಸಿದ್ದಾರೆ..

ಧಾರಾವಾಹಿಯಲ್ಲಿ ನಡೆದ ಘಟನೆಯನ್ನು ಒಪ್ಪಿದ ಸಮಾಜ ನಿಜ ಜೀವನದಲ್ಲಿಯೂ ಇಂತಹುದೇ ಘಟನೆ ಎದುರಾದಾಗ ಅದನ್ನು ಸಹ ಒಪ್ಪಿ ಮಗಳು ಸರೋಜಾ ತನ್ನ ತಂದೆಯ ಅಂತಿಮ ಕಾರ್ಯ ಮಾಡುವುದನ್ನು ಒಪ್ಪಿ ಅವಳ ಕೈ ಇಂದಲೇ ಎಲ್ಲಾ ಕಾರ್ಯವನ್ನು ಮಾಡಿಸಿ‌ ಕೊನೆಗೆ ಅಪ್ಪನಚಿ ತೆಗೆ ಅಗ್ನಿ ಸ್ಪರ್ಶಮಾಡಿಸಿದ್ದಾರೆ..

ಒಟ್ಟಿನಲ್ಲಿ ಗಂಡಾಗಲಿ ಹೆಣ್ಣಾಗಲಿ ಮಕ್ಕಳೆಂದೂ ಸರಿ‌ಸಮಾನರೇ.. ಇಬ್ಬರೂ ಆ ತಂದೆಯ ಜನ್ಮವೇ.. ಇಬ್ಬರೂ ಸಹ ತಾಯಿಯ ಒಡಲಿನಿಂದ ಬಂದವರೇ.. ಇರುವಷ್ಟು ದಿನ ಅಪ್ಪ ಅಮ್ಮನಿಗೆ ಪ್ರೀತಿ ಕೊಟ್ಟು ವಯಸ್ಸಾದ ಕಾಲದಲ್ಲಿ ಅವರ ಜವಾಬ್ದಾರಿ ತೆಗೆದುಕೊಳ್ಳುವವರೇ ನಿಜವಾದ ಮಕ್ಕಳು.. ಇದರಲ್ಲಿ ಯಾವ ತಾರತಮ್ಯವೂ ಇರಬಾರದು.. ಒಟ್ಟಿನಲ್ಲಿ ಧಾರಾವಾಹಿಯೊಂದರ ಕಾರಣದಿಂದ ಈ ಮಟ್ಟದ ಒಳ್ಳೆಯ ಬದಲಾವಣೆ ಮೆಚ್ಚುವಂತದ್ದೇ ಎನ್ನುತ್ತಿದ್ದಾರೆ ನೆಟ್ಟಿಗರು..