ಪುಟ್ಟಕ್ಕನ ಧಾರಾವಾಹಿಯಿಂದ ಹೊರ ನಡೆದ ನಟ.. ನಿಜವಾದ ಕಾರಣವೇನು ಗೊತ್ತಾ..

0 views

ಕನ್ನಡ ಕಿರುತೆರೆಯಲ್ಲಿ ಸಧ್ಯ ಕಳೆದ ಕೆಲ ತಿಂಗಳುಗಳಿಂದ ಟಿಆರ್ ಪಿ ಯಲ್ಲಿ ಟಾಪ್ ಒಂದು ಅಥವಾ ಎರಡನೇ ಸ್ಥಾನ ಪಡೆಯುತ್ತಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹಳ್ಳಿ ಸೊಗಡಿನ ಕತೆಯ ಜೊತೆಗೆ ಹಳ್ಳಿಯ ರಗಡ್ ಹುಡುಗನ ಮುಗ್ಧ ಪ್ರೀತಿಯಿಂದಲೂ.. ಪುಟ್ಟಕ್ಕ ತನ್ನ ಮಕ್ಕಳಿಗಾಗಿ ಪಡುವ ಕಷ್ಟದಿಂದಲೂ.. ಪುಟ್ಟಕ್ಕನ ಮಕ್ಕಳು ತನ್ನ ತಾಯಿಯ ಮೇಲೆ ಇಟ್ಟ ಪ್ರೀತಿಯಿಂದಲೂ ಹೀಗೆ ಸಾಕಷ್ಟು ವಿಚಾರಗಳಿಂದ ಜನರ ಮನಸ್ಸಿಗೆ ಹತ್ತಿರವಾಗಿತ್ತು.. ಆದರೀಗ ಪುಟ್ಟಕ್ಕನ‌ ಮಕ್ಕಳು ಧಾರಾವಾಹಿ ತಂಡದಿಂದ ಬೇಸರದ ಸುದ್ದಿಯೊಂದು ಹೊರ ಬಂದಿದೆ.. ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಪ್ರಮುಖ ನಟ ಧಾರಾವಾಹಿಯಿಂದ ಹೊರ ನಡೆದಿದ್ದಾರೆ..

ಹೌದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಪ್ರಾಮುಖ್ಯತೆಯನ್ನು ನೀಡಲಾಗಿತ್ತು.. ಉಮಾಶ್ರೀ ಅವರು ಕಂಠಿ ಸ್ನೇಹ ಸಹನಾ ಸುಮಾ.. ರಾಜೇಶ್ವರಿ.. ಬಂಗಾರಮ್ಮ.. ಪುರುಷಿ.. ಕಂಠಿ ತಂಗಿ.. ಭಾವ.. ಹೀಗೆ ಪ್ರತಿಯೊಂದು ಪಾತ್ರವೂ ಜನರ ಮನಸ್ಸಿಗೆ ಹತ್ತಿರವಾಗಿದ್ದು ಎಲ್ಲಾ ಪಾತ್ರದ ಕಲಾವಿದರುಗಳು ಸಹ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಹೆಸರಿನಿಂದ ಗುರುತಿಸಿಕೊಳ್ಳುವಂತಾಗಿತ್ತು..ಅಷ್ಟು ದೊಡ್ಡ ಮಟ್ಟದ ಹೆಸರನ್ನು ಈ ಧಾರಾವಾಹಿ ಕಲಾವಿದರಿಗೆ ನೀಡಿತ್ತೆನ್ನಬಹುದು..

ಇನ್ನು ಕಂಠಿ ಪಾತ್ರದಲ್ಲಿ ನಾಯಕನಾಗಿ ಮಿಂಚಿದ್ದ ಧನುಷ್ ಗೆ ಇದು‌ ಮೊದಲನೇ ಧಾರಾವಾಹಿಯಾಗಿದ್ದು ದೊಡ್ಡ ಮಟ್ಟದಲ್ಲಿ ಹೆಸರು ಯಶಸ್ಸು ಹಣ ಎಲ್ಲವನ್ನೂ ನೀಡಿತು.. ಇತ್ತ ಸ್ನೇಹ ಗೆ ಇದು ಎರಡನೇ ಧಾರಾವಾಹಿಯಾಗಿದ್ದು‌ ಕಿರುತೆರೆಯಲ್ಲಿ ಗುರುತಿಸಿಕೊಳ್ಳಲು ಈ ಧಾರಾವಾಹಿ ನೆರವಾಯಿತು.. ಹೀಗೆ ಪ್ರತಿಯೊಬ್ಬ ಕಲಾವಿದರೂ ಸಹ ಕಿರುತೆರೆಯಲ್ಲಿ ಭದ್ರವಾಗಿ ನೆಲೆಯೂರಲು‌ ಈ ಧಾರಾವಾಹಿ ನೆರವಾಯಿತೆಂದರೆ ತಪ್ಪಾಗಲಾರದು.. ಆದರೆ ಇದೀಗ ಇದ್ದಕಿದ್ದ ಹಾಗೆ ಧಾರಾವಾಹಿಯ ಪ್ರಮುಖ ನಟ ಧಾರಾವಾಹಿಯಿಂದ ಹೊರ ನಡೆದಿದ್ದಾರೆ..

ಹೌದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಂಗಾರಮ್ಮನ ಅಳಿಯ.. ಕಂಠಿಯ ತಂಗಿ ಗಂಡನ ಪಾತ್ರ ಮಾಡಿದ್ದ.. ಸ್ನೇಹಾಳ ಅಣ್ಣನ ಪಾತ್ರದಲ್ಲಿ ಅಭಿನಯಿಸಿದ್ದ ಚಂದ್ರು ಪಾತ್ರಧಾರಿ ನಟ ಕಾರ್ತಿಕ್ ಮಹೇಶ್ ಧಾರಾವಾಹಿಯಿಂದ ಹೊರ ನಡೆದಿದ್ದಾರೆ..

ಹೌದು ಕಾರ್ತಿಕ್ ಮಹೇಶ್ ಈ ಹಿಂದೆ ಅಕ್ಕ ಬಂಗಾರಿ ಖುಷಿ ಇಂತಿ ನಿಮ್ಮ ಆಶಾ ಹೀಗೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರೂ ಸಹ ಪುಟ್ಟಕ್ಕನ ಮಕ್ಕಳು ಧಾರಾವಾಹಿ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು.. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಚಂದ್ರು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾರ್ತಿಕ್ ಮಹೇಶ್ ಸ್ನೇಹ ಪಾತ್ರಕ್ಕೆ ಅಣ್ಣಯ್ಯನಾಗಿ ಅತ್ತ ಹೆಂಡತಿ ವಸು ಇಂದ ದೂರ ಇದ್ದರೂ ಆಕೆಯನ್ನು ಪ್ರೀತಿಸುವ ಗಂಡನಾಗಿ ಕಾಣಿಸಿಕೊಂಡು ತಮ್ಮ ನಟನೆಯ ಮೂಲಕವೇ ಜನರ ಮನಸ್ಸಿಗೆ ಹತ್ತಿರವಾಗಿದ್ದರು.. ಆದರೆ ಈಗ ಇದ್ದಕಿದ್ದ ಹಾಗೆ ಧಾರಾವಾಹಿ ಬಿಟ್ಟಿದ್ದಾರೆ.. ಇದಕ್ಕೆ ಕಾರಣವೂ ಇದೆ..

ಹೌದು ಪುಟ್ಟಕ್ಕನ‌ ಮಕ್ಕಳು ಧಾರಾವಾಹಿಯಲ್ಲಿ ಚಂದ್ರು ಪಾತ್ರ ಮಾಡಿದ್ದ ಕಾರ್ತಿಕ್ ಮಹೇಶ್ ಸಧ್ಯ ಮತ್ತೊಂದು ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.. ಹೌದು ಸ್ಟಾರ್ ಸುವರ್ಣ ವಾಹಿನಿಯ ಹೊಸ ಧಾರಾವಾಹಿ ರಾಜಿ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು ಇದೇ ಕಾರಣಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ಬಿಡಲಾಗಿದೆ.. ಮೇಲ್ನೋಟಕ್ಕೆ ಡೇಟ್ಸ್ ಸಮಸ್ಯೆ ಎನ್ನಲಾದರೂ ಸಹ ಅಸಲಿ‌ಕತೆ ಬೇರೆಯೇ ಇದೆ..

ಹೌದು ಕಿರುತೆರೆಗಳಲ್ಲಿ‌ ಕೆಲ ವರ್ಷಗಳಿಂದ ವಾಹಿನಿಗಳು ಒಂದು ನಿಯಮಗಳನ್ನು ಪಾಲಿಸಿಕೊಂಡು ಬರುತ್ತಿದೆ.. ಅದು ಒಂದು ಧಾರಾವಾಹಿಯ ನಾಯಕ ಮತ್ತೊಂದು ವಾಹಿನಿಗೆ ಹೋಗುವಂತಿಲ್ಲ.. ಬೇರೆ ಭಾಷೆಗೆ ಬೇಕಿದ್ದರೆ ಹೋಗಬಹುದು.. ಆದರೆ ಒಂದೇ ಭಾಷೆಯಲ್ಲಿ ಎರಡು ವಾಹಿನಿಗಳಲ್ಲಿ ಅಭಿನಯಿಸುವ ಹಾಗಿಲ್ಲ.. ಇದೇ ಕಾರಣಕ್ಕೆ ಸಧ್ಯ ಕಾರ್ತಿಕ್ ಮಹೇಶ್ ಧಾರಾವಾಹಿಯನ್ನು ಬಿಟ್ಟಿದ್ದು ಅದಾಗಲೇ ಚಂದ್ರು ಪಾತ್ರಕ್ಕೆ ಮತ್ತೊಬ್ಬ ನಟನ ಎಂಟ್ರಿಯಾಗಿದೆ..