ದೊಡ್ಡ ಯಡವಟ್ಟು ಮಾಡಿಕೊಂಡ ಕಿರುತೆರೆ ನಟಿ ಕವಿತಾ ಗೌಡ.. ಜಲಪಾತದ ತುದಿಯಲ್ಲಿ ವೀಡಿಯೋ ಮಾಡಲು ಹೋಗಿ ಏನಾಗಿ ಹೋಯ್ತು ನೋಡಿ..

0 views

ಈಗ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ವರೆಗೂ ಎಲ್ಲರಿಗೂ ಸೋಷಿಯಲ್ ಮೀಡಿಯಾ ಕ್ರೇಜ್. ಕೆಲ ದಿನಗಳ ಹಿಂದೆ ಟಿಕ್ ಟಾಕ್ ವಿಡಿಯೋಗಳ ಭರ್ಜರಿ ಕ್ರೇಜ್ ಇತ್ತು, ಟಿಕ್ ಟಾಕ್ ಬ್ಯಾನ್ ಆದ ಬಳಿಕ ಈಗ ಇನ್ಸ್ಟಾಗ್ರಾಮ್ ರೀಲ್ಸ್ ಕ್ರೇಜ್ ಅತಿಯಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರು ಸಹ ಈ ರೀಲ್ಸ್ ಅಡಿಕ್ಷನ್ ಇನ್ಡ್ಜ್ ಹಾಡುಗಳಿಗೆ ಡ್ಯಾನ್ಸ್ ಮಾಡುವುದು, ಡೈಲಾಗ್ ಗಳಿಗೆ ಲಿಪ್ ಸಿಂಕ್ ಮಾಡುವುದು ಮಾಡುತ್ತಾರೆ. ಆದರೆ ಈ ಕ್ರೇಜ್ ಇಷ್ಟಕ್ಕೆ ಸೀಮಿತವಾಗಿಲ್ಲ, ಸೇಫ್ ಇಲ್ಲದಂತಹ ಕಡೆಗಳಲ್ಲಿ ಸಹ ಮೊಬೈಲ್ ಹಿಡಿದು ಸೆಲ್ಫಿ ತೆಗೆದುಕೊಳ್ಳಲು, ರೀಲ್ಸ್ ಮಾಡಲು ಹೋಗಿ ಸಾಕಷ್ಟು ಜನರು ಪ್ರಾಣಕ್ಕೆ ಅಪಾಯ ತಂದುಕೊಂಡಿದ್ದಾರೆ. ಈ ರೀತಿ ರೀಲ್ಸ್ ಬಗ್ಗೆ ಹೇಳುತ್ತಿರುವುದಕ್ಕೂ ಒಂದು ಕಾರಣ ಇದ್ದು, ರೀಲ್ಸ್ ಇಂದಾಗುವ ಅಪಾಯಗಳ ಬಗ್ಗೆ ಒತ್ತಿ ಹೇಳುತ್ತಿರುವುದಕ್ಕೆ ಕಿರುತೆರೆಯ ಖ್ಯಾತ ನಟಿ ಕವಿತಾ ಗೌಡ ಅವರ ಒಂದು ರೀಲ್ಸ್ ವಿಡಿಯೋ.. ವೈರಲ್ ಆದ ಈ ವಿಡಿಯೋ, ಅವರ ಅಭಿಮಾನಿಗಳಿಗೆ ಆತಂಕ ಆಗುವ ಹಾಗೆ ಮಾಡಿದ್ದಂತು ನಿಜ..

ನಟಿ ಕವಿತಾ ಗೌಡ ಲಕ್ಷ್ಮೀಬಾರಮ್ಮ ಧಾರವಾಹಿ ಮೂಲಕ ನಟನೆಯ ಪ್ರಪಂಚಕ್ಕೆ ಎಂಟ್ರಿ ಕೊಟ್ಟರು, ಅದೇ ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದ ಚಂದನ್ ಅವರನ್ನು ಪ್ರೀತಿಸಿ, ಬಹುವರ್ಷಗಳ ಕಾಲ ಇಷ್ಟಪಡುತ್ತಿದ್ದ ಈ ಜೋಡಿ, ಕಳೆದ ವರ್ಷ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾದರು. ಇತ್ತೀಚೆಗಷ್ಟೇ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಸಹ ಆಚರಿಸಿಕೊಂಡರು. ಈ ಜೋಡಿ ಇತ್ತೀಚೆಗೆ ಹೊಸ ಮನೆಯೊಂದನ್ನು ಸಹ ಖರೀದಿಸಿದರು. ಚಂದನ್ ಕವಿತಾ ಇಬ್ಬರು ಬಹಳ ಬ್ಯುಸಿ ಆಗಿರುವ ಕಲಾವಿದರು. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ತಮಿಳು ಧಾರಾವಾಹಿಗಳಲ್ಲಿ ಸಹ ನಟಿಸುತ್ತಿದ್ದಾರೆ.

ಹಾಗೂ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ಹಾಗಾಗಿ ಇವರಿಬ್ಬರಿಗೆ ಜೊತೆಯಾಗಿ ಸಮಯ ಕಳೆಯಲು ಅವಕಾಶ ಸಿಗುವುದೇ ಕಡಿಮೆ, ಚಂದನ್ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಮರಳಿ ಮನಸ್ಸಾಗಿದೆ ಧಾರವಾಹಿಯಲ್ಲಿ ನಟಿಸುತ್ತಿದ್ದು, ಜನರಿಗೆ ಈ ಧಾರಾವಾಹಿಯ ಕಥೆ ಇಷ್ಟವಾಗಿದೆ. ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ಇನ್ನೇನು ನಾಯಕ ವಿಕ್ರಂ ಮತ್ತು ನಾಯಕಿ ಸ್ಪಂದನಾ ಒಂದಾಗುವ ಸಮಯ ಹತ್ತಿರ ಬಂದಿದೆ. ವಿಕ್ರಂ ತಾಯಿ ಇವರಿಬ್ಬರನ್ನು ಒಂದು ಮಾಡಲು ಬಹಳ ಪ್ರಯತ್ನ ಪಡುತ್ತಿದ್ದಾರೆ. ವಿಕ್ರಂ ಗೆ ಸ್ಪಂದನಾ ಅಂದ್ರೆ ತುಂಬಾ ಇಷ್ಟ.

ಹಾಗಾಗಿ ಇವರಿಬ್ಬರನ್ನು ಒಂದು ಮಾಡಲು, ಧಾರವಾಹಿ ತಂಡ ಚಿಕ್ಕಮಗಳೂರಿಗೆ ಬಂದಿದೆ. ಅಲ್ಲಿನ ಚಳಿಯ ವಾತಾವರಣ, ಅಚ್ಚ ಹಸಿರಿನ ಪರಿಸರ, ಪ್ರೇಮಿಗಳಿಗೆ ಇದು ಬಹಳ ಇಷ್ಟವಾಗುವ ತಾಣ. ಇಲ್ಲಿ ಇವರಿಬ್ಬರು ಪ್ರೇಮ ನಿವೇದನೆ ಮಾಡಿಕೊಳ್ಳಬಹುದು. ಚಿಕ್ಕಮಗಳೂರಿಗೆ ಧಾರವಾಹಿ ತಂಡದ ಜೊತೆಗೆ, ರಿಯಲ್ ಲೈಫ್ ಜೋಡಿ ಚಂದನ್ ಕವಿತಾ ಸಹ ಹೋಗಿದ್ದು, ಇವರಿಬ್ಬರು ಊರೆಲ್ಲಾ ಸುತ್ತಿ, ಚಳಿಯಲ್ಲಿ ಎಂಜಾಯ್ ಮಾಡಿದ್ದಾರೆ. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್, ಟ್ರಾವೆಲ್ ಮಾಡುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಚಿಕ್ಕಮಗಳೂರಿನ ಒಂದು ನೀರಿನ ಜಲಪಾತದ ಎದುರು ಕವಿತಾ ಗೌಡ ಇರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕವಿತಾ ಗೌಡ ಅವರು ಈ ವಿಡಿಯೋ ಪೋಸ್ಟ್ ಮಾಡಿಲ್ಲ, ಚಂದನ್ ಕವಿತಾ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದ್ದು, ಇದನ್ನು ನೋಡಿ ಕವಿತಾ ಅವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡರು. ಈ ವಿಡಿಯೋ ಭಾರಿ ವೈರಲ್ ಸಹ ಆಗಿದೆ. ಕವಿತಾ ಗೌಡ ಅವರು ಜಲಪಾತದ ತುದಿಯಲ್ಲಿ ಮೊಬೈಲ್ ಹಿಡಿದು ವಿಡಿಯೋ ಮಾಡಿದ್ದಾರೆ. ಆ ಜಾಗ ನೋಡಲು ಭಯವಾಗುವ ಹಾಗೆ ಆಗಿದೆ.

ಈಗ ಮೊದಲೇ ಮಳೆಗಾಲ, ಕಲ್ಲು ತೇವವಾಗಿದ್ದು, ಅದರ ಮೇಲೆ ಸರಿಯಾಗಿ ಗಮನ ಕೊಡದೆ ಕಾಲಿಟ್ಟಾಗ ಜಾರಿ ಬೀಳುವುದು ಗ್ಯಾರಂಟಿ. ಅಂತಹ ಸ್ಥಳದಲ್ಲಿ ಮೊಬೈಲ್ ಹಿಡಿದು ವಿಡಿಯೋ ಮಾಡಿರುವುದಕ್ಕೆ, ನೆಟ್ಟಿಗರು, ಎಚ್ಚರಿಕೆಯಿಂದ ಇರಿ, ಸುರಕ್ಷಿತವಾಗಿರಿ ಎಂದಿದ್ದಾರೆ. ಇನ್ನು ಕೆಲವರು, ನೀವು ಏನು ಮಾಡಬೇಕು ಅಂತಿದ್ದೀರಿ? ಅದು ಡೇಂಜರಸ್ ಸ್ಥಳ, ಎಚ್ಚರಿಕೆಯಿಂದ ಇರಿ ಎನ್ನುತ್ತಿದ್ದು, ಈ ವಿಡಿಯೋ ನೆಟ್ಟಿಗರು ಆಕ್ರೋಶಕ್ಕೆ ಒಳಗಾಗಿದ್ದಂತು ಖಂಡಿತ. ಸೆಲೆಬ್ರಿಟಿಗಳು ಮಾಡುವ ಈ ರೀತಿಯ ಕೆಲಸಗಳು ಸಾಮಾನ್ಯ ಜನರ ಜೀವನದ ಮೇಲು ಪರಿಣಾಮ ಬೀರುತ್ತದೆ.