ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ರಾಧಾ ರಮಣ ಧಾರಾವಾಹಿಯ ನಟಿ ಕಾವ್ಯಾ ಗೌಡ.. ಹುಡುಗ ಯಾರು ಗೊತ್ತಾ?

0 views

ಕಳೆದ ವರ್ಷ ಕೊರೊನಾ ನಡುವೆ ಕನ್ನಡ ಕಿರುತೆರೆ ಹಾಗೂ ಸ್ಯಾಂಡಲ್ವುಡ್ ನ ಸಾಕಷ್ಟು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಸಾಲು ಸಾಲು ಮದುವೆ ಸಮಾರಂಭಗಳು ನೆರವೇರಿದ್ದವು.. ನಿಖಿಲ್ ರೇವತಿ.. ಚಂದನ್ ನೊವೇದಿತಾ ಗೌಡ.. ಮಯೂರಿ ಅರುಣ್.. ಹೀಗೆ ಸಾಲು ಸಾಲು ಕಲಾವಿದರ ಮದುವೆ ಸಮಾರಂಭ ಸರಳವಾಗಿ ನೆರವೇರಿತ್ತು.. ಅಭಿಮಾನಿಗಳೊಂದಿಗೆ ಸ್ನೇಹಿತರೊಂದಿಗೆ ಸಾಮಾಜಿಕ ಜಾಲತಾಣದಲ್ಲಿಯೇ ಎಲ್ಲರೂ ಸಂತೋಷ ಹಂಚಿಕೊಂಡು ಕೊರೊನಾ ಕಾರಣಕ್ಕೆ ಬೇರೆ ಯಾವುದೇ ಸಮಾರಂಭ ಮಾಡದೆ ಅಷ್ಟಕ್ಕೆ ಸೀಮಿತಗೊಳಿಸಿದ್ದರು..

ಇನ್ನು ಕಳೆದ ವರ್ಷ ಮದುವೆಯಾದ ಅಶ್ವಿನಿ ನಕ್ಷತ್ರ ಧಾರಾವಾಹಿಯ ನಟಿ ಮಯೂರಿ ಅವರು ಮದುವೆಯಷ್ಟೇ ಅಲ್ಲದೇ ಮಗುವಿನ ಆಗಮನದ ಸಿಹಿ ಸುದ್ದಿಯನ್ನೂ ಸಹ ನೀಡಿದ್ದರು.. ಇನ್ನೂ ಕಳೆದ ಎರಡು ತಿಂಗಳ ಹಿಂದಷ್ಟೇ ಮಯೂರಿ ಅವರ ಮನೆಗೆ ಮುದ್ದು ಕಂದನ ಆಗಮನವೂ ಆಗಿತ್ತು.. ಇನ್ನು ಈ ವರ್ಷವೂ ಸಹ ಎಲ್ಲಾ ಸಮಾರಂಭಗಳು ಸರಳವಾಗಿಯೇ ನೆರವೇರಲಿದ್ದು ಕನ್ನಡ ಕಿರುತೆರೆಯ ಮತ್ತೊಬ್ಬ ನಟಿ ಕಾವ್ಯಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಮೀರಾ ಮಾಧವ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಕಾವ್ಯ ಗೌಡ ನಂತರ ರಾಧಾ ರಮಣ ಧಾರಾವಾಹಿಯಲ್ಲಿ ರಾಧಾ ಮಿಸ್ ಪಾತ್ರಕ್ಕೆ ಎರಡನೇ ನಟಿಯಾಗಿ ಅಭಿನಯಿಸಿ ಹೆಸರು ಪಡೆದಿದ್ದರು.. ಸದ್ಯ ಇದೀಗ ಮದುವೆಯ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.. ಹೌದು ತಾವು ಮದುವೆಯಾಗುತ್ತಿರುವ ಹುಡುಗನ ಫೋಟೋ ಹಂಚಿಕೊಂಡಿರುವ ಕಾವ್ಯಾ ಗೌಡ ಮದುವೆಯ ಸಿಹಿ ಸುದ್ದಿಯನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೆ ಹುಡುಗನಿಗೆ ತಮ್ಮ ಮನಸ್ಸಿನ ಮಾತನ್ನು ಪತ್ರದ ಮೂಲಕ ಬರೆದಿದ್ದಾರೆ..

“ನನ್ನ ಈ ಹೊಸ ಜೀವನವನ್ನು ನಿಮ್ಮೊಂದಿಗೆ ಶುರು ಮಾಡಲು ನಾನು ಕಾಯುತ್ತಿದ್ದೇನೆ.. ನಿನ್ನ ಜೊತೆಗೆ ಕಳೆದ ಆ ಕ್ಷಣಗಳು ನನ್ನ ಜೀವನದ ಸುಂದರ ಕ್ಷಣಗಳಾಗಿವೆ.. ನಿನ್ನಂತಹ ಉತ್ತಮ ವ್ಯಕ್ತಿಯನ್ನು ನಾನು ನನ್ನ ಜೀವನದಲ್ಲಿ ನೋಡಿಲ್ಲ.. ನಿನ್ನ ಮುಗ್ಧತೆ.. ನಿನ್ನ ತಾಳ್ಮೆ ನಿನ್ನ ಪ್ರೀತಿ.. ನಿನ್ನ ಕಾಳಜಿ ಎಲ್ಲವೂ ನೋಡಿದರೆ ನಾನು ವಿಶ್ವದ ತುತ್ತ ತುದಿಯಲ್ಲಿದ್ದೇನೆ ಅಂತ ನನಗೆ ಅನಿಸುತ್ತದೆ.. ನೀನು ಅತ್ಯುತ್ತಮ ವ್ಯಕ್ತಿ.. ನಾನು ಕಣ್ಣು ಮುಚ್ಚಿಯೂ ನಿನ್ನ ಜೊತೆಗೆ ಜೀವನ ಕಳೆಯುತ್ತೇನೆ ಎನ್ನಿವ ನಂಬಿಕೆ ನನಗಿದೆ.. ನನ್ನ ಜೀವನವನ್ನು ಇನ್ನಷ್ಟು ಸುಂದರ ಮಾಡಿರೋದಕ್ಕೆ.. ಬಣ್ಣಗಳಿಂದ ಕೂಡಿರುವಂತೆ ಮಾಡಿರುವುದಕ್ಕೆ ನಿನಗೆ ನನ್ನ ಧನ್ಯವಾದಗಳು. ನಿನ್ನ ಜೊತೆಗೆ ಪ್ರತಿಕ್ಷಣ ಇರುತ್ತೇನೆ ಎಂದು ಮಾತು ‌ನೀಡುತ್ತೇನೆ.. ನಿನ್ನ ಕನಸಿಗಾಗಿ ನಾನು ಸಹ ಜೊತೆಯಾಗಿ ನಿಲ್ಲುತ್ತೇನೆ..

ನಿನ್ನ ಹಾದಿಯಲ್ಲಿ ಏನು ಬರತ್ತದೆ ಎಂಬುದು ಮುಖ್ಯವಲ್ಲ.. ನಾನು ನಿನ್ನ ಪರ ಸದಾ ನಿಲ್ಲುವೆ.. ನಾನು ಸಾಯಿ ಬಾಬಾರನ್ನು ನಂಬುತ್ತೇನೆ.. ಅವರು ಎಂದಿಗೂ ನನ್ನನ್ನು ಕೆಳಗೆ ಬೀಳಲು ಬಿಟ್ಟಿಲ್ಲ.. ಜೀವನದಲ್ಲಿ ಏನಾದರೂ ಉತ್ತಮವಾಗಿರೋದು ಸಿಗೋಕೆ ಕಾಯಬೇಕಂತೆ ಅಂತ ಹೇಳ್ತಾರೆ.. ನೀನು ಸಿಗುವ ತನಕ ನಾನು ಕಾದಿರುವುದಕ್ಕೆ ನನಗೆ ಸಂತೋಷವಿದೆ.. ಇಂತಹ ಅದ್ಭುತ ವ್ಯಕ್ತಿಯನ್ನು ಭೇಟಿ ಮಾಡಲು ಅವಕಾಶ ನೀಡಿದ ಜಗತ್ತಿಗೆ ನನ್ನ ಧನ್ಯವಾದಗಳು.. ನನಗೆ ಜಗತ್ತು ನೀಡಿದ ದೊಡ್ಡ ಉಡುಗೊರೆ ನೀನು.. ನಿನ್ನ ಜೊತೆ ಜೀವನ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಸಾಯಿಬಾಬಾರಿಗೆ ಯಾವಾಗಲೂ ನಾನು ಋಣಿಯಾಗಿರುತ್ತೇನೆ.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಇನ್ನು ಮದುವೆಯ ವಿಚಾರ ತಿಳಿಸುತ್ತಿದ್ದಂತೆ ಕಾವ್ಯಾ ಗೌಡರಿಗೆ ಕಿರುತೆರೆ ಸ್ನೇಹಿತರು ಅಭಿಮಾನಿಗಳು ಶುಭಾಶಯ ತಿಳಿಸಿದ್ದು ನೂತನ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಶುಭ ಹಾರೈಸಿದ್ದಾರೆ.. ಇನ್ನು ಕಾವ್ಯಾ ಅವರು ಮದುವೆಯಾಗುತ್ತಿರುವ ಹುಡುಗ ಉದ್ಯಮಿಯಾಗಿದ್ದು ದುಬೈ ನಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ. ಕಾವ್ಯಾ ಅವರು ಸಹ ಕೆಲ ದಿನಗಳ ಹಿಂದೆ ತಮ್ಮ ತಾಯಿಯ ಜೊತೆ ದುಬೈ ಗೆ ತೆರಳಿದ್ದು ಅಲ್ಲಿಯೇ ಪೋಟೋ ಚಿತ್ರೀಕರಣ ನಡೆಸಿದ್ದು ಅದೇ ಫೋಟೋಗಳನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಸದ್ಯದಲ್ಲಿಯೇ ಕಾವ್ಯಾ ಗೌಡ ಅವರು ತಾವು ಪ್ರೀತಿಸಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದು ಕೆಲವೇ ತಿಂಗಳಲ್ಲಿ ಮದುವೆ ಸಮಾರಂಭ ನೆರವೇರಲಿದೆ ಎಂದು ತಿಳಿದು ಬಂದಿದೆ..