ಎಸ್ ಎಸ್ ಎಲ್ ಸಿ ಓದುತ್ತಿದ್ದ ಮಗಳು ಇಲ್ಲವಾದಳು.. ಆದರೆ ಒಂದೇ ಗಂಟೆಯಲ್ಲಿ ಆಕೆಯ ಮನೆಯಲ್ಲಿ‌ ಏನಾಗಿದೆ ಗೊತ್ತಾ..

0 views

ಬಹುಶಃ ವಿಧಿ ಅನ್ನೋದೆ ಹೀಗೆ.. ನಾವುಗಳು ಏನನ್ನು ಅಂದುಕೊಂಡಿರುತ್ತೇವೆಯೋ ಅದು ಆಗೋದೆ ಇಲ್ಲ.. ನಾವು ಯಾವುದನ್ನು ನಿರೀಕ್ಷೆ ಮಾಡಿರುವುದಿಲ್ಲವೋ ಅದೆಲ್ಲವೂ ಒಂದರ ಹಿಂದೆ ಒಂದು ನಡೆಯುತ್ತಕೇ ಇರುತ್ತದೆ. ಅಂತಹುದೇ ಇಲ್ಲೊಂದು ಮನಕಲಕುವ ಘಟನೆ ನಡೆದಿದೆ. ಹೌದು ಎಸ್ ಎಸ್ ಎಲ್ ಓದುತ್ತಿದ್ದ ವಿದ್ಯಾರ್ಥಿನಿ ಜೀವ ಕಳೆದುಕೊಂಡಿದ್ದು ಆಕೆ ಇಲ್ಲವಾದ ಒಂದೇ ಗಂಟೆಯಲ್ಲಿ ಮನೆಯಲ್ಲಿ ನಡೆದ ಘಟನೆ ನೋಡಿ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ..

ಹೌದು ಈ ಮನಕಲಕುವ ಘಟನೆ ನಡೆದಿರುವುದು ಭಟ್ಕಳ ತಾಲೂಕಿನ ಮಾರುಕೇರಿಯಲ್ಲಿ. ಈ ಹೆಣ್ಣು ಮಗಳ ಹೆಸರು ಕಾವ್ಯ ರಾಮಗೊಂಡ ವಯಸ್ಸಿನ್ನು ಕೇವಲ ಹದಿನೈದು ವರ್ಷ ಮಾರುಕೇರಿಯ ಹೆಜ್ಜಿಲು ನಿವಾಸಿ. ಕಾವ್ಯಾ ರಾಮಗೊಂಡ ಎಸ್ ಎಸ್ ಎಲ್ ಸಿ ಓದುತ್ತಿದ್ದಳು. ಇನ್ನೇನು ಪರೀಕ್ಷೆ ಬರೆಯಬೇಕಿತ್ತು. ಪರೀಕ್ಷೆಗೆ ಎಲ್ಲಾ ಸಿದ್ಧತೆಗಳನ್ನು ಸಹ ಮಾಡಿಕೊಳ್ಳುತ್ತಿದ್ದಳು. ಆದರೆ ಇದ್ದಕಿದ್ದ ಹಾಗೆ ಉಸಿರಾಟದ ಸಮಸ್ಯೆಯಿಂದ ಕಾವ್ಯಾ ರಾಮಗೊಂಡ ಜೀವ ಕಳೆದುಕೊಂಡಿದ್ದು ಆಕೆ ಇಲ್ಲವಾದ ಕೇವಲ ಒಂದೇ ಗಂಟೆಯಲ್ಲಿ ಆಕೆಯ ಮನೆಯಲ್ಲಿ ಮತ್ತೊಬ್ಬರು ಇಲ್ಲವಾಗಿದ್ದಾರೆ. ಘಟನೆ ನೋಡಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ..

ಹೌದು ಕಾವ್ಯಾ ರಾಮಗೊಂಡ ಭಟ್ಕಳ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದಳು. ಇನ್ನೇನು ಪರೀಕ್ಷೆ ಬರೆಯಲು ಚೆನ್ನಾಗಿ ಓದಿಕೊಳ್ಳುತ್ತಿದ್ದಳು. ಆದರೆ ವಾರದ ಹಿಂದೆ ಕಾವ್ಯಾ ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಸೋಮವಾರ ಕಾವ್ಯಗೆ ತೀವ್ರ ಉಸಿರಾಟದ ಸಮಸ್ಯೆ ಕಂಡು ಬಂತು. ತಕ್ಷಣ ಆಕೆಯನ್ನು ಉಡುಪಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ವಿಧಿಯ ನಿರ್ಣಯವೇ ಬೇರಿತ್ತು ಆಕೆಗೆ ಚಿಕಿತ್ಸೆ ಫಲಕಾರಿಯಾಗದೆ ಕೇವಲ ಹದಿನೈದು ವರ್ಷ ವಯಸ್ಸಿಗೆ ಬಾರದ ಲೋಕಕ್ಕೆ ಪಯಣ ಬೆಳೆಸಿಬಿಟ್ಟಳು..

ಇನ್ನು ಈ ವಿಚಾರ ಮನೆಯಲ್ಲಿ ತಿಳಿಯುತ್ತಿದ್ದಂತೆ ಮತ್ತೊಂದು ಜೀವ ಇನ್ನಿಲ್ಲವಾಗಿದೆ.. ಹೌದು ಅವರು ಮತ್ಯಾರೂ ಅಲ್ಲ ಕಾವ್ಯಾ ರಾಮಗೊಂಡ ಳ ತಂದೆ ರಾಮ ಸುಕ್ರಗೊಂಡ.. ಹೌದು ಮಗಳು ಇಲ್ಲವಾದಳು ಎಂಬ ವಿಚಾರ ತಿಳಿಯುತ್ತಿದ್ದಂತೆ ಒಂದೇ ಗಂಟೆಯಲ್ಲಿ ರಾಮ ಸುಕ್ರಗೊಂಡ ಅವರಿಗೆ ಹೃದ ಯಾಘಾ ತವಾಗಿ ಅವರೂ ಸಹ ಜೀವ ಕಳೆದುಕೊಂಡಿದ್ದು ಒಂದೇ ದಿನ ಎರಡು ಜೀವ ಕಳೆದುಕೊಂಡ ಆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು..

ಇನ್ನು ತಂದೆ ಮಗಳು ಇಬ್ಬರೂ ಸಹ ಒಂದೇ ದಿನದಲ್ಲಿ ಇಲ್ಲವಾಗಿದ್ದ ಕಂಡು ಗ್ರಾಮಸ್ಥರು ಕಂಬನಿ‌ ಮಿಡಿದಿದ್ದಾರೆ.. ಮಗಳ ಮೇಲೆ ಅದೆಷ್ಟು ಕನಸು ಕಂಡಿದ್ದರೋ ಆ ತಂದೆ.. ಮಗಳ ಮುಂದಿನ ಭವಿಷ್ಯದ ಬಗ್ಗೆ ಅದೆಷ್ಟು ಚಿಂತನೆ ಮಾಡಿದ್ದರೋ.. ಮಗಳು ಚೆನ್ನಾಗಿ ಓದಲೆಂದು ಪಟ್ಟಣಕ್ಕೆ ಕಳುಹಿಸಿ ಓದಿಸುತ್ತಿದ್ದರು.. ಆದರೆ ವಿಧಿಯಾಟವೇ ಬೇರಿತ್ತು.. ಹದಿನೈದು ವರ್ಷಕ್ಕೇ ಮಗಳು ಇಹಲೋಕ ತ್ಯಜಿಸಿದರೆ ಇತ್ತ ಮಗಳ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ ತಂದೆಯೂ ಸಹ ಮಗಳನ್ನು ಬಿಟ್ಟಿರಲಾರದೆ ಮಗಳ ಹಿಂದೆಯೇ ಹೊರಟಿದ್ದು ಆ ಕುಟುಂಬದ ಆಕ್ರಂದನ ನಿಜಕ್ಕೂ ಕಣ್ಣೀರು ತರಿಸುವಂತಿತ್ತು..