ನಿರ್ಮಾಪಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕನ್ನಡ ಕಿರುತೆರೆಯ ಖ್ಯಾತ ನಟಿ ಕಾವ್ಯಾ.. ಹುಡುಗ ಯಾರು ಗೊತ್ತಾ..

0 views

ಕಳೆದ ಎರಡು ವರ್ಷದಿಂದ ಕನ್ನಡ ಕಿರುತೆರೆಯ ಹಾಗೂ ಸ್ಯಾಂಡಲ್ವುಡ್ ನ ಅನೇಕ ಕಲಾವಿದರು ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ನೂತನ ಜೀವನ ಆರಂಭದ ಸಂಭ್ರಮವನ್ನು ಅಭಿಮಾನಿಗಳು ಸ್ನೇಹಿತರೊಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ.. ಇತ್ತ ಕೊರೊನಾ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಿರುವ ಕಲಾವಿದರುಗಳು ವ್ಯಯಕ್ತಿಕ ಜೀವನದ ಕಡೆ ಗಮನ ಕೊಟ್ಟು ಮದುವೆಯ ನೂತನ ಜೀವನವನ್ನು ಶುರು ಮಾಡುತ್ತಿದ್ದಾರೆ..

ಇನ್ನು ಕಳೆದ ವರ್ಷ ಅಶ್ವಿನಿ ನಕ್ಷತ್ರ ಧಾರಾವಾಹಿಯ ಮಯೂರಿ ಅರುಣ್.. ಚಂದನ್ ಶೆಟ್ಟಿ ನಿವೇದಿತಾ ಗೌಡ.. ಅಜಯ್ ರಾವ್.. ಶಿಲ್ಪಾ ದರ್ಶಕ್, ಚಂದನ್ ಕವಿತಾ ಗೌಡ ಹೀಗೆ ಸಾಕಷ್ಟು ಕಿರುತೆರೆ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಇನ್ನು ಸ್ಯಾಂಡಲ್ವುಡ್ ನಲ್ಲಿಯೂ ಅನೇಕ ಮದುವೆ ಸಮಾರಂಭಗಳು ನಡೆದವು ನಿಖಿಲ್ ರೇವತಿ.. ಕೃಷ್ಣ ಮಿಲನಾ ನಾಗರಾಜ್.. ರಮೇಶ್ ಅರವಿಂದ್ ಅವರ ಪುತ್ರಿ ಹೀಗೆ ಸಾಕಷ್ಟು ಮಂದಿ ನೂತನ ಜೀವನ ಆರಂಭಿಸಿ ಅದಾಗಲೇ ಸಾಕಷ್ಟು ಮಂದಿ ತಮ್ಮ ಕುಟುಂಬಕ್ಕೆ ಪುಟ್ಟ ಕಂದನನ್ನೂ ಬರಮಾಡಿಕೊಂಡು ಅಭಿಮಾನಿಗಳ ಸಂತೋಷ ಹಂಚಿಕೊಂಡಿದ್ದಾರೆ‌. ಇನ್ನು ಇದೀಗ ಕನ್ನಡ ಕಿರುತೆರೆಯ ಮತ್ತೊಬ್ಬ ಖ್ಯಾತ ನಟಿ ಹಾಗೂ ನಿರೂಪಕಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ..

ಹೌದು ಸಾಮಾನ್ಯವಾಗಿ ಕಿರುತೆರೆ ಕಲಾವಿದರು ಸಹಕಲಾವಿದರುಗಳನ್ನು ಪ್ರೀತಿಸಿ ಮದುವೆಯಾಗೋದು ಹೊಸ ವಿಚಾರವೇನೂ ಅಲ್ಲ.. ಸಾಕಷ್ಟು ಮಂದಿ ಧಾರಾವಾಹಿಗಳಲ್ಲಿ ತಮ್ಮ ಜೊತೆ ಅಭಿನಯಿಸುವ ಸಹ ಕಲಾವಿದರುಗಳನ್ನು ಪ್ರೀತಿಸಿ ಮದುವೆ ಆಗಿರೋದುಂಟು.. ಆದರೆ ಇವರು ಮಾತ್ರ ದಶಕಗಳಿಂದ ಕಿರುತೆರೆ ಹಾಗೂ ಸಿನಿಮಾ ನಿರ್ಮಾಪಕರನ್ನು ಪ್ರೀತಿಸುತ್ತಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಹೌದು ಈ ನಟಿ ಮತ್ಯಾರೂ ಅಲ್ಲ.. ಕಾವ್ಯಾ ಶಾ.. ಹೌದು ಕನ್ನಡ ಕಿರುತೆರೆಯಲ್ಲಿ ನಟಿ ಹಾಗೂ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಕಾವ್ಯಾ ಶಾ ಕನ್ನಡದ ಚಿ ಸೌ ಸಾವಿತ್ರಿ, ಬಂಗಾರ ಹೀಗೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿ ನಂತರ ಕಸ್ತೂರಿ ವಾಹಿನಿಯಲ್ಲಿ ನಿರೂಪಕಿಯಾಗಿಯೂ ಕೆಲಸ ಮಾಡುತ್ತಿದ್ದರು..

ನಂತರದಲ್ಲಿ ಸ್ಯಾಂಡಲ್ವುಡ್ ಗೆ ಕಾಲಿಟ್ಟ ಕಾವ್ಯಾ ಶಾ ಅಲ್ಲಿಯೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು.. ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ.. ಮುಗಿಲ್ ಪೇಟೆ ಹಾಗೂ ಇನ್ನು ಅನೇಕ ಸಿನಿಮಾಗಳಲ್ಲಿ ಅಭಿನಯಿಸಿದ್ದು ಸಧ್ಯ ತಮಿಳು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.. ಕಾವ್ಯಾ ಶಾ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ನಾಗೇಂದ್ರ ಶಾ ಅವರ ಪುತ್ರಿಯೂ ಹೌದು.. ಇನ್ನು ಇದೀಗ ಕಾವ್ಯಾ ಶಾ ಕನ್ನಡದ ನಿರ್ಮಾಪಕರೊಬ್ಬರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಎರಡೂ ಕುಟುಂಬದಲ್ಲಿ ಮದುಚೆ ತಯಾರಿ ಜೋರಾಗೇ ನಡೆಯುತ್ತಿದೆ.. ಹೌದು ಕಾವ್ಯಾ ಶಾ ಮದುವೆಯಾಗುತ್ತಿರುವ ಹುಡುಗನ ಹೆಸರು ವರುಣ್ ಗೌಡ.‌.

ಜೀ ಕನ್ನಡದ ದೊಡ್ಡ ದೊಡ್ಡ ರಿಯಾಲಿಟಿ ಶೋಗಳಲ್ಲಿ ವರುಣ್ ಕೆಲಸ್ ಮಾಡುತ್ತಿದ್ದಾರೆ.. ಜೀ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು ಅವರ ಜೊತೆ ಸಾಕಷ್ಟು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿದ್ದು ತಮ್ಮದೇ ಆದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನೂ ಸಹ ಹೊಂದಿದ್ದಾರೆ.. ಅಷ್ಟೇ ಅಲ್ಲದೇ ಅಷ್ಟೇ ಅಲ್ಲದೇ ಇದೀಗ ಸ್ಯಾಂಡಲ್ವುಡ್ ಗೆ ನಿರ್ಮಾಪಕನಾಗಿಯೂ ಕಾಲಿಟ್ಟಿದ್ದು‌ ಹಾಸ್ಟೆಲ್ ಹುಡುಗರು ಸಿನಿಮ ನಿರ್ಮಿಸುತ್ತಿದ್ದು ಕೆಲವೇ ತಿಂಗಳ ಹಿಂದೆ ಪುನೀತ್ ರಾಜ್ ಕುಮಾರ್ ಅವರು ಈ ಚಿತ್ರದ ಸಾಕಷ್ಟು ಪ್ರಮೋಷನ್ ವೀಡಿಯೋಗಳಲ್ಲಿ ಕಾಣಿಸಿಕೊಂಡು ವರುಣ್ ಅವರಿಗೆ ಶುಭ ಹಾರೈಸಿದ್ದರು..

ಅದೇ ವರುಣ್ ಗೌಡ ಅವರ ಜೊತೆ ಇದೀಗ ಕಾವ್ಯಾ ಶಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ಇದೇ ಮಾರ್ಚ್ ಕೊನೆಯಲ್ಲಿ‌ ಮದುವೆ ಸಮಾರಂಭ ನೆರವೇರಲಿದೆ ಎನ್ನಲಾಗುತ್ತಿದೆ.. ಕಾವ್ಯಾ ಹಾಗೂ ವರುಣ್ ಗೌಡ ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದು ಇಬ್ಬರೂ ಜೀವನದಕ್ಕಿ ಸೆಟಲ್ ಆದ ನಂತರ ಮದುವೆಯಾಗೋಣ ಎಂದು ನಿರ್ಧರಿಸಿ ಇದೀಗ ಇಬ್ಬರೂ ಸಹ ತಮ್ಮ ದಶಕದ ಪ್ರೀತಿಗೆ ದಾಂಪತ್ಯದ ಅರ್ಥ ನೀಡುತ್ತಿದ್ದು ಸ್ನೇಹಿತರು ಹಾಗೂ ಆಪ್ತರು ಇಬ್ಬರಿಗೂ ತಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ..