ಅತ್ಯಂತ ರುಚಿಯಾದ ಬಾಯಲ್ಲಿ ನೀರೂರುವ ಮಾವಿನ ಹಣ್ಣಿನ ಕೇಸರಿ ಬಾತ್ ಮಾಡುವ ಸುಲಭ ವಿಧಾನ..

0 views

ಮನೆಯಲ್ಲಿ ಮಾಡುವ ತಿಂಡಿಗಳಲ್ಲಿ ಬಹುತೇಕ ಎಲ್ಲರೂ ಇಷ್ಟ ಪಟ್ಟು ತಿನ್ನುವ ಸಿಹಿ ತಿಂಡಿಗಳಲ್ಲಿ ಒಂದು ಕೇಸರಿಭಾತ್. ಉಪ್ಪಿಟ್ಟು ಮತ್ತು ಕೇಸರಿಭಾತ್ ಕಾಂಬಿನೇಷನ್ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟ. ಸಾಮಾನ್ಯವಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಕೂಡ ಬರುವ ಜನರಿಗೆ ಉಪಹಾರವಾಗಿ ಉಪ್ಪಿಟ್ಟು ಮತ್ತು ಕೇಸರಿಭಾತ್ ಅನ್ನು ನೀಡುತ್ತಾರೆ. ಕೇಸರಿಭಾತ್ ಹೆಸರು ಕೇಳಿದರೆ ತಿನ್ನಬೇಕು ಎಂದು ಕೂಡ ಅನ್ನಿಸುತ್ತದೆ. ಈ ಕೇಸರಿಭಾತ್ ಅನ್ನು ಬೇರೆ ಬೇರೆ ವಿಧಗಳಲ್ಲಿ ಕೂಡ ಮಾಡುತ್ತಾರೆ. ಉದಾಹರಣೆಗೆ ಪೈನಾಪಲ್ ಕೇಸರಿಭಾತ್, ಕೇಸರಿಭಾತ್ ನಲ್ಲಿ ಅನಾನಸ್ ಅನ್ನು ಕೂಡ ಹಾಕಿ, ತಯಾರು ಮಾಡುವ ತಿಂಡಿ ಇದಾಗಿದೆ. ಪೈನಾಪಲ್ ಕೇಸರಿಭಾತ್ ಅನ್ನು ಕಾಮನ್ ಆಗಿ ಕೇಳಿರುತ್ತೀರಿ, ಆದರೆ ಮ್ಯಾಂಗೋ ಕೇಸರಿ ಭಾತ್ ಅಥವಾ ಮಾವಿನ ಹಣ್ಣಿನ ಕೇಸರಿಭಾತ್ ಎಂದಾದರೂ ಟ್ರೈ ಮಾಡಿದ್ದೀರಾ? ಮಾವಿನ ಹಣ್ಣಿನ ಕಾಲ ಇನ್ನೇನು ಶುರುವಾಗುತ್ತದೆ. ಆಗ ತಪ್ಪದೇ ಈ ಮ್ಯಾಂಗೋ ಕೇಸರಿ ಭಾತ್ ಟ್ರೈ ಮಾಡಿ. ಮಾವಿನ ಹಣ್ಣಿನ ಕೇಸರಿಭಾತ್ ತಯಾರಿಸುವುದು ಹೇಗೆ ಎಂದು ಇಂದು ತಿಳಿಸುತ್ತೇವೆ ನೋಡಿ..

ಮೊದಲಿಗೆ ಒಂದು ಪ್ಯಾನ್ ಅಥವಾ ಕಡಾಯಿಗೆ ಎರಡು ಸ್ಪೂನ್ ತುಪ್ಪ ಹಾಕಿ, ತುಪ್ಪ ಸ್ವಲ್ಪ ಬಿಸಿಯಾದ ನಂತರ ಪ್ಯಾನ್ ಗೆ ಒಂದು ಪುಟ್ಟ ಗ್ಲಾಸ್ ನ ತುಂಬಾ ಚಿರೋಟಿ ರವೆ ಹಾಕಿ, ತುಪ್ಪದ ಜೊತೆ ರವೆಯನ್ನು ಮೀಡಿಯಂ ಫ್ಲೇಮ್ ನಲ್ಲಿ ಹುರಿದುಕೊಳ್ಳಬೇಕು. ರವೆ ಹುರಿದ ನಂತರ ಅದೇ ಪ್ಯಾನ್ ಗೆ ಗೋಡಂಬಿ, ಬಾದಾಮಿ ಮತ್ತು ದ್ರಾಕ್ಷಿ ಡ್ರೈ ಫ್ರೂಟ್ಸ್ ಗಳನ್ನು ಹಾಕಿ, ರವೆಯ ಜೊತೆಯಲ್ಲೇ ಫ್ರೈ ಮಾಡಿ. ಡ್ರೈ ಫ್ರೂಟ್ಸ್ ಗಳನ್ನು ಸೆಪರೇಟ್ ಆಗಿ ಫ್ರೈ ಮಾಡದೆ, ರವೆಯ ಜೊತೆ ಫ್ರೈ ಮಾಡುವುದರಿಂದ ಸಮಯ ಉಳಿಯುತ್ತದೆ. ಹಾಗೂ ರವೆಯ ಜೊತೆ ಡ್ರೈ ಫ್ರೂಟ್ಸ್ ಗಳು ಚೆನ್ನಾಗಿ ಫ್ರೈ ಆಗುತ್ತದೆ. ನಿಮಗೆ ಇಷ್ಟವಾಗುವ ಬೇರೆ ಡ್ರೈ ಫ್ರೂಟ್ಸ್ ಗಳನ್ನು ಕೂಡ ಹಾಕಿಕೊಳ್ಳಬಹುದು.

ಇನ್ನುಳಿದ ಪದಾರ್ತಿಗಳಾದ ಹಾಲು ನೀರು ಎಲ್ಲವನ್ನು, ರವೆಯನ್ನು ತೆಗೆದುಕೊಂಡಷ್ಟೇ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ತುಪ್ಪದಲ್ಲಿ ಫ್ರೈ ಆದ ನಂತರ ದ್ರಾಕ್ಷಿ ದೊಡ್ಡದಾಗುತ್ತದೆ, ಆ ರೀತಿ ಆಗುವವರೆಗೂ ಫ್ರೈ ಮಾಡಿಕೊಂಡರೆ ಸಾಕು. ತುಪ್ಪದಲ್ಲಿ ಹುರಿದ ಕಾರಣ ರವೆಯ ಬಣ್ಣ ಕೂಡ ಬದಲಾಗಿರುತ್ತದೆ. ಇದು ಹಾಲು ಹಾಕಲು ಸೂಕ್ತ ಸಮಯ. ಒಂದು ಗ್ಲಾಸ್ ರವೆಗೆ ಎರಡರಿಂದ ಎರಡೂವರೆ ಗ್ಲಾಸ್ ಅಷ್ಟು ಹಾಲನ್ನು ಬಿಸಿ ಮಾಡಿ, ಕೇಸರಿ ದಳ ಹಾಕಿ ರವೆಯ ಜೊತೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮೊದಲು ಹಾಲು ಹಾಕಿ ನಂತರ ನೀರನ್ನು ಹಾಕಬಹುದು. ಇಲ್ಲವಾದರೆ, ಹಾಲು ಮತ್ತು ನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಹಾಕಿಕೊಳ್ಳಬಹುದು.

ಈಗ ಹಾಲಿನ ಜೊತೆ ರವೆ ಬೆರೆತ ನಂತರ ಎರಡು ಕಪ್ ಸಕ್ಕರೆಯನ್ನು ಪ್ಯಾನ್ ಗೆ ಹಾಕಬೇಕು. ರವೆ ಮತ್ತು ಸಕ್ಕರೆ ಚೆನ್ನಾಗಿ ಹೊಂದಿಕೊಳ್ಳುವ ಹಾಗೆ ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ಹಂತ ಮುಗಿದ ನಂತರ ಮಾವಿನ ಹಣ್ಣನ್ನು ಹಾಕಿಕೊಳ್ಳಬೇಕು, ಒಂದು ಮಾವಿನ ಹಣ್ಣಿನಲ್ಲಿ ಅರ್ಧ ಮಾವಿನ ಹಣ್ಣನ್ನು, ನೀರು ಬಳಸದೆ ಹಾಗೆ ರುಬ್ಬಿ, ಅದರ ಪೇಸ್ಟ್ ಅನ್ನು ಪ್ಯಾನ್ ಗೆ ಹಾಕಬೇಕು. ಇನ್ನರ್ಧ ಮಾವಿನ ಸಣ್ಣದಾಗಿ ಕಟ್ ಮಾಡಿ, ಅದನ್ನು ಪ್ಯಾನ್ ಗೆ ಹಾಕಿ ಮಿಕ್ಸ್ ಮಾಡಬೇಕು..ಮತ್ತೊಮ್ಮೆ ಒಂದೂವರೆ ಟೇಬಲ್ ಸ್ಪೂನ್ ತುಪ್ಪ ಹಾಕಿ, ಪ್ಯಾನ್ ಗೆ ತಳ ಹಿಡಿಯದ ಹಾಗೆ ಚೆನ್ನಾಗಿ ಮಿಕ್ಸ್ ಮಾಡಬೇಕು.

ಮಾವಿನ ಹಣ್ಣನ್ನು ಹಾಕಿರುವುದರಿಂದ, ತುಪ್ಪದ ಜೊತೆ ಫ್ರೈ ಮಾಡಿದರೆ, ರುಚಿಯಾಗಿರುತ್ತದೆ. ಮಾವಿನ ಹಣ್ಣನ್ನು ಪೂರ್ತಿಯಾಗಿ ಫ್ರೈ ಮಾಡಿ ಹಾಕಿಕೊಳ್ಳಬಹುದು, ಆದರೆ ಸ್ವಲ್ಪ ಭಾಗವನ್ನು ಕಟ್ ಮಾಡಿ ಹಾಕಿದರೆ, ತಿನ್ನುವಾಗ ಸಿಗುತ್ತದೆ, ಅದು ಚೆನ್ನಾಗಿ ಅನ್ನಿಸುತ್ತದೆ. ಸಕ್ಕರೆ ಹಾಕಿರುವ ಕಾರಣ ಸ್ವಲ್ಪ ತೆಳುವಾಗಿರುತ್ತದೆ. ಹಾಗಾಗಿ ತಳ ಹಿಡಿಯದೆ ಇರುವ ಹಾಗೆ, ಮೀಡಿಯಂ ಫ್ಲೇಮ್ ನಲ್ಲಿ ಚೆನ್ನಾಗಿ ಕೈಯಾಡಿಸಬೇಕು. ಹಸಿ ಮಾವಿನ ಹಣ್ಣನ್ನು ಹಾಕಿರುವ ಕಾರಣ, ಪ್ಯಾನ್ ನ ಲಿಡ್ ಮುಚ್ಚಿ ಎರಡರಿಂದ ಮೂರು ನಿಮಿಷಗಳ ಕಾಲ ಬೇಯಿಸಬೇಕು. ಈಗ ಮಾವಿನಹಣ್ಣು ಹದವಾಗಿ ಕುಕ್ ಆಗಿರುತ್ತದೆ. ಸೈಡ್ ಇಂದ ತುಪ್ಪ ಕೂಡ ಬಿಟ್ಟುಬರುತ್ತಿದೆ. ಹಾಗಾದಾಗ ಕೇಸರಿಭಾತ್ ಚೆನ್ನಾಗಿ ಬಂದಿದೆ ಎಂದು ಅರ್ಥ. ಈ ರುಚಿಕರವಾದ ಮ್ಯಾಂಗೋ ಕೇಸರಿಭಾತ್ ಈಗ ಸವಿಯಲು ಸಿದ್ಧ. ನಿಮ್ಮ ಪ್ರೀತಿ ಪಾತ್ರರಿಗೆ ತಪ್ಪದೆ ಇದನ್ನು ಮಾಡಿಕೊಡಿ.