ನಡು ರಸ್ತೆಯಲ್ಲಿಯೇ ಮುಖ ಮೂತಿ ನೋಡದೆ ಗ್ರಹಚಾರ ಬಿಡಿಸಿದ ಕಿರಿಕ್ ಕೀರ್ತಿ.. ಅಷ್ಟಕ್ಕೂ ನಡೆದದ್ದೇನು ಗೊತ್ತಾ?

0 views

ಕಿರಿಕ್ ಕೀರ್ತಿ ಬಿಗ್ ಬಾಸ್ ಸೀಸನ್ ನಾಲ್ಕರ ಸ್ಪರ್ಧಿ ಆಗಿದ್ದರೂ ಸಹ ಅವರು ಹೆಚ್ಚು ಜನರಿಗೆ ಹತ್ತಿರವಾಗಿರೋದು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡುವ ವೀಡಿಯೋಗಳಿಂದ.. ಬಿಗ್ ಬಾಸ್ ಗೆ ಬರುವ ಮುನ್ನವೇ ಐದು ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದ ಕಿರಿಕ್ ಕೀರ್ತಿ ಅವರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು.. ಸಾಕಷ್ಟು ಮಾಹಿತಿಗಳನ್ನು ಸಾರ್ವಜನಿಕರಿಗೆ ಅರ್ಥವಾಗುವಂತೆ ನೀಡುತ್ತಿದ್ದರು.. ಅಷ್ಟೇ ಅಲ್ಲದೆ ಕನ್ನಡದ ಪರವಾದ ಹೋರಾಟಗಳಲ್ಲಿಯೂ ಭಾಗಿಯಾಗುತ್ತಿದ್ದರು.. ಪಬ್ ಗಳಲ್ಲಿ ಮಾಲ್ ಗಳಲ್ಲಿ ಇನ್ನಿತರ ಜಾಗಗಳಲ್ಲಿ ಕನ್ನಡ ಹಾಡು ಬಳಕೆಯಾಗದಿದ್ದರೆ ಯಾವುದೇ ಹಿಂಜರಿಕೆಯಿಲ್ಲದೇ ನೇರವಾಗಿ ಪ್ರಶ್ನೆ ಮಾಡುತ್ತಿದ್ದ ಕೀರ್ತಿ ಅವರ ನಡೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತಿತ್ತು..

ಇನ್ನು ಸಧ್ಯ ಇದೀಗ ವ್ಯಕ್ತಿಯೊಬ್ಬರಿಗೆ ನಡುರಸ್ತೆಯಲ್ಲಿಯೇ ಗ್ರಹಚಾರ ಬಿಡಿಸಿದ್ದಾರೆ.. ಹೌದು ಅದಾಗಲೇ ಕೊರೊನಾದಿಂದಾಗಿ ಸಾರ್ವಜನಿಕರು ಪಡಬಾರದ ಕಷ್ಟ ಪಡುತ್ತಿದ್ದಾರೆ.. ಆರ್ಥಿಕವಾಗಿ ಹೇಳಿಕೊಳ್ಳಲಾಗದಂತಹ ಪರಿಸ್ಥಿತಿಯಲ್ಲಿದ್ದಾರೆ.. ಮಧ್ಯಮ ವರ್ಗದವರ ಪಾಡಂತೂ ಹೇಳತೀರದು.. ಇನ್ನು‌ ಇಂತಹ ಸಮಯದಲ್ಲಿ ಕೆಲವರು ಸಾರ್ವಜನಿಕರಿಂದ ಮಾಡುತ್ತಿರುವ ಹಗಲು ಸುಲಿಗೆ ನಿಜಕ್ಕೂ ಅತಿಯಾಗಿದೆ.. ಹೌದು ಕೆಲ ಟೋಲ್ ರಸ್ತೆಗಳನ್ನು ಅದಾಗಲೇ ಬಂದ್ ಮಾಡಲಾಗಿದೆ.. ಜನರು ಸರ್ವೀಸ್ ರಸ್ತೆಯನ್ನು ಬಳಸುತ್ತಿದ್ದಾರೆ.. ಅದಾಗಿಯೂ ಸಹ ಟೋಲ್ ಸಿಬ್ಬಂದಿ ಟೋಲ್ ಕಟ್ಟಿ ಎಂದು ಸುಲಿಗೆ ಮಾಡುತ್ತಿದ್ದಾರೆ.. ಹೌದು ಅವರ ರಸ್ತೆಯನ್ನೇ ಉಪಯೋಗಿಸಿಲ್ಲ ಎಂದಮೇಲೆ ಟೋಲ್ ಯಾಕೆ ಕಟ್ಟಬೇಕು? ಎನ್ನುವುದು ಕೀರ್ತಿ ಅವರ ಪ್ರಶ್ನೆಯಾಗಿದೆ..

ಹೌದು ಇಂದು ಹೈವೇ ಒಂದರಲ್ಲಿ ಕಿರಿಕ್ ಕೀರ್ತಿ ಅವರು ಬಂದಿದ್ದು ಆ ರಸ್ತೆ ಬ್ಯಾರಿಕೇಡ್ ನಲ್ಲಿ ಬಂದ್ ಆಗಿದ್ದ ಕಾರಣ ಸರ್ವೀಸ್ ರಸ್ತೆಯನ್ನು ಉಪಯೋಗಿಸಿಕೊಂಡು ಬಂದಿದ್ದಾರೆ.. ಆದರೆ ಮುಂದೆ ಬರುತ್ತಿದ್ದಂತೆ ಟೋಲ್ ಕಟ್ಟಬೇಕು ಎಂದಿದ್ದಾರೆ.. ಇದಕ್ಕೆ ಮಾತಿಗಿಳಿದ ಕಿರಿಕ್ ಕೀರ್ತಿ ನಿಮ್ಮ ರಸ್ತೆಯನ್ನೇ ಬಳಸಿಲ್ಲ ಎಂದಮೇಲೆ ಟೋಲ್ ಯಾಕ್ ಕಟ್ಟಬೇಕು ಎಂದು ಪ್ರಶ್ನೆ ಮಾಡಿದ್ದಾರೆ.. ಅದಕ್ಕೆ ಉತ್ತರ ನೀಡುದ ಸಿಬ್ಬಂದಿ ಅದೆಲ್ಲಾ ನಮಗೆ ಗೊತ್ತಿಲ್ಲಾ ಸರ್ ಪೋಲೀಸಿನವರು ಬ್ಯಾರಿಕೇಡ್ ಹಾಕಿರೀದು ನಾವಲ್ಲ ಎಂದಿದ್ದಾರೆ..

ಇದಕ್ಕೆ ಮರು ಪ್ರಶ್ನೆ ಹಾಕಿದ ಕಿರಿಕ್ ಕೀರ್ತಿ ಅವರು ಪೊಲೀಸರು ಬ್ಯಾರಿಕೇಡ್ ಹಾಕಿ ನಿಮ್ಮ ರಸ್ತೆ ಬಂದ್ ಮಾಡಿದ್ದಾರೆ ಅಂದಮೇಲೆ ನಿಮ್ಮ ಟೋಲ್ ಬೂತ್ ಗಳನ್ನು ಸಹ ಬಂದ್ ಮಾಡಿ.. ರಸ್ತೆ ಬಳಸದಿದ್ದರೂ ಟೋಲ್ ಕಟ್ಟಿಸಿಕೊಳ್ಳೋದು ಯಾವ ನ್ಯಾಯ ಎಂದಿದ್ದಾರೆ.. ನಾವು ಹೊಟೆಲ್ ಗೆ ಹೋದರೆ ಊಟ ಮಾಡಿದ್ರೆ ಮಾತ್ರವೇ ದುಡ್ಡು ಕೊಡೋದು.. ಅದನ್ನು ಬಿಟ್ಟು ಊಟ ಮಾಡಿಲ್ಲ ಅಂದರೂ ಸಹ ಬಿಲ್ ಕಟ್ಟಿ ಅಂದರೆ ಕೇಳೋಕೆ ಆಗತ್ತಾ? ನಿಮ್ಮ ರಸ್ತೆನೇ ಬಳಸಿಲ್ಲ ಯಾಕ್ರಿ ಟೋಲ್ ಕಟ್ಟುಸ್ಕೋತೀರಾ? ನನ್ನ್ ಹತ್ರ ದುಡ್ಡ್ ಇದೆ ನಾನ್ ಕಟ್ತೀನಿ.. ಆದ್ರೆ ದುಡ್ಡಿಲ್ಲದ ಜನರು ಏನ್ಮಾಡ್ಬೇಕು.. ತೊಂಭತ್ತೈದು ರೂಪಾಯಿ ಕಟುಸ್ಕೋತೀದಿರಾ.. ಪ್ರತಿ ಒಬ್ಬರು ತೊಂಬತ್ತೈದು ರೂಪಾಯಿ ಕೊಟ್ರೆ ಎಷ್ಟಾಯ್ತು.. ಏನು ಸುಲಿಗೆ ಮಾಡ್ತಿದ್ದೀರಾ.. ನನಗೆ ಉತ್ತರ ಕೊಡಿ ಎಂದು ಸರಿಯಾಗಿ ಪ್ರಶ್ನೆ ಮಾಡಿದ್ದಾರೆ..

ಇನ್ನು ಇತ್ತ ಕಿರಿಕ್ ಕೀರ್ತಿ ಅವರಿಗೆ ಕಿರುತೆರೆ ನಟ ಚಂದನ್ ಸಾಥ್ ನೀಡಿದ್ದು ಸಂಪೂರ್ಣ ವಾದ ವಿವಾದವನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಟೋಲ್ ನವರು ಮಾಡುತ್ತಿರುವ ಹಗಲು ಸುಲಿಗೆ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಿದ್ದಾರೆ.. ಒಟ್ಟಿನಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಇರೋ ಮೂರು ಕಾಸನ್ನು ಕಷ್ಟದ ಸಮಯದಲ್ಲಿ ಟೋಲ್ ಕಟ್ಟಿ ಹೋಗಬೇಕಾಗಿದೆ.. ತುರ್ತು ಸಮಯದಲ್ಲಿ‌ ಏನಾದರೂ ದುಡ್ಡಿಲ್ಲದೇ ಹೋಗುತ್ತಿದ್ದರೆ ನಮ್ಮ ಕತೆ ಅಲ್ಲಿಗೆ ಮುಗಿಯಿತು ಅಂತಲೇ ಅರ್ಥ..