ಪಬ್ ನಲ್ಲಿ ಕಿರಿಕ್ ಕೀರ್ತಿಗೆ ಬಿಯರ್ ಬಾಟಲಿಯಲ್ಲಿ ಹೊಡೆದದ್ದು ನಿಜಕ್ಕೂ ಯಾರು ಗೊತ್ತಾ.. ಅಸಲಿ ಕಾರಣ ಬೇರೆಯೇ ಇದೆ..

0 views

ನಿನ್ನೆ ತಡರಾತ್ರಿ ಕಿರಿಕ್ ಕೀರ್ತಿ ಅವರ ಮೇಲೆ ಬಿಯರ್ ಬಾಟಲಿಯಿಂದ ಹೊಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.. ಆದರೆ ಈ ಗಲಾಟೆಗೆ ಅಸಲಿ ಕಾರಣ ಬೇರೆಯೇ ಇದೆ.. ಹೌದು ಕಿರಿಕ್ ಕೀರ್ತಿ ಸಾಮಾನ್ಯವಾಗಿ ಪಬ್ ಗಳಲ್ಲಿ ಮಾಲ್ ಗಳಲ್ಲಿ ಕನ್ನಡದ ಹಾಡುಗಳನ್ನು ಹಾಕದೇ ಇದ್ದಾಗ ಗಲಾಟೆ ಮಾಡಿದ್ದುಂಟು.. ಆದರೆ ಈ ಗಲಾಟೆ ಆ ರೀತಿಯ ಕಾರಣಗಳಿಗೆ ನಡೆದಿಲ್ಲ.. ಹೌದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದಂತೆ ಕನ್ನಡ ಹಾಡಿನ ವಿಚಾರಕ್ಕೆ ಗಲಾಟೆ ನಡೆದಿಲ್ಲ.. ವ್ಯಯಕ್ತಿಕ ಕಾರಣಕ್ಕೆ ಇಷ್ಟೆಲ್ಲಾ ನಡೆದಿದೆ.. ಹೌದು ಕುಟುಂಬದ ಜೊತೆ ಬಂದಿದ್ದ ಕಿರಿಕ್ ಕೀರ್ತಿಗೆ ಪಬ್ ನಲ್ಲಿ ಆಗಿದ್ದೇ ಬೇರೆ..

ಹೌದು ಕಿರಿಕ್ ಕೀರ್ತಿ ಹಾಗೂ ಮತ್ತೊಬ್ಬರ ನಡುವೆ ನಿನ್ನೆ ತಡರಾತ್ರಿ ಸದಾಶಿವನಗರದ ಹ್ಯಾಮರ್ಡ್ ಪಬ್ ನಲ್ಲಿ ಗಲಾಟೆ ನಡೆದಿದ್ದು ಈ ಗಲಾಟೆ ಬೇರೆಯೇ ಹಂತಕ್ಕೆ ತಿರುಗಿ ಆ ವ್ಯಕ್ತಿ ಕೀರ್ತಿ ಅವರ ಮೇಲೆ ಪಕ್ಕದಲಿದ್ದ ಬಿಯರ್ ಬಾಟಲಿ ತೆಗೆದುಕೊಂಡು ಬಲವಾಗಿ ಕೊಟ್ಟಿದ್ದಾರೆ.. ಈ ಸಂಬಂಧ ಕುತ್ತಿಗೆ ಹಾಗೂ ಕೈಗೆ ಜೋರಾಗಿಯೇ ಪೆಟ್ಟು ಬಿದ್ದಿದ್ದು ತಕ್ಷಣ ಕಿರಿಕ್ ಕೀರ್ತಿ ಅವರನ್ನು ಸದಾಶಿವನಗರದ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಅಲ್ಲಿ ಗಾಯಗಳಿಗೆ ಹೊಲಿಗೆ ಹಾಕಿಸಿಕೊಂಡು ನಂತರ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.. ಆದರೆ ಇಬ್ಬರ ನಡುವೆ ಜಗಳ ನಡೆಯಲು ನಿಜವಾದ ಕಾರಣ ಆ ಒಂದು ವೀಡಿಯೋ..

ಹೌದು ಕಿರಿಕಿ ಕೀರ್ತಿ ನಿನ್ನೆ ತಡರಾತ್ರಿಯಲ್ಲಿ ಕುಟುಂಬ ಹಾಗೂ ಸ್ನೇಹಿತರ ಜೊತೆ ಸದಾಶಿವನಗರದ ಹ್ಯಾಮರ್ಡ್ ಪಬ್ ಗೆ ಹೋಗಿದ್ದಾರೆ.. ಅಲ್ಲಿ ಎಲ್ಲರಂತೆ ಕೀರ್ತಿ ತನ್ನ ಸ್ನೇಹಿತರ ಜೊತೆ ಕೂತು ಮಾಡುತ್ತಿದ್ದರು.. ಪಬ್ ನಲ್ಲಿ ಸಾಕಷ್ಟು ಜನ ಸೇರಿದ್ದರು.. ಅಲ್ಲಿಯೇ ಪಕ್ಕದಲ್ಲಿ ಒಬ್ಬಾತ ಮದ್ಯ ಸೇವನೆ ಮಾಡುತ್ತಾ ಕೂತಿದ್ದ.. ಆತ ಬಂದು ಕಿರಿಕ್ ಕೀರ್ತಿ ನಿನ್ನತ್ರ ಮಾತಾಡ್ಬೇಕು ಸೈಡಿಗೆ ಬಾ ಅಂತ ಕರೆದ.. ಆದರೆ ನೀವ್ಯಾರು ಸರ್ ಎಂದು ಕೀರ್ತಿ ಕೇಳಿದ್ದಾರೆ.. ಮತ್ತೆ ಇಲ್ಲ ಮಾತಾಡ್ಬೇಕು ಬಾ ಅಂತ ಕರೆದಾಗ ಕೀರ್ತಿ ಆತ ಫುಲ್ ಟೈಟ್ ಆದ ಕಾರಣ ಸರಿ ಆಯ್ತು ನಡಿ ಎಂದು ಪಕ್ಕಕ್ಕೆ ಹೋಗಿದ್ದಾರೆ.. ಆಗ ನಾನ್ ಯಾರು ಅಂತ ನಿನಗೆ ಗೊತ್ತಿಲ್ವಾ ಎಂದು ಕೇಳಿದ್ದಾನೆ.. ಅದಕ್ಕೆ ಕೀರ್ತಿ ಇಲ್ಲ ಗೊತ್ತಿಲ್ಲ ಎಂದಿದ್ದಾರೆ.. ತಕ್ಷಣ ನೀನ್ ಯಾರು ಅಂತಾನು ನನಗೆ ಗೊತ್ತಿಲ್ಲ ಹೋಗೋ ಲೇ ಎಂದು ಬೇರೆ ಭಾಷೆಯನ್ನು ಆತ ಬಳಸಿದ್ದಾನೆ.. ತಕ್ಷಣ ಇದೆಲ್ಲಾ ಸರಿ ಇರಲ್ಲಾ ಸುಮ್ಮನೆ ಹೋಗಪ್ಪಾ ಎಂದು ಕೀರ್ತಿ ಆತನಿಗೆ ಹೇಳಿದ್ದಾರೆ.. ಆಗ ಮತ್ತೊಬ್ಬ ಆತನ ಸ್ನೇಹಿತ ಇದನ್ನೆಲ್ಲಾ ವೀಡಿಯೋ ಮಾಡಿಕೊಳ್ಳುತ್ತಿದ್ದ.. ಆಗ ಕೀರ್ತಿ ಅವನ ಬಳಿ ಹೋಗಿ ನನ್ನ ಅನುಮತಿ ಇಲ್ಲದೇ ವೀಡಿಯೋ ಹೇಗ್ ಮಾಡಿದೆ ಎಂದಿದ್ದಾರೆ.. ಆದರೆ ಕೆಲ ಕ್ಷಣಗಳಲ್ಲಿ ಕೀರ್ತಿ ಅವರ ಮೇಲೆ ಒಂದು ಬಾಟಲ್ ಬಿತ್ತು.. ಎರಡೇ ಸೆಕೆಂಡ್ ನಲ್ಲಿ ಮತ್ತೊಂದು ಹೀಗೆ ಮೂರು ಬಾರಿ ಬಾಟಲ್ ನಲ್ಲಿ ಬಾರಿಸಿದ್ದಾರೆ..

ಹೌದು ಮೊದಮೊದಲು ನನ್ನ ಪರ್ಮಿಷನ್ ಇಲ್ಲದೇ ವೀಡಿಯೋ ಯಾಕೆ ತೆಗೆದುಕೊಂಡೆ ಎಂದು ಕೇಳಿದ ಕೀರ್ತಿಗೆ ನಿನಗೆ ನೀನು ದೊಡ್ಡ ಸೆಲಿಬ್ರೆಟಿ ಅಂತ ಕೊಬ್ಬು ಬಂದಿದಿಯಾ ಎಂದು ಕೇಳಿದ್ದಾನೆ.. ಇತ್ತ ಈ ಮಾತಿಗೆ ಕಿರಿಕ್ ಕೀರ್ತಿ ಸಹ ಕೋಪದಿಂದಲೇ ನಿಂದಿಸಿ ಮಾತನಾಡಿದ್ದಾರೆ.. ಇದು ವಿಕೋಪಕ್ಕೆ ತಿರುಗಿ ಆತ ಬಿಯರ್ ಬಾಟಲಿಯಲ್ಲಿ ಬಾರಿಸಿದ್ದಾನೆ.. ತಕ್ಷಣ ಅಲ್ಲಿದ್ದವರು ಪೊಲೀಸರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ.. ಆದರೆ ಆ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದು ಕಿರಿಕ್ ಕೀರ್ತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.. ಆದರೆ ಕಿರಿಕ್ ಕೀರ್ತಿ ಮೇಲೆ ಈ ರೀತಿ ನಡೆದದ್ದು ಇದೇ ಮೊದಲೇನೂ ಅಲ್ಲ ಈ ಹಿಂದೆಯೂ ಸಹ ಇದೇ ರೀತಿ ನಡೆದಿತ್ತು..

ಹೌದು ಕಳೆದ ಮೂರು ವರ್ಷದ ಹಿಂದೆ 2018 ರ ಮಾರ್ಚ್ ನಲ್ಲಿ ರಾತ್ರಿ ಹತ್ತು ಗಂಟೆ ಸಮಯದಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ರಸ್ತೆಯಲ್ಲಿ ಅಡ್ಡಲಾಗಿದ್ದ ಬೈಕ್ ಅನ್ನು‌ ನೋಡಿ ಕಿರಿಕ್ ಕೀರ್ತಿ ಹಾರನ್ ಮಾಡಿದ್ದಾರೆ.. ಇದರಿಂದ ಕೋಪಗೊಂದು ಇಬ್ಬರು ವ್ಯಕ್ತಿಗಳು ಕಿರಿಕಿ ಕೀರ್ತಿ‌ ಮೇಲೆ ಕೈ ಮಾಡಿದ್ದರು.. ನಂತರ ಸ್ಥಳೀಯರು ಆಗಮಿಸಿ ಆ ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿದ್ದರು.. ಈಗ ಮತ್ತೊಮ್ಮೆ ಅದೇ ರೀತಿಯ ಘಟನೆ ನಡೆದಿದ್ದು ನಿನ್ನೆ ನಡೆದ ಘಟನೆಯಲ್ಲಿ ಕೀರ್ತಿ ಅವರಿಗೆ ಬಲವಾಗಿಯೇ ಪೆಟ್ಟು ಬಿದ್ದಿದೆ ಎನ್ನಲಾಗಿದೆ.. ನಿನ್ನೆಯಷ್ಟೇ ಚಿಕಿತ್ಸೆ ಪಡೆದು ಹೊಲಿಗೆ ಹಾಕಿಸಿಕೊಂಡಿದ್ದ ಕೀರ್ತಿ ಅವರು ಇಂದು ಮತ್ತೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ..