ಇದಪ್ಪಾ ಗುಂಡಿಗೆ ಅಂದ್ರೆ.. ಹುಡುಗಿಯನ್ನು ತಂದು ವರ್ಷಾನುಗಟ್ಟಲೇ ಮನೆಯ ರೂಮಿನಲ್ಲೇ ಇರಿಸಿಕೊಂಡಿದ್ದ.. ಮನೆಯವರಿಗೇ ತಿಳಿಯಲಿಲ್ಲ.. ಆದರೆ ಕೊನೆಗೆ ಸಿಕ್ಕಿಕೊಂಡಿದ್ದು ಹೇಗೆ ಗೊತ್ತಾ..

0 views

ವಯಸ್ಸಿಗೆ ಬಂದ ಮೇಲೆ ನಮ್ ಗಂಡ್ ಹೈಕಳು ಹೆಣ್ ಮಕ್ಕಳನ್ನ ಪ್ರೀತಿ‌ ಮಾಡೋದು ಹೊಸ ವಿಚಾರವೇನೂ ಅಲ್ಲ.. ಪ್ರೀತಿ ಮಾಡ್ತಾರೆ.. ಹೊರಗೆ ಭೇಟಿ ಆಗ್ತಾರೆ.. ನಿಜವಾಗಿ ಪ್ರೀತಿ ಮಾಡಿದೋರು ಅಪ್ಪ ಅಮ್ಮನನ್ನು ಒಪ್ಪಿಸಿ ಮದುವೆಯೂ ಆಗ್ತಾರೆ.. ಇನ್ನೂ ಕೆಲವರು ಓಡಿ ಹೋಗಿ ಮದುವೆಯಾಗಿ ಸಂಸಾರವನ್ನೂ ನಡೆಸ್ತಾರೆ.. ಇನ್ನೂ ಕೆಲವರು ಪ್ರೀತಿ ಅನ್ನೋ ಹೆಸರಲ್ಲಿ ಸಮಯ ಕಳೆದು ಸುಮ್ಮನಾಗ್ತಾರೆ.. ಅದರಲ್ಲೂ ಕೆಲ ಮಂದಿ ಒಂದೆಜ್ಜೆ ಮುಂದೆ ಹೋಗಿ ಪಾರ್ಕು ರೂಮುಗಳಲ್ಲಿ ಸಮಯ ಕಳೆದು ತಮ್ಮ ಪಾಡಿಗೆ ತಮ್ಮ ದಾರಿ ಹಿಡಿದು ದೂರವಾಗ್ತಾರೆ.. ಆದರೆ ಇಲ್ಲೊಬ್ಬ ಭೂಪ ತನ್ನ ಮನೆಯ ರೂಮಿನಲ್ಲಿಯೇ ತನ್ನ ಪ್ರೇಯಸಿಯನ್ನು ಕರೆತಂದು ಬರೋಬ್ಬರಿ ಹತ್ತು ವರ್ಷಗಳಾದರೂ ಸಹ ಯಾರಿಗೂ ತಿಳಿಯದೇ ಇರುವುದು ನಿಜಕ್ಕೂ ಆಶ್ಚರ್ಯವೇ ಸರಿ.‌.

ಹೌದು ಪಕ್ಕದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕಟ್ಟುಪರಂಬು ಎಂಬ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದ್ದು ಪ್ರತಿಯೊಬ್ಬರು ದಂಗಾಗಿದ್ದಾರೆ.. ಹೌದು ಆ ಯುವಕ ಹಾಗೂ ಯುವತಿ ಇಬ್ಬರೂ ಸಹ ಅದೇ ಗ್ರಾಮದವರಾಗಿದ್ದು ಇಬ್ಬರ ಮನೆಯೂ ಕೇವಲ ನೂರು ಮೀಟರ್ ನಷ್ಟು ದೂರವಿದೆಯಷ್ಟೇ.. ಇನ್ನು ಕಳೆದ ಹತ್ತು ವರ್ಷದ ಹಿಂದೆ 2010 ರಲ್ಲಿ ಹತ್ತೊಂಭತ್ತು ವರ್ಷದ ಈ ಯುವತಿ ನಾಪತ್ತೆಯಾಗಿದ್ದಳು.. ಪೋಷಕರು ದೂರನ್ನೂ ಸಹ ನೀಡಿದ್ದರು.. ಆದರೆ ಎಷ್ಟೇ ಹುಡುಕಿದರು ಆಕೆಯ ಸುಳಿವು ಸಿಗಲಿಲ್ಲ.. ಅತ್ತ ಮನೆಯವರು ಸಹ ಕೊರಗಿ ಕೊರಗಿ ನಿಧಾನವಾಗಿ ಮರೆತೇ ಬಿಟ್ಟಿದ್ದರು.. ಆದರೆ ಆಕೆ ತನ್ನ ಪಕ್ಕದ ಮನೆಯಲ್ಲಿಯೇ ಕಳೆದ ಹತ್ತು ವರ್ಷಗಳಿಂದ ವಾಸ ಮಾಡುತ್ತಿದ್ದಳು ಎಂಬ ವಿಚಾರ ಯಾರಿಗೂ ತಿಳಿಯಲೇ ಇಲ್ಲ.. ಹೌದು ಪಕ್ಕದ ಮನೆಯ ಪ್ರಿಯಕರ ಆಕೆಯನ್ನು ಕರೆತಂದು ತನ್ನ ಕೋಣೆಯಲ್ಲಿಯೇ ಇರಿಸಿಕೊಂಡಿದ್ದ..

ಅದೂ ಸಹ ಒಂದು ಎರಡು ತಿಂಗಳಲ್ಲ ಬರೋಬ್ಬರಿ ಹತ್ತು ವರ್ಷಗಳಿಂದ.. ಹೌದು ಕಳೆದ ಹತ್ತು ವರ್ಷಗಳಿಂದಲೂ ಈ ಇಬ್ಬರೂ ಸಹ ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದರೂ ಸಹ ಅವರ ಮನೆಯವರಿಗೇ ಈ ವಿಚಾರ ತಿಳಿಯಲಿಲ್ಲ ಎಂಬುದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ.. ಇನ್ನು ಆಕೆಯನ್ನು ಕೋಣೆಯಲ್ಲಿಯೇ ಇರಿಸಿಕೊಂಡಿದ್ದ ಆತ ರಾತ್ರಿ ಸಮಯದಲ್ಲಿ ಕಿಟಕಿ ಮೂಲಕ ಆಕೆಯನ್ನು ಸ್ನಾನಕ್ಕೆ ಹಾಗೂ ಶೌಚಕ್ಕೆ ಕರೆದುಕೊಂಡು ಹೋಗುತ್ತಿದ್ದನಂತೆ.. ತನ್ನ ರೂಮಿಗೆ ಯಾರನ್ನೂ ಸಹ ಸೇರಿಸದೇ ಬೀಗ ಹಾಕಿಕೊಳ್ಳುತ್ತಿದ್ದನಂತೆ.. ಇದನ್ನು ಮನೆಯವರು ಪ್ರಶ್ನಿಸಿದರೆ ಮಾನಸಿಕವಾಗಿ ಸ್ತೀಮಿತ ಇಲ್ಲದವನ ರೀತಿ ವರ್ತನೆ ಮಾಡುತ್ತಿದ್ದನಂತೆ.. ಅದೇ ಕಾರಣಕ್ಕಾಗಿ ಮನೆಯವರೂ ಸಹ ಆತನ ಸಹವಾಸಕ್ಕೆ ಹೋಗದೆ ಸುಮ್ಮನಾದರು..

ಇನ್ನೂ ಪ್ರತಿದಿನ ಕೆಲಸ ಮುಗಿಸಿ ಬೇಗ ಬಂದು ರೂಮು ಸೇರಿಕೊಂಡರೆ ಮುಗೀತು ಇನ್ನು ಆಕೆಯ ಜೊತೆ ಸಮಯ ಕಳೆಯುತ್ತಾ ಹೊರಗೆ ಬರುತ್ತಲೇ ಇರಲಿಲ್ಲ.. ಇತ್ತ ಊಟ ತಿಂಡಿ ಎಲ್ಲವನ್ನೂ ಸಹ ರೂಮಿನಲ್ಲಿಯೇ ತಿಂತೀನಿ ಅಂತ ರೂಮಿಗೆ ತೆಗೆದುಕೊಂಡು ಅಲ್ಲಿಯೇ ಆಕೆಗೂ ಕೊಟ್ಟು ಅವನೂ ತಿನ್ನುತ್ತಿದ್ದನಂತೆ.. ಆದರೆ ಈ ಇಬ್ಬರ ವಿಚಾರ ಅವರ ಮನೆಯವರಿಗೆ ತಿಳಿದಿದ್ದೇ ಒಂದು ರೋಚಕ ಕತೆ.. ಹೌದು ಆತನ ರೂಮಿನಿಂದ ಶಬ್ಧಗಳಾದರೂ ಸಹ ಆತನ ರೂಮಿನ ಸಹವಾಸಕ್ಕೆ ಯಾರೂ ಸಹ ಹೋಗಿರಲಿಲ್ಲ‌‌‌.. ಆದರೆ ಒಂದು ದಿನ ಇದ್ದಕಿದ್ದ ಹಾಗೆ ಯುವಕ‌ ನಾಪತ್ತೆಯಾಗಿ ಹೋದ…. ಹೌದು ಯುವಕ ನಾಪತ್ತೆಯಾದ ನಂತರ ಮನೆಯವರು ಆತನಿಗಾಗಿ ಸಾಕಷ್ಟು ಹುಡುಕಾಡಿದ್ದಾರೆ.. ಕೊನೆಗೆ ಒಂದು ದಿನ ಆ ಯುವಕ ತನ್ನ ಅಣ್ಣನ ಕಣ್ಣಿಗೆ ಬಿದ್ದಿದ್ದು ವಿಚಾರ ಪೊಲೀಸರಿಗೆ ತಿಳಿದಿದೆ.. ಕೊನೆಗೆ ಆತನನ್ನು ಕರೆಸಿ ವಿಚಾರಿಸಿದಾಗ ಅಸಲಿ ಸತ್ಯ ಬಯಲಾಗಿದೆ..

ಹೌದು ಆ ಯುವಕ ಹಾಗು ಯುವತಿ ಇಬ್ಬರೂ ಹತ್ತು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು ತಮ್ಮ ರೂಮಿನಲ್ಲಿಯೇ ಅವರ ಪ್ರೀತಿ ಪ್ರೇಮವನ್ನು ಮುಂದುವರೆಸಿದ್ದರಂತೆ.. ಕಿಟಕಿಯಲ್ಲಿ ರಸ್ತೆಯಲ್ಲಿ ಆಗಾಗ ಅಪ್ಪ ಅಮ್ಮನನ್ನು ಕಂಡರೂ ಸಹ ಅವರನ್ನು ಮಾತೂ ಸಹ ಆಡುವ ಗೋಜಿಗೆ ಹೋಗದ ಆ ಯುವತಿಗೆ ಈತನ ಪ್ರೀತಿ ಎಷ್ಟು ಗಾಢವಾಗಿರಬೇಡ.. ಇನ್ನು ಹತ್ತು ವರ್ಷದ ನಂತರ ಕಳೆದ ಇಬ್ಬರೂ ರಾತ್ರಿ ಹೊರ ಹೋಗಿ ಮದುವೆ ಮಾಡಿಕೊಂಡಿದ್ದಾರಂತೆ.. ಹತ್ತು ವರ್ಷದ ಹಿಂದೆ ಕೈಯಲ್ಲಿ ದುಡ್ಡಿರದ ಕಾರಣ ಓಡಿ ಹೋಗಿ ಮದುವೆಯಾಗಲು ಸಾಧ್ಯವಾಗಲಿಲ್ಲ.. ಅದೇ ಕಾರಣಕ್ಕೆ ಕೋಣೆಯಲ್ಲಿಯೇ ಸಂಸಾರ ಮಾಡಿಕೊಂಡಿದ್ದು ಇದೀಗ ಮದುವೆಯಾಗಿದ್ದಾರಂತೆ.. ಪೊಲೀಸರ ಮುಂದೆ ತನ್ನ ಹತ್ತು ವರ್ಷದ ಪ್ರೀತಿಯನ್ನು ಬಿಚ್ಚಿಟ್ಟ ಯುವಕನ ಕತೆ ಕೇಳಿ ಪೊಲೀಸರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆನ್ನಬಹುದು..