ಗಂಡ ಹೆಂಡತಿಯ ನಡುವೆ ಇರಬೇಕಾದ ಪ್ರೀತಿ ನಂಬಿಕೆ ವಿಶ್ವಾಸ ಇಲ್ಲದೇ ಹೋದಾಗ ಸಾಕಷ್ಟು ಜಗಳಗಳು ಆಗಿರೋದನ್ನು ನಾವು ನೋಡಿದ್ದೇವೆ.. ಅದರಲ್ಲೂ ಹಣ ಕಾಸಿನ ವಿಚಾರವಾಗಿ ಸಾಕಷ್ಟು ಜಗಳಗಳು ನಡೆದು ಸುದ್ದಿಯಾಗಿದ್ದನ್ನೂ ನೋಡಿದ್ದೇವೆ.. ಇನ್ನು ಗಂಡ ದುಡಿದ ಹಣವನ್ನು ದುಂದು ವೆಚ್ಛ ಮಾಡಿ ಮನೆಯ ಜವಾಬ್ದಾರಿ ನಿಭಾಯಿಸದೇ ಹೆಂಡತಿಗೆ ತೊಂದರೆ ನೀಡುವ ಗಂಡಂದಿರನ್ನೂ ನೋಡಿದ್ದೇವೆ.. ಆದರೆ ದುಡಿದ ಸಂಬಳವನ್ನೆಲ್ಲಾ ತಂದು ಹೆಂಡತಿಯ ಕೈಗೆ ಕೊಟ್ಟು ಮರಳಿ ಕೇವಲ ನೂರು ರೂಪಾಯಿ ಕೇಳಿದ್ದಕ್ಕೆ ಇಂದು ಈತನಿಗೆ ಬಂದ ಸ್ಥಿತಿ ನಿಜಕ್ಕೂ ಮನಕಲಕುವಂತಿದೆ..

ಹೌದು ಈತನ ಹೆಸರು ಕೇಶವ ಪೂಜಾರಿ ವಯಸ್ಸು ನಲವತ್ತೇಳು.. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಬರಮೇಲು ನಿವಾಸಿ.. ಈತ ಮಂಗಳೂರಿನ ಹೊಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು.. ಇನ್ನು ಕಳೆದ ತಿಂಗಳು ಬಂದ ಸಂಪೂರ್ಣ ಸಂಬಳವನ್ನು ತಂದು ಕೇಶವ ಪೂಜಾರಿ ತನ್ನ ಪತ್ನಿ ಪ್ರೇಮಾಗೆ ನೀಡಿದರು.. ಕೊಟ್ಟು ಮರಳಿ ನೂರು ರೂಪಾಯಿ ಕೇಳಿದ್ದಾರೆ.. ಆದರೆ ಆ ನೂರು ರೂಪಾಯಿ ಕೊಡದೇ ಪ್ರೇಮ ವಾಗ್ವಾದ ನಡೆಸಿದ್ದು ಇಬ್ಬರ ನಡುವೆ ಜಗಳ ವಾಗಿದೆ..

ಕೊನೆಗೆ ಈ ವಿಚಾರವನ್ನು ಪ್ರೇಮಾ ತನ್ನ ಅಣ್ಣ ಮಣಿ ನಾಲ್ಕೂರು ಗ್ರಾಮದ ಅಶೋಕ್ ಪೂಜಾರಿಗೆ ವಿಚಾರ ತಿಳಿಸಿದ್ದು ಆತ ಮನೆಗೆ ಬಂದು ನೂರು ರೂಪಾಯಿ ಕೇಳಿದಕ್ಕೆ ಕೇಶವ ಪೂಜಾರಿ ಮೇಲೆ ಏಕಾಏಕಿ ಕೈ ಮಾಡಿದ್ದಾನೆ.. ಗಂಭೀರ ಗಾಯಗೊಂಡ ಕೇಶವ ಪೂಜಾರಿಗೆ ಎದೆ ನೋವು ಸಹ ಬಂದಿದ್ದು ಕುಸಿದು ಬಿದ್ದಿದ್ದಾರೆ.. ತಕ್ಷಣ ಕೇಶವ ಪೂಜಾರಿಯವರನ್ನು ಅವರ ತಾಯಿ ಲೀಲಾ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಔಷಧಿ ಪಡೆದು ನಂತರ ಪುಂಜಾಲಕಟ್ಟೆ ಪೋಲೀಸ್ ಠಾಣೆಗೆ ಹೆಂಡತಿ ಪ್ರೇಮ ಹಾಗೂ ಆಕೆಯ ಅಣ್ಣ ಅಶೋಕ್ ಪೂಜಾರಿಯ ಮೇಲೆ ದೂರನ್ನು ಸಹ ನೀಡಿದ್ದಾರೆ..

ಆದರೆ ಆ ದಿನ ಕೇಶವ ಪೂಜಾರಿಗೆ ಗಂಭೀರವಾದ ಪೆಟ್ಟುಗಳು ಬಿದ್ದ ಕಾರಣ ಫೆಬ್ರವರಿ ಎಂಟರಂದು ಮತ್ತೆ ಅನಾರೋಗ್ಯ ಕಾಣಿಸಿಕೊಂಡಿದೆ.. ಮತ್ತೆ ಅವರ ತಾಯಿ ಹಾಗೂ ಕುಟುಂಬಸ್ಥರು ಕೇಶವ ಪೂಜಾರಿಯವರನ್ನು ಬಂಟ್ವಾಳದ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದು ಬಿಟ್ಟಿದ್ದಾರೆ.. ನಂತರ ಅಕ್ಕ ಪಕ್ಕದ ಮನೆಯವರು ಪೋಲೀಸರಿಗೆ ಮಾಹಿತಿ ನೀಡಲಾಗಿ ಪುಂಜಾಲಕಟ್ಟೆ ಪೋಲೀಸರು ದೇರಳಕಟ್ಟೆಯ ಕೆ ಎಸ್ ಹೆಗ್ಗಡೆ ಆಸ್ಪತ್ರೆತಲ್ಲಿ ಕೇಶವ ಪೂಜಾರಿಯ ಪರೀಕ್ಷೆ ನಡೆಸಿದಾಗ ಅವರಿಗೆ ಬಲವದ ಪೆಟ್ಟುಗಳು ಬಿದ್ದು ಜೀವ ಕಳೆದುಕೊಂಡಿರುವುದು ಖಚಿತವಾಗಿದೆ..

ತಕ್ಷಣ ಪ್ರಕರಣ ದಾಖಲಿಸಿಕೊಂಡ ಪೋಲೀಸರು ಫೆಬ್ರವರಿ ಇಪ್ಪತ್ತೊಂದರಂದು ಮಂಗಳೂರಿನ ಹೊಟೆಲ್ ಒಂದರಲ್ಲಿ ಅಶೋಕ್ ಪೂಜಾರಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.. ಒಟ್ಟಿನಲ್ಲಿ ತಾನೇ ದುಡಿದ ನೂರು ರೂಪಾಯಿಯ ಕಾರಣಕ್ಕೆ ಒಂದು ಜೀವವೇ ಹೋಗುವಂತಾಗಿ ಹೋಯ್ತು.. ಜೀವನದಲ್ಲಿ ದುಡುಕುವುದು ತಪ್ಪು ನಿರ್ಧರಾಗಳನ್ನು ತೆಗೆದುಕೊಳ್ಳುವುದು ಸುಲಭ.. ಆದರೆ ಅದರಿಂದಾಗುವ ಪರಿಣಾಮವನ್ನು ಎದುರಿಸುವುದು ಕಷ್ಟ.. ಕೋಪದ ಕೈಗೆ ಬುದ್ಧಿ ಕೊಡುವ ಮುನ್ನ ತಾಳ್ಮೆ ತೆಗೆದುಕೊಂಡರೆ ಇಂತಹ ಘಟನೆಗಳೇ ನಡೆಯದು.. ಪಾಪ ವಯಸ್ಸಾದ ಕೇಶವ ಪೂಜರಿಯ ತಾಯಿ ಈ ವಯಸ್ಸಿನಲ್ಲಿ ಮಗನ ಕಳೆದುಕೊಂಡ ನೋವಿನಲ್ಲಿ ದಿನ ದೂಡಬೇಕಿರುವುದು ಸಂಕಟವೆನಿಸುತ್ತದೆ..