ಮದುವೆಗೆ ಹೋದ ಹದಿಮೂರು ಮಹಿಳೆಯರು ಮದುವೆ ಮನೆಯಲ್ಲಿದ್ದ ಬಾವಿಗೆ ಬಿದ್ದು ಜೀವ ಕಳೆದುಕೊಂಡರು.. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ.. ಬೆಚ್ಚಿಬಿದ್ದ ಸಂಬಂಧಿಕರು..

0 views

ಸಾಮಾನ್ಯವಾಗಿ ಮದುವೆ ಮನೆಗೆ ಹೋಗೋದು ವಧು ವರರನ್ನು ಹಾರೈಸಲು.. ಸಂಬಂಧಿಕರೊಂದಿಗೆ ಕೆಲ ಸಮಯ ಸಂತೋಷದಿಂದ ಕಳೆದು ಬರಲು.. ಸಂಭ್ರಮದ ಕ್ಷಣಗಳನ್ನು ಕಳೆಯಲು ಹೀಗೆ ಒಳ್ಳೆಯ ಉದ್ದೇಶದಿಂದ ಒಳ್ಳೆಯ ಉದ್ದೇಶಕ್ಕಾಗಿ ಮದುವೆ ಮನೆಗೆ ಹೋಗುತ್ತೇವೆ.. ಆದರೆ ಇಲ್ಲೊಂದು ಮದುವೆ ನಡೆಯುತ್ತಿರುವಾಗಲೇ ಮದುವೆ ಸಮಾರಂಭಕ್ಕೆ ಬಂದಿದ್ದ ಹದಿಮೂರು ಮಂದಿ ಮಹಿಳೆಯರು ಮದುವೆ ಮನೆಯ ಇದೇ ಬಾವಿಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆ.. ಕಾರಣ ಕೇಳಿದ್ರೆ ನಿಜಕ್ಕೂ ಬೆಚ್ಚಿಬೀಳುವಂತಿದೆ..

ಹೌದು ನಿನ್ನೆ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು ಆ ಹದಿಮೂರು ಕುಟುಂಬದ ಆಕ್ರಂದನ ನಿಜಕ್ಕೂ ಮುಗಿಲು ಮುಟ್ಟುವಂತಿತ್ತು.. ಮದುವೆ ಸಮಾರಂಭ ನಡೆಯುತ್ತಿದ್ದ ಮನೆ ಸೂತಕದ ಮನೆಯಾಗಿ ಹೋಯ್ತು.. ಹೌದು ಉತ್ತರ ಪ್ರದೇಶದ ಕುಶಿನಗರದ ನೆಬುವಾ ನೌರಂಗಿಯಾದ ಮನೆಯೊಂದರಲ್ಲಿ ಮದುವೆ ಸಮಾರಂಭ ನೆರವೇರುತಿತ್ತು.. ಸರಳವಾಗಿ ನಡೆಯುತ್ತಿದ್ದ ಮದುವೆಯಾದ ಕಾರಣ ಮದುವೆಯನ್ನು ಮನೆಯಲ್ಲಿಯೇ ನೆರವೇರಿಸಲು ನಿರ್ಧರಿಸಲಾಗಿತ್ತು..

ಅಂದುಕೊಂಡಂತೆ ಮನೆಯಲ್ಲಿ‌ ಮದುವೆಯ ಎಲ್ಲಾ ತಯಾರಿ ನಡೆದಿತ್ತು.. ಅತ್ತ ಸಂಬಂಧಿಕರು ಮನೆಗೆ ಆಗಮಿಸಿ ಮದುವೆಯ ಶಾಸ್ತ್ರ ಸಂಪ್ರದಾಯಗಳನ್ನು ನೆರವೇರಿಸಲು ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದರು.. ಇತ್ತ ಊಟದ ವ್ಯವಸ್ಥೆ ಮತ್ತೊಂದು ಕಡೆ ನಡೆಯುತಿತ್ತು.. ಕೆಲವೇ ಸಮಯದಲ್ಲಿ ಮದುವೆಯ ಶಾಸ್ತ್ರಗಳು ಶುರುವಾದವು.. ಒಂದು ಕಡೆ ಶಾಸ್ತ್ರಗಳು ನಡೆಯುತ್ತಿರುವಾಗಲೇ ಮದುವೆ ನಡೆಯುತ್ತಿದ್ದ ಮನೆಯಲ್ಲಿದ್ದ ಇದೇ ಬಾವಿಗೆ ಒಬ್ಬರಲ್ಲ ಇಬ್ಬರಲ್ಲ ಹದಿಮೂರು ಮಂದಿ ಸಂಬಂಧಿಕರು ಅದರಲ್ಲಿಯೂ ಎಲ್ಲರೂ ಸಹ ಮಹಿಳೆಯರೇ ಬಿದ್ದು ಜೀವ ಕಳೆದುಕೊಳ್ಳುವಂತಾಗಿದೆ..

ಸಂತೋಷದಿಂದ ನಡೆಯುತ್ತಿದ್ದ ಮದುವೆ ಸಮಾರಂಭ ಇದ್ದಕಿದ್ದ ಹಾಗೆ ಒಂದೇ ಕ್ಷಣದಲ್ಲಿ ಸೂತಕದ ಮನೆಯಾಗಿ ಹೋಯ್ತು.. ಹದಿಮೂರು ಮಂದಿ ಜೀವ ಕಳೆದುಕೊಂಡರೆ ಮತ್ತೆ ಕೆಲವರಿಗೆ ಗಂಭೀರವಾಗಿ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ‌.. ಎಲ್ಲರೂ ನಗುನಗುತ್ತಾ ಇದ್ದ ಮನೆಯಲ್ಲಿ ಘಟನೆ ನಡೆದ ನಂತರ ಎಲ್ಲರೂ ಗೋಳಾಡುತ್ತಿದ್ದ ರೀತಿ ನಿಜಕ್ಕೂ ಎಂತವರಿಗೂ ಸಂಕಟ ತರುವಂತಿತ್ತು.. ಆದರೆ ಈ ಘಟನೆ ನಡೆಯಲು ನಿಜವಾದ ಕಾರಣ ತಿಳಿದರೆ ನಿಜಕ್ಕೂ ಮನಕಲಕುವಂತಿದೆ..

ಹೌದು ಆ ದಿನ ಅಂದರೆ ನಿನ್ನೆ ರಾತ್ರಿ ಒಂದು ಕಡೆ ಮದುವೆಯ ಶಾಸ್ತ್ರಗಳು ನೆರವೇರುವ ಸಮಯದಲ್ಲಿ ಮನೆಗೆ ಬರುವ ಸಂಬಂಧಿಕರ ಸಂಖ್ಯೆ ಹೆಚ್ಚಾಯಿತು.. ಮನೆಯ ಹೊರಗೆ ಇದ್ದ ಬಾವಿಯ ಮೇಲೆ ಸ್ಲ್ಯಾಬ್ ಹಾಕಿ ಅಲ್ಲಿಯೇ ಕುಳಿತು ಕೊಳ್ಳುವ ವ್ಯವಸ್ಥೆ ಮಾಡಲಾಗಿದ್ದು.. ಮಹಿಳೆಯರು ಬಂದು ಬಾವಿಯ ಮೇಲೆ ಕೂರಲು ಆರಂಭಿಸಿದರು.. ಹದಿನೈದಕ್ಕೂ ಹೆಚ್ಚು ಮಂದಿ ಒಂದೇ ಬಾವಿಯ ಸ್ಲ್ಯಾಬ್ ಮೇಲೆ ಕುಳಿತಾಗ ಭಾರ ಹೆಚ್ಚಾಗಿ ಸ್ಲ್ಯಾಬ್ ಇದ್ದಕಿದ್ದ ಹಾಗೆ ಕುಸಿದು ಬಿದ್ದಿತು.. ಸ್ಲ್ಯಾಬ್ ಕುಸಿದ ಕ್ಷಣವೇ ಅದೇ ಜಾಗದಲ್ಲಿ ಬಾವಿಗೆ ಬಿದ್ದ ಹದಿಮೂರು ಮಂದಿ ಜೀವ ಕಳೆದುಕೊಂಡರು.. ಇನ್ನೂ ಅನೇಕರಿಗೆ ಗಂಭೀರ ಗಾಯಗಳಾಗಿದ್ದು ಅವರುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

ಇತ್ತ ಈ ನೋವಿನ ವಿಚಾರ ತಿಳಿಸಿದ ಕುಷಿನಗರದ ಜಿಲ್ಲಾಧಿಕಾರಿ ಎಸ್ ರಾಜಲಿಂಗಮ್ ಜೀವ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದು ಹದಿಮೂರು ಮಂದಿಯ ಕುಟುಂಬಕ್ಕೂ ತಲಾ ನಾಲ್ಕು ಲಕ್ಷರೂಪಾಯಿ‌ ಪರಿಹಾರ ಘೋಷಣೆ ಮಾಡಿದ್ದಾರೆ.. ಅಷ್ಟೇ ಅಲ್ಲದೇ ವಿಚಾರ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಈ ಬಗ್ಗೆ ಟ್ವೀಟ್ ಮಾಡಿದ್ದು ಸಂತಾಪ ಸೂಚಿಸಿದ್ದಾರೆ.. ಜೊತೆಗೆ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದ್ದು ಅಗಲಿದ ಮಹಿಳೆಯರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.. ಮದುವೆಗೆಂದು ಸಂತೋಷದಿಂದ ಹೋದವರು ಈ ರೀತಿ ಮಸಣ ಸೇರಿದ ಘಟನೆ ನಿಜಕ್ಕೂ ಜೀವನ ಯಾವಾಗ ಯಾವ ರೀತಿ ಅಂತ್ಯವಾಗುವುದೋ ಹೇಳಲು ಅಸಾಧ್ಯವಾಗಿದೆಯಷ್ಟೇ..