ಬಿಗ್ ಬಾಸ್ ಮನೆ ಇಂದ ಹೊರ ಹೋಗು.. ವೈಲ್ಡ್ ಕಾರ್ಡ್ ಮೂಲಕ ಬಂದ ಚಂದ್ರಚೂಡನಿಗೆ ತಾಕೀತು.. ಕಾರಣವೇನು ಗೊತ್ತಾ?

0 views

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಐದನೇ ವಾರದಲ್ಲಿ ಈ ಸೀಸನ್ ನ ಮೊದಲ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು ಪತ್ರಕರ್ತ ಬರಹಗಾರ ಚಕ್ರವರ್ತಿ ಚಂದ್ರಚೂಡ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ್ದರು.. ಅತ್ತ ಅದಾಗಲೇ ಕಳೆದ ನಾಲ್ಕು ವಾರಗಳಿಂದ ಬಿಗ್ ಬಾಸ್ ಮನೆಯಲ್ಲಿ ಸೆಟಲ್ ಆಗಿದ್ದ ತಮ್ಮದೇ ಮನೆ ಎಂದು ಭಾವಿಸಿದ್ದ ಉಳಿದ ಸ್ಪರ್ಧಿಗಳಿಗೆ ಯಾರೋ ಅಪರಿಚಿತರು ಬಂದಂತಾಗಿತ್ತು.. ದೊಡ್ಡ ಮಟ್ಟಕ್ಕೆ ಇರಿಸು ಮುರಿಸು ಉಂಟಾಗಿತ್ತು.. ಇದಕ್ಕೆ ಕಾರಣ ಚಕ್ರವರ್ತಿ ಚಂದ್ರಚೂಡ ಅವರು ನಡೆದುಕೊಳ್ಳುತ್ತಿದ್ದ ರೀತಿ.. ಆದರೆ ಇದೀಗ ವಾರದ ಕತೆಯಲ್ಲಿ ನೀನು ಯಾವ ರೀತಿ ಮನೆಯೊಳಗೆ ಬಂದೆಯೋ ಅದೇ ರೀತಿ ಬಿಗ್ ಬಾಸ್ ಮನೆಯಿಂದ ಹೊರ ಹೋಗು ಎಂದು ತಾಕೀತು ಮಾಡಲಾಗಿದೆ..

ಹೌದು ಚಕ್ರವರ್ತಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ಎಲ್ಲಾ ಸ್ಪರ್ಧಿಗಳಿಗೆ ಅಂಕಗಳನ್ನು ನೀಡಬೇಕಿತ್ತು.. ಅದಕ್ಕೆ ಕಾರಣವನ್ನೂ ಸಹ ನೀಡಬೇಕಿತ್ತು.. ಪುಣ್ಯಾತ್ಮ ಪ್ರತಿಯೊಬ್ಬರಿಗೂ ಅರ್ಧ ಒಂದು ಎರಡು ಸೊನ್ನೆ ಇಷ್ಟೇ ನೀಡಿದ್ದು.. ಬಂದ ದಿನದಿಂದಲೇ ಮನೆಯ ಕೆಲವೊಂದಿಷ್ಟು ಮಂದಿಯನ್ನಿ ಎದುರಾಕಿಕೊಂಡರು..ಅದರಲ್ಲೂ ಮಂಜು ಸ್ವಲ್ಪ ಹೆಚ್ಚಾಗಿಯೇ ಚಂದ್ರಚೂಡನ ಕಂಡರೆ ಕಿರಿಕಿರಿ ಆಡಿದ್ದೂ ಉಂಟು.. ಇನ್ನು ಆಗ ಚಕ್ರವರ್ತಿ ಚಂದ್ರಚೂಡ ಅವರು ಅಂಕ ನೀಡಿದಂತೆ.. ವಾರದ ಕತೆಯಲ್ಲಿ ಮನೆಯ ಮಿಕ್ಕೆಲ್ಲಾ ಸ್ಪರ್ಧಿಗಳಿಗೆ ಚಂದ್ರಚೂಡನಿಗೆ ಅಂಕ ನೀಡುವಂತೆ ಸುದೀಪ್ ತಿಳಿಸಿದರು..

ಸಿಕ್ಕಿದ್ದೇ ಚಾನ್ಸು ಅಂತ ಮನೆ ಮಂದಿ ಕೂಡ ಚಂದ್ರಚೂಡ ಅವರಿಗೆ ಸೊನ್ನೆ ಅರ್ಧ ಒಂದು ಇಷ್ಟೇ ಅಂಕಗಳನ್ನು ನೀಡಿದರು.. ಅಷ್ಟೇ ಅಲ್ಲದೇ ಜೊತೆಗೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಿ ಎಂದು ನೇರವಾಗಿಯೇ ತಾಕೀತು ಮಾಡಿದ್ದಾರೆ.. ಹೌದು ಚಂದ್ರಚೂಡ ಒಂದು ರೀತಿ ಸುಪೀರಿಯರ್ ರೀತಿಯಲ್ಲಿ ನಡೆದುಕೊಳ್ತಾರೆ.. ತಾವೇ ಸರಿ ಎನ್ನುತ್ತಾರೆ ಎಂದು ದಿವ್ಯಾ ಉರುಡುಗ ಚಂದ್ರಚೂಡನ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಹೇಳಿದ್ದಾರೆ.. ಇನ್ನು ಅರವಿಂದ್ ಕೂಡ ಮಾತನಾಡಿ “ಇನ್ನೊಬ್ಬರ ಬಗ್ಗೆ ಮಾತನಾಡುವುದು ಕಮೆಂಟ್ ಮಾಡುವುದು ಬಹಳ ಸುಲಭ.. ಆದರೆ ತಾನೇ ಸ್ವತಃ ಸರಿಯಾಗಿ ನಡೆದುಕೊಳ್ಳುವುದು ಬಹಳ ಕಷ್ಟ.. ಚಂದ್ರಚೂಡ ಕೂಡ ಹಾಗೆ.. ತಾನು ಸರಿ ಇಲ್ಲವಾದರೂ ಬೇರೆಯವರ ಬಗ್ಗೆ ಕಮೆಂಟ್ ಮಾಡ್ತಾರೆ” ಎಂದಿದ್ದಾರೆ..

ಇನ್ನು ರಾಜೀವ್ ಮಾತನಾಡಿ “ಭಾಷೆ ಬಗ್ಗೆ ಹಿಡಿತ ಇದೆ ಅನ್ನೋ ಕಾರಣಕ್ಕೆ ಅದನ್ನು ಇಟ್ಟುಕೊಂಡು ಬೇರೆ ಪ್ರತಿಭೆಗಳನ್ನು ರೂಲ್ ಮಾಡೋಕೆ ಆಗಲ್ಲ.‌. ಆ ರೀತಿ ಮಾಡಲು ಬಾರದು” ಎಂದಿದ್ದಾರೆ.. ಇನ್ನು ಚಿಕ್ಕ ಹುಡುಗ ವಿಶ್ವನಾಥ್ ಕೂಡ ಚಂದ್ರಚೂಡರ ಬಗ್ಗೆ ಮಾತನಾಡಿ ಬಹಳ ಡಾಮಿನೇಟ್ ಮಾಡ್ತಾರೆ.. ಲೀಡರ್ ರೀತಿ ನಡೆದುಕೊಳ್ತಾರೆ ಎಂದಿದ್ದಾರೆ‌‌.. ಮಂಜು ಪಾವಗಡ ಅಂತೂ ನೇರವಾಗಿ ಹೇಗೆ ಬಿಗ್ ಬಾಸ್ ಮನೆಗೆ ಬಂದಿರೋ ಹಾಗೆ ತಿರುಗಿ ಹೋಗಿಬಿಡಿ ಎಂದಿದ್ದಾರೆ.. ರಘು ಮಾತನಾಡಿ ವೈಲ್ಡ್ ಕಾರ್ಡ್ ಎಂಟ್ರಿ ಬೇಡವಾಗಿತ್ತು ಎಂದಿದ್ದಾರೆ.. ಇನ್ನು ನಿನ್ನೆ ಕೂಡ ಮಂಜು ಪಾವಗಡ ಮನೆಯ ಕ್ಯಾಪ್ಟನ್ ಆದ ಸಮಯದಲ್ಲಿ ರಾತ್ರಿ ಎಲ್ಲರ ಜೊತೆ ಜೋರಾಗಿ ಮಾತನಾಡುವ ಸಮಯದಲ್ಲಿ ಚಂದ್ರಚೂಡ ಹಾಗೂ ಅರವಿಂದ್ ಬೆಡ್ ರೂಮಿನಿಂದ ಎದ್ದು ಹೊರ ನಡೆದು ಲಿವಿಂಗ್ ಏರಿಯಾದಲ್ಲಿ ಮಲಗಿದ್ದರು..

ಇದನ್ನು ನೋಡಿ ವೈಷ್ಣವಿ ಹಾಗೂ ದಿವ್ಯಾ ಉರುಡುಗ ಅರವಿಂದ್ ಹಾಗೂ ಚಂದ್ರಚೂಡರನ್ನು ಸಮಾಧಾನ ಪಡಿಸಿ ಬೆಡ್ ರೂಮಿನೊಳಗೆ ಮಲಗಲು ಮನ ವೊಲಿಸಿದ್ದರು.. ಆದರೆ ಅಷ್ಟಕ್ಕೆ ಸಮಾಧಾನಗೊಳ್ಳದ ಚಂದ್ರಚೂಡ ಅವರು ಇದೆಲ್ಲಾ ಆಗಿದ್ದು ಮಂಜನಿಂದ.. ಅವನಿಗೆ ಸ್ವಲ್ಪವೂ ಪಾಪ ಪ್ರಜ್ಞೆ ಇಲ್ಲ.. ಅವನಿಗೆ ಸರಿಯಾಗಿ ಪಾಠ ಕಲಿಸ್ತೀನಿ.. ಅವನು ಕ್ಷಮೆ ಕೇಳುವಂತೆ ಮಾಡ್ತೀನಿ ಎಂದಿದ್ದರು.. ಸದ್ಯ ಹಳೆ ಸದಸ್ಯರು ಹಾಗೂ ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಚಂದ್ರಚೂಡನ ನಡುವೆ ವಾರದ ಕತೆಯಲ್ಲಿ ದೊಡ್ಡ ಮಟ್ಟದಲ್ಲಿಯೇ ಚರ್ಚೆ ನಡೆದಿದ್ದು ಸುದೀಪ್ ಅವರ ಮಾತು ಏನಿರಲಿದೆ ಎಂಬುದನ್ನು ಕಾದು ನೋಡಬೇಕು..