ಅತಿ ದೊಡ್ಡ ಗುಡ್ ನ್ಯೂಸ್ ಕೊಟ್ಟ ಕಿಚ್ಚ ಸುದೀಪ್..

0 views

ಅಭಿಮಾನ ಅಂತ ಬಂದಾಗ ಬೇರೆ ಎಲ್ಲಾ ಸೆಲಿಬ್ರೆಟಿ ಗಳು ಒಂದು ತೂಕವಾದರೆ.. ಸಿನಿಮಾ ಕಲಾವಿದರಿಗೆ ಇರುವ ಅಭಿಮಾನಿಗಳೇ ಒಂದು ತೂಕವಾಗುತ್ತಾರೆ.. ಅದರಲ್ಲೂ ನಮ್ಮ ಸ್ಯಾಂಡಲ್ವುಡ್ ಸ್ಟಾರ್ ಗಳಿಗೆ ಅಭಿಮಾನಿಗಳು ನೀಡೋ ಪ್ರೀತಿ, ತೋರುವ ಅಭಿಮಾನ ಹೇಳಲು ಅಸಾಧ್ಯ.. ಅದೆಷ್ಟೇ ಕಷ್ಟವಾದರೂ ನೆಚ್ಚಿನ ನಟನ ಸಿನಿಮಾ ನೋಡ್ತಾರೆ.. ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಸಾವಿರರು ಕಿ ಮೀ ದೂರದಿಂಡ ಆಗಮಿಸಿ ತಮ್ಮ ಕುಟುಂಬದ ಸದಸ್ಯನದ್ದೇ ಹುಟ್ಟು ಹಬ್ಬ ಎನ್ನುವಂತೆ ಸಂಭ್ರಮಿಸುತ್ತಾರೆ.. ಇದು ಅಭಿಮಾನಿಗಳ ಕತೆಯಾದರೆ ಇತ್ತ ಅಷ್ಟೆಲ್ಲಾ ಪ್ರೀತಿ ತೋರುವ ಅಭಿಮಾನಿಗಳಿಗೆ ಸ್ಟಾರ್ ಗಳು ಸಹ ಅಷ್ಟೇ ಕೃತಜ್ಞರಾಗಿರುತ್ತಾರೆ.. ಅಭಿಮಾನಿಗಳಿಗಾಗಿ ಹೊಸದೇನೋ ಮಾಡಬೇಕೆಂಬ ತುಡಿತ.. ಅಭಿಮಾನಿಗಳಿಗೆ ಇಷ್ಟವಾಗುವ ರೀತಿ ಹೊಸ ಹೊಸ ಸಿನಿಮಾ ಮಾಡಬೇಕೆಂಬ ಪ್ರಯತ್ನದಲ್ಲಿ ಸ್ಟಾರ್ ಗಳಿರುತ್ತಾರೆ..

ಇದೀಗ ಅದೇ ರೀತಿಯಾಗಿ ಅಭಿಮಾನಿಗಳಿಗಾಗಿ ಅತಿ ದೊಡ್ಡ ಗುಡ್ ನ್ಯೂಸ್ ಒಂದನ್ನು ಕಿಚ್ಚ ಸುದೀಪ್ ಅವರು ನೀಡಿದ್ದಾರೆ.. ಹೌದು ನಿನ್ನೆಯಷ್ಟೇ ಸ್ಯಾಂಡಲ್ವುಡ್ ಬಾದ್ ಷಾ ಕಿಚ್ಚ ಸುದೀಪ್ ಅವರು ಅಭಿಮಾನಿಗಳೊಟ್ಟಿಗೆ ತಮ್ಮ ಐವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಈ ಸಮಯದಲ್ಲಿ ಅಭಿಮಾನಿಗಳಿಗೆ ಒಂದರ ಹಿಂದೆ ಒಂದರಂತೆ ಸಿಹಿ ಸುದ್ದಿಗಳನ್ನು ನೀಡಿದ್ದಾರೆ..

ಹೌದು ಸುದೀಪ್ ಅವರೀಗ ತಮ್ಮ ಮುಂದಿನ ಅತಿ ದೊಡ್ಡ ಗ್ಲೋಬಲ್ ಸಿನಿಮಾವೊಂದನ್ನು ಅನೌನ್ಸ್ ಮಾಡಿದ್ದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.. ಈ ಕುತೂಹಲಕ್ಕೆ ಮತ್ತೊಂದು ಕಾರಣ ಭಾರತದ ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ತಂದೆ ಬರಹಗಾರರಾದ ವಿಜಯೇಂದ್ರ ಪ್ರಸಾದ್ ಅವರು ಬರೆದಿರುವ ಕತೆಯಲ್ಲೀಗ ಕಿಚ್ಚ ಸುದೀಪ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದು ಆರ್ ಚಂದ್ರು ಹಾಗೂ ಸುದೀಪ್ ಅವರ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಸೆಟ್ಟೇರುತ್ತಿದೆ.. ಹುಟ್ಟುಹಬ್ಬಕ್ಕೆ ಬಹಳ ದೊಡ್ಡದಾಗಿಯೇ ಅಭಿಮಾನಿಗಳಿಗೆ ಉಡುಗೊರೆ ಕೊಟ್ಟಿದ್ದು ಸಿನಿಮಾ ಗ್ಲೋಬಲ್ ಮೂವಿ ಆಗಿರುವ ಕಾರಣ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮತ್ತೊಂದು ಮೈಲಿಗಲ್ಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ..

ಕೆಲವೇ ದಿನಗಳಲ್ಲಿ ಸಿನಿಮಾದ ಹೆಸರನ್ನು ಅನೌನ್ಸ್ ಮಾಡಲಿದ್ದು ಸಧ್ಯ ಸಿನಿಮಾ ತಂಡ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿ ಪೋಸ್ಟರ್ ಬಿಡುಗಡೆ ಮಾಡಿ ಸಿನಿಮಾ ಅನೌನ್ಸ್ ಮಾಡಿದ್ದಾರೆ..

ಕಳೆದ ಸಾಕಷ್ಟು ತಿಂಗಳುಗಳ ಕಾಲ ಯಾವುದೇ ಸಿನಿಮಾ ಅನೌನ್ಸ್ ಮಾಡದೇ ತಯಾರಿಯಲ್ಲಿ ತೊಡಗಿದ್ದ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಷ್ಟವಾಗುವಂತೆ ಬಾಡಿ ಬಿಲ್ಡ್ ಕೂಡ ಮಾಡಿಕೊಂಡಿದ್ದು ತೆರೆಯ ಮೇಲೆ ಹೊಸ ರೂಪದಲ್ಲಿ ಸುದೀಪ್ ಅವರನ್ನು ನೋಡಬಹುದೆಂದು ಅಂದಾಜಿಸಲಾಗಿದ್ದು ಅಭಿನಯ ಚಕ್ರವರ್ತಿಯ ಈ ಹುಟ್ಟುಹಬ್ಬದ ಸರ್ಪ್ರೈಸ್ ಗೆ ಅಭಿಮಾನಿಗಳು ದಿಲ್ ಖುಶ್ ಆಗಿದ್ದಾರೆ.. ವಿಜಯೇಂದ್ರ ಪ್ರಸದ್, ಕಿಚ್ಚ ಸುದೀಪ್ ಹಾಗೂ ಆರ್ ಚಂದ್ರು ಕಾಂಬಿನೇಷನ್ ನ ಹೊಸ ಸಿನಿಮಾಗೆ ಶುಭಾಶಯ ತಿಳಿಸಿರುವ ಅಭಿಮಾನಿಗಳು ಆದಷ್ಟು ಬೇಗ ಸಿನಿಮಾ ತೆರೆ ಮೇಲೆ ಬರಲಿ ಎಂದು ಹಾರೈಸಿದ್ದಾರೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.