ಸ್ನೇಹಿತನ ಅತ್ತೆ ಮಗಳ ಮೇಲೆ ಪ್ರೀತಿ. ಕೊನೆಗೆ ಈತ ಏನಾದ ನೋಡಿ. ಈತ ನಿಜಕ್ಕೂ ಯಾರು ಗೊತ್ತಾ?

0 views

ಅತ್ತೆ ಮಕ್ಕಳ ಮೇಲೆ ಮಾವನ ಮಕ್ಕಳ ಮೇಲೆ ಒಂದು ರೀತಿ ಆಕರ್ಷಣೆ ಸಹಜ. ಹಳ್ಳಿಗಳ ಕಡೆ ಹಿಂದಿನ ದಿನಗಳಲ್ಲಿ ಅವನೇ ನಿನ್ನ ಗಂಡ.. ಇವಳೇ ನಿನ್ನ ಹಂಡತಿ ಎಂದು ಹೆಸರು ಸೇರಿಸಿ ಕರೆಯುತ್ತಿದ್ದ ಕಾಲವೂ ಇತ್ತು. ಆದರೆ ಈಗ ಕಾಲ ಬದಲಾಗಿದೆ ದೊಡ್ಡಪ್ಪನ ಮಕ್ಕಳಾಗಲಿ ಅತ್ತೆಯ ಮಕ್ಕಳಾಗಲಿ ಚಿಕ್ಕಪ್ಪನ ಮಕ್ಕಳಾಗಲಿ ಅಥವಾ ಮಾವನ ಮಕ್ಕಳಾಗಲಿ ಎಲ್ಲರೂ ಕಸಿನ್ಸ್ ಅಷ್ಟೇ. ಅದೊಂದು ಪದ ಬಿಟ್ಟರೆ ಬೇರೆ ಸಂಬಂಧಗಳು ಸಹ ಈಗಿನ ಕಾಲದ ಚಿಕ್ಕ ಮಕ್ಕಳಿಗೆ ತಿಳಿಯದು ಬಿಡಿ. ಆದರೂ ಈ ಕಾಲದಲ್ಲಿಯೂ ಅತ್ತೆ ಮಕ್ಕಳ ಮೇಲೆ ಪ್ರೀತಿ ಕಾಳಜಿ ಸಹಜವೇ. ಅತ್ತೆ ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸೋದು ಎಲ್ಲವೂ ಸಹಜ. ಆದರೆ ಬೇರೊಬ್ಬರ ಅತ್ತೆ ಮಗಳ ಮೇಲೆ ಕಣ್ಣು ಹಾಕಿದರೆ ಏನಾಗುವುದು ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಹೌದು ಮತ್ತೊಬ್ಬರ ಅತ್ತೆ ಮಗಳ ಮೇಲೆ ಪ್ರೀತಿ ಮೂಡಿದ ಕಾರಣ ಇಂದು ಈ ಹುಡುಗ ಯಾವ ಸ್ಥಿತಿ ತಲುಪಿದ್ದಾನೆ ಎಂದು ತಿಳಿದರೆ ಇನ್ನೊಮ್ಮೆ ಸ್ನೇಹಿತರ ಅತ್ತೆ ಮಗಳಿರಲಿ ಸ್ವಂತ ಅತ್ತೆ ಮಕ್ಕಳ ಮೇಲೂ ಮೇಲೂ ಕಣ್ಣು ಇಡೋ ಮುನ್ನ ನೂರು ಬಾರಿ ಯೋಚಿಸೋದು ಖಂಡಿತ.

ಹೌದು ಅಂತಹುದೇ ಒಂದು ಘಟನೆ ನಡೆದಿದ್ದು ಈಗ ಆ ಹುಡುಗನ ಸ್ಥಿತಿ ನೋಡಿ ಆತನ ಹೆತ್ತವರು ನೊಂದುಕೊಂಡಿದ್ದಾರೆ.. ಹೌದು ಈ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಹೌದು ಈತನ ಹೆಸರು ರಾಜು. ವಯಸ್ಸಿನ್ನು ಕೇವಲ ಇಪ್ಪತ್ತೈದು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಉತ್ತೇನಹಳ್ಳಿಯ ನಿವಾಸಿ. ಇನ್ನೂ ಕಿರಣ್ ಎಂಬಾತನ ಅತ್ತೆಯ ಮನೆ ಪಂಚವಳ್ಳಿ ಸರ್ಕಲ್ ಬಳಿ‌ ಇತ್ತು. ಹೌದು ಪಂಚವಳ್ಳಿ ಸರ್ಕಲ್ ಬಳಿಯ ಪೆಟ್ರೊಲ್ ಬಂಕ್ ಬಳಿ ಅತ್ತೆಯ ಮನೆ ಇದ್ದು ಕಿರಣ್ ತನ್ನ ಅತ್ತೆಯ ಮನೆಯ ಮುಂದೆಯೇ ಒಂದು ಅಂಗಡಿಯನ್ನು ಬಾಡಿಗೆಗೆ ಪಡೆದಿದ್ದನು. ಆ ಅಂಗಡಿಯಲ್ಲಿ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದನು.

ಮೆಣಸಿನಕಾಯಿ ತುಂಬುವ ಸಲುವಾಗಿ ಪಿರಿಯಾಪಟ್ಟಣದ ರಾಜು ಆಗಾಗ ಕಿರಣ್ ನ ಅಂಗಡಿಗೆ ಬರುತ್ತಿದ್ದನು. ಆದರೆ ಆ ಸಮಯದಲ್ಲಿ ಕಿರಣ್ ನ ಅತ್ತೆ ಮಗಳ ಮೇಲೆ ರಾಜು ಕಣ್ಣು ಹಾಕಿದ್ದ ಎನ್ನಲಾಗಿದೆ. ಆಕೆಗಾಗಿ ರಾಜು ಪದೇ ಪದೇ ಕಿರಣ್ ಅಂಗಡಿಗೆ ಮೆಣಸಿನಕಾಯಿ ನೆಪ ಮಾಡಿಕೊಂಡು ಬರುತ್ತಿದ್ದ ಎನ್ನಲಾಗಿದೆ. ಇನ್ನು ಈ ವಿಚಾರ ಕಿರಣ್ ಗೆ ತಿಳಿದು ರಾಜುವಿಗೆ ಒಂದೆರೆಡು ಬಾರಿ ತಿಳಿ ಹೇಳಲಾಗಿತ್ತು. ಆದರೂ ಸಹ ರಾಜು ತನ್ನ ಅಭ್ಯಾಸವನ್ನು ಬಿಡಲಿಲ್ಲ. ಪದೇ ಪದೇ ಕಿರಣ್ ನ ಅಂಗಡಿಗೆ ಬಂದು ನಿಂತುಕೊಳ್ಳುತ್ತಿದ್ದ. ಪಕ್ಕದ ಪೆಟ್ರೋಲ್ ಬಂಕಿಗೆ ಬಂದು ಪೆಟ್ರೋಲ್ ಹಾಕಿಸಿಕೊಳ್ಳುವ ನೆಪದಲ್ಲಿ ಅಲ್ಲಿಯೇ ಸುತ್ತಿತ್ತಿದ್ದ.

ಇನ್ನು ತಿಳಿಸಿ ಬುದ್ದಿ ಹೇಳಿದರೂ ಸಹ ರಾಜು ಪದೇ ಪದೇ ಹೀಗೆ ಮಾಡುತ್ತಿದ್ದನೆಂದು ಕಿರಣ್ ಹಾಗೂ ಆತನ ಸಂಬಂಧಿಕರು ಆತನಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ್ದರು. ಇನ್ನು ನಿನ್ನೆ ಸಂಜೆ ಸಹ ಪಂಚವಳ್ಳಿ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ಹಾಕಿಸಿಕೊಳ್ಳುವ ಸಲುವಾಗಿ ರಾಜು ಬಂದಿದ್ದು ಆ ಸಮಯದಲ್ಲಿ ಕಿರಣ್ ಹಾಗೂ ಆತನ ಸಂಬಂಧಿಕರು ರಾಜುವಿಗೆ ಸರಿಯಾ ಗಿಜಾಡಿ ಸಿದ್ದಾರೆ. ನನ್ನ ಅತ್ತೆ ಮಗಳ ಮೇಲೆ ಕಣ್ಣಾಕ್ತೀಯಾ ಎಂದು ಕಿರಣ್ ಹಾಲಿನ ಕ್ಯಾನ್ ನಲ್ಲಿಯೇ ಕೈ ಮಾಡಿದ್ದು ಸಧ್ಯ ಇದೀಗ ರಾಜುವಿನ ಸ್ಥಿತಿ ಆಸ್ಪತ್ರೆಗೆ ದಾಖಲಾಗುವ ಮಟ್ಟಕ್ಕೆ ಬಂದು ನಿಂತಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹೌದು ಈ ಘಟನೆಯಿಂದ ಗಾಯಗೊಂಡಿರುವ ರಾಜುವನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಕಿರಣ್ ಹಾಗೂ ಸಂಬಂಧಿಕರಾದ ಪುನೀತ್ ಪ್ರಕಾಶ್ ನವೀನ್ ರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಸಿಸಿಟಿವಿ ಯಲ್ಲಿ ಸಂಪೂರ್ಣ ಚಿತ್ರಣ ದಾಖಲಾಗಿದೆ. ಒಟ್ಟಿನಲ್ಲಿ ರಾಜು ಮತ್ತೊಬ್ಬನ ಅತ್ತೆ ಮಗಳ ಮೇಲೆ ಆಸೆ ಪಟ್ಟು ಆಸ್ಪತ್ರೆಗೆ ಸೇರಿದರೆ ಇತ್ತ ಕಿರಣ್ ಆತುರದ ನಿರ್ಧಾರ ಮಾಡಿ ಪೊಲೀಸರ ಬಳಿ ಇದ್ದಾನೆ.