ತನ್ನ ಗಂಡ ಮಾಡಿದ ನೀಚ ಕೆಲಸವನ್ನು ಫೇಸ್ಬುಕ್ ನಲ್ಲಿ ಎಳೆ ಎಳೆಯಾಗಿ ಬಿಚ್ವಿಟ್ಟು ಜೀವ ಕಳೆದುಕೊಂಡ ವೈದ್ಯೆ.. ಇವನ ಜನ್ಮಕ್ಕಿಷ್ಟು.. ಈಕೆ ನಿಜಕ್ಕೂ ಯಾರು ಗೊತ್ತಾ.. ಮನಕಲಕುತ್ತದೆ..

0 views

ಅಲ್ರಯ್ಯಾ ಮದುವೆ ಆಗೋಕೆ ಹೆಣ್ಣು ಮಕ್ಕಳೇ ಸಿಗ್ತಾ ಇಲ್ಲಾ ಅನ್ನೋ ಕಾಲದಲ್ಲಿ ಒಳ್ಳೆ ಹುಡುಗಿ ಸಿಕ್ಕು ಮದುವೆಯಾಗಿ ಜೀವನವನ್ನು ಸುಂದರವಾಗಿ ಕಟ್ಟಿಕೊಳ್ಳಬೇಕಾದ ಸಮಯದಲ್ಲಿ ಇಂತಹ ನೀಚ ಕೆಲಸಗಳನ್ನು ಮಾಡಿ ಆ ಮುಗ್ಧ ಜೀವಗಳು ಇನ್ನಿಲ್ಲವಾಗಲು ಯಾಕ್ರಯ್ಯಾ ಕಾರಣರಾಗ್ತೀರಾ.. ಹೌದು ಮೊನ್ನೆಮೊನ್ನೆಯಷ್ಟೇ ಸಮಾಜಿಕ ಜಾಲತಾಣದಲ್ಲಿ ವೃದ್ಧರೊಬ್ಬರು ತನ್ನ ವಯಸ್ಸಾದ ಪತ್ನಿಯನ್ನು ಜೋಪಾನ ಮಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು.. ನಿಜಕ್ಕೂ ನಿಜವಾದ ಪತಿ ಎಂದರೆ ಏನು.. ಮದುವೆಯ ನಿಜವಾದ ಅರ್ಥವೇನು ಕೊನೆಗಾಲದಲ್ಲಿಯೂ ಹೆಂಡತಿಯನ್ನು ಕಾಳಜಿ ಮಾಡುತ್ತಿದ್ದ ಆ ವೃದ್ಧನ ನೋಡಿ ಕಣ್ತುಂಬಿ ಬಂದಿತ್ತು.. ಆದರೆ ಇಲ್ಲೊಬ್ಬ ಪುಣ್ಯಾತ್ಮ ಗಂಡು ಕುಲಕ್ಕೆ ಅವಮಾನವಾಗುವಂತಹ ಕೆಲಸ ಮಾಡಿದ್ದು ಒಂದು ಮುಗ್ಧ ಹೆಣ್ಣು ತನ್ನ ಜೀವ ಕಳೆದುಕೊಳ್ಳಲು ಕಾರಣನಾಗಿಬಿಟ್ಟಿದ್ದಾನೆ..

ಹೌದು ವೈದ್ಯೆಯೊಬ್ಬಳು ತನ್ನ ಗಂಡ ಮಾಡಿದ ನೀಚ ಕೆಲಸಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಆತನ ಹಿಂಸೆ ತಾಳಲಾರದೆ ಕೊನೆಯುಸಿರೆಳೆದೇ ಬಿಟ್ಟಿದ್ದಾಳೆ.. ಹೌದು ಆಕೆಯ ಹೆಸರು ಎಸ್ ವಿ ವಿಸ್ಮಯ.. ವಯಸ್ಸಿನ್ನು ಕೇವಲ ಇಪ್ಪತ್ತ ನಾಲ್ಕು.. ವೃತ್ತಿಯಲ್ಲಿ ವೈದ್ಯೆ.. ಕಳೆದ ವರ್ಷವಷ್ಟೇ ಮೋಟಾರು ವಾಹನ ವಿಭಾಗದ ಅಧಿಕಾರಿ ಎಸ್ ಕಿರಣ್ ಕುಮಾರ್ ಎಂಬುವವನ ಜೊತೆ ವಿಸ್ಮಯ ಅವರ ಮದುವೆ ಅದ್ಧೂರಿಯಾಗಿ ನೆರವೇರಿತ್ತು.. ಹೌದು ಕೇರಳದ ಕೊಲ್ಲಂ ನ ನೊವಾಸಿಗಳಾಗಿದ್ದ ವಿಸ್ಮಯಳನ್ನು ತಂದೆ ತಾಯಿಯೇ ನೋಡಿ ಕಿರಣ್ ಕುಮಾರ್ ಎಂಬ ಅಧಿಕಾರಿಯ ಜೊತೆ ಮದುವೆ ಮಾಡಿದ್ದಾರೆ.. ಕಳೆದ ವರ್ಷ ಮೇ ತಿಂಗಳಿನಲ್ಲಿ ಈ ಇಬ್ಬರ ಮದುವೆ ಅದ್ಧೂರಿಯಾಗಿ ನೆರವೇರಿತ್ತು.. ಇತ್ತ ಮದುವೆಗೆಂದು ಅಳಿಯನಿಗೆ ಒಂದು ಎಕರೆ ಭೂಮಿ ಹಾಗೂ ಕಾರ್ ಅನ್ನು ಉಡುಗೊರೆಯಾಗಿ ನೀಡಲಾಗಿತ್ತು.. ಮಗಳು ಸಂತೋಷವಾಗಿರಲೆಂದು ದೊಡ್ಡ ಅಧಿಕಾರಿಯ ಜೊತೆಯೇ ಮದುವೆ ಮಾಡಿ ಜವಾಬ್ದಾರಿ ಮುಗಿಯಿತು ಎಂದು ಕೊಂಡ ಅಪ್ಪ ಅಮ್ಮನಿಗೆ ಇಂದು ಅಕ್ಷರಶಃ ಶಾಕ್ ಆಗಿದೆ..

ಹೌದು ಮಗಳು ಮದುವೆಯಾಗಿ ವರ್ಷವಾಯಿತು.. ತವರಿಗೆ ಸಿಹಿ ಸುದ್ದಿ ತರಲಿದ್ದಾಳೆ ಎಂದುಕೊಂಡಿದ್ದ ವಿಸ್ಮಯಳಾ ಅಪ್ಪ ಅಮ್ಮನಿಗೆ ಆಕೆ ಇನ್ನಿಲ್ಲವಾದ ಸುದ್ದಿ ಬಂದಿದ್ದು ಸ್ಥಳದಲ್ಲಿಯೇ ತಂದೆ ತಾಯಿ ಇಬ್ಬರೂ ಕುಸಿದು ಬಿದ್ದಿದ್ದಾರೆ.‌ ಹೌದು ಗಂಡ ನೀಡುತ್ತಿದ್ದ ನೋವುಗಳನ್ನು ತಾಳಲಾರದೆ ನಿನ್ನೆ ಸೋಮವಾರ ಗಂಡನ ಮನೆಯಲ್ಲಿಯೇ ನಿರ್ಧಾರ ಮಾಡಿ ಜೀವ ಕಳೆದುಕೊಂಡೇ ಬಿಟ್ಟಿದ್ದಾಳೆ.. ಆದರೆ ಈ ನಿರ್ಧಾರ ಮಾಡಿದ ತಕ್ಷಣ ಫೇಸ್ಬುಕ್ ಹಾಗೂ ವಾಟ್ಸಪ್ ಗಳಲ್ಲಿ ತನ್ನ ಗಂಡ ತನಗೆ ನೀಡುತ್ತಿದ್ದ ನೋವುಗಳ ಬಗ್ಗೆ ಹಾಗೂ ತನ್ನ ಮೇಲೆ ಕೈ ಮಾಡುತ್ತಿದುದರ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ಕೊನೆಯುಸಿರೆಳೇದೆ ಬಿಟ್ಟಿದ್ದಾಳೆ.. ಹೌದು ಕಿರಣ್ ಕುಮಾರ್ ಮದುವೆಗೆ ಒಂದು ಎಕರೆ ಭೂಮಿ ಹಾಗೂ ಕಾರ್ ಅನ್ನು ಉಡುಗೊರೆಯಾಗಿ ಪಡೆದಿದ್ದರೂ ಸಹ ಆತನ ಹಣದ ಆಸೆ ತೀರಿರಲಿಲ್ಲ..

ಪದೇ ಪದೇ ವಿಸ್ಮಯಳಿಗೆ ಹಣ ತರುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.. ಸುಂದರವಾಗಿ ಇರಬೇಕಾದ ಸಂಸಾರವನ್ನು ತಾನೇ ಕೈಯ್ಯಾರೆ ಹಾಳು‌ ಮಾಡಿಕೊಂಡ ಕಿರಣ್ ಕುಮಾರ್ ವಿಸ್ಮಯ ಮೇಲೆ ಕೈ ಸಹ ಮಾಡುತ್ತಿದ್ದ.. ಈ ಬಗ್ಗೆ ವಿಸ್ಮಯ ಸೋದರ ಸಂಬಂಧಿ ಬಳಿ ವಾಟ್ಸಪ್ ನಲ್ಲಿ ಎಲ್ಲವನ್ನೂ ಹೇಳಿಕೊಂಡು ಕೊನೆಗೆ ಸೋಮವಾರ ಬೆಳಿಗ್ಗೆ ಗಂಡನ ಮನೆಯಲ್ಲಿಯೇ ಜೀವ ಕಳೆದುಕೊಂಡಿದ್ದಾಳೆ.. ಆಕೆಯ ಮೇಲೆ ಗಾಯದ ಗುರುತುಗಳು ಸಹ ಪತ್ತೆಯಾಗಿವೆ.. ಅಷ್ಟೇ ಅಲ್ಲದೇ ಆತ ಮಾಡಿದ್ದ ಗಾಯಗಳ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾಳೆ.. ಅವನು ನೀಡುತ್ತಿರುವ ಹಿಂಸೆಯನ್ನು ನನ್ನಿಂದ ಸಹಿಸಲು ಆಗ್ತಿಲ್ಲ.. ಬಹುಶಃ ಇದೇ ನನ್ನ ಕೊನೆಯ ಮೆಸೆಜ್ ಇರಬಹುದು ಎಂದು ಬರೆದು ಜೀವ ಕಳೆದುಕೊಂಡು ಬಿಟ್ಟಿದ್ದಾಳೆ.. ಒಬ್ಬ ನೊಇಚ ಮನುಷ್ಯನ ಹಣದ ಆಸೆಗೆ ಮುಗ್ಧ ಜೀವ ಬಲಿಯಾಗಿಯೇ ಬಿಟ್ಟಿತು.. ಇತ್ತ ಕಿರಣ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ..

ಅಲ್ರಯ್ಯಾ ಒಳ್ಳೆ ಕೆಲಸ ಇತ್ತು.. ಹೆಂಡತಿ ಕೂಡ ಡಾಕ್ಟರ್.. ಸುಖವಾಗಿ ಇರಬೇಕಾದ ಸಂಸಾರ.. ಇವನ ಜನ್ಮಕ್ಕಿಷ್ಟು.. ಕೂಲಿ ಮಾಡಿ ಹೆಂಡತಿ ಮಕ್ಕಳನ್ನು ಸಾಕೋ ಅದೆಷ್ಟೋ ಬಡ ಜನರೇ ಇವನಿಗಿಂತ ನೂರು ಪಟ್ಟು ವಾಸಿ.. ದುಡಿದು ತಿನ್ನಲಾಗದೆ ಹೆಣ್ಣಿನ ಮನೆಯ ಹಣಕ್ಕೆ ಆಸೆ ಪಡುವ ಈತ ಬಹುಶಃ ಗಂಡಸಿನ ಜಾತಿಯೇ ಅಲ್ಲವೆನಿಸುತ್ತದೆ.. ಈತನೇನೋ ಪೊಲೀಸರ ಪಾಲಾದ.. ಆದರೆ ಮದುವೆ ಬಗ್ಗೆ ನೂರಾರು ಕನಸು ಕಂಡಿದ್ದ ಆಕೆ ಮದುವೆಯಾದ ಒಂದೇ ವರ್ಷಕ್ಕೆ ತನ್ನ ಜೀವನವನ್ನೇ ಅಂತ್ಯ ಮಾಡಿಕೊಂಡಿದ್ದು ನಿಜಕ್ಕೂ ಕಣ್ಣೀರು ತರಿಸುವಂತಿದೆ.. ಆ ಹೆಣ್ಣಿಗೆ ಶಾಂತಿ ಸಿಗಲಿ.. ಇನ್ನಾದರೂ ಇಂತಹವರು ಬದಲಾಗಲಿ..