ಅಂದು ಅಕ್ಕ ತಂಗಿ ಇಬ್ಬರನ್ನು ಮದುವೆಯಾದ.. ಆದರೆ ಇಂದು ತಂಗಿಯಿಂದಾಗಿ ಜೈಲು ಸೇರಿದ ಉಮಾಪತಿ.. ನಿಜಕ್ಕೂ ನಡೆದದ್ದೇನು ಗೊತ್ತಾ?

0 views

ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ವ್ಯಕ್ತಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಯಾದ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಆ ವಿಚಾರವಾಗಿ ಆತನನ್ನು ಸಿಕ್ಕಾಪಟ್ಟೆ ಟ್ರೋಲ್ ಸಹ ಮಾಡಲಾಗಿತ್ತು.. ಆದರೆ ಆತ ಮಂದುವೆಯಾಗಲು ನಿಜವಾದ ಕಾರಣ ತಿಳಿದ ನಂತರ ಆತನ ಬಗ್ಗೆ ಗೌರವ ತೋರಿದ್ದರು.. ಆದರೀಗ ಆತ ಮದುವೆಯಾದ ತಂಗಿಯಿಂದಾಗಿ ಇಂದು ಜೈಲು ಸೇರುವಂತಾಗಿದೆ..

ಹೌದು ಸಾಮಾಜಿಕ ಜಾಲತಾಣದಲ್ಲಿ ಒಮ್ಮೊಮ್ಮೆ ಕೆಲವೊಂದು ಸತ್ಯಗಳನ್ನು ತಿಳಿಯುವ ಮುನ್ನ ಕೆಲವೊಂದನ್ನು ಟ್ರೋಲ್ ಮಾಡಿ ಬಿಡುತ್ತೇವೆ.. ಆದರೆ ಆ ಬಳಿಕ ಸತ್ಯ ತಿಳಿದ ನಂತರ ಮನಸ್ಸಿಗೆ ಬೇಸರ ಆಗೋದು ಉಂಟು..‌ ಅದೇ ರೀತಿ ಆ ಘಟನೆ ಮೊದಮೊದಲು ತಮಾಷೆಯ ವಸ್ತುವಾಗಿತ್ತು.. ಆ ಬಳಿಕ ಇದು ಪ್ರೀತಿ ಮಮಕಾರಕ್ಕೆ ಸಾಕ್ಷಿ‌ ಎನ್ನುವಂತಾಗಿದೆ.. ಆದರೀಗ ಜೈಲು ಪಾಲಾಗುವಂತಾಗಿದೆ..

ಹೌದು ಕೋಲಾರದ ಮುಳುಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಉಮಾಪತಿ ಎಂಬುವವರು ಅಕ್ಕ ತಂಗಿ ಇಬ್ಬರನ್ನು ಮದುವೆಯಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿತ್ತು.. ಆದರೆ ಉಮಾಪತಿ ಅವರು ಇಬ್ಬರು ಹೆಣ್ಣು ಮಕ್ಕಳನ್ನು ಮದುವೆಯಾಗಲು ನಿಜವಾದ ಕಾರಣ ತಿಳಿದು ಅಭಿಮಾನವೂ ಮೂಡಿತ್ತು.. ಹೌದು ಆತನ ಹೆಸರು ಉಮಾಪತಿ.. ಆ ಹೆಣ್ಣು ಮಕ್ಕಳ ಹೆಸರು ಸುಪ್ರಿಯಾ ಹಾಗೂ ಲಲಿತಾ.. ಅದರಲ್ಲಿ ಅಕ್ಕನಾದ ಸುಪ್ರಿಯಾಗೆ ಮಾತು ಬರುವುದಿಲ್ಲ.. ಅಕ್ಕನಿಗೆ ಮದುವೆ ಆಗುತ್ತಿರಲಿಲ್ಲ.. ಅಕ್ಕನಿಗೆ ಮದುವೆಯಾಗದೆ ತಂಗಿಯ ಮದುವೆಯೂ ಇಲ್ಲ.. ಕೊನೆಗೆ ಕುಟುಂಬದವರು ನಿರ್ಧಾರ ಮಾಡಿ ಅಕ್ಕ ತಂಗಿಯನ್ನು ಒಬ್ಬರಿಗೆ ಕೊಟ್ಟು ಮದುವೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.. ಇತ್ತ ತಂಗಿ ಲಲಿತಾ ಅಕ್ಕನಿಗಾಗಿ ಆ ಮಹಾನ್ ತ್ಯಾಗಕ್ಕೆ ಮುಂದಾಗಿದ್ದಳು.. ಮಾತು ಬಾರದ ಅಕ್ಕನ ಜೊತೆ ಜೀವನ ಪೂರ್ತಿ ಕಳೆಯುವ ನಿರ್ಧಾರ ಮಾಡಿ ಒಬ್ಬರನ್ನೇ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಳು.. ಉಮಾಪತಿ ಇವರ ಮನೆಗೆ ಲಲಿತಾರನ್ನು ನೋಡಲು ಬಂದ ವರ..

ಆ ಸಮಯದಲ್ಲಿ ಅಕ್ಕನನ್ನು ಮದುವೆಯಾದರೆ ಮಾತ್ರ ತಾನು ಮದುವೆಯಾಗುವುದಾಗಿ ತಿಳಿಸಿದ್ದರು.. ಮನೆಯವರೂ ಸಹ ಇದೇ ಷರತ್ತನ್ನು ಹಾಕಿದ್ದರು.. ಉಮಾಪತಿ ಈ ಷರತ್ತಿಗೆ ಒಪ್ಪಿದರು.. ಕಳೆದ ವಾರ ಮೇ ಏಳರಂದು ಒಂದೇ ಮುಹೂರ್ತದಲ್ಲಿ ಉಮಾಪತಿ ಸುಪ್ರಿಯಾ ಹಾಗೂ ಲಲಿತಾ ಇಬ್ಬರಿಗೂ ತಾಳಿ ಕಟ್ಟಿ ಮದುವೆಯಾಗಿದ್ದಾರೆ.. ಅಚಾನಕ್ ಆಗಿ ಎರಡು ದಿನದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಅವರ ಮದುವೆಯ ಫೋಟೋವೊಂದು ವೈರಲ್ ಆಗಿ ಬಿಟ್ಟಿತು. ಟ್ರೋಲ್ ಕೂಡ ಆಯಿತು.. ನಂತರ ಅಸಲಿ ವಿಚಾರ ತಿಳಿದು ಸುಮ್ಮನಾದರು..

ಆದರೆ ಅಲ್ಲಿನ ಡಿಸಿ ಇದರ ಬಗ್ಗೆ ವಿಚಾರಣೆ ಮಾಡುವಂತೆ ಸೂಚಿಸಿದ್ದ ಕಾರಣ ಪೊಲೀಸರು ಉಮಾಪತಿ ಅವರ ಈ ಮದುವೆಯ ಕುರಿತು ವಿಚಾರಣೆ ನಡೆಸಿದಾಗ ಮತ್ತೊಂದು ಸತ್ಯ ಬಯಲಾಗಿದೆ.. ಆತ ಮದುವೆಯಾದ ಇಬ್ಬರಲ್ಲಿ ತಂಗಿ ಲಲಿತಾಗೆ ಇನ್ನೂ ಸಹ ಹದಿನೆಂಟು ವರ್ಷ ತುಂಬಿಲ್ಲ.. ಹೌದು ಇದೇ ಕಾರಣಕ್ಕೆ ಒಟ್ಟು ಏಳು ಜನರ ಮೇಲೆ ಕೇಸ್ ದಾಖಲಾಗಿದ್ದು ವರ ಉಮಾಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆದ ಕಾರಣ ಹೊಸ ಮದುವೆ ಗಂಡು ಪೊಲೀಸರ ಪಾಲಾಗುವಂತಾಯಿತು ಎನ್ನುವಂತಾಗಿದೆ..