ಮಕ್ಕಳ ಸ್ವೆಟರ್ ಹೆಸರಲ್ಲಿ ಕೋಟಿ ಕೋಟಿ ನುಂಗಿದ್ರಾ ನಟ ಕೋಮಲ್.. ಬಿಗ್ ಶಾಕಿಂಗ್..

0 views

ಸಧ್ಯ ಕೊರೊನಾದಿಂದಾಗಿ ಕಲಾವಿದರು ಸಂಕಷ್ಟದಲ್ಲಿ ಇರೋದೇನೋ ಸತ್ಯ.. ಒಂದು ಕಡೆ ಕೆಲ ಕಲಾವಿದರಿಗೆ ಇನ್ನೂ ಸಹ ಸರಿಯಾಗಿ ಅವಕಾಶಗಳು ಸಿಗುತ್ತಿಲ್ಲ.. ಕೆಲವರ ಬದುಕು ಬೀದಿಗೆ ಬಿದ್ದಿದೆ.. ಇನ್ನೂ ಕೆಲ ಕಲಾವಿದರು ನಟನೆಯ ಜೊತೆಗೆ ಬೇರೆ ಬೇರೆ ವ್ಯವಹಾರಗಳು ಉದ್ಯಮಗಳನ್ನು ಸಹ ಹೊಂದಿದ್ದು ಬದುಕಿಗೇನೂ ತೊಂದರೆ ಇಲ್ಲ.. ಅದೇ ರೀತಿ ನಟ ಕೋಮಲ್ ಅವರೂ ಸಹ ಸರ್ಕಾರಿ ಟೆಂಡರ್ ಗಳನ್ನು ಪಡೆಯುವ ವ್ಯವಹಾರವನ್ನು ನಡೆಸುತ್ತಿದ್ದರು. ಆದರೀಗ ಮಕ್ಕಳ ಸ್ವೆಟರ್ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಗುಳುಂ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ..

ಹೌದು ಬೆಂಗಳೂರಿನಲ್ಲಿ ಶಾಲಾ ಮಕ್ಕಳಿಗೆ ವಿತರಿಸುವ ಸ್ವೆಟರ್ ವಿಚಾರದಲ್ಲೀಗ ಮೋಸ ನಡೆದಿದೆ ಎಂದು ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ದಲಿತ ಸಮಿತಿ ಪ್ರತಿಭಟನೆ ನಡೆಸಿದೆ.. ಹೌದು ಕಳೆದ ವರ್ಷ ಶಾಲೆಗಳೇ ತೆರೆದಿಲ್ಲ.. ಆದರೂ ಸಹ ಮಕ್ಕಳಿಗೆ ಸ್ವೆಟರ್ ವಿತರಣೆ ಮಾಡಲಾಗಿದೆ ಎಂದು ಬರೋಬ್ಬರಿ ಒಂದೂ ಮುಕ್ಕಾಲು ಕೋಟಿ ಹಣ ಪಡೆಯಲಾಗಿದೆ ಎಂದು ತಿಳಿದುಬಂದಿದೆ.. ಹಣ ಪಡೆದಿರುವುದು ನಟ ಕೋಮಲ್‌ ಅವರೇ.. ಇದಕ್ಕೆ ಹಣ ನೀಡುವಂತೆ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿರುವುದು ಆರ್‌ ಅಶೋಕ್‌ ಹಾಗೂ ನಟ ಜಗ್ಗೇಶ್‌ ಅವರು ಎಂದು ಆರೋಪಿಸಿ ಪಾಲಿಕೆ ಕಚೇರಿ ಎದುರು ಸ್ವಟರ್‌ ಮಾರುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ..

ಹೌದು ಅದರಲ್ಲೂ ಇದರಲ್ಲಿ ಮುಖ್ಯವಾಗಿ ಕೇಳಿ ಬರುತ್ತಿರುವ ಹೆಸರು ನಟ ಕೋಮಲ್ ಅವರದ್ದು.. ಹೌದು ಬೆಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಶಾಲಾ ಕಾಲೇಜು ಮಕ್ಕಳಿಗೆ ಸ್ವೆಟರ್ ವಿತರಣೆ ಮಾಡಲಾಗುತ್ತದೆ.. ಈ ಟೆಂಡರ್ ಅನ್ನು ನಟ ಕೋಮಲ್ ಅವರು ಪಡೆದುಕೊಂಡಿದ್ದರು.. ಆದರೆ ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಯಾವುದೇ ಶಾಲೆಗಳು ತೆರೆದಿರಲಿಲ್ಲ.. ಆದರೂ ಸಹ ಮಕ್ಕಳಿಗೆ ಸ್ವೆಟರ್ ನೀಡಲಾಗಿದೆ ಎಂದು ತೋರಿಸಿ ಟೆಂಡರ್ ಪಡೆದ ಕೋಮಲ್ ಅವರಿಗೆ ಒಂದು ಮುಕ್ಕಾಲು ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದ್ದು ಅವರು ಗುಳುಂ ಮಾಡಿದ್ದಾರೆ ಎನ್ನಲಾಗುತ್ತಿದೆ..

ಇನ್ನು ಇತ್ತ ಟೆಂಡರ್ ಹಣ ಬಿಡುಗಡೆ ಮಾಡಲು ಆರ್ ಅಶೋಕ್ ಅವರು ಹಾಗೂ ನಟ ಜಗ್ಗೇಶ್ ಅವರು ಪಾಲಿಕೆ ಅಧಿಕಾರಿಗಳನ್ನು ಒತ್ತಾಯ ಮಾಡಿದ್ದರು ಎಂದೂ ಸಹ ಆರೋಪ ಕೇಳಿ ಬಂದಿದೆ.. ಆದರೆ ಇತ್ತ ವಿಚಾರ ಗಂಭೀರವಾಗಿ ದೊಡ್ಡ ಸುದ್ದಿಯಾಗುತ್ತುದ್ದರೂ ಸಹ ಕೋಮಲ್ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ.. ಇದುವರೆಗೂ ಯಾವುದೇ ಸ್ಪಷ್ಟನೆಯನ್ನೂ ಸಹ ನೀಡಿಲ್ಲವಾಗಿದ್ದು ತನಿಖೆಯ ಮುಲಕ ಸತ್ಯ ಸತ್ಯತೆ ಗಳು ಬಯಲಾಗಬೇಕಿದೆ.. ಹೌದು ನಟ ಜಗ್ಗೇಶ್ ಹಾಗೂ ನಟ ಕೋಮಲ್ ಅಣ್ಣ ತಮ್ಮ ಇಬ್ಬರ ಹೆಸರು ಸಹ ಸ್ವೆಟರ್ ವಿಚಾರದಕ್ಲಿ ಕೇಳಿಬರುತ್ತಿದ್ದು ಸಿನಿಮಾ ಹೊರತಾಗಿ ರಾಜಕೀಯ ಹೊರತಾಗಿ ಹೊಸ ವಿಚಾರವೊಂದಕ್ಕೆ ಸುದ್ದಿಯಾಗುವಂತಾಗಿದೆ..

ಒಟ್ಟಿನಲ್ಲಿ ಕೆಲ ವರ್ಷಗಳ ಹಿಂದಷ್ಟೇ ಕಾಕಿ ತೊಟ್ಟು ಕೆಂಪೇಗೌಡ 2 ಸಿನಿಮಾ ಮೂಲಕ ರಗಡ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದ ಕೋಮಲ್ ಅವರ ಮೇಲೆ ಸಧ್ಯ ದೊಡ್ಡ ಆರೋಪವೇ ಕೇಳಿಬಂದಿದ್ದು ಮುಂದೆ ಯಾವ ರೀತಿ ತಿರುವು ಪಡೆಯುವುದೂ ಕಾದು ನೋಡಬೇಕಿದೆ.. ಸಧ್ಯ ಈ ಬಗ್ಗೆ ವಿಚಾರಣೆ ನಡೆಸುವಂತೆ ಮನವಿ ಮಾಡಲಾಗಿದ್ದು ತನಿಖೆಯ ಬಳಿಕ ಎಲ್ಲಾ ಸತ್ಯ ಸತ್ಯತೆ ಬೆಳಕಿಗೆ ಬಂದು ಯಾರದ್ದು ಸರಿ ಯಾರದ್ದು ತಪ್ಪು ಬಯಲಾಗಲಿದೆ..