ಮದುವೆಯಾದ ಕೆಲವೇ ದಿನಗಳಲ್ಲಿ ಶಾಕಿಂಗ್ ಸುದ್ದಿ.. ವಿಷಯ ತಿಳಿಸಿದ ಮಿಲನಾ ಹಾಗೂ ನಟ ಕೃಷ್ಣ..

0 views

ಸ್ಯಾಂಡಲ್ವುಡ್ ನ ನೂತನ ತಾರಾ ಜೋಡಿ ಕೃಷ್ಣ ಹಾಗೂ ಮಿಲನಾ ನಾಗರಾಜ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಹಾಗೂ ಸ್ನೇಹಿತರೊಟ್ಟಿಗೆ ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಲವ್ ಮಾಕ್ಟೈಲ್ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದ ಮಿಲನಾ ಹಾಗೂ ಕೃಷ್ಣ ಜೋಡಿ ಎತಡು ತಿಂಗಳ ಹಿಂದೆಯಷ್ಟೇ ಫೆಬ್ರವರಿ ಹದಿನಾಲ್ಕರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಆ ಮೂಲಕ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಅರ್ಥ ನೀಡಿದ್ದರು..

ಮದುವೆಯ ಬಳಿಕ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದ ಮಿಲನಾ ಹಾಗೂ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದರು.. ನಂತರ ಮಾಲ್ಡೀವ್ಸ್ ನಿಂದ ಮರಳಿದ ಬಳಿಕ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದ ಜೋಡಿ ಸದ್ಯ ಶುಗರ್ ಫ್ಯಾಕ್ಟರಿ ಸಿನಿಮಾದ ಚಿತ್ರೀಕರಣದಲ್ಲಿ ಕೃಷ್ಣ ಪಾಲ್ಗೊಂಡಿದ್ದರು.. ಇತ್ತ ಮಿಲನಾ ನಾಗರಾಜ್ ಕೂಡ ದೊಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಜೊತೆಗಿನ ಹೊಸ ಸಿನಿಮಾವೊಂದರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು..

ಆದರೀಗ ಈ ಜೋಡಿ ಶಾಕಿಂಗ್ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.. ಹೌದು ಮಿಲನಾ ಹಾಗೂ ಕೃಷ್ಣ ಜೋಡಿ ಇಬ್ಬರಿಗೂ ಕೊರೊನಾ ಪಾಸಿಟಿವ್ ಆಗಿದ್ದು ಇಬ್ಬರೂ ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ.. ಕೊರೊನಾ ಎರಡನೆ ಅಲೆ ಶುರುವಾಗುತ್ತಿದ್ದಂತೆ ಅನೇಕ ಕಲಾವಿದರು ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದು ಸದ್ಯ ವಿಚಾರ ಹಂಚಿಕೊಂಡಿರುವ ಕೃಷ್ಣ ಹಾಗೂ ಮಿಲನಾ ತಮ್ಮ ಸಂಪರ್ಕಕ್ಕೆ ಬಂದವರು ಈ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.. ಆದರೆ

ಆದರೆ ಕೃಷ್ಣ ಹಾಗೂ ಮಿಲನಾ ತಾವಾಗಿಯೇ ಎಡವಟ್ಟು ಮಾಡಿಕೊಂಡರು ಎನ್ನಲಾಗುತ್ತಿದೆ.. ಹೌದು ಕಳೆದ ವಾರ ಗೋವಾದಲ್ಲಿ ಕೃಷ್ಣ ಅವರ ಶುಗರ್ ಫ್ಯಾಕ್ಟರಿ ಸಿನಿನಾದ ಚಿತ್ರೀಕರಣ ನಡೆಯುತ್ತಿದ್ದು ಮಾರ್ಚ್ 31 ರಂದು ಕೃಷ್ಣ ರನ್ನು ನೋಡುವ ಸಲುವಾಗಿ ಮಿಲನಾ ಅವರು ಗೋವಾಗೆ ತೆರಳಿದ್ದರು.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಸ್ಟೇಟಸ್ ಹಂಚಿಕೊಂಡಿದ್ದರು..‌ಆ ಬಳಿಕ ಗೋವಾದಲ್ಲಿ ಇಬ್ಬರು ಬಹಳಷ್ಟು ಪ್ರವಾಸ ಕೈಗೊಂಡಿದ್ದು ಅಲ್ಲಿಯೇ ಯಾವುದೋ ಜಾಗದಲ್ಲಿ ಅಥವಾ ಟ್ರಾವಲ್ ಮಾಡುವ ಸಂದರ್ಭದಲ್ಲಿ ಯಾವುದಾದರು ಪ್ರದೇಶದಲ್ಲಿ ಇಬ್ಬರಿಗೂ ಸೋಂಕು ತಗುಲಿರಬಹುದು ಇಬ್ಬರೂ ಮೊದಲೇ ಮುನ್ನೆಚ್ಚರಿಕೆ ವಹಿಸಬೇಕಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರು ಕಾಳಜಿ ತೋರಿದ್ದು ಆದಷ್ಟು ಬೇಗ ಇಬ್ಬರೂ ಗುಣಮುಖರಾಗಿ ಎಂದು ಹಾರೈಸಿದ್ದಾರೆ..