ಮದುವೆಗೂ ಮುನ್ನ ಭಾವಿ ಪತ್ನಿ ಮಿಲನಾ ನಾಗರಾಜ್ ಗೆ ಅತಿ ದೊಡ್ಡ ಉಡುಗೊರೆ ನೀಡಿದ ಲವ್ ಮಾಕ್ಟೈಲ್ ಕೃಷ್ಣ..

0 views

ಸ್ಯಾಂಡಲ್ವುಡ್ ನ ತಾರಾ ಜೋಡಿಗಳ ಪಟ್ಟಿಗೆ ಇದೀಗ ಲವ್ ಮಾಕ್ಟೈಲ್ ಖ್ಯಾತಿಯ ನಟ ಕೃಷ್ಣ ಹಾಗೂ ಅದೇ ಸಿನಿಮಾದ ನಿಧಿಮಾ ಖ್ಯಾತಿಯ ಮಿಲನ ನಾಗರಾಜ್ ಅವರು ಸೇರ್ಪಡೆಗೊಳ್ಳುತ್ತಿದ್ದು ಇನ್ನೆರೆಡು ತಿಂಗಳಿನಲ್ಲಿ ಅಂದರೆ ಫೆಬ್ರವರಿ ಹದಿನಾಲ್ಕರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಲವ್ ಮಾಕ್ಟೈಲ್ ಸಿನಿಮಾ ನೋಡಿದ ಅದೆಷ್ಟೋ ಜನರು ಸಿಕ್ಕರೆ ನಿಧಿಮಾ ಅಂತ ಹುಡುಗಿ ಸಿಗಬಾರದ ಎಂದು ಅಂದುಕೊಂಡಿದ್ದೂ ಉಂಟು.. ಜೊತೆಗೆ ಆದಿ ಹಾಗೂ ನಿಧಿಮಾ ನಿಜ ಜೀವನದಲ್ಲಿಯೂ ಜೋಡಿಯಾದರೆ ಚೆಂದವೆಂದಿದ್ದರು.. ಅದೇ ರೀತಿ ಸಿನಿಮಾದ ಆದಿ ಹಾಗೂ ನಿಧಿಮಾ ನಿಜ ಜೀವನದಲ್ಲಿಯೂ ಒಂದಾಗುತ್ತಿದ್ದು ತಮ್ಮ ಬಹು ವರ್ಷದ ಪ್ರೀತಿಗೆ ಇದೀಗ ಮದುವೆಯ ಮೂಲಕ ದಾಂಪತ್ಯದ ಅರ್ಥ ನೀಡುತ್ತಿದ್ದಾರೆ..

ಹೌದು ಈ ವರ್ಷ ಜನವರಿ ತಿಂಗಳಿನಲ್ಲಿ ಬಿಡುಗಡೆಯಾದ ಲವ್ ಮಾಕ್ಟೈಲ್ ಸಿನಿಮಾ ಸಿನಿಪ್ರಿಯರಿಂದ ಬಹಳ ಮೆಚ್ಚುಗೆ ಪಡೆದಿತ್ತು.. ಅದರಲ್ಲೂ ಆನ್ಲೈನ್ ನಲ್ಲಿ ಬಿಡುಗಡೆಗೊಂಡ ನಂತರವಂತೂ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಕೆಲ ದಿನಗಳ ಕಾಲ ಲವ್ ಮಾಕ್ಟೈಲ್ ಸಿನಿಮಾದ ಚರ್ಚೆಯೇ ಇತ್ತು.. ಎಲ್ಲೆಲ್ಲೂ ಆದಿ ನಿಧಿಮಾ ಫೋಟೋಗಳೇ ಕಾಣಸಿಗುತ್ತಿದ್ದವು.. ಸಿನಿಮಾ ಇಂಡಸ್ಟ್ರಿಗೆ ಬಂದು ಹತ್ತು ವರ್ಷವಾದರೂ ಕೃಷ್ಣ ನಾಯಕನಾಗಿ ಸಹ ನಿರ್ದೇಶಕನಾಗಿ ಬಹಳಷ್ಟು ಕೆಲಸ ಮಾಡಿದ್ದರೂ ಸಹ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿರಲಿಲ್ಲ.. ಕೊನೆಗೆ ತನ್ನದೇ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ತಯಾರಾದ ಸಿನಿಮಾದಿಂದ ಇದೀಗ ಸ್ಯಾಂಡಲ್ವುಡ್ ನ ಸ್ಟಾರ್ ನಟನ ಪಟ್ಟ ಒಲಿದು ಬಂತು..

ಸಾಲು ಸಾಲು ಸಿನಿಮಾಗಳ ಅವಕಾಶ ಒದಗಿ ಬಂದಿದ್ದು.. ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ.. ಜೊತೆಗೆ ತಮ್ಮದೇ ಲವ್ ಮಾಕ್ಟೈಲ್ 2 ಸಿನಿಮಾದ ಚಿತ್ರೀಕರಣವೂ ಜೊತೆಜೊತೆಯಾಗಿಯೇ ಸಾಗಿದ್ದು ನಟಿ ಮಿಲನ ನಾಗರಾಜ್ ಕೃಷ್ಣ ಅವರಿಗೆ ಸಾಥ್ ನೀಡಿದ್ದಾರೆ..

ಇನ್ನು ಕೆಲ ವರ್ಷಗಳಿಂದ ಮಿಲನಾ ಹಾಗೂ ಕೃಷ್ಣ ಅವರು ಪರಸ್ಪರ ಪ್ರೀತಿಸುತ್ತಿದ್ದು ಕಳೆದ ವರ್ಷ ಫೆಬ್ರವರಿ ಹದಿನಾಲ್ಕರಂದು ತಮ್ಮ ಪ್ರೀತಿಯ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.. ಆದರೆ ಸಿನಿಮಾದಲ್ಲಿ ಏನಾದರೂ ಸಾಧಿಸಿ‌ ನಂತರ ಮದುವೆ ಆಗುವ ನಿರ್ಧಾರದಲ್ಲಿದ್ದ ಜೋಡಿಗೆ ಲವ್ ಮಾಕ್ಟೈಲ್ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ಯಶಸ್ಸು ತಂದುಕೊಟ್ಟಿತು.. ಇನ್ನು ಇದೀಗ ಮದುವೆಗೆ ಸರಿಯಾದ ಸಮಯ ಎಂದು ನಿರ್ಧರಿಸಿರುವ ಜೋಡಿ ಫೆಬ್ರವರಿ ಹದಿನಾಲ್ಕರಂದು ಹಸೆಮಣೆ ಏರಿತ್ತಿದ್ದು ನೂತನ ಜೀವನ ಆರಂಭಿಸಲಿದ್ದಾರೆ..

ಇನ್ನು ಮದುವೆಗೂ ಮುನ್ನ ಭಾವಿ ಪತ್ನಿ ಮಿಲನಾ ನಾಗರಾಜ್ ಅವರಿಗೆ ಕೃಷ್ಣ ಅವರು ಬಹುದೊಡ್ಡ ಸರ್ಪ್ರೈಸ್ ಒಂದನ್ನು ನೀಡಿದ್ದಾರೆ.. ಹೌದು ಇಂದು ಮಿಲನಾ ಅವರಿಗಾಗಿ ಅವರ ಎಲ್ಲಾ ಸ್ನೇಹಿತರನ್ನೂ ಒಗ್ಗೂಡಿಸಿ ಐಶಾರಾಮಿ ಹೊಟೆಲ್ ಒಂದರಲ್ಲಿ ಮದುವೆಗೂ ಮುನ್ನ ಮಾಡುವ ಬ್ಯಾಚುಲರೇಟ್ ಪಾರ್ಟಿ ಆಯೋಜಿಸಿ ಮಿಲನಾ ಅವರನ್ನು ಸಂತೋಷ ಪಡಿಸಿದ್ದಾರೆ.. ಕಾರ್ಯಕ್ರಮದ ತುಂಬೆಲ್ಲಾ ಮಿಲನಾ ಅವರಿಗೆ ಇಷ್ಟವಾಗುವ ರೀತಿಯಲ್ಲಿ ವಿವಿಧ ಕಡೆ ಕೇಕ್ ಮೇಲೆ ಹಾಗೂ ಇನ್ನಿತರ ವಾಲ್ ಗಳ ಮೇಲೆ ಮಿಲನಾ ಬ್ರೈಡ್ ಟು ಬಿ ಎಂದು ಬರೆಸಿ ಮಿಲನಾ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ..

ಇನ್ನು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾವಿ ಪತ್ನಿಯ ಬ್ಯಾಚುಲರೇಟ್ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿರುವ ಕೃಷ್ಣ ಅವರು ನನ್ನ ಬೊಂಬೆಗೆ ಬ್ಯಾಚುಲರೇಟ್ ಪಾರ್ಟಿ ನನ್ನ ಕಡೆಯಿಂದ.. ಎಂದು ಬರೆದು ಪೋಸ್ಟ್ ಮಾಡಿ ಸಂತೋಷ ಹಂಚಿಕೊಂಡಿದ್ದಾರೆ.. ಇನ್ನೂ ಫೋಟೋಗಳಿಗೆ ಅಭಿಮಾನಿಗಳು ಸ್ನೇಹಿತರು ಎಲ್ಲರೂ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ..