ಸಿಹಿ ಸುದ್ದಿ ಕೊಟ್ಟ ನಟ ಕೃಷ್ಣ ಹಾಗೂ ಮಿಲನಾ ನಾಗರಾಜ್..‌

0 views

ಸ್ಯಾಂಡಲ್ವುಡ್ ನ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ‌ ಒಂದಾದ ಲವ್ ಮಾಕ್ಟೈಲ್ ಸಿನಿಮಾ ಮೂಲಕ ಜನರ ಮನಗೆದ್ದ ಜೋಡಿ ಕೃಷ್ಣ ಹಾಗೂ‌ ಮಿಲನ ನಾಗರಾಜ್ ಇದೀಗ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.. ಹೌದು ಈ ವರ್ಷ ಕೊರೊನಾ ಕಾರಣದಿಂದಾಗಿ ಸಂಪೂರ್ಣ ಸಿನಿಮಾ ಇಂಡಸ್ಟ್ರಿ ಸ್ತಬ್ಧವಾಯಿತು.. ಯಾವುದೇ ಸಿನಿಮಾದ ಚಿತ್ರೀಕರಣವಾಗಲಿ ಅಥವಾ ಸಿನಿಮಾ ಬಿಡುಗಡೆಯಾಗಲಿ‌ ಕಾಣಲಿಲ್ಲ.. ಆದರೆ ಲಾಕ್ ಡೌನ್ ಗೂ ಮುನ್ನ ಜನವರಿ ಹಾಗೂ ಫೆಬ್ರವರಿಯಲ್ಲಿ ಬಿಡುಗಡೆಯಾದ ಕೆಲವೇ ಸಿನಿಮಾಗಳ ಪೈಕಿ ಲವ್ ಮಾಕ್ಟೈಲ್ ಹಾಗೂ ದಿಯಾ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದಿತ್ತು..

ಮೊದ ಮೊದಲು ಚಿತ್ರಮಂದಿರಗಳು ಖಾಲಿ ಹೊಡೆದು ಕೇವಲ ಒಂದೇ ಚಿತ್ರಮಂದಿರದಲ್ಲಿ ಪ್ರಸಾರಗೊಳ್ಳುತ್ತಿದ್ದ ಲವ್ ಮಾಕ್ಟೈಲ್ ಸಿನಿಮಾ ನಂತರ ಜನಮೆಚ್ಚುಗೆ ಕಂಡು ಥಿಯೇಟರ್ ಗಳನ್ನು ಹೆಚ್ಚಿಸಿಕೊಂಡಿತ್ತು.. ಆದಿ ಹಾಗೂ ನಿಧಿಮಾ ಜೋಡಿಗೆ ಜನರು ಫಿದಾ ಆಗಿ ಹೋದರು.. ಇನ್ನು‌ ನಂತರ ಲಾಕ್ ಡೌನ್ ಸಮಯದಲ್ಲಿ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾ ಬಿಡುಗಡೆಯಾದ ಬಳಿಕವಂತೂ ಸಾಮಾಜಿಕ ಜಾಲತಾಣದಲ್ಲಿ‌ ಲವ್ ಮಾಕ್ಟೈಲ್ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತೆನ್ನಬಹುದು.. ಎಲ್ಲೆಲ್ಲೂ ಆದಿ ಹಾಗೂ ನಿಧಿಮಾರದ್ದೇ ಸದ್ದು ಹಾಗೂ ಸುದ್ದಿಯಾಗಿತ್ತು.. ಸಿಕ್ಕರೆ ಇಂತಹ ಹುಡುಗಿ ಸಿಗಲಪ್ಪಾ ಎಂದು ಹುಡುಗರು ದೇವರಲ್ಲಿ ಬೇಡಿಕೊಂಡದ್ದೂ ಉಂಟು.. ಇನ್ನು ತೆರೆಯ ಮೇಲೆ ಮೋಡಿ ಮಾಡಿದ ಕೃಷ್ಣ ಹಾಗೂ ಮಿಲನ ನಾಗರಾಜ್ ಜೋಡಿ ನಿಜ ಜೀವನದಲ್ಲಿಯೂ ಒಂದಾಗುತ್ತಿರುವುದು ಬಹುತೇಕರಿಗೆ ತಿಳಿದಿತ್ತು..

ಈ ವಿಚಾರವನ್ನು‌ ಖುದ್ದು ಕೃಷ್ಣ ಹಾಗೂ ಮಿಲನ ನಾಗರಾಜ್ ಅವರೇ ಬಹಿರಂಗಪಡಿಸಿ ಇಬ್ಬರು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದರು.. ಮುಂದಿನ ವರ್ಷ ಮದುವೆಯೂ ಸಹ ನಡೆಯಲಿದೆ ಎಂದಿದ್ದರು.. ಇನ್ನು ಲವ್ ಮಾಕ್ಟೈಲ್ ಸಿನಿಮಾದ ಸಕ್ಸಸ್ ನಲ್ಲಿದ್ದ ಈ ಜೋಡಿ ಲವ್ ಮಾಕ್ಟೈಲ್ 2 ಸಿನಿಮಾ ಮಾಡಲು ನಿರ್ಧರಿಸಿ ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಕತೆ ಬರೆದು ಫರ್ಸ್ಟ್ ಲುಕ್ ಅನ್ನೂ ಸಹ ಬಿಡುಗಡೆ ಮಾಡಿದ್ದರು..

ಮುಂದಿನ ವರ್ಷ ಲವ್ ಮಾಕ್ಟೈಲ್ 2 ಸಿನಿಮಾ ಬಿಡುಗಡೆಯಾಗಲಿದ್ದು ಸಿನಿಮಾ ನಂತರ ಈ ಇಬ್ಬರ ಕಲ್ಯಾಣವೂ ನಡೆಯಲಿದೆ ಎನ್ನಲಾಗಿದೆ.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳ ಜನ ಮೆಚ್ಚುಗೆಗೆ ಪಾತ್ರವಾಗಿದ್ದ ಲವ್ ಮಾಕ್ಟೈಲ್ ಸಿನಿಮಾ ಪ್ರಚಾರದ ಕೊರತೆಯಿಂದ ಬಾಕ್ಸ್ ಆಫೀಸ್ ನಲ್ಲಿ ಅಷ್ಟಾಗಿ ಗಳಿಕೆ ಕಂಡಿರಲಿಲ್ಲ.. ಅಮೇಜಾನ್ ಪ್ರೈಮ್ ನಲ್ಲಿ ನೋಡಿದ ಪ್ರೇಕ್ಷಕರು ಸಿನಿಮಾವನ್ನು ಥಿಯೇಟರ್ ಗಳಲ್ಲಿ‌ ರೀರಿಲೀಸ್ ಮಾಡುವಂತೆ ಮನವಿ‌ ಮಾಡಿಕೊಂಡಿದ್ದರು.. ಆದರೆ ಅದೇ ಸಮಯಕ್ಕೆ ಲಾಕ್ ಡೌನ್ ಆಗಿ ಥಿಯೇಟರ್ ಗಳು ಬಂದ್ ಆದವು..

ಆದರೆ ಇದೀಗ ಆ ಜೋಡಿ ಸಿಹಿ ಸುದ್ದಿ ನೀಡಿದ್ದಾರೆ.. ಹೌದು ಅದಾಗಲೇ ಸಿನಿಮಾ ಥಿಯೇಟರ್ ಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಇದೇ ಅಕ್ಟೋಬರ್ 15 ರಿಂದ ಚಿತ್ರಮಂದಿರಗಳನ್ನು‌ ತೆರೆಯಬಹುದಾಗಿದೆ.. ಆದರೆ ಮೊದ ಮೊದಲು ಸಿನಿಮಾಗಳನ್ನು‌‌ ನೋಡಲು ಪ್ರೇಕ್ಷಕರು ಥಿಯೇಟರ್ ಗೆ ಬರುವರಾ ಎಂಬ ಆತಂಕ‌ ಮಾತ್ರ ಸ್ವಲ್ಪ ಮಟ್ಟಿಗೆ ಇದ್ದೇ ಇದೆ.. ಆದರೆ ಇದೆಲ್ಲದರ ನಡುವೆ ಲವ್ ಮಾಕ್ಟೈಲ್ ಸಿನಿಮಾದ ರೀರಿಲೀಸ್ ಮಾಡಲು ಕೃಷ್ಣ ಮುಂದಾಗಿದ್ದಾರೆ..

ಹೌದು ಲವ್ ಮಾಕ್ಟೈಲ್ ಸಿನಿಮಾದ ನಿರ್ಮಾಪಕರೂ ಸಹ ಕೃಷ್ಣ ಹಾಗೂ ಮಿಲನ ಅವರೇ ಆಗಿದ್ದು ಇದೀಗ ಥಿಯೇಟರ್ ತೆರೆದ ಬಳಿಕ ಮೊದಮೊದಲು ತಮ್ಮದೇ ಸಿನಿಮಾ ಲವ್ ಮಾಕ್ಟೈಲ್ ಅನ್ನು ಬಿಡುಗಡೆ ಮಾಡುತ್ತಿದ್ದು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹಂಚಿಕೊಂಡಿರುವ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರು ಇದೇ ಅಕ್ಟೋಬರ್ 16 ರಂದು ಲವ್ ಮಾಕ್ಟೈಲ್ ಸಿನಿಮಾ ರೀರಿಲೀಸ್ ಆಗಲಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.. ಪ್ರೇಕ್ಷಕರು ಕೊರೊನಾ ಭಯವನ್ನು ಸೈಡಿಗಿಟ್ಟು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುವರೋ ಕಾದು ನೋಡಬೇಕಿದೆ..