ಇನ್ನು 9 ದಿನದಲ್ಲಿ‌ ಮದುವೆ.. ಆದರೆ ಕೃಷ್ಣಾ ಹಾಗೂ ಮಿಲನ ಮಾಡಿರುವ ಕೆಲಸ ನೋಡಿ..

0 views

ಸ್ಯಾಂಡಲ್ವುಡ್ ನ ಮತ್ತೊಂದು ಜೋಡಿ ಲವ್ ಮಾಕ್ಟೈಲ್ ಜೋಡಿ ಎಂದೇ ಖ್ಯಾತವಾಗಿರುವ ಆದಿ ನಿಧಿಮಾ ಅಲಿಯಾಸ್ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಜೋಡಿ ಇದೇ ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಅದಾಗಲೇ ಮದುವೆಗೆ ಸಕಲ ತಯಾರಿ‌ ನಡೆದಿದೆ.. ಆದರೆ ಮದುವೆ ಇನ್ನು ಕೇವಲ ಒಂಭತ್ತು ದಿನಗಳು ಮಾತ್ರ ಇರುವಾಗ ಕೃಷ್ಣಾ ಹಾಗೂ ನಿಧಿಮಾ ಮಾಡಿರುವ ಕೆಲಸ ನೋಡಿದ್ರೆ ನಿಜಕ್ಕೂ ಅವರ ದೊಡ್ಡ ಗುಣ ಮೆಚ್ಚುವಂತದ್ದು..

ಹೌದು ಕಳೆದ ಹತ್ತು ವರ್ಷದಿಂದ ಸ್ಯಾಂಡಲ್ವುಡ್ ನಲ್ಲಿರುವ ಕೃಷ್ಣಾ ಬಹಳಷ್ಟು ಸಿನಿಮಾ ಮಾಡಿದರೂ ಸಹ ಹೇಳಿಕೊಳ್ಳುವಂತಹ ದೊಡ್ಡ ಹಿಟ್ ಸಿಕ್ಕಿರಲಿಲ್ಲ.. ಕೊನೆಗೇ ತಮ್ಮದೇ ನಿರ್ದೇಶನದಲ್ಲಿ ತಯಾರಾದ ಲವ್ ಮಾಕ್ಟೈಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತಂದುಕೊಟ್ಟಿತ್ತು.. ಅಲ್ಲದೇ ನಿಧಿಮಾ ಹಾಗೂ ಆದಿ ಜೋಡಿ ಜನರ ಮನಗೆಲ್ಲುವಲ್ಲಿ ಯಶಸ್ವಿಯೂ ಆಯಿತು..

ಇನ್ನು ಕಳೆದ ನಾಲ್ಕು ವರ್ಷದಿಂದ ಕೃಷ್ಣಾ ಹಾಗೂ ಮಿಲನಾ ನಾಗರಾಜ್ ಪರಸ್ಪರ ಪ್ರೀತಿಸುತ್ತಿದ್ದು ಸಿನಿಮಾ ರಂಗದಲ್ಲಿ ಏನಾದರು ಒಂದು ಹೆಸರು ಮಾಡಿದ ಬಳಿಕವಷ್ಟೇ ಮದುವೆಯಾಗೋಣ ಎಂಬ ನಿರ್ಧಾರ ಮಾಡಿದ್ದು ಅಂದುಕೊಂಡಂತೆ ಲವ್ ಮಾಕ್ಟೈಲ್ ಸಿನಿಮಾ ಹೆಸರು ಹಾಗೂ ಸಿನಿಮಾಗಳ ಅವಕಾಶವನ್ನೂ ಸಹ ತಂದು ಕೊಟ್ಟಿತ್ತು..

ಲವ್ ಮಾಕ್ಟೈಲ್ ನಂತರ ಲವ್ ಮಾಕ್ಟೈಲ್ 2 ಸಿನಿಮಾವೂ ತಯಾರಾಗುತ್ತಿದೆ.. ಇದರ ಜೊತೆಗೆ ಕೃಷ್ಣಾ ಮತ್ತಷ್ಟು ಸಿನಿಮಾಗಳಲ್ಲಿಯೂ ಹೀರೋ ಆಗಿ ನಟಿಸುತ್ತಿದ್ದು ಇತ್ತ ಮಿಲನಾ ನಾಗರಾಜ್ ಕೂಡ ಸಿನಿಮಾಗಳಲ್ಲಿ ಬ್ಯುಸಿ ಆದರು..

ಇನ್ನು ಮದುವೆಗೆ ಇದು ಸರಿಯಾದ ಸಮಯವೆಂದು ನಿರ್ಧರಿಸಿ ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಯಂದು ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡಿದರು.. ಖುದ್ದು ಮಿಲನಾ ಹಾಗೂ ಕೃಷ್ಣಾ ಅವರೇ ಸ್ಯಾಂಡಲ್ವುಡ್ ಕಲಾವಿದರಿಗೆ ಮದುವೆಗೆ ಆಮಂತ್ರಣ ನೀಡುತ್ತಿದ್ದು ಅದಾಗಲೇ ಮಿಲನಾರಿಗಾಗಿ ಕೃಷ್ಣ ಬ್ಯಾಚುಲರೇಟ್ ಪಾರ್ಟಿ ಕೂಡ ನೀಡಿದ್ದು ತಮ್ಮ ಮದುವೆಯನ್ನು ಸವಿನೆನಪಾಗಿ ಉಳಿಯುವಂತೆ ಮಾಡುತ್ತಿದ್ದಾರೆ.. ಮದುವೆಗೆ ಇನ್ನು ಕೆಲ ದಿನಗಳಷ್ಟೇ ಬಾಕಿ ಇದೆ.. ಇಂತಹ ಸಮಯದಲ್ಲಿ ಸಾಮಾನ್ಯವಾಗಿ ವಧು ವರರು ಮದುವೆಯ ಸಾಕಷ್ಟು ತಯಾರಿಯಲ್ಲಿ ತೊಡಗಿಕೊಳ್ಳುವುದು ಸಾಮಾನ್ಯದ ಸಂಗತಿ.. ಆದರೆ ಕೃಷ್ಣ ಹಾಗೂ ಮಿಲನ ಮಾಡಿದ ಕೆಲಸವೇ ಬೇರೆ..

ಹೌದು ಸಿನಿಮಾ ರಂಗದಲ್ಲಿ ಬಹಳಷ್ಟು ಕಷ್ಟ ಪಟ್ಟು ಯಶಸ್ಸು ಕಂಡ ಕೃಷ್ಣಾ ರಿಗೆ ಶ್ರಮಪಟ್ಟು ಸಿನಿಮಾ ಮಾಡಿದಾಗ ಅದು ಜನರಿಗೆ ತಲುಪದಿದ್ದಾಗ ಆಗುವ ನೋವು ಏನೆಂಬುದು ತಿಳಿದಿದೆ.. ಅದೇ ಕಾರಣಕ್ಕೆ ಸ್ನೇಹಿತ ಅನೀಶ್ ತೇಜೇಶ್ವರ್ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ರಾಮಾರ್ಜುನ ಸಿನಿಮಾವನ್ನು ಪ್ರೋತ್ಸಾಹಿಸುವ ಸಲುವಾಗಿ ಖುದ್ದಾಗಿ ಕೃಷ್ಣಾ ಹಾಗೂ ಮಿಲನಾ ಥಿಯೇಟರ್ ಗೆ ಆಗಮಿಸಿ ಸಿನಿಮಾ ವೀಕ್ಷಣೆ ಮಾಡುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ರಾಮಾರ್ಜುನ ಸಿನಿಮಾ ನೋಡುವಂತೆ ಮನವಿ ಮಾಡಿಕೊಂಡಿದ್ದಾರೆ..

ಹೌದು ಅದಾಗಲೇ ರಾಮಾರ್ಜುನ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದ್ದು.. ಎರಡನೇ ವಾರಕ್ಕೆ ಬಹಳಷ್ಟು ಥಿಯೇಟರ್ ಗಳಿಂದ ಸಿನಿಮಾ ಖಾಲಿಯಾಗಿದೆ.. ಕಾಡಿ ಬೇಡಿ ಒಂದಷ್ಟು ಥಿಯೇಟರ್ ಅನ್ನು ಉಳಿಸಿಕೊಂಡಿದ್ದೇನೆ.. ಈ ಸಲನೂ ನಾನು ಸೋತೆನಾ.. ಎನಿಸುತ್ತಿದೆ.. ದಯವಿಟ್ಟು ಎಲ್ಲರೂ ಬಂದು ಸಿನಿಮಾ ನೋಡಿ ಎಂದು ಅನೀಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಈ ವೀಡಿಯೋವನ್ನು ಸಹ ಕೃಷ್ಣಾ ಶೇರ್ ಮಾಡಿಕೊಂಡು ಕಷ್ಟ ಪಟ್ಟು ಸಿನಿಮಾ ಮಾಡಿದಾಗ ಈ ರೀತಿಯಾದರೆ ಆಗುವ ನೋವು ಬಹಳ.. ದಯಮಾಡಿ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದು ಕೇಳಿಕೊಂಡಿದ್ದಾರೆ..