ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದ್ದ ರುಕ್ಮಿಣಿ ಪಾತ್ರಧಾರಿ ನಟಿ ಅಂಜನಾ ಏನಾದರು ಗೊತ್ತಾ?

0 views

ಈ ಸಿನಿಮಾ ಹಾಗೂ ಧಾರಾವಾಹಿ ಎಂಬ ಬಣ್ಣದ ಬದುಕೇ ಹೀಗೆ.. ಬಹಳಷ್ಟು ದೊಡ್ದ ಮಟ್ಟದ ಯಶಸ್ಸನ್ನು ತಂದು ಕೊಡುತ್ತದೆ.. ಆನಂತರ ಅವರು ನೆನಪಿಗೂ ಉಳಿಯದಂತೆ ಹೊಸ ಕಲಾವಿದರ ಆಗಮನದ ನಂತರ ಮರೆತೇ ಹೋಗಿರುತ್ತಾರೆ.. ಅದೇ ರೀತಿ ಕನ್ನಡ ಕಿರುತೆರೆಯಲ್ಲಿ ಊಹಿಸಲೂ ಆಗದ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದಿದ್ದ ನಟಿ ಕೃಷ್ಣ ರುಕ್ಮಿಣಿ ಧಾರಾವಾಹಿಯ ನಟಿ ಅಂಜನಾ ಶ್ರೀನಿವಾಸ್.. ಆದರೆ ಕೃಷ್ಣ ರುಕ್ಮಿಣಿ ಧಾರಾವಾಹಿಯ ನಂತರ ನಟಿ ಅಂಜನಾ ಶ್ರೀನಿವಾಸ್ ಏನಾದರು.. ಎಲ್ಲಿ ಹೋದರು ಎಂದು ಬಹುತೇಕರಿಗೆ ತಿಳಿದಿಲ್ಲ..

ಹೌದು ಕನ್ನಡ ಕಿರುತೆರೆಯಲ್ಲಿ ಮಹಿಳಾ ಪ್ರಧಾನ ಧಾರಾವಾಹಿಗಳೆ ತುಂಬಿದ್ದ ಸಮಯದಲ್ಲಿ ಧಾರಾವಾಹಿಯೊಂದು ನಾಯಕ ನಟನಿಗಾಗಿ ದೊಡ್ಡ ಅಭಿಮಾನಿ ಬಳಗವನ್ನೇ ಕಟ್ಟಿಕೊಳ್ಳುವಂತೆ ಮಾಡಿತ್ತು.. ಆ ಧಾರಾವಾಹಿ ಮತ್ಯಾವುದೂ ಅಲ್ಲ ಕೃಷ್ಣ ರುಕ್ಮಿಣಿ.. ಹೌದು ಕೃಷ್ಣ ರುಕ್ಮಿಣಿ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಆಗಿನ ದಿನಗಳಲ್ಲಿ ಅತ್ಯಂತ ದೊಡ್ಡ ಮಟ್ಟದ ಯಶಸ್ಸನ್ನು ಪಡೆದ ಧಾರಾವಾಹಿಯಾಗಿತ್ತು.. ನಟನೆ ಹಾಗೂ ನಿರ್ದೇಶನದ ಕನಸು ಇಟ್ಟುಕೊಂಡು ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ಸುನೀಲ್ ಮುಂದಿನ ದಿನಗಳಲ್ಲಿ ಕೃಷ್ಣ ಹಾಗೆ ಉಳಿದರು.. ಇದಕ್ಕೆ ಕಾರಣ ಆ ಧಾರಾವಾಹಿ ನೀಡಿದ ಯಶಸ್ಸು.. ಅದರಲ್ಲೂ ಮಹಿಳಾ ಅಭಿಮಾನಿಗಳು ಕೃಷ್ಣರನ್ನು ಕಂಡರೆ ಫಿದಾ ಆಗಿ ಹೋಗಿದ್ದರು.. ಆಗಿನ ಸಮಯದಲ್ಲಿ ನಂಬರ್ ಒನ್ ಧಾರಾವಾಹಿಯಾಗಿತ್ತೆನ್ನಬಹುದು..

ಆ ಧಾರಾವಾಹಿ ಅನೇಕ ಕಲಾವಿದರಿಗೆ ಹೊಸ ದಾರಿಯನ್ನು ತೋರಿತ್ತು.. ಕೃಷ್ಣ ರುಕ್ಮಿಣಿ ಧಾರಾವಾಹಿ ನಂತರ ನಟ ಕೃಷ್ಣ ಇತ್ತ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟರು.. ಇದರ ಜೊತೆಗೆ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರಾವ್ಯ ಅವರೂ ಸಹ ಸಿನಿಮಾಗಳಲ್ಲಿ ಕಾಣಿಸಿಕೊಂಡರು.. ಇನ್ನು ಈ ಧಾರಾವಾಹಿಯ ಕಲಾವಿದರಿಗೆ ಅದೆಷ್ಟೋ ಅಭಿಮಾನಿ ಬಳಗಗಳೇ ಹುಟ್ಟಿಕೊಂಡಿದ್ದವು.. ನಾಯಕನಟಿಯಾಗಿ ರುಕ್ಮಿಣಿ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ಅಂಜನಾ ಶ್ರೀನಿವಾಸ್ ಅವರಿಗೂ ಸಹ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ತಂದುಕೊಟ್ಟಿತ್ತು.. ಆದರೆ ಆ ಧಾರಾವಾಹಿಯ ನಂತರ ಅಂಜನಾ ಬೇರೆಲ್ಲೂ ಕಾಣಿಸಿಕೊಳ್ಳಲಿಲ್ಲ.. ಅಂಜನಾ ಏನಾದರು ಎಂಬ ಕಿರುತೆರೆ ಪ್ರೇಕ್ಷಕರಲ್ಲಿ ಮೂಡಿದ್ದೂ ಉಂಟು.. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ..

ನಟಿ ಅಂಜನಾ ಶ್ರೀನಿವಾಸ್ ಅವರು ಸದ್ಯ ತಮ್ಮ ಹೆಸರನ್ನು‌ ಬದಲಿಸಿಕೊಂಡಿದ್ದಾರೆ.‌. ಹೌದು ಅಂಜನಾ ಶ್ರೀನಿವಾಸ್ ನಿಂದ ನಕ್ಷತ್ರ ಶ್ರೀನಿವಾಸ್ ಎಂದು ಹೆಸರು ಬದಲಿಸಿಕೊಂಡು ಬೇರೆ ಭಾಷೆಯ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ.. ಹೌದು ಕೃಷ್ಣ ರುಕ್ಮಿಣಿ ಧಾರಾವಾಹಿ ನಂತರ ಕನ್ನಡ ಕಿರುತೆರೆಯಿಂದ ದೂರಾದ ನಕ್ಷತ್ರ ಶ್ರೀನಿವಾಸ್ ಮುಂದೆ ತಮಿಳು ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿ ಆದರು.. ಸದ್ಯ ಈಗಲೂ ಸಹ ತೆಲುಗಿನ ಖ್ಯಾತ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು ಸಿನಿಮಾಗಳ ಅವಕಾಶ ಬಂದರೂ ಸಹ ಧಾರಾವಾಹಿಯೆ ಸರಿ ಎಂದು ಕಿರುತೆರೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ..

ಇನ್ನು ಇತ್ತ ಕನ್ನಡದ ಧಾರಾವಾಹಿಗಳಲ್ಲಿ ಒಂದು ಧಾರಾವಾಹಿಯಲ್ಲಿ ನಾಯಕಿಯಾಗಿ ಹಿಟ್ ಆದರೆ ಮತ್ತೆ ಇನ್ನೊಂದು ಧಾರಾವಾಹಿಯಲ್ಲಿ ನಾಯಕಿಯ ಪಾತ್ರ ಸಿಗುವುದು ಕಷ್ಟ.. ಜನರೂ ಸಹ ಆ ಪಾತ್ರವನ್ನು ಮರೆತು ಮತ್ತೊಂದು ಪಾತ್ರದಲ್ಲಿ ನಾಯಕಿಯನ್ನು ನೋಡುವುದು ಕೊಂಚ ಕಷ್ಟವೇ ಸರಿ.. ಅದೇ ಕಾರಣಕ್ಕೆ ಕನ್ನಡ ಕಿರುತೆರೆಯ ಬಹಳಷ್ಟು ನಾಯಕಿಯರು ಬೇರೆ ಬೇರೆ ಭಾಷೆಗಳಲ್ಲಿ ಬ್ಯುಸಿ ಆಗಿರುವುದನ್ನು ನೋಡಬಹುದು‌‌.. ಅದೇ ರೀತಿ ಕನ್ನಡ ಕಿರುತೆರೆಯಿಂದ ದೂರ ಉಳಿದ ನಕ್ಷತ್ರ ಶ್ರೀನಿವಾಸ್ ಬರೋಬ್ಬರಿ ಎಂಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದು ಸದ್ಯ ತೆಲುಗಿ ಕಿರುತೆರೆ ಇಂಡಸ್ಟ್ರಿಯಲ್ಲಿ ಭದ್ರವಾಗಿ ನೆಲೆಯೂರಿದ್ದಾರೆನ್ನಬಹುದು‌. ಇನ್ನು ವ್ಯಯಕ್ತಿಕ ಜೀವನದ ವಿಚಾರಕ್ಕೆ ಬಂದರೆ.. ಧಾರಾವಾಹಿಗಳಲ್ಲಿ ಅಭಿನಯಿಸುವುದರಿಂದ ಮಗಳು ಅದೆಷ್ಟೋ ಮನೆಕೆಲಸಗಳನ್ನು ಕಲಿತಳು ಎಂದು ನಕ್ಷತ್ರಾ ಅವರ ತಾಯಿ ಸಂತೋಷ ಪಟ್ಟರೆ ಇತ್ತ ಮದುವೆ ಮಾತ್ರ ಸದ್ಯಕ್ಕೆ ಬೇಡ ಎನ್ನುತ್ತಾರೆ ನಕ್ಷತ್ರಾ..