ಮಗಳು ಜಾನಕಿ‌ ಧಾರಾವಾಹಿಯ ನಟನಿಗೆ ಫೋನ್ ಮಾಡಿ ಕುಮಾರಸ್ವಾಮಿ ಅವರು ಮಾಡಿರುವ ಕೆಲಸ ನೋಡಿ..

0 views

ರಾಜಕಾರಣಿಗಳು ರಾಜಕೀಯ ಹೊರತು ಪಡಿಸಿ ಬೇರೆ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳುವುದಿಲ್ಲ ಅನ್ನೋ ಒಂದು ಸಾಮಾನ್ಯ ಮಾತಿದೆ.. ಆದರೆ ರಾಜ್ಯದ ಜೆಡಿಎಸ್ ನಾಯಕರಾದ ಕುಮಾರಸ್ವಾಮಿ ಅವರು ಇದ್ದಕಿದ್ದ ಹಾಗೆ ಮಗಳು ಜಾನಕಿ ಧಾರಾವಾಹಿಯ ನಟನಿಗೆ ಫೋನ್ ಮಾಡಿ ಹೇಳಿರುವ ಮಾತು ನೋಡಿ.. ಹೌದು ಮಗಳು ಜಾನಕಿ ವರ್ಷದ ಹಿಂದೆ ಎಲ್ಲರ ನೆಚ್ಚಿನ ಧಾರಾವಾಹಿ.. ಆದರೆ ಧಾರಾವಾಹಿ ನಿಂತು ವರ್ಷ ಕಳೆದರೂ ಸಹ ಆ ಮಗಳು ಜಾನಕಿ ಇನ್ನೂ ಸಹ ಪ್ರೇಕ್ಷಕರ ಮನಸ್ಸನ್ನು ಬಿಟ್ಟು ಹೋಗಿಲ್ಲವೆನ್ನಬಹುದು.. ಅಷ್ಟರ ಮಟ್ಟಕ್ಕೆ ಧಾರಾವಾಹಿ ಇಷ್ಟವಾಗಿತ್ತು.. ಇನ್ನು ಧಾರಾವಾಹಿಯಲ್ಲಿನ ಪ್ರತಿಯೊಂದು ಪಾತ್ರವೂ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.. ಅದರಲ್ಲಿ ಮ್ಯಾಜಿಕ್ ಮಾಮ ಸುಂದರ್ ಮೂರ್ತಿ ಅವರ ಪಾತ್ರವೂ ಒಂದು.. ಅತಿರೇಕವಿಲ್ಲದೇ ಯಾವುದೇ ಮುಜುಗರವಿಲ್ಲದ ಹಾಸ್ಯವನ್ನು ಸುಂದರ್ ಮೂರ್ತಿ ಅವರ ಪಾತ್ರದ ಮೂಲಕ ಸೀತಾರಾಮ್ ಅವರು ಪ್ರೇಕ್ಷಕರಿಗೆ ಉಣಬಡಿಸುತ್ತಿದ್ದರು..

ಇನ್ನು ಸೀತಾರಾಮ್ ಅವರ ಪ್ರತಿಯೊಂದು ಪ್ರಾಜೆಕ್ಟ್ ನಲ್ಲಿಯೂ ಒಂದಲ್ಲಾ ಒಂದು ಪಾತ್ರಕ್ಕೆ ಜೀವ ತುಂಬುವ ಕೃಷ್ಣಮೂರ್ತಿ ಅವರು ನಟನಷ್ಟೇ ಅಲ್ಲ.. ಬದಲಿಗೆ ಬೇರೆ ಕೆಲಸದಲ್ಲಿಯೂ ತೊಡಗಿದ್ದಾರೆ.. ಇದೀಗ ಆ ಕೆಲಸದ ವಿಚಾರವಾಗಿಯೇ ಕುಮಾರಸ್ವಾಮಿ ಅವರು ಫೋನ್ ಮಾಡಿದ್ದಾರೆ.. ಹೌದು ರಾಜಕಾರಣಿಗಳು ರಾಜಕೀಯದಲ್ಲಿ ಮಾತ್ರ ತೊಡಗಿಕೊಂಡಿರುವುದಿಲ್ಲ.. ಬದಲಿಗೆ ಅವರಿಗೂ ತಮ್ಮದೇ ಆದ ವ್ಯಯಕ್ತಿಕ ಜೀವನ ಅಂತ ಒಂದು ಇರುತ್ತದೆ.. ಅವರೂ ಸಹ ಎಲ್ಲರಂತೆ ಮನುಷ್ಯರೆ.. ಅವರುಗಳು ಸಹ ರಾಜಕೀಯ ಹೊರತು ಪಡಿಸಿ ಇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ.. ಆದರೆ ಹೊರಗಿನ ಪ್ರಪಂಚಕ್ಕೆ ಆತನೊಬ್ಬ ರಾಜಕಾರಣಿಯಾಗಿ ಮಾತ್ರವೇ ಪರಿಚಯವಿರುತ್ತದೆ.. ಇನ್ನು ಸ್ಟಾರ್ ಕಲಾವಿದರಾಗಲಿ.. ರಾಜಕಾರಣಿಗಳಾಗಲಿ.. ಅಥವಾ ಕ್ರೀಡಾಪಟುಗಳಾಗಲಿ ಅಥವಾ ಯಾವುದೇ ಸೆಲಿಬ್ರೆಟಿಯಾದರೂ ಅವರುಗಳು ಎಲ್ಲರಂತೆಯೇ ಮನರಂಜನೆಗಾಗಿ ಒಂದಿಲ್ಲೊಂದು ಕೆಲಸದಲ್ಲಿ ಸಕ್ರಿಯರಾಗಿರುತ್ತಾರೆ..

ಟಿವಿ ರೇಡಿಯೋ ಪುಸ್ತಕ ಓದುವುದು ಪ್ರವಾಸಕ್ಕೆ ತೆರಳುವುದು ಹೀಗೆ ಅವರಿಷ್ಟದ ಅನುಸಾರ ತೊಡಗಿಕೊಂಡಿರುತ್ತಾರೆ.. ಅದೇ ರೀತಿ ಅವರ ಈ ರೀತಿಯ ವ್ಯಯಕ್ತಿಕ ಚಟುವಟಿಕೆಗಳಲ್ಲಿ ಅವರಿಗೂ ಇತರ ರಂಗಗಳಲ್ಲಿ ಇಷ್ಟವಾದ ಕಲಾವಿದರು ಬರಹಗಾರರು ಇರುತ್ತಾರೆ.‌ ಅದೇ ರೀತಿ ಈ ಮೊದಲೇ ಹೇಳಿದಂತೆ ಕೃಷ್ಣಮೂರ್ತಿ ಅವರು ನಟರು ಮಾತ್ರವಲ್ಲದೇ ಒಳ್ಳೆಯ ಬರಹಗಾರರು ಹೌದು.. ಅದಾಗಲೇ ಬಹಳಷ್ಟು ಕಾದಂಬರಿಗಳನ್ನು ಬರೆದಿದ್ದು ಜೊತೆಗೆ ಬಹಳಷ್ಟು ದೊಡ್ಡ ದೊಡ್ಡ ಪುಸ್ತಕಗಳ ಅನುವಾದವನ್ನು ಸಹ ಜನರಿಗೆ ಅರ್ಥವಾಗುವ ಸುಲಭ ಭಾಷೆಯಲ್ಲಿ ಬರೆದಿದ್ದಾರೆ.. ಇನ್ನು ಕುಮಾರಸ್ವಾಮಿ ಅವರಿಗೂ ಸಹ ಸಾಹಿತ್ಯದಲ್ಲಿ ಆಸಕ್ತಿ ಇದ್ದು ಕೃಷ್ಣಮೂರ್ತಿ ಅವರ ಪುಸ್ತಕವನ್ನು ಓದಿ ಖುದ್ದು ಫೋನ್ ಮಾಡಿ ಮಾತನಾಡಿದ್ದಾರೆ.. ಅವರು ಮಾತನಾಡಿರುವ ಮಾತುಗಳು ನಿಜಕ್ಕೂ ಒಬ್ಬ ಮನುಷ್ಯನ ಕಲೆಯನ್ನು ಯಾವ ರೀತಿ ಪ್ರೋತ್ಸಾಹಿಸಬೇಕೆಂಬುದನ್ನು ತೋರುತ್ತದೆ‌‌..

ಈ ಬಗ್ಗೆ ಖುದ್ದು ಕೃಷ್ಣಮೂರ್ತಿ ಶ್ರೀನಾಥ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಹೌದು ಫೇಸ್ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಕೃಷ್ಣಮೂರ್ತಿ ಶ್ರೀನಾಥ್ ಅವರು “ನೆನ್ನೆ ಒಂದು ಗೊತ್ತಿಲ್ಲದ ನಂಬರಿನಿಂದ ಕರೆ ಬಂದಿತು.
ಶ್ರೀನಾಥ್ ಅವರ, ಹೆಚ್ .ಡಿ. ಕುಮಾರಸ್ವಾಮಿಯವರು ಮಾತನಾಡ್ತಾರೆ ಅಂತ ಆ ಕಡೆಯಿಂದ ಪಿ.ಎ. ಅಂದರು. ನನಗೆ ಇದೇನ್ಪಪ್ಪ ಅಂತ ಸ್ವಲ್ಪ ಮನಸ್ಸು ವಿಚಲಿತ ಗೊಳ್ಳುವುದಕ್ಕಿಂತ ಮುಂಚೆಯೇ, ಆ ಕಡೆಯಿಂದ ಕುಮಾರಸ್ವಾಮಿಯವರು ” ನಿಮ್ಮ ಬ್ರದರ್ಸ್ ಕರಮಜೊವ್ ಓದ್ತಾ ಇದೀನಿ, ಬಹಳ ಚೆನ್ನಾಗಿ ತೊಗೊಂಡು ಹೋಗಿದೀರ” ಅಂತ ಅಂದರು. ಸಾಹಿತ್ಯ ಗಡಿಗಳಿಲ್ಲದೇ ಇರುವ ಕ್ಷೇತ್ರ, ಮತ್ತು ನನಗೆ ಫೋನ್ ಮಾಡಿ ತಿಳಿಸಿ ಮೆಚ್ಚುಗೆ ವ್ಯಕ್ತ ಪಡಿಸುವ ಸಾಹಿತ್ಯಕ ಪ್ರಜ್ಞೆ ಇವರಲ್ಲಿರುವ ಸಂಗತಿ ನನ್ನಲ್ಲಿ ಹೆಮ್ಮೆ ಮೂಡಿಸಿತು.” ಎಂದು ಬರೆದು ಪೋಸ್ಟ್ ಮಾಡಿದ್ದು ಸಂತೋಷ ಹಂಚಿಕೊಂಡಿದ್ದಾರೆ..

ರಾಜಕೀಯವನ್ನು ಪಕ್ಕಕ್ಕಿರಿಸಿ ತಮ್ಮ ಹವ್ಯಾಸಕ್ಕಾಗಿಯೋ ಆಸಕ್ತಿಗಾಗಿಯೋ ಪುಸ್ತಕವನ್ನು ಓದಿ ಸುಮ್ಮನಾಗಬಹುದಿತ್ತು.. ಆದರೆ ತಮ್ಮ ಮನಸ್ಸಿಗೆ ಇಷ್ಟವಾದ ಪುಸ್ತಕ ಬರೆದವರಿಗೆ ಖುದ್ದು ಫೋನ್ ಮಾಡಿ ಮಾತನಾಡಿ ಅವರಿಗೆ ಮೆಚ್ಚುಗೆ ವ್ಯಕ್ತ ಪಡಿಸಿ ಈ ರೀತಿ ಪ್ರೋತ್ಸಾಹ ಮಾಡುವ ಕುಮಾರಸ್ವಾಮಿ ಅವರ ಗುಣ ನಿಜಕ್ಕೂ ಮೆಚ್ಚುವಂತದ್ದು..