ಇದು ಗಂಡೆದೆ ಅಂದರೆ.. ಮುಲಾಜಿಲ್ಲದೇ ಕೊಕೊಕೋಲಾ ಬಾಟಲ್ ಅನ್ನು ಪಕ್ಕಕ್ಕಿಟ್ಟ ರೊನಾಲ್ಡೋ.. ಒಂದೇ ಸೆಕೆಂಡ್ ನಲ್ಲಿ ಕೊಕೊಕೋಲಾ ಕಂಪನಿಗೆ ಮೂವತ್ತು ಸಾವಿರ ಕೋಟಿ ನಷ್ಟ ಆಗಿದ್ದು ಯಾವ ರೀತಿ ಗೊತ್ತಾ.. ಸತ್ಯ ತಿಳಿದರೆ ಶಾಕ್ ಆಗ್ತೀರಾ..

0 views

ಮನುಷ್ಯ ಒಂದು ಹಂತಕ್ಕೆ ತಲುಪಿದ ಬಳಿಕ ಆತನನ್ನು ಅನುಸರಿಸುವವರು ಅನುಯಾಯಿಗಳು ನೂರಾರು ಮಂದಿ ಇರ್ತಾರೆ.. ಅದರಲ್ಲೂ ಸಿನಿಮಾ ತಾರೆಯರು.. ಕ್ರೀಡಾಪಟುಗಳಿಗೆ ಹೇಳಲೇ ಬೇಕಿಲ್ಲ.. ಕೋಟ್ಯಾಂತರ ಅಭಿಮಾನಿಗಳು ಅವರನ್ನು ಫಾಲೋ ಮಾಡ್ತಾರೆ.. ಅವರು ಮಾಡುವ ಕೆಲಸವನ್ನೇ ಮಾಡೋದು.. ಅವರನ್ನು ಅನುಕರಣೆ ಮಾಡೋದು.. ಅವರ ಜೀವನ ಕ್ರಮಗಳನ್ನು ಅನುಸರಿಸುವುದು ಅದಕ್ಕೂ ಮಿಗಿಲಾಗಿ ಅವರುಗಳು ನೀಡುವ ಸಲಹೆಗಳನ್ನು ಪಾಲಿಸುವುದು ಹೀಗೆ ನಾನಾ ರೀತಿಯಲ್ಲಿ ಸ್ಟಾರ್ ಗಳನ್ನು ಅಭಿಮಾನಿಗಳು ಅನುಸರಿಸುತ್ತಾರೆ.. ಇನ್ನು ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದೆ..

ಅದುವೇ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಅವರು ತಮ್ಮ ಮುಂದೆ ಇದ್ದ ಕೊಕೊಕೋಲಾ ಬಾಟಲಿಯನ್ನು ತೆಗೆದು ಪಕ್ಕಕ್ಕಿಟ್ಟು ನೀರಿನ ಬಾಟಲಿಯನ್ನು ಎತ್ತಿಕೊಂಡು ನೀರು ಕುಡಿಯಿರಿ ಕೊಕೊಕೋಲವನಲ್ಲ ಎಂದು ಬಿಟ್ಟರು.. ಆ ತಕ್ಷಣ ಒಂದೇ ಸೆಕೆಂಡಿಗೆ ಕೊಕೊಕೋಲಾ ಕಂಪನಿಗೆ ಮೂವತ್ತು ಸಾವಿರ ಕೋಟಿ ರೂಪಾಯಿ ನಷ್ಟವಾಗಿ ಹೋಯಿತು.. ಹೌದು ಅಷ್ಟಕ್ಕೂ ರೊನಾಲ್ಡೋ ಅವರು ಕೊಕೊಕೋಲಾ ಬಾಟಲಿಯನ್ನು ಪಕ್ಕಕ್ಕಿಟ್ಟರೆ ಕೊಕೊಕೋಲಾ ಕಂಪನಿಗೆ ನಷ್ಟ ಹೇಗಾಯ್ತು ಎಂದು ಸಣ್ಣ ಕುತೂಹಲ ಇದ್ದೇ ಇರುತ್ತದೆ.. ಹೌದು ಅದಕ್ಕೆ ಉತ್ತರ ಇಲ್ಲಿದೆ ನೋಡಿ.. ಹಂಗೇರಿಯಲ್ಲಿ ಪೋರ್ಚುಗಲ್ ಮತ್ತು ಹಂಗೇರಿ ನಡುವೆ ಯೂರೋ ಕಪ್ ಫುಟ್ಬಾಲ್ ಪಂದ್ಯಾವಳಿಗಳು ನಡೆಯುತ್ತಿದೆ..

ವಿಶ್ವಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಪಂದ್ಯ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡರು.. ಪತ್ರಿಕಾಗೋಷ್ಟಿಗೆ ಬಂದು ಕೂಟ ರೊನಾಲ್ಡೋ ಅವರು ತಕ್ಷಣ ತಮ್ಮ ಮುಂದೆ ಇದ್ದ ಕೊಕೊಕೋಲಾ ಬಾಟಲಿಯನ್ನು ಪಕ್ಕಕ್ಕಿಟ್ಟು.. ನೀರಿನ ಬಾಟಲಿ ತೆಗೆದುಕೊಂಡು ನೀರು ಕುಡಿಯಿರಿ.. ಕೊಕೊಕೋಲಾವನಲ್ಲ ಎಂದೇ ಬಿಟ್ಟರು.. ಕೊಕೊಕೋಲಾ ಹಂಗೇರಿಯಲ್ಲಿ ನಡೆಯಿತ್ತಿದ್ದ ಯೂರೋ ಕಪ್ ನ ಪ್ರಾಯೋಜಕರಲ್ಲಿ ಒಂದಾಗಿತ್ತು.. ಅದೇ ಕಾರಣಕ್ಕೆ ಟೇಬಲ್‌ ಮೇಲೆ ಕೊಕೊಕೋಲಾ ಬಾಟಲಿಗಳನ್ನು ಇಡಲಾಗಿತ್ತು.. ಆದರೆ ಇದ್ದಕಿದ್ದ ಹಾಗೆ ರೊನಾಲ್ಡೋ ಅವರು ಮಾಡಿದ ಕೆಲಸಕ್ಕೆ ಒಂದೇ ಕ್ಷಣದಲ್ಲಿ ಎಂತಹ ದೊದ್ದ ನಷ್ಟವಾಗಿದೆ ಎಂದರೆ ನಿಜಕ್ಕೂ ಒಬ್ಬ ಸ್ಟಾರ್‌ ಗೆ ಎಷ್ಟು ಬೆಲೆಯಿದೆ ಎಂಬುದು ತಿಳಿಯುತ್ತದೆ..

ಹೌದು ಕ್ರಿಸ್ಟಿಯಾನೋ ರೊನಾಲ್ಡೋ ಮಾಡಿದ ಕೆಲಸಕ್ಕೆ ಒಂದೇ ಕ್ಷಣದಲ್ಲಿ ಕೊಕೋಕೋಲಾ ಕಂಪನಿಯ ಷೇರುಗಳು ಬಿದ್ದು ಹೋಗಿದ್ದು ಎರಡು ಬಿಲಿಯನ್ ಡಾಲರ್ ಅಂದರೆ ಸುಮಾರು ಮೂವತ್ತು ಸಾವಿರ ಕೋಟಿ ರೂಪಾಯಿಗಳ ನಷ್ಟವನ್ನು ಕೊಕೊಕೋಲಾ ಕಂಪನಿ ಅನುಭವಿಸುತ್ತಿದೆ.. ಸಾವಿರಾರು ಕೋಟಿ ನಷ್ಟ ತಂದಿದ್ದಕ್ಕೆ ಇದೀಗ ರೊನಾಲ್ಡೋ ವಿರುದ್ಧ ಕ್ರಮ ಕೈಗೊಳ್ಳಲು ಪಂದ್ಯ ಆಯೋಜಿಸಿದ ಸಂಘಟಕರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.. ಆದರೆ ಆದರೆ ನಿಜಕ್ಕೂ ಎಲ್ಲರ ಮುಂದೆ ಈ ರೀತಿ ಧೈರ್ಯವಾಗಿ ನಡೆದುಕೊಳ್ಳಲು ನಿಜಕ್ಕೂ ಎಂಟೆದೆಯ ಗುಂಡಿಗೆಯೇ ಇರಬೇಕು.. ತನ್ನನ್ನು ತನ್ನ ಅಭಿಮಾನಿಗಳು ಅದರಲ್ಲೂ ಕೋಟ್ಯಾಂತರ ಅಭಿಮಾನಿಗಳು ಅನುಕರಣೆ ಮಾಡುತ್ತಾರೆ ಎಂದು ಅರಿತಿದ್ದ ರೊನಾಲ್ಡೋ ಆರೋಗ್ಯಕ್ಕೆ ನೀರು ಒಳ್ಳೆಯದು ಬೇರೆಯದ್ದಲ್ಲ ಎಂದು ತಿಳಿಸಿ ಅವರ ನಡೆಯ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ..

ಇತ್ತ ಲಕ್ಷಗಳಿಗೆ ತಮ್ಮನ್ನೇ ತಾವು ಮಾರಿಕೊಂಡು.. ತಮ್ಮ ವ್ಯಕ್ತಿತ್ವವನ್ನೇ ಇಲ್ಲವಾಗಿಸಿಕೊಂಡು ಅಭಿಮಾನಿಗಳ ದಿಕ್ಕು ತಪ್ಪಿಸುವ ಅನೇಕ ಸ್ಟಾರ್ ಗಳ ನಡುವೆ ಕ್ರಿಸ್ಟಿಯಾನೋ ರೋನಾಲ್ಡೋ ನಿಜವಾದ ನಿಜ ಜೀವನದ ಹೀರೋ ಎಂದರೆ ತಪ್ಪಾಗಲಾರದು.. ಇತ್ತ ಸಾಮಾಜಿಕ ಜಾಲತಾಣದಲ್ಲಿ ರೊನಾಲ್ಡೋ ಅವರ ನಡೆಗೆ ತೀವ್ರ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ.. ಅತ್ತ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೆಲವರು ಮುಂದಾಗಿದ್ದು ಬಹುಶಃ ಇಂತಹುದನ್ನೆಲ್ಲಾ ನಿಭಾಯಿಸುವ ಧೈರ್ಯ ಹಾಗೂ ಶಕ್ತಿ ರೊನಾಲ್ಡೋ ಅವರಿಗೆ ಇದ್ದೇ ಇರುತ್ತದೆ ಎಂದು ಭಾವಿಸೋಣ.. ಅವರ ಈ ನೇರವಂತಿಕೆ ಸದಾ ಹೀಗೆ ಇರಲಿ.. ಅವರ ಮೇಲಿನ ಗೌರವ ನಿಜಕ್ಕೂ ದುಪ್ಪಟ್ಟಾಯಿತೆನ್ನಬಹುದು..