ಹೆಸರು ಬದಲಿಸಿಕೊಂಡ ಬಿಗ್ ಬಾಸ್ ನಟಿ ಕೃತ್ತಿಕಾ ರವೀಂದ್ರ.. ಕಾರಣವೇನು ಗೊತ್ತಾ?

0 views

ಬಿಗ್ ಬಾಸ್ ಖ್ಯಾತಿಯ ನಟಿ ಕೃತ್ತಿಕಾ ರವೀಂದ್ರ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡು ಇನ್ನು ಮುಂದೆ ನನ್ನನ್ನು ಇದೇ ಹೆಸರಿನಿಂದ ಕರೆಯಿರಿ ಎಂದು ಮನವಿ ಮಾಡಿದ್ದಾರೆ.. ಹೌದು ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಕೃತ್ತಿಕಾ ರವೀಂದ್ರ ಮುಂದೆ ರಾಧಿಕಾ ಎಂಬ ಹೆಸರಿನಿಂದಲೇ ಮನೆಮಾತಾದರು.. ಸಾಮಾಜಿಕ ಜಾಲತಾಣಗಳು ಅಷ್ಟಾಗಿ ಬಳಕೆಯಲ್ಲಿ ಇಲ್ಲದ ಕಾಲದಲ್ಲಿಯೇ ಧಾರಾವಾಹಿಗೆ ಅಭಿಮಾನಿ ಗ್ರೂಪ್ ಗಳು ಸಹ ಹುಟ್ಟಿಕೊಂಡಿದ್ದವು..

ಇನ್ನು ರಾಧಾ ಕಲ್ಯಾಣ ಧಾರಾವಾಹಿ ಮುಗಿದ ಬಳಿಕ ಕೃತ್ತಿಕಾ ಬಿಗ್ ಬಾಸ್ ಸೀಸನ್ 5 ರಲ್ಲಿ ಪಾಲ್ಗೊಂಡು ಬಹಳಷ್ಟು ವಾರಗಳು ಉಳಿದು ಬಿಗ್ ಬಾಸ್ ಕೃತ್ತಿಕಾ ಎಂದು ಫೇಮಸ್ ಆದರು.. ಆನಂತರ ಸ್ಯಾಂಡಲ್ವುಡ್ ಗೂ ಸಹ ಪಾದಾರ್ಪಣೆ ಮಾಡಿದ ನಟಿ ಕೆಂಗುಲಾಬಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಸದ್ಯ ರಾಜ ನಿವಾಸ ಸಿನಿಮಾದಲ್ಲಿ ನಾಯಕಿ ಯಾಗಿ ಅಭಿನಯಿಸುತ್ತಿದ್ದಾರೆ.. ಈ ನಡುವೆ ಒಲವೇ ಎಂಬ ಆಲ್ಬಂ ಸಾಂಗ್ ನಲ್ಲಿಯೂ ಅಭಿನಯಿಸಿದ್ದು ಕಿರುತೆರೆಗೆ ಮರಳುವ ಬಗ್ಗೆ ಮಾತನಾಡಿದ್ದರು..

ಹೌದು “ಬಹಳಷ್ಟು ಜನರು ನನ್ನನ್ನು ಮತ್ತೆ ಕಿರುತೆರೆಗೆ ಬನ್ನಿ ಎನ್ನುತ್ತಿದ್ದಾರೆ.. ಆದರೆ ನಾನು ಕೆಲಸ ಮಾಡಿದ 2011 ರಿಂದ 2015 ರವರೆಗೆ ಇದ್ದ ಕಿರುತೆರೆಯ ಇಂಡಸ್ಟ್ರಿಯೇ ಬೇರೆ.. ಅದರೆ ಈಗ ಹೇಗೆ ವರ್ಕ್ ಆಗುತ್ತಿದೆ ಎಂಬುದು ನನಗೆ ತಿಳಿದಿಲ್ಲ.. ಜೊತೆಗೆ ಮತ್ತೊಂದು ರಾಧಿಕಾ ಆಗಲು ಇಷ್ಟವಿಲ್ಲ.. ವಿಭಿನ್ನವಾದ ಪಾತ್ರಗಳು ಬಂದರೆ ಮಾಡುವೆನೆಂದಿದ್ದರು.. ಸದ್ಯ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದೀನಿ.. ಆದಷ್ಟು ಬೇಗ ತೆರೆ ಮೇಲೆ ನನ್ನನ್ನು ನೋಡಬಹುದು ಎಂದಿದ್ದರು..

ಒಲವೇ ಆಲ್ಬಂ ಹಾಡಿನ ನಂತರ ರಾಜನಿವಾಸ ಸಿನಿಮಾದ ಅವಕಾಶವೂ ದೊರೆತ್ತಿದ್ದು ಜೀವನ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದಿದ್ದರು.. ಆದರೆ ಇದೆಲ್ಲದರ ನಡುವೆ ಇದೀಗ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.. ಹೌದು ಕೃತ್ತಿಕಾ ರವೀಂದ್ರ ಎಂದು ಇದ್ದ ಹೆಸರನ್ನು ಕೃತ್ತಿಕಾ ಎಂದು ಬದಲಿಸಿಕೊಂಡಿದ್ದು ಇಂಗ್ಲೀಷ್ ನಲ್ಲಿ Kruttikaa ಎಂದು ಬರೆದುಕೊಂಡು ಇನ್ನು ಮುಂದೆ ಇದೇ ಹೆಸರಿನಿಂದ ನನ್ನನ್ನು ಕರೆಯಿರಿ ಎಂದು ಮನವಿ ಮಾಡಿದ್ದಾರೆ.. ಸದ್ಯ ಸಿನಿಮಾ ಮಂದಿ ಹೆಸರು ಬದಲಾವಣೆ ಮಾಡಿಕೊಳ್ಳುವುದು ಹೊಸ ವಿಚಾರವೇನು ಅಲ್ಲ ದೊಡ್ಡ ದೊಡ್ಡ ನಟರಿಂದ ಹಿಡಿದು ಧಾರಾವಾಹಿ ಕಲಾವಿದರೂ ಸಹ ಹೆಸರನ್ನು ಬದಲಿಸಿಕೊಂಡಿದ್ದಾರೆ..

ಇದೀಗ ಆ ಸಾಲಿಗೆ ನಟಿ ಕೃತ್ತಿಕಾ ಕೂಡ ಸೇರಿಕೊಂಡಿದ್ದು ಬಹುಶಃ ಸಂಖ್ಯಾಶಾಸ್ತ್ರದ ಅನುಗುಣವಾಗಿ ಹೆಸರು ಬದಲಿಸಿಕೊಂಡಿರಬಹುದು ಎನ್ನಲಾಗಿದ್ದು ಮುಂಬರುವ ದಿನಗಳಲ್ಲಿ ಚಿತ್ರರಂಗದಲ್ಲಿ ಯಶಸ್ಸು ಸಿಗಲೆಂದು ಅಭಿಮಾನಿಗಳು ಹಾರೈಸಿದ್ದಾರೆ.. ಇನ್ನು ಕೆಲ ದಿನಗಳ ಹಿಂದೆಯಷ್ಟೇ ಆತುರದ ನಿರ್ಧಾರಕ್ಕೆ ಜೀವ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ನಟಿ ಜಯಶ್ರೀ ಅವರು ಕೃತ್ತಿಕಾ ಅವರ ಸ್ನೇಹಿತರು ಹೌದು.. ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ನಟಿ ಜಯಶ್ರೀ ಜೊತೆ ಸಮಯ ಕಳೆದಿದ್ದ ಕೃತ್ತಿಕಾ ಅವರು ಜಯಶ್ರೀ ಅವರು ಇಲ್ಲವಾದಾಗ ಸ್ನೇಹಿತೆಯನ್ನು ನೆನೆದು ಕಂಬನಿ ಮಿಡಿದಿದ್ದರು..