ಸಂಭಾವನೆ ವಿಚಾರವಾಗಿ ಅಸಮಾಧಾನ ಹೊರ ಹಾಕಿದ ಬಿಗ್ ಬಾಸ್ ಕೃತ್ತಿಕಾ..

0 views

ನಟನೆ ಅನ್ನೋದು ಒಂದು ಕಲೆಯಾದರೂ ಸಹ ಅದನ್ನೇ ನಂಬಿಕೊಂಡು ಕಲಾವಿದರು ಜೀವನ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.. ಮನರಂಜನೆ ನೀಡೋದರ ತಕ್ಕ ಹಾಗೆ ಅವರಿಗೂ ಸಂಭಾವನೆ ನೀಡಬೇಕಾಗುತ್ತದೆ.. ಅದರಲ್ಲಿಯೇ ಅವರ ಜೀವನ ಸಾಗಿಸಲು ಸಾಧ್ಯವಾಗುತ್ತದೆ..

ಇನ್ನು ಇದೀಗ ಸಂಭಾವನೆ ವಿಚಾರವಾಗಿ ಬಿಗ್ ಬಾಸ್ ಖ್ಯಾತಿಯ ನಟಿ ಕೃತ್ತಿಕಾ ರವೀಂದ್ರ ಅವರು ಅಸಮಾಧಾನ ಹೊರ ಹಾಕಿದ್ದಾರೆ.. ಹೌದು ಮೊನ್ನೆಮೊನ್ನೆಯಷ್ಟೇ ಒಲವೇ ಎಂಬ ವೀಡಿಯೋ ಹಾಡಿನ ಮೂಲಕ ಸುದ್ದಿಯಾಗಿದ್ದ ಕೃತ್ತಿಕಾ ರವೀಂದ್ರ ಇದೀಗ ಸಿನಿಮಾವೊಂದರ ಮಾತುಕತೆ ವೇಳೆ ನಡೆದ ಘಟನೆ ಬಗ್ಗೆ ಮಾತನಾಡಿ ಅಸಮಾಧಾನ ಹೊರ ಹಾಕಿದ್ದಾರೆ.. ಹಣದ ವಿಚಾರವಾಗಿ ಮಾತನಾಡಿ ಇದೇನಾ ಸಭ್ಯತೆ ಎಂದಿದ್ದಾರೆ.. ಅಷ್ಟಕ್ಕೂ ನಡೆದ ವಿಚಾರವೇನು.. ಇಲ್ಲಿದೆ ನೋಡಿ..

“ಇದೇನಾ ಸಭ್ಯತೆ.. ಇದೇನಾ ಸಂಸ್ಕೃತಿ.. ಇತ್ತೀಚೆಗೆ ಒಂದು ಕರೆ ಬಂದಿತ್ತು.. ಒಂದು ಸಿನೆಮಾ ಮಾತುಕತೆ ನಡೆಯಿತು.. ಅದ್ಭುತ ಕಥೆ ಅಲ್ಲದಿದ್ದರೂ ಮಾಡಲಸಾಧ್ಯ ಅನ್ನಿಸುವಂಥದ್ದಲ್ಲ.. ನಾನು ಗಮನಿಸಿರುವ ಹಾಗೆ.. ಸಂಭಾವನೆ ಕಥೆಗಿಂತ ಮುಖ್ಯ ಎಂಬುವುದು ವಿಷಾದಕರ ಸಂಗತಿ.. ಇಲ್ಲಿಯೂ ಸಂಭಾವನೆಯ ವಿಷಯ ಬಂದಾಗ ನಾನು ಸುತ್ತಿ ಬಳಸಿ ಮಾತನಾಡದೇ ನೇರವಾಗಿ ಇಷ್ಟು ಕೊಟ್ಟರೆ ಸಂತೋಷ.. ಆಗಲಿಲ್ಲ ಅಂದ್ರೆ ನಿಮ್ಮ ಬಡ್ಜೆಟ್ ಹೇಳಿ.. ಇಬ್ಬರಿಗೂ ಹೊಂದಿಕೆಯಾದಲ್ಲಿ ಮುಂದುವರಿಯೋಣ ಅಂದೆ.. ಎರಡು ದಿನ ಬಿಟ್ಟು ಮತ್ತೆ ಕರೆ ಬಂತು..

ಅವರು ಹೇಳಿದ ಸಂಭಾವನೆ ನನಗೆ ಹೊಂದಿಕೆಯಾಗದಿದ್ದರಿಂದ ಕ್ಷಮಿಸಿ.. ಇಷ್ಟು ಸಂಭಾವನೆಗೆ ಕೆಲಸ ಮಾಡೋದಕ್ಕೆ ನಂಗೆ ಕಷ್ಟ ಆಗತ್ತೆ.. ಅಂದೆ.. ವಿಷಯ ಇದಲ್ಲ.. ನನ್ನ ನೇರನುಡಿಯಿಂದ ಮುಖಭಂಗಗೊಂಡ ಆಸಾಮಿ ಮಾತನ್ನ ಅಷ್ಟಕ್ಕೇ ನಿಲ್ಲಿಸದೇ ನಾನು ನನ್ನ ಸಿನೆಮಾಗಳಿಗೆ ಬಾಂಬೆಯಿಂದಲೇ ಹೀರೋಯಿನ್ ಗಳನ್ನ ಕರೆಸೋದು.. ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡ್ತಾರೆ.. ಕನ್ನಡದವರನ್ನ ನನ್ನ ಸಿನೆಮಾಗಳಿಗೆ ತಗೊಳಲ್ಲ ಅಂದ..
ನಾನು “ಒಹ್ ತಾವು ಕನ್ನಡದವರನ್ನೇ ತಗೋಳಲ್ವ.. ಹೆಂಗೆ ಸರ್.. ಕನ್ನಡದವರಾಗಿ ಕನ್ನಡದವರಿಗೆ ಅವಕಾಶಗಳನ್ನ ಕೊಡಲ್ವಾ.. ಅಂದೆ..


ಆಸಾಮಿ ಅಯ್ಯೋ ಹಾಗಲ್ಲ ಮೇಡಂ.. ಅಷ್ಟು ಕಡಿಮೆಗೆ ಅಲ್ಲಿಂದ ಬಂದು ಕೆಲಸ ಮಾಡಿ ಹೋಗ್ತಾರೆ.. ಅಂದ. ಸೋ ಬೇಸಿಕಲಿ ಬಾಂಬೆ ಇಂದ ನಟಿಯರನ್ನ ಕರೆಸೋದು ಇಲ್ಲಿಯವರನ್ನ ಗಣನೆಗೆ ತಗೊಳ್ದೆ ಇರೋದು ಇದೇಲ್ಲಕ್ಕೂ ಸಂಭಾವನೆ ಕಾರಣ.. ನಾನು ತುಂಬಾ ಕಡಿಮೆ ಸಂಭಾವನೆಗೆ ಕೆಲಸ ಮಾಡಿದೀನಿ ಗೆಳೆಯರೇ.. ಸಂಭಾವನೆನೇ ತಗೊಳ್ದೆ ಕೂಡ ಮಾಡಿದೀನಿ.. ಇನ್ನು ವಿಪರ್ಯಾಸ ಅಂದ್ರೆ ಸಂಭಾವನೆ ಸಿಗದೇ ಮೋಸ ಕೂಡ ಹೋಗಿದೀನಿ.. ಇವೆಲ್ಲಾ ನಂಗೆ ಒಳ್ಳೆ ಅನುಭವಗಳನ್ನ ಕೊಟ್ಟಿದೆ. ಕೊಡ್ತಾ ಇದೆ.. ಆದ್ರೆ ಒಂದು ಬೇಡಿಕೆ.. ಕಡಿಮೆ ಸಂಭಾವನೆಗೆ ಬರೋ ಕನ್ನಡದವರನ್ನೇ ಬೆಳೆಸಿ..

ಅವಕಾಶಗಳನ್ನ ಕೊಡಿ.. ಬಾಂಬೆ.. ಅಲ್ಲಿ ಇಲ್ಲಿ ಇರೋ ಹುಡುಗಿಯರನ್ನೇ ನೀವಾಳಿಸಿ ಬಿಸಾಕೋ ಅಂಥ ಅದ್ಭುತ ಪ್ರತಿಭೆಗಳು ನಮ್ಮ ಕನ್ನಡದಲ್ಲಿದ್ದಾರೆ.. ಒಂದು ಚಿಕ್ಕ ಅವಕಾಶ ಬಹುಷಃ ಅವರ ಜೀವನವನ್ನೇ ಬದಲಾಯಿಸಬಹುದು. ಅನ್ಯಾಯ ಮಾಡಬೇಡಿ ಅಷ್ಟೇ.. ನನಗೂ ಕೂಡ.. ಕೃತ್ತಿಕಾ ರವೀಂದ್ರ..” ಎಂದು ಬರೆದು ಪೋಸ್ಟ್ ಮಾಡಿದ್ದು ಸಂಭಾವನೆ ಕಾರಣಕ್ಕೆ ಕನ್ನಡದ ಕಲಾವಿದರಿಗೆ ಅವಕಾಶ ಸಿಗದಂತೆ ಮಾಡಬೇಡಿ ಎಂದಿದ್ದಾರೆ..