ತನ್ನನ್ನು ತಾನೇ ಮದುವೆಯಾಗುತ್ತಿರುವ 23 ವರ್ಷದ ಯುವತಿ.. ಗೋವಾದಲ್ಲಿ ನಡೀತಿದೆ ಹನಿಮೂನ್.. ಇದೆಂತಾ ಕರ್ಮ ಗುರು ಎಂದ ಜನ..

0 views

ಕೆಲವರು ಎಷ್ಟು ವಿಚಿತ್ರವೆಂದರೆ ಸಮಾಜ ನಡೆದುಕೊಂಡು ಹೋಗುತ್ತಿರುವ ರೀತಿಗೆ ಸಂಪೂರ್ಣವಾಗಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಅದರಿಂದಲೇ ಸಂತೋಷ ಪಡುವರು.. ಅದೇ ರೀತಿ ಇಲ್ಲೊಬ್ಬ ಹೆಣ್ಣು ಮಗಳು ಮದುವೆ ವಿಚಾರದಲ್ಲಿ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.. ಹೌದು ಇಪ್ಪತ್ತ ಮೂರು ವರ್ಷದ ಈ ಯುವತಿ ತನ್ನನ್ನು ತಾನೇ ಮದುವೆಯಾಗುತ್ತಿದ್ದು ಗೋವಾದಲ್ಲಿ ಅದ್ಧೂರಿಯಾಗಿ ಹನಿಮೂನ್ ಬೇರೆ ಆಚರಿಸಿಕೊಳ್ಳುತ್ತಿದ್ದಾಳೆ..ಹೌದು ಮದುವೆ ಎಂದರೆ ಅದು ಎರಡು ಜೀವಗಳ ಬೆಸೆಯುವ ಸುಂದರ ಸಂಬಂಧ.. ಎರಡು ಕುಟುಂಬಗಳನ್ನು ಒಂದು ಮಾಡುವ ಸುಂದರ ಪ್ರಕ್ರಿಯೆ.. ಎರಡು ಜೀವಗಳು ಒಂದಾಗಿ ಮುಂದಿನ ಭವಿಷ್ಯ ಕಟ್ಟಿಕೊಂಡು ಮುಂದಿನ ಪೀಳಿಗೆ ಬೆಳೆಸಿ ಜೀವನವನ್ನು ಸಾರ್ಥಕಮಾಡಿಕೊಳ್ಳುವರು..

ಹೀಗೆ ಮದುವೆ ಎಂದರೆ ಸಾಕಷ್ಟು ವಿಚಾರಗಳಿವೆ.. ಮೊದಲೆಲ್ಲಾ ಹಿರಿಯರು ವರನಿಗೆ ವಧುವನ್ನು.. ವಧುವಿಗೆ ವರನನ್ನು ನೋಡಿ ಮಾಡಿ ಮದುವೆ ಮಾಡುತ್ತಿದ್ದರು.. ನಂತರದ ದಿನಗಳಲ್ಲಿ ಪ್ರೀತಿಸಿ ಮದುವೆಯಾಗುವ ರೂಡಿಯೂ ಬಂತು.. ಇತ್ತೀಚಿನ ದಿನಗಳಲ್ಲಿ ಪ್ರೀತಿಸಿದ ಮಕ್ಕಳು ಹೇಗಿದ್ದರೂ ನಮ್ಮ ಮಾತು ಕೇಳೋದಿಲ್ಲ ಎಂದು ಲವ್ ಕಂ ಅವೇಂಜ್ಡ್‌ ಮ್ಯಾರೇಜ್ ಬಂತು.. ಆದರೆ ಅದೆಲ್ಲವೂ ಹುಡುಗ ಹುಡುಗಿ ನಡುವೆ ಆಗುವ ಮದುವೆಯೇ ಆಗಿತ್ತು.. ಇನ್ನು ತೀರಾ ಇತ್ತೀಚೆಗೆ ಹುಡುಗ ಹುಡುಗನನ್ನೇ ಮದುವೆ ಆಗೋದು.. ಹುಡುಗಿ ಹುಡುಗಿಯನ್ನೇ ಮದುವೆ ಆಗುವ ಹೊಸ ಅಭ್ಯಾಸವೂ ಬಂತು.. ನಮ್ಮ ಮಣ್ಣಿಗೆ ಇದು ವಿಚಿತ್ರವಾದರೂ ಸಹ ಅಂತಹ ಕೆಲ ಮದುವೆಗಳನ್ನು ಅದ್ಧೂರಿಯಾಗಿ ಮನೆಯವರೇ ನಿಂತು ಮಾಡಿದ್ದು ಆಶ್ವರ್ಯವನ್ನೂ ಸಹ ಉಂಟು ಮಾಡಿತ್ತು.. ಆದರೆ ಈಗ ಮಾತ್ರ ಇಲ್ಲೊಬ್ಬ ಯುವತಿ ತನ್ನ ಜೊತೆಯೇ ತನ್ನ ಮದುವೆ ಮಾಡಿಕೊಳ್ಳುತ್ತಿದ್ದು ದೊಡ್ಡ ಸುದ್ದಿಯಾಗಿದೆ.

ಹೌದು ಈಕೆಯ ಹೆಸರು ಕ್ಷಮಾ.. ಗುಜರಾತ್ ನ ವಡೋದರದ ನಿವಾಸಿ.. ಈಕೆ ವಡೋದರದಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ.. ಈಕೆಯೇ ತನ್ನನ್ನು ತಾನೇ ಮದುವೆಯಾಗುವ ನಿರ್ಧಾರ ಮಾಡಿರುವ ಹೆಣ್ಣು ಮಗಳು.. ಈಕೆ ಇದೇ ಜೂನ್ ಹನ್ನೊಂದರಂದು ಶಾಸ್ತ್ರೋಕ್ತವಾಗಿ ಎಲ್ಲಾ ಶಾಸ್ತ್ರಗಳನ್ನು ನೆರವೇರಿಸಿಕೊಂಡು ಅದ್ಧೂರಿಯಾಗಿ ತನ್ನನ್ನು ತಾನೇ ಮದುವೆ ಮಾಡಿಕೊಳ್ಳುತ್ತಿದ್ದಾಳೆ..

ಅಷ್ಟೇ ಅಲ್ಲದೇ ಮದುವೆ ಮುಗಿದ ಬಳಿಕ ಗೋವಾಗೆ ಹನಿಮೂನ್ ಗೂ ಸಹ ಹೋಗುತ್ತಿದ್ದಾಳೆ.. ಇನ್ನು ಈ ಬಗ್ಗೆ ಮಾದ್ಯಮದ ಜೊತೆ ಮಾತನಾಡಿರುವ ಕ್ಷಮಾ “ಇದು ಭಾರತದ ಮೊದಲ ಏಕವ್ಯಕ್ತಿ ವಿವಾಹವಾಗಲಿದೆ. ಭಾರತದಲ್ಲಿ ಇಲ್ಲಿಯವರೆಗೂ ಈ ರೀತಿ ಯಾರಾದರೂ ಮದುವೆಯಾಗಿದ್ದಾರಾ ಎಂದು ಪರಿಶೀಲಿಸಿದೆ. ಆದರೆ ಯಾರು ಈ ರೀತಿ ವಿವಾಹವಾದವರು ಸಿಗಲಿಲ್ಲ. ಬಹುಶಃ ಈ ರೀತಿ ಮದುವೆಯಾಗುತ್ತಿರುವ ಮೊದಲ ವ್ಯಕ್ತಿ ನಾನಾಗೀರಬಹುದು. ನಾನು ಎಂದಿಗೂ ಮದುವೆಯಾಗುವುದಕ್ಕೆ ಬಯಸಿಲ್ಲ. ಆದರ ವಧು ಆಗಬೇಕೆಂಬ ಆಸೆ ಇತ್ತು. ಹೀಗಾಗಿ ನನ್ನನ್ನು ನಾನೇ ಮದುವೆಯಾಗಲು ನಿರ್ಧರಿಸಿದೆ.. ಸ್ವಯಂ-ವಿವಾಹವು ನಿಮಗೆ ನೀವೇ ಮಾಡಿಕೊಳ್ಳುವ ಕಮಿಟ್‍ಮೆಂಟ್ ಆಗಿದೆ ಮತ್ತು ನಿಮಗೆ ನೀವೇ ನೀಡುವ ಅಪಾರವಾದ ಪ್ರೀತಿಯುಳ್ಳದಾಗಿದೆ. ಇದು ಸ್ವಯಂ ಸ್ವೀಕಾರ ಕ್ರಿಯೆಯೂ ಆಗಿದೆ. ಜನರು ಪ್ರೀತಿ ಮಾಡುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ಈ ಮದುವೆಯಾಗುತ್ತಿದ್ದೇನೆ.. ಎಂದಿದ್ದಾರೆ..

ಅಷ್ಟೇ ಅಲ್ಲದೇ ಈ‌ಮದುವೆಗೆ ಕ್ಷಮಾ ಅವರ ಅಪ್ಪ ಅಮ್ಮನೂ ಸಹ ಒಪ್ಪಿಗೆ ಕೊಟ್ಟು ಮದುವೆಯ ಸಿದ್ಧತೆ ಮಾಡುತ್ತಿದ್ದಾರಂತೆ.. ಗೋತ್ರಿಯ ದೇವಸ್ಥಾನದಲ್ಲಿ ಮದುವೆ ನಡೆಯಲಿದ್ದು.. ನಂತರ ಎರಡು ವಾರಗಳ ಕಾಲ ಗೋವಾಗೆ ಹನಿಮೂನ್ ಗಾಗಿ ಹೋಗುತ್ತಿದ್ದಾರೆ.. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ರೀತಿಗ ಅಭಿಪ್ರಾಯಗಳು ಕೇಳಿ ಬರುತ್ತಿದೆ..

ಸಂಗಾತಿ ಸಿಗದೇ ಸಿಂಗಲ್ ಆಗಿಯೇ ಜೀವನ ಕಳೆಯೋದಕ್ಕಿಂತ ಇದು ಬೆಸ್ಟ್ ಎಂದು ಕೆಲವರು ಟ್ರೋಲ್ ಮಾಡಿದ್ದೂ ಉಂಟು.. ಇನ್ನು ಮತ್ತೆ ಕೆಲವರು ಮದುವೆ ಅನ್ನೋದು ಒಬ್ಬರಿಗೆ ಒಬ್ಬರು ಜೊತೆಯಾಗಲಿ ಅಂತ ಮಾಡಿರುವ ಆಚರಣೆ.. ಆದರೆ ಇಲ್ಲಿ ಒಬ್ಬಂಟಿಯಾಗಿಯೇ ಜೀವನ ಸಾಗಿಸಲು ಮದುವೆ ಏಕೆ ಬೇಕಿತ್ತು ಎಂದಿದ್ದಾರೆ.. ಒಟ್ಟಿನಲ್ಲಿ ಕ್ಷಮಾ ತನ್ನನ್ನು ತಾನು ಮದುವೆಯಾಗುವ ನಿರ್ಧಾರ ಮಾಡಿದ್ದು ಎಲ್ಲಾದಕ್ಕೂ ಭರ್ಜರಿ ತಯಾರಿ ನಡೆಯುತ್ತಿದೆ..