ಬಸ್ ಸಂಚಾರ ಬಂದ್ ಆಗಿದ್ದಕ್ಕೆ ಹತ್ತು ಲಕ್ಷ ಪರಿಹಾರ ಕೇಳಿ ಶಿಖಾ ಹಾಗೂ ಕೋಡಿಹಳ್ಳಿಗೆ ಲೀಗಲ್ ನೋಟಿಸ್ ಕೊಟ್ಟ ವಿದ್ಯಾರ್ಥಿನಿ.. ಆ ವಿದ್ಯಾರ್ಥಿನಿ ನಿಜಕ್ಕೂ ಯಾರು ಗೊತ್ತಾ? ಇದು ಧೈರ್ಯ ಅಂದರೆ..

0 views

ರಾಜ್ಯದಲ್ಲಿ ಸಾರಿಗೆ ನೌಕರರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.. ಅತ್ತ ಖಾಸಗಿ ಸಾರಿಗೆ ರಸ್ತೆಗೆ ಇಳಿದಿದ್ದರೂ ಸಹ ಸಾರ್ವಜನಿಕರು ಸುಸಜ್ಜಿತ ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ.. ಇದರ ನಡುವೆ ದುಬಾರಿ ಹಣ ಕೊಟ್ಟು ಆಟೋ ಕ್ಯಾಬ್ ಗಳಲ್ಲಿ ಹೋಗಲಾಗದೆ ಜನರು ನಿಂತಲ್ಲೇ ನಿಂತು ಯೋಚಿಸುವಂತಾಗಿದೆ.. ಇನ್ನೂ ಈ ನಡುವೆ ವಿದ್ಯಾರ್ಥಿನಿಯೊಬ್ಬಳಿ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಸಾರಿಗೆ ಸಂಸ್ಥೆಯ ಅಧಿಕಾರಿ ಶಿಖಾ ಅವರಿಗೆ ನೋಟಿಸ್ ನೀಡಿದ್ದು ಹತ್ತು ಲಕ್ಷ ಹಣಕ್ಕಾಗಿ ನೋಟಿಸ್ ನಲ್ಲಿ ತಿಳಿಸಲಾಗಿದೆ..

ಹೌದು ಧೈರ್ಯ ಎಂದರೆ ಇದು ಎಂದು ವಿದ್ಯಾರ್ಥಿನಿಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.. ಅಷ್ಟಕ್ಕೂ ಈ ವಿದ್ಯಾರ್ಥಿನಿ ಯಾರು.. ಯಾತಕ್ಕಾಗಿ ನೋಟಿಸ್ ಕೊಟ್ಟಳು ಇಲ್ಲಿದೆ ನೋಡಿ.. ಹೌದು ಕಳೆದ ಮೂರು ದಿನಗಳಿಂದ ಆರನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡುವಂತೆ ಆಗ್ರಹಿಸಿ ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ.. ಮೂರು ದಿನಗಳಿಂದ ಸರ್ಕಾರಿ ಸಾರಿಗಗಳು ಯಾವುದೂ ರಸ್ತೆಗಿಳಿದಿಲ್ಲ.. ಇತ್ತ ವಿದ್ಯಾರ್ಥಿಗಳು ಖಾಸಗಿ ಬಸ್ ಗಳಲ್ಲಿ ಹಣಕೊಟ್ಟು ಸಂಚಾರ ಮಾಡುವಂತಾಗಿದೆ.. ಮುಷ್ಕರದ ಲಾಭ ಪಡೆದ ಕೆಲ ಅಟೋ ಹಾಗೂ ಖಾಸಗಿ ಬಸ್ ಗಳಲ್ಲಿ ದುಬಾರಿ ಹಣ ಕೊಟ್ಟು ಪ್ರಯಾಣ ಮಾಡಬೇಕಿದೆ..

ಇತ್ತ ಪಾಸ್ ಹೊಂದಿದ್ದರೂ ಸರ್ಕಾರ ಸೇಲಭ್ಯ ಒದಗಿಸುತ್ತಿಲ್ಲ.. ಇದು ಸೇವಾ ನ್ಯೂನ್ಯತೆ ಎಂದು ಹತ್ತು ಲಕ್ಷ ಹಣಕ್ಕೆ ಬಿಎಂಟಿಸಿ ಎಂಡಿ ಶಿಖಾ ಹಾಗೂ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ನೋಟಿಸ್ ನೀಡಿದ್ದಾಳೆ.. ಆ ವಿದ್ಯಾರ್ಥಿನಿ ಮತ್ಯಾರೂ ಅಲ್ಲ.. ಬೆಂಗಳೂರಿನ ಕೆಂಗೇರಿ ಜೆಎಸ್​ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮೊದಲ ಸೆಮಿಸ್ಟರ್ ಓದುತ್ತಿರುವ ತುಮಕೂರಿನ ಪಾವನ.. ಹೌದು ಪಾವನ ಎಂಬ ವಿದ್ಯಾರ್ಥಿನಿ ಈ ಇಬ್ಬರಿಗೂ ಲೀಗಲ್ ಆಗಿ ನೋಟಿಸ್ ಕಳಿಸಿದ್ದಾರೆ..

ಪಾವನ.. ರಮೇಶ್ ನಾಯಕ್ ಎಂಬ ವಕೀಲರ ಮೂಲಕ ಕೋಡಿಹಳ್ಳಿ ಚಂದ್ರಶೇಖರ್‌ ಹಾಗೂ ಬಿಎಂಟಿಸಿ ಎಂಡಿಗೆ ಪರಿಹಾರ ಕೇಳಿ ನೋಟಿಸ್ ನೀಡಿದ್ದಾರೆ.. ನಾವು ಬಿಎಂಟಿಸಿ ವಾರ್ಷಿಕ ಪಾಸ್ ಖರೀದಿಸಿದ್ದೇವೆ.. ಆದರೆ ನಮ್ಮ ಬಳಿ ಪಾಸ್ ಇದ್ದರೂ ಹಣ ಕೊಟ್ಟು ಸಂಚಾರ ಮಾಡಬೇಕಾಗುತ್ತಿದೆ.. 2 ದಿನದಿಂದ ಹೆಚ್ಚುವರಿ ಹಣ ನೀಡಿ ಬಸ್‌ನಲ್ಲಿ ಸಂಚರಿಸುತ್ತಿದ್ದೇವೆ.. ಪಾಸ್ ಹೊಂದಿರುವರಿಗೆ ಬಸ್ ಸೌಲಭ್ಯ ಒದಗಿಸಿಲ್ಲ.. ಇದು ಸೇವಾ ನ್ಯೂನತೆ, ಅನುಚಿತ ವ್ಯಾಪಾರ ಪದ್ಧತಿ.. ಹೀಗಾಗಿ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ವಿದ್ಯಾರ್ಥಿನಿ ಪಾವನ ನೋಟಿಸ್ ನೀಡಿದ್ದಾಳೆ..

ಅತ್ತ ಅದಾಗಲೇ ಯಡಿಯೂರಪ್ಪನವರು ಆರನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು ಸಾರಿಗೆ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ.. ಹೌದು ಈ ಬಗ್ಗೆ ಮಾತನಾಡಿರುವ ಯಡಿಯೂರಪ್ಪನವರು “ಯಾರ ಮಾತನ್ನೋ ಕೇಳಿ ನೀವು ಬಲಿಯಾಗಬೇಡಿ.. ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಆರನೇ ವೇತನದ ಆಯೋಗದ ಶಿಫಾರಸ್ಸನ್ನು ಜಾರಿ ಮಾಡಲಾಗುವುದಿಲ್ಲ.. ಈಗಾಗಲೇ ಸಾರಿಗೆ ನೌಕರರ ಆರು ಮನವಿಗೆ ಒಪ್ಪಿಗೆ ಸೂಚಿಸಲಾಗಿದೆ.. ಎಲ್ಲರೂ ಈ ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ” ಎಂದು ತಿಳಿಸಿದ್ದಾರೆ.. ಇನ್ನು ಕೆಲ ಕಡೆಗಳಲ್ಲಿ ಕೆ ಎಸ್ ಆರ್ ಟಿ ಸಿ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು ಇಂತಹ ಕೊರೊನಾ ಕಷ್ಟದ ಸಮಯದಲ್ಲಿ ಪ್ರತಿಭಟನೆಯೆಲ್ಲಾ ಬೇಕಾ? ಮೂರು ತಿಂಗಳು ಕೆಲಸಕ್ಕೆ ಹೋಗದಿದ್ದರೂ ಸಹ ಸಂಬಳ ನೀಡಿದ್ದಾರೆ.. ಆ ನಿಯತ್ತು ಇದ್ದರೆ ಈಗ ನಾವು ಕೆಲಸ ಮಾಡಬೇಕು ಎಂದಿದ್ದಾರೆ.. ಒಟ್ಟಿನಲ್ಲಿ ಇಲ್ಲಿ ನಿಜವಾಗಿ ನಲುಗುತ್ತಿರುವುದು ಮಾತ್ರ ಸಾರ್ವಜನಿಕರು ಎನ್ನುವಂತಾಗಿದೆ..