ಕೆಜಿಎಫ್ 1 ನಲ್ಲಿದ್ದ ನಾಲ್ವರು ಕಲಾವಿದರು ಕೆಜಿಎಫ್ ಭಾಗ ಎರಡರಲ್ಲಿ ಇಲ್ಲ.. ನಿಜವಾದ ಕಾರಣವೇನು‌ ಗೊತ್ತಾ..

0 views

ಕೆಜಿಎಫ್ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯ ತಾಕತ್ತು ಏನು ಎಂದು ಭಾರತ ಚಿತ್ರರಂಗಕ್ಕೆ ತೋರಿದ ಸಿನಿಮಾ ಎಂದರೆ ತಪ್ಪಾಗಲಾರದು.. ಅದರಲ್ಲಿಯೂ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆ ಗಳಿದ್ದವು‌.. ಅಷ್ಟೇ ಕುತೂಹಲವನ್ನು ಹುಟ್ಟುಹಾಕಿದ್ದ ಸಿನಿಮಾ ಇದಾಗಿದ್ದು ಈ ಸಿನಿಮಾಗಾಗಿ ಕಳೆದ ಮೂರು ವರ್ಷಗಳಿಂದ ಅಷ್ಟೇ ನಿರೀಕ್ಷೆ ಇಟ್ಟುಕೊಂಡು ಜನರು ಕಾದಿದ್ದಾರೆಂದರೆ ನಿಜಕ್ಕೂ ಸಂಪೂರ್ಣ ಚಿತ್ರ ತಂಡಕ್ಕೆ ಹ್ಯಾಟ್ಸ್ ಆಫ್ ಹೇಳಬೇಕು..

ಇನ್ನು ಮೊದಲ ಭಾಗದಲ್ಲಿ ಯಶ್ ಅವರು ಮಾತ್ರವಲ್ಲ ಸಾಕಷ್ಟು ಕಲಾವಿದರು ಜನರ ಮನಸಿಗೆ ಬಹಳ ಹತ್ತಿರವಾಗಿದ್ದರು.. ಇನ್ನೂ ಹೇಳಬೇಕೆಂದರೆ ಪ್ರತಿಯೊಂದು ಪಾತ್ರವೂ ಸಹ ಜನರ ಮನಸ್ಸಿನಲ್ಲಿ ಅಚ್ಚಿಳಿದಿತ್ತು.. ಮಾಳವಿಕಾ ಅವರ ಪಾತ್ರ ನಾಗಾಭರಣ ಅವರು ಅನಂತ್ ನಾಗ್ ಅವರು ಮುಖ್ಯವಾಗಿ ಯಶ್ ತಾಯಿಯ ಪಾತ್ರ.. ಬಾಲ್ಯದ ಯಶ್ ಪಾತ್ರ.. ನರಾಚಿಯಲ್ಲಿ ಕತೆಗಳ ಮೂಲಕ ಎಲ್ಲರಿಗೂ ಆತ್ಮ ವಿಶ್ವಾಸ ತುಂಬುತ್ತಿದ್ದ ಆ ಹುಚ್ಚನ ಪಾತ್ರ.. ಮುದುಕನ ಪಾತ್ರ.. ಅಲ್ಲಿ ತನ್ನ ಗರ್ಭಿಣಿ ಹೆಂಡತಿಯನ್ನು ಉಳಿಸುವ ಸಲುವಾಗಿ ಜೀವ ಕಳೆದುಕೊಂಡ ವ್ಯಕ್ತಿಯ ಪಾತ್ರ.. ಹೀಗೆ ಸಾಕಷ್ಟು‌ ಕಲಾವಿದರು ನಿಜಕ್ಕೂ ಆ ಆ ಪಾತ್ರಗಳಿಗೆ ಜೀವ ತುಂಬಿದ್ದರು ಎಂದರೆ ತಪ್ಪಾಗಲಾರದು..

ಇನ್ನು ಅಂತಹ ಕೆಲ ಪಾತ್ರಗಳು ಈಗ ಚಾಪ್ಟರ್ 2 ನಲ್ಲಿ ಇಲ್ಲದಿರುವುದು ನಿಜಕ್ಕೂ ಬೇಸರದ ಸಂಗತಿಯೂ ಹೌದು.. ಹೌದು ಕೆಜಿಎಫ್ ಒಂದರಲ್ಲಿ ಇದ್ದ ಪ್ರಮುಖವಾದ ನಾಲ್ಕು ಪಾತ್ರಗಳು ಕೆಜಿಎಫ್ ಎರಡರಲ್ಲಿ ಇಲ್ಲ ಎಂಬುದು ಎದ್ದು ಕಾಣುತ್ತಿದೆ.. ಅದರಲ್ಲಿ ಮುಖ್ಯವಾಗಿ ಮೊದಲಿಗೆ ಅನಂತ್ ನಾಗ್ ಅವರ ಪಾತ್ರ.. ಹೌದು ಅನಂತ್ ನಾಗ್ ಅವರು ಈ ಸಿನಿಮಾದಲ್ಲಿ ಇಲ್ಲ ಎಂದು ಈ ಮೊದಲೇ ಕೆಜಿಎಫ್ ಎರಡು ಸಿನಿಮಾ ಚಿತ್ರೀಕರಣ‌ ನಡೆಯುವ ಸಮಯದಲ್ಲಿಯೇ ತಿಳಿದಿತ್ತು.. ಆದರೆ ಕಾರಣ ತಿಳಿದಿರಲಿಲ್ಲ.. ಇದಕ್ಕೆ ಕಾರಣ ಖುದ್ದು ಅನಂತ್ ನಾಗ್ ಅವರೇ ಸಿನಿಮಾದಿಂದ ಹೊರಗುಳಿದಿದ್ದರು ಎಂದು ನಿರ್ದೇಶಕ‌ ಪ್ರಶಾಂತ್ ನೀಲ್ ಅವರೇ ತಿಳಿಸಿದ್ದಾರೆ..

ಇನ್ನು ಅನಂತ್ ನಾಗ್ ಅವರನ್ನು ಹೊರತು ಪಡಿಸಿದರೆ.. ಸಿನಿಮಾದಲ್ಲಿ ನರಾಚಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮುಖ ಕೆಲಸಗಾರರಲ್ಲಿ ಒಬ್ಬರಾಗಿದ್ದ ಬಿ ಸುರೇಶ್ ಅವರು ವಿಠಲ್ ಎಂಬ ಪಾತ್ರವನ್ನು ನಿರ್ವಹಿಸಿದ್ದರು.. ಅಲ್ಲಿನ ಕೆಲಸಗಾರರಿಗೆ ಸಹಾಯ ಮಾಡುತ್ತಾ ಅಲ್ಲಿನ ಜನರ ಮುಂದಾಳತ್ವವನ್ನು ವಹಿಸಿದ್ದರು.. ಇವರ ಪಾತ್ರವೂ ಬಹಳ ಗಮನ ಸೆಳೆದಿತ್ತು.. ಆದರೆ ಎರಡನೇ ಭಾಗದಲ್ಲಿ ಬಿ ಸುರೇಶ್ ಅವರ ಪಾತ್ರ ಇಲ್ಲದಿರುವುದು ಎದ್ದು ಕಾಣುತ್ತದೆ.. ಅವರ ಪಾತ್ರವನ್ನು ಇಲ್ಲಿ ಮುಂದುವರೆಸಿಲ್ಲ.. ಜೊತೆಗೆ ಆ ಪಾತ್ರಕ್ಕೆ ಏನಾಯಿತು ಎಂಬ ಕಾರಣವನ್ನು ಸಹ ನೀಡಿಲ್ಲ.. ಇನ್ನು ಬಿ ಸುರೇಶ್ ಅವರ ಜೊತೆಗೇ ಮತ್ತೊಬ್ಬ ವ್ಯಕ್ತಿ ಕೂಡ ಇದ್ದರು.. ನಿರ್ದೇಶಕ ಟಿ ಎನ್ ಸೀತಾರಾಮ್ ಅವರ ಅಣ್ಣ ಟಿ ಎನ್ ನರಸಿಂಹ ಮೂರ್ತಿ ಅವರ ಪಾತ್ರವನ್ನು ಮುಂದುವರೆಸಿಕೊಂಡಿದ್ದು ಅವರ ಪಾತ್ರಕ್ಕೆ ಬಹಳ ಪ್ರಾಮುಖ್ಯತೆಯನ್ನೂ ಸಹ ನೀಡಲಾಗಿದೆ..

ಇನ್ನು ಕೆಜಿಎಫ್ ಒಂದರಲ್ಲಿ ಅಂತ್ಯ ಕಂಡ ಗರುಡನ ಮನೆಯಲ್ಲಿಯೇ ಇದ್ದ ಆತನ ಸಹಾಯಕ ಕುಲಕರ್ಣಿ ಪಾತ್ರ ನಿರ್ವಹಿಸಿದ್ದವರು ಅಶ್ವತ್ಥ್ ನೀನಾಸಂ.. ಹೌದು ಗರುಡನ ಮನೆಯಲ್ಲಿಯೇ ಇದ್ದುಕೊಂಡು ಆತನನ್ನೇ ಮುಗಿಸಲು ವಿರಾಟ್ ಜೊತೆ ಸೇರಿಕೊಂಡು ರಾಕಿ ಗೆ ಸಹಾಯ ಮಾಡಿದ್ದವರು ಕುಲಕರ್ಣಿ.. ಕೆಜಿಎಫ್ ಒಂದರ ಕೊನೆಯವರೆಗೂ ಆ ಪಾತ್ರಗಳು ಇದ್ದವು.. ಆದರೆ ಎರಡರಲ್ಲಿ ಕುಲಕರ್ಣಿ ಪಾತ್ರವನ್ನೂ ಗರುಡನ‌ ತಮ್ಮ ವಿರಾಟ್ ಪಾತ್ರವನ್ನೂ ಸಹ ಮುಂದುವರೆಸಿಲ್ಲ.. ಇದಕ್ಕೆ ಕಾರಣ ನೀಡಿರುವ ನಿರ್ದೇಶಕರು ಅವರಿಬ್ಬರನ್ನು ಮೊದಲೇ ರಾಕಿ ಬಾಯ್ ಕೊಂದು ಬಿಟ್ಟಿರುವುದಾಗಿ ತಿಳಿಸಿದ್ದಾರೆ..

ಇನ್ನುಳಿದಂತೆ ಮೊದಲ ಸಿನಿಮಾದಲ್ಲಿ ಗಮನ ಸೆಳೆದಿದ್ದ ಹುಚ್ಚನ ಪಾತ್ರವೂ ಮುಂದುವರೆದಿಲ್ಲ.. ಆತನ ಡೈಲಾಗ್ ಡೆಲಿವರಿ ನಿಜಕ್ಕೂ ಮೈ ರೋಮಾಂಚನ ಗೊಳಿಸಿತ್ತು.. ಆದರೆ ಎರಡನೇ ಭಾಗದಲ್ಲಿ ಮುಂದುವರೆಯದೇ ಇರಲು ಬೇರೆ ಕಾರಣವೇ ಇದೆ.. ಹೌದು ಆ ಪಾತ್ರ ಮಾಡಿದ್ದ ಕಲಾವಿದ ಕೆಜಿಎಫ್ 1 ಸಿನಿಮಾ ಬಿಡುಗಡೆಯಾಗುವ ಮುನ್ನವೇ ಜಾಂಡೀಸ್ ಕಾಯಿಲೆಗೆ ತುತ್ತಾಗಿ ಕೊನೆಯುಸಿರೆಳೆದು ಬಿಟ್ಟಿದ್ದರು.. ಆ ಕಾರಣಕ್ಕೆ ಆ ಪಾತ್ರವನ್ನು ಮುಂದುವರೆಸಿಲ್ಲ.. ಒಟ್ಟಿನಲ್ಲಿ ಕೆಜಿಎಫ್ ಸಿನಿಮಾ ಕೇವಲ ಸಿನಿಮಾ ಎನಿಸದೆ ನಿಜವಾಗಿ ನಡೆದ ಕತೆಯಂತೆ ನಮ್ಮ‌ ಮುಂದೆ ಬರುತ್ತಿದ್ದು ಒಂದೊಂದು ಪಾತ್ರವೂ ಸಹ ಕಾಡುವಂತೆ ಮಾಡಿದೆ.. ಸಧ್ಯ ಕೆಜಿಎಫ್ 2 ಸಕ್ಸಸ್ ನಲ್ಲಿರುವ ತಂಡ ಇನ್ನು ಕೆಲ ತಿಂಗಳಲ್ಲಿ ಕೆಜಿಎಫ್ 3 ಪ್ಲಾನ್ ಮಾಡಲಿದ್ದು ಇನ್ನೆರೆಡು ವರ್ಷದಲ್ಲಿ ಕೆಜಿಎಫ್ 3 ಬರುವುದು ಖಚಿತವಾಗಿದೆ..