ನಾಮಪತ್ರವೇನೋ ಸಲ್ಲಿಸಿದರು.. ಆದರೆ ಪತಿಯ ಹೆಸರಿನ ಕಾಲಂನಲ್ಲಿ  ಕುಸುಮಾ ಅವರು ಬರೆದದ್ದೇ ಬೇರೆ..

0 views

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಪೈಕಿ ರಾಜರಾಜೇಶ್ವತಿ ನಗರ ಹೈವೋಲ್ಟೇಜ್ ಕ್ಷೇತ್ರವಾಗಿದೆ ಎನ್ನಬಹುದು.. ಅತ್ತ ಕಳೆದ ಬಾರಿ ಗೆದ್ದು ಕಾಂಗ್ರೆಸ್ ತೊರೆದು ಹೋದ ಮುನಿರತ್ನ ಅವರು ಒಂದು ಕಡೆಯಾದರೆ.. ಇತ್ತ ದಕ್ಷ ಐಎ ಎಸ್ ಅಧಿಕಾರಿ ದಿವಂಗತ ಡಿಕೆ ರವಿ ಅವರ ಪತ್ನಿ ಕುಸುಮಾ ಅವರು ಕಾಂಗ್ರೆಸ್ ಪಕ್ಷದಿಂದ ಮತ್ತೊಂದು ಕಡೆ..

ಇನ್ನು ನಿನ್ನೆಯಷ್ಟೇ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ.‌. ಆದರೆ ಪತಿಯ ಹೆಸರು ಬರೆಯಬೇಕಾದ ಕಾಲಂನಲ್ಲಿ ಅವರು ಬರೆದದ್ದು ಮಾತ್ರ ಆಶ್ಚರ್ಯವನ್ನುಂಟು ಮಾಡಿದೆ.. ಹೌದು ಕುಸುಮಾ ಅವರು ಚುನಾವಣೆಗೆ ನಿಲ್ಲುತ್ತಾರೆ ಎಂಬ ವಿಚಾರ ಹೊರ ಬಂದಾಗಿನಿಂದಲೂ ಕೂಡ ಕುಸುಮಾ ಅವರು ರವಿ ಅವರ ಹೆಸರನ್ನು ಬಳಸಬಾರದು ಎಂದು ಡಿ ಕೆ ರವಿ ಅವರ ತಾಯಿ ಕಿಡಿಕಾರಿದ್ದರು.. ಜೊತೆಗೆ ರವಿ ಹೆಸರು ಬಳಸಿದರೆ ನಾನು ಅವಳ ವಿರುದ್ಧ ಪ್ರಚಾರ ಮಾಡುವುದಾಗಿ ತಿಳಿಸಿದ್ದರು..

ಇನ್ನು ಇತ್ತ ಶೋಭಾ ಕರಂದ್ಲಾಜೆ ಅವರು ಡಿ ಕೆ ರವಿ ಅವರ ಹೆಸರು ಬಳಸಿದರೆ ಒಳ್ಳೆಯದಾಗೊಲ್ಲ ಎಂದಿದ್ದರು.. ಆದರೆ ತಕ್ಷಣ ಪ್ರತಿಕ್ರಿಯೆ ಕೊಟ್ಟಿದ್ದ ಕುಸುಮಾ ಅವರು ನನ್ನ ಅತ್ತೆ ದೊಡ್ಡವರು ಅವರ ಮಾತು ಆಶೀರ್ವಾದ ಎಂದಿದ್ದರು.. ಆದರೆ ಶೋಭಾ ಕರಂದ್ಲಾಜೆ ಅವರಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು.. ನಾನು ರವಿ ಅವರನ್ನು ಸಂಪ್ರದಾಯ ಬದ್ಧವಾಗಿ ಎಲ್ಲರ ಸಮ್ಮುಖದಲ್ಲಿ ಮದುವೆಯಾಗಿದ್ದೆ.. ಬೇರೆ ಯಾವುದೋ ರೀತಿಯಲ್ಲಲ್ಲ.. ನಾನು ಆಗಲೂ ಡಿ ಕೆ ರವಿ ಪತ್ನಿಯೇ.. ಈಗಲೂ ಡಿ ಕೆ ರವಿ ಪತ್ನಿಯಾಗೇ ಉಳಿದುಕೊಂಡಿದ್ದೇನೆ ಎಂದಿದ್ದರು..

ಆದರೆ ಚುನಾವಣಾ ಪ್ರಚಾರದಲ್ಲಿ ರವಿ ಅವರ ಹೆಸರನ್ನು ಇಟ್ಟುಕೊಂಡು ಜನರ ಮುಂದೆ ಹೋಗುವುದಿಲ್ಲ ಎಂಬ ಮಾತನ್ನು ಸಹ ಆಡಿದ್ದರು.. ಇಂದು ಅದೇ ರೀತಿ‌ನಾಮಪತ್ರ ಸಲ್ಲಿಸುವ ಸಮಯದಲ್ಲಿ ಪತಿಯ ಹೆಸರಿನ ಕಲಂ ನಲ್ಲಿ ಅನ್ವಯವಾಗುವುದಿಲ್ಲ ಎಂಬುದಷ್ಟನ್ನು ಮಾತ್ರ ಬರೆದಿದ್ದಾರೆ.. ಹೌದು ಜ್ಯೋತಿಷ್ಯದ ಪ್ರಕಾರ ಕುಸುಮಾ ಅವರಿಗೆ ನಿನ್ನೆ ಸಮಯ ಚೆನ್ನಾಗಿದೆ ಎಂದು ತಿಳಿಸಿದ ಕಾರಣ ನಿನ್ನೆಯೇ ಕುಸುಮಾ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.. ನಾಮಪತ್ರದಲ್ಲಿ ಎಲ್ಲಿಯೂ ಸಹ ಡಿ ಕೆ ರವಿ ಅವರ ಹೆಸರನ್ನು ಬಳಸಿಲ್ಲ.. ಪ್ರಮಾಣ ಪತ್ರದಲ್ಲಿ ಡಿ ಕೆ ರವಿ ಅವರ ಹೆಸರನ್ನು ಕಾಣಿಸಿಲ್ಲ… ಬದಲಿಗೆ ಹನುಮಂತರಾಯಪ್ಪ ಅವರ ಮಗಳು ಎಂದಷ್ಟೇ ನಮೂದಿಸಿದ್ದಾರೆ..

ಒಟ್ಟಿನಲ್ಲಿ ತಾವು ಆಡಿದ ಮಾತಿನಂತೆ ನಡೆದುಕೊಂಡ ಕುಸುಮಾ ಅವರು ದಿಟ್ಟವಾಗಿಯೇ ಉತ್ತರ ನೀಡುತ್ತಿದ್ದಾರೆ.. ಅದಾಗಲೇ ಡಿ ಕೆ ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ಅವರು ಕುಸುಮಾ ಅವರು ಮುನಿರತ್ನ ಅವರ ವಿರುದ್ಧ ಚುನಾವಣೆಗೆ ನಿಂತರೆ ಗೆಲ್ಲುತ್ತಾರೆ ಎಂದಿದ್ದಾರಂತೆ.. ಇತ್ತ ಬಿಜೆಪಿಯಲ್ಲಿ ಮುನಿರತ್ನ ಅವರಿಗೆ ಟಿಕೆಟ್ ನೀಡುತ್ತಿದ್ದಂತೆ ಅಸಮಾಧಾನ ಕಾಣಿಸಿಕೊಂಡಿದ್ದು ಅದಾಗಲೇ ರಾಜರಾಜೇಶ್ವರಿ‌ ನಗರದ ಬಿಜೆಪಿ ಯುವ ಮೋರ್ಚ ಅಧ್ಯಕ್ಷರೂ ಸಹ ರಾಜಿನಾಮೆ ನೀಡಿದ್ದಾರೆ.. ಅಲ್ಲಿನ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತುಳಸಿ‌ ಮುನಿರಾಜು ಗೌಡ ಅವರಿಗೆ ಟಿಕೆಟ್ ಸಿಗಬೇಕು ಎನ್ನುತ್ತಿದ್ದರು.. ಇದೀಗ ಮುನಿರತ್ನ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡದಿದ್ದರೆ ಅದೂ ಸಹ ಕುಸುಮಾ ಅವರಿಗೆ ವರದಾನವಾಗಲಿದೆ ಎನ್ನಬಹುದು..