ಕೊನೆ ಕ್ಷಣದಲ್ಲಿ ಬಿಗ್ ಟ್ವಿಸ್ಟ್.. ಚುನಾವಣೆಗೆ ಒಂದೇ ದಿನ ಬಾಕಿ ಇರುವಾಗ ಇಂದು ಡಿ ಕೆ ರವಿ ಅವರ ತಾಯಿ ಮಾಡಿರುವ ಕೆಲಸ ನೋಡಿ..

0 views

ಆರ್ ಆರ್ ನಗರದ ವಿಧಾನಸಭಾ ಉಪಚುನಾವಣೆ ನಾಳೆ ನಡೆಯಲಿದೆ.. ಆದರೆ ಕೊನೆ ಕ್ಷಣದಲ್ಲಿ ಯಾರೂ ಊಹಿಸದ ಬಿಗ್ ಟ್ವಿಸ್ಟ್ ಒಂದು ದೊರೆತಿದೆ.. ಹೌದು ಆರ್ ಆರ್ ನಗರ ಉಪಚುನಾವಣಾ ಕಣದಲ್ಲಿ ಅತ್ತ ಮುನಿರತ್ನ.. ಇತ್ತ ಡಿ ಕೆ ರವಿ ಅವರ ಪತ್ನಿ ಕುಸುಮಾ ಕಣದಲ್ಲಿರುವುದು ನೇರ ಹಣಾಹಣಿ ಎನ್ನಲಾಗುತ್ತಿದೆ.. ಅದಾಗಲೇ ರಾಜರಾಜೇಶ್ವರಿ ನಗರವನ್ನು ತಮ್ಮ ಭದ್ರಕೋಟೆ ಮಾಡಿಕೊಂಡಿರುವ ಮುನಿರತ್ನ ಅವರನ್ನು‌ ಕುಸುಮಾ ಅವರು ಸೋಲಿಸುವರಾ? ಮತದಾರ ಪ್ರಭುಗಳು ಯಾರ ಪರವಾಗಿ ತೀರ್ಪು ನೀಡುವರೋ ನಾಳೆ ನಿರ್ಧಾರವಾಗಲಿದ್ದು ಇದೇ ತಿಂಗಳು ಒಂಭತ್ತನೇ ತಾರೀಕಿನಂದು ಚುನಾವಣಾ ಫಲಿತಾಂಶ ಕೂಡ ಪ್ರಕಟಗೊಳ್ಳಲಿದೆ..

ಮುನಿರತ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಅವರನ್ನು ಹೇಗಾದರೂ ಸೋಲಿಸಲೇ ಬೇಕೆಂದು ಡಿ ಕೆ ಶಿವಕುಮಾರ್ ಅವರು ಬಹಳ ಆಲೋಚಿಸಿ ಕುಸುಮಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರು.. ಆದರೆ ಕುಸುಮಾ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಮೊದಲಿಗೆ ಡಿ ಕೆ ರವಿ ಅವರ ತಾಯಿ ತೀವ್ರ ವಿರೋಧ ವ್ಯಕ್ತ ಪಡಿಸಿದರು.. ನನ್ನ ಮಗನ ಹೆಸರು ಬಳಸಿದರೆ ನಾನು ಅವಳ ವಿರುದ್ಧ ಪ್ರಚಾರ ಮಾಡುವೆ ಎಂದಿದ್ದರು.. ಅಷ್ಟೇ ಅಲ್ಲದೇ ಬಹಳ ತೀವ್ರವಾಗಿ ಸೊಸೆಯನ್ನು ನಿಂದಿಸಿದ್ದು ನನ್ನ ಮಗ ಇಲ್ಲವಾದಾಗಲೇ ಅವಳು ಇಲ್ಲವಾದಳು.. ಅವಳು ನನ್ನ ಮಗನ ಹೆಸರನ್ನು ಬಳಸ ಕೂಡದು ಎಂದಿದ್ದರು..

ಆದರೆ ಕುಸುಮಾ ಅವರು ನಾನು ಸಂಪ್ರದಾಯ ಬದ್ಧವಾಗಿ ರವಿ ಅವರನ್ನ ಮದುವೆಯಾಗಿದ್ದೆ.. ಈಗಲೂ ಅವರ ಪತ್ನಿಯಾಗಿಯೇ ಉಳಿದುಕೊಂಡಿದ್ದೇನೆ.. ಆದರೆ ನಾನು ಅವರ ಹೆಸರನ್ನು ಮುಂದಿಟ್ಟುಕೊಂಡು ಮತ ಕೇಳುವುದಿಲ್ಲ ಎಂದಿದ್ದರು.. ಅದೇ ರೀತಿ ನಾಮಪತ್ರ ಸಲ್ಲಿಸುವಾಗಲೂ ಎಲ್ಲಿಯೂ ರವಿ ಅವರ ಹೆಸರನ್ನು ಬರೆದಿರಲಿಲ್ಲ.. ಹಾಗೆಯೇ ಮಾತನಾಡುವ ಸಮಯದಲ್ಲಿ ನನ್ನ ಅತ್ತೆ ಬೈದದ್ದನ್ನು ನಾನು ಆಶೀರ್ವಾದ ಅಂದುಕೊಳ್ಳುವೆ ಎಂದಿದ್ದರು.. ಇನ್ನು ಕಳೆದ ವಾರ ಮಾದ್ಯಮದ ಸಂದರ್ಶನವೊಂದರಲ್ಲಿ ಡಿ ಕೆ ರವಿ ಅವರು ಹೋದ ನಂತರ ಕುಸುಮಾ ಅವರು ತಾವು ಅನುಭವಿಸಿದ್ದ ನೋವಿನ ಬಗ್ಗೆ ಹೇಳಿಕೊಂಡಿದ್ದರು.. ಇದೆಲ್ಲವನ್ನು ನೋಡಿದ ರವಿ ಅವರ ತಾಯಿ‌ ಇದೀಗ ಚುನಾವಣಾ ಹಿಂದಿನ ದಿನ ಸಂಪೂರ್ಣ ಚಿತ್ರಣವನ್ನೇ ಬದಲಿಸಿದ್ದಾರೆ..

ಹೌದು ಸೊಸೆ ಪರವಾಗಿ‌ ನಿಂತು ಡಿ ಕೆ ರವಿ ಅವರ ತಾಯಿ ಅವಳಿಗೆ ಓಟ್ ಮಾಡಿ ಅಂತ ಮನವಿ ಮಾಡಿಕೊಂಡಿದ್ದಾರೆ.. ಇಲ್ಲಿದೆ ನೋಡಿ ರವಿ ಅವರ ತಾಯಿ ಆಡಿರುವ ಮಾತುಗಳು.. “ಎಲ್ಲಾ ಪ್ರಜೆಗಳು ನನ್ನ ಸೊಸೆಗೆ ಬೆಂಬಲವಾಗಿ ನಿಂತು ಗೆಲುವು ಕೊಡ್ಬೇಕು ಅಂತ ಕೇಳ್ಕೊತೀನಿ.. ತಂದೆ ತಾಯಂದಿರು ನನ್ನ ಸೊಸೆಗೆ ವೋಟ್ ಕೊಡಿ.. ಅವಳು ಮಾಡೋ ಎಲ್ಲಾ ಕೆಲಸಕ್ಕೂ ನಾನ್ ಭಾಗಿಯಾಗಿ ನಿಂತ್ಕೋತಿನಿ.. ನಾಲ್ಕ್‌ ದಿನ ಆಗ್ಲಿ ನಾಲ್ಕ್ ತಿಂಗಳಾಗ್ಲಿ.. ನನ್ನ ಮಗಳ ತರ.. ನನ್ನ ಸೊಸೆ ತರ.. ನಾಲ್ಕ್ ದಿನ ಬಾಳಿದೀವಿ.. ದೇವರ ದಯೆಯಿಂದ ಅವಳು ಮುಂದೆ ಬಂದುಬಿಟ್ರೆ ಸಾಕು.. ನಾನ್ ಏನೋ ಅವತ್ತು ಹೊಟ್ಟೆ ಉರಿಗೆ ನಾಲ್ಕು ಮಾತ್ ಆಡ್ದೇ.. ಆದ್ರೆ ಅವಳು ಒಂದ್ ವಾರದಿಂದ ಕಣ್ಣಲ್ ನೀರ್ ಹಾಕೋದ್ ನೋಡಿ ನನಗೆ ಸಂಕಟ ಆಯ್ತು..

ಅದಕ್ಕೆ ಆ ಸಂಕಟದ ಪ್ರಕಾರ ನಾನ್ ಮಾತಾಡ್ತೀದಿನಿ.. ಎಲ್ಲರೂ ಅಕ್ಕ ತಂಗೀರಂಗೆ.. ಅಣ್ಣ ತಮ್ಮಂದಿರಂಗೆ ಅವಳನ್ನ ಮುಂದೆ ಬರ್ಸುದ್ರೆ.. ಅವಳ್ ಜೊತೆಲಿ ನಾನು ನಿಂತು ಅದೇನ್ ಕೆಲ್ಸ ಮಾಡ್ಬೇಕೋ‌ ಮಾಡವ ಅಂತ ಹೇಳಕ್ಕೆ ನಾನ್ ರೆಡಿ ಇದೀನಿ.. ಅಕ್ಕ ತಂಗೀರಾ ಅಣ್ಣ ತಮ್ಮಂದೀರಾ ಎಲ್ಲರೂ ಅವಳಿಗೆ ಓಟ್ ಹಾಕಿ..‌ ಡಿ ಕೆ ರವಿ ಯಾವ್ ತರ ಮಾಡ್ತಿದ್ರು.. ಅದೇ ತರ ಅವಳು ನಿಂತ್ಕೊಂಡು ಮಾಡ್ತಾಳೆ ಅನ್ನೋ ಬೆಂಬಲದಿಂದ ಓಟ್ ಕೊಡಿ ಅಂತ ಎಲ್ಲಾ ಆರ್ ಆರ್ ನಗರದ ಜನರ ಹತ್ರ ಕೈ ಮುಗಿದು ಕೇಳ್ಕೋತೀನಿ” ಎಂದಿದ್ದಾರೆ..

ಇಷ್ಟೇ ಜೀವನ ಇವತ್ತು ಕೋಪ ಇದ್ರೆ ನಾಳೆ ಪ್ರೀತಿ ಇರತ್ತೆ.. ಮೂರು ದಿನ ಇರೋ ಈ ಬದ್ಕಲ್ಲಿ ಕೋಪ ಹಟ ಎಲ್ಲಾ ಬಿಟ್ಟು ಬದುಕಬೇಕು ಅನ್ನೋ ಸಲುವಾಗಿ ಡಿ ಕೆ ರವಿ ಅವರ ತಾಯಿ ಈ ರೀತಿ ಹೇಳಿರುವರೋ ಅಥವಾ ಯಾರಾದರೂ ಅವರ ಬಾಯಲ್ಲಿ ಹೇಳಿಸಿರೋವರೋ ತಿಳಿಯದು.. ಒಟ್ಟಿನಲ್ಲಿ ಅತ್ತೆ ಸೊಸೆ ಒಂದಾದರೆ ಅದೇ ಸಂತೋಷ ಎನ್ನುತ್ತಿದ್ದಾರೆ ನೆಟ್ಟಿಗರು..