ಹಿಟ್ ಧಾರಾವಾಹಿಗಳ ನಡುವೆ ಶುರುವಾದ ಕೆಲವೇ ತಿಂಗಳಿಗೆ ಪ್ರಸಾರ ನಿಲ್ಲಿಸಿದ ಪ್ರಖ್ಯಾತ ಧಾರಾವಾಹಿ.. ಕಾರಣವೇನು ಗೊತ್ತಾ?

0 views

ಬಣ್ಣದ ಲೋಕ ಒಂದು ರೀತಿ ಅದೃಷ್ಟದ ಲೋಕ ಎನ್ನಬಹುದು.. ಕೆಲವೊಮ್ಮೆ‌ ಪರಿಶ್ರಮ ಕೈ ಹಿಡಿದರೆ.. ಕೆಲವೊಮ್ಮೆ ಅದೃಷ್ಟವೂ ಕೈ ಹಿಡಿಯುತ್ತದೆ.. ಆದರೆ ಕೊಟ್ಟರೆ ಸರಿಯಾಗಿಯೇ ಪೆಟ್ಟು ಕೊಡುತ್ತದೆ ಅನ್ನೋದಕ್ಕೆ ಕಿರುತೆರೆ ಲೋಕವೇ ಉದಾಹರಣೆ.. ಅದ್ಭುತ ಕತೆಯುಳ್ಳ ಪೌರಾಣಿಕ ಧಾರಾವಾಹಿಗಳು ಕಡಿಮೆ ರೇಟಿಂಗ್ ಪಡೆದರೆ.. ಮನೆಮನೆ ಕತೆಯ ಅದೇ ಲವ್ ಮ್ಯಾಟರ್ ಗಳುಳ್ಳ ಕಯೆಯಿರುವ ಧಾರಾವಾಹಿಗಳು ಹೆಚ್ಚು ರೇಟಿಂಗ್ ಪಡೆದುಕೊಂಡು ಬಿಟ್ಟಿರುತ್ತವೆ..

ಆದರೆ ಇದೆಲ್ಲದರ ನಡುವೆ ಶುರುವಾದ ಎರಡೇ ತಿಂಗಳಿಗೆ ಧಾರಾವಾಹಿಯೊಂದು ತನ್ನ ಪ್ರಸಾರವನ್ನು‌ ನಿಲ್ಲಿಸಿದೆ.. ಹೌದು ಕನ್ನಡ ಕಿರುತೆರೆಯಲ್ಲಿ‌‌ ಲಾಕ್ ಡೌನ್ ಆದ ನಂತರ ದೊಡ್ಡ ಬದಲಾವಣೆಯಾಯಿತು.. ಹಲವಾರು ಡಬ್ಬಿಂಗ್ ಧಾರಾವಾಹಿಗಳು ಬಂದವು.. ಹಿಟ್ ಕೂಡ ಆದವು.. ಹತ್ತಾರು ಕನ್ನಡದ ಧಾರಾವಾಹಿಗಳು ತನ್ನ ಪ್ರಸಾರ ನಿಲ್ಲಿಸಿದವು.. ಇತ್ತ ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.. ಜನ ಮೆಚ್ಚಿದ್ದ ಮಗಳು ಜಾನಕಿ ಸೇರಿದಂತೆ ಆ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಆರಕ್ಕೂ ಹೆಚ್ಚು ಧಾರಾವಾಹಿಗಳು ನಿಂತವು..

ಆದರೆ ಲಾಕ್ ಡೌನ್ ಸಡಿಲಿಕೆಯ ನಂತರ ಬಹಳಷ್ಟು ಧಾರಾವಾಹಿಗಳ ಚಿತ್ರೀಕರಣ ಆರಂಭವಾಯಿತು.. ಕೆಲವು ಹೊಸ ಕತೆಯುಳ್ಳ ಕೆಲ ಹೊಸ ಧಾರಾವಾಹಿಗಳು ಶುರುವಾದವು.. ಅದರಲ್ಲೊಂದು ಲಗ್ನ ಪತ್ರಿಕೆ.. ಈ ಹಿಂದೆ ಕಮಲಿ ಧಾರಾವಾಹಿ ನಿರ್ದೇಶನ ಮಾಡಿದ್ದ ಸಿನಿಮಾ ಹಿನ್ನೆಲೆಯುಳ್ಳ ಅರವಿಂದ್ ಕೌಶಿಕ್ ಲಗ್ನ ಪತ್ರಿಕೆ ಧಾರಾವಾಹಿ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದರು..

ಕಮಲಿ ಧಾರಾವಾಹಿಯಿಂದ ಹೊರ ಬಂದ ನಂತರ ಕಲರ್ಸ್ ಕನ್ನಡದಲ್ಲಿ ಲಗ್ನ ಪತ್ರಿಕೆ ಶುರು ಮಾಡಿದರು.. ಅಬ್ಬರದ ಪ್ರಚಾರವನ್ನೂ ವಾಹಿನಿ‌ ಮಾಡಿತ್ತು.. ಆದರೆ ಇದೀಗ ಎರಡೇ ತಿಂಗಳಿಗೆ ತನ್ನ ಪ್ರಸಾರವನ್ನು ನಿಲ್ಲಿಸುತ್ತಿರುವುದು ಶಾಕ್ ಆಗಿದೆ.. ಹೌದು ಇದೇ ವರ್ಷ ಸೆಪ್ಟೆಂಬರ್ 21 ರಂದು ಶುರುವಾಗಿದ್ದ ಲಗ್ನಪತ್ರಿಕೆ ಧಾರವಾಹಿ ಮುಕ್ತಾಯವಾಗುತ್ತಿದೆ.. ಇದಕ್ಕೆ ನಿಜವಾದ ಕಾರಣ ರೇಟಿಂಗ್.. ಹೌದು ನಿರೀಕ್ಷೆ ಮಾಡಿದಷ್ಟು ಟಿವಿಆರ್ ಬರದ ಕಾರಣ ಧಾರಾವಾಹಿಯನ್ನು ನಿಲ್ಲಿಸಲಾಗುತ್ತುದೆ.. ಇದೇ ತಿಂಗಳಿನಲ್ಲಿ ತನ್ನ ಕಥೆಯನ್ನು ಮುಕ್ತಾಯಗೊಳಿಸುತ್ತಿದೆ..

ಇದೇ ತಿಂಗಳು ನವೆಂಬರ್ 27 ರವರೆಗೆ ಧಾರಾವಾಹಿಯ ಕೊನೆಯ ಸಂಚಿಕೆಗಳನ್ನು ಪ್ರಸಾರ ಮಾಡಲಾಗುತ್ತಿದೆ.. ಇನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದಾಗಲೇ ಕನ್ನಡತಿ ಹಾಗೂ ನನ್ನರಸಿ ರಾಧೆ ಧಾರಾವಾಹಿಗಳು ಹಿಟ್ ಆಗಿದ್ದು, ಅತ್ತ ಗೀತಾ ಹಾಗೂ ಗಿಣಿರಾಮ ಮಹಾಸಂಚಿಕೆಗಳು ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು ಕಲರ್ಸ್ ಕನ್ನಡ ಮತ್ತೆ ತನ್ನ ಸ್ಥಾನಕ್ಕೆ ಮರಳುವ ಲಕ್ಷಣಗಳು ತೋರುತ್ತಿದೆ.. ಇದೆಲ್ಲದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸದ್ಯದಲ್ಲಿಯೇ ಹೊಸ ಕತೆಗಳ ಧಾರಾವಾಹಿಗಳು ಆರಂಭವಾಗಲಿದ್ದು ಹೊಸತನವನ್ನು ತರುವತ್ತ ವಾಹಿನಿ ಹೆಜ್ಜೆ ಹಾಕುತ್ತಿದೆ ಎನ್ನಲಾಗಿದೆ.. ಇನ್ನು ಲಗ್ನ ನವೆಂಬರ್ 27ಕ್ಕೆ ಲಗ್ನ ಪತ್ರಿಕೆ ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿದ್ದು ನವೆಂಬರ್ 30 ರಿಂದ ರಾತ್ರಿ ಹತ್ತು ಗಂಟೆಗೆ ಶಾಂತಂಪಾಪಂ ಹೊಸ ಸಂಚಿಕೆಗಳು ಪ್ರಸಾರವಾಗಲಿದ್ದು ಅದಾಗಲೇ ಪ್ರೋಮೋ ಬಿಡುಗಡೆ ಮಾಡಲಾಗಿದೆ..