ನಿಜ ಜೀವನದಲ್ಲಿಯೂ ಒಂದಾದ ಕನ್ನಡ ಕಿರುತೆರೆಯ ಮತ್ತೊಂದು ಖ್ಯಾತ ಜೋಡಿ..

0 views

ಕನ್ನಡ ಕಿರುತೆರೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಸಾಕಷ್ಟು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ನೂತನ ಜೀವನ ಆರಂಭಿಸುತ್ತಿದ್ದಾರೆ.. ಅದರಲ್ಲೂ ಸಾಕಷ್ಟು ಕಲಾವಿದರು ತಮ್ಮ ಧಾರಾವಾಹಿಯ ಸಹಕಲಾವಿದರುಗಳ ಜೊತೆಯೇ ಪ್ರೀತಿಸಿ ಮದುವೆಯಾಗುತ್ತಿರುವುದು ಇದೀಗ ಸಹಜವಾಗಿ ಹೋಗಿದೆ.. ಇನ್ನು ಸಧ್ಯ ಇದೀಗ ಮತ್ತೊಬ್ಬ ಕನ್ನಡದ ಕಿರುತೆರೆಯ ಖ್ಯಾತ ನಟ ನಟಿ ನೂತನ ಜೀವನಕ್ಕೆ ಕಾಲಿಟ್ಟಿದ್ದು ಸ್ನೇಹಿತರು ಕಿರುತೆರೆ ವೀಕ್ಷಕರು ಆಪ್ತರು ಶುಭಾಶಯ ತಿಳಿಸಿ ನೂತನ ಜೀವನಕ್ಕೆ ಹಾರೈಸಿದ್ದಾರೆ..

ಹೌದು ಕಲಾವಿದರುಗಳು ಸಾಮಾನ್ಯವಾಗಿ ತಮ್ಮದೇ ವೃತ್ತಿ ಬದುಕಿನ ಸಂಗಾತಿಗಳನ್ನು ಹುಡುಕಿಕೊಳ್ಳುವುದು ಸಾಮಾನ್ಯ.. ಇದಕ್ಕೆ ಮುಖ್ಯ ಕಾರಣ ಮುಂದಿನ ದಿನಗಳಲ್ಲಿಯೂ ತಮ್ಮ ಈ ಕಲಾ ಬದುಕನ್ನು ಮುಂದುವರೆಸುವಾಗ ಅರ್ಥ ಮಾಡಿಕೊಳ್ಳುವರು ಎನ್ನುವ ಕಾರಣಕ್ಕೆ ಸಂಗಾತಿಗಳಿಂದಲೂ ಬೆಂಬಲ ಸಿಗುತ್ತದೆ ಎಂಬ ಕಾರಣಕ್ಕೆ ಇದೇ ವೃತ್ತಿಯಲ್ಲಿನ ಸಂಗಾತಿಗಳನ್ನು ಪ್ರೀತಿಸಿ ಮದುವೆಯಾಗುವರು.. ಅದೇ ರೀತಿ ಇದೀಗ ಕನ್ನಡ ಕಿರುತೆರೆಯ ಮತ್ತೊಂದು ಖ್ಯಾತ ಜೋಡಿ ಒಂದೇ ಧಾರಾವಾಹಿಯಲ್ಲಿ ಅಭಿನಯಿಸಿ ಹೆಸರು ಮಾಡಿ ಪ್ರೀತಿಸಿ ಇದೀಗ ನಿಜ ಜೀವನದಲ್ಲಿಯೂ ಜೋಡಿಯಾಗುತ್ತಿದ್ದಾರೆ..

ಹೌದು ಆ ಜೋಡಿ ಮತ್ಯಾವುದೂ ಅಲ್ಲ.. ಈ ಹಿಂದೆ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತುದ್ದ ಧಾರಾವಾಹಿ ರಾಜಾ ರಾಣಿ ಧಾರಾವಾಹಿಯಲ್ಲಿ ಪರಿಚಯವಾದ ನಟ ಶಶಿ ಹೆಗಡೆ ಹಾಗೂ ನಟಿ ಲಾವಣ್ಯ.. ಹೌದು ನಟ ಶಶಿ ಹೆಗಡೆ ಹಾಗೂ ಲಾವಣ್ಯ ಇಬ್ಬರೂ ಸಹ ರಾಜಾ ರಾಣಿ ಧಾರಾವಾಹಿಯ ಮೂಲಕ ಪರಿಚಯವಾಗಿ ಇಬ್ಬರ ನಡುವೆ ಸ್ನೇಹವಾಗಿತ್ತು. ನಂತರದ ದಿನಗಳಲ್ಲಿ ಆ ಸ್ನೇಹ ಪ್ರೀತಿಯಾಗಿ ಕಳೆದ ಮೂರು ವರ್ಷಗಳಿಂದ ಪ್ರೀತಿಸಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಹೌದು ಸಧ್ಯ ಇತ್ತ ಲಾವಣ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ಶ್ರೀನಿವಾಸನ‌ ಚಿಕ್ಕಮ್ಮ ಪದ್ಮನ ಪಾತ್ರ ನಿರ್ವಹಿಸುತ್ತಿದ್ದು ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಾರೆ.

ಅತ್ತ ಶಶಿ ಹೆಗಡೆ ರಾಜಾ ರಾಣಿ ಧಾರಾವಾಹಿಯ ನಂತರ ಸುವರ್ಣ ವಾಹಿನಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಧ್ಯ ಸಿನಿಮಾದಲ್ಲಿಯೂ ಸಹ ಅಭಿನಯಿಸುವ ಆಸಕ್ತಿ ಹೊಂದಿದ್ದಾರೆ.. ಇನ್ನು ಕಳೆದ ಮೂರು ವರ್ಷದಿಂದ ಪ್ರೀತಿಸಿ ಕಳೆದ ನಾಲ್ಕು ದಿನಗಳ ಹಿಂದೆ ಸತಿಪತಿಗಳಾದ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ..

ಹೌದು ಪ್ರೀ ವೆಡ್ಡಿಂಗ್ ಚಿತ್ರೀಕರಣದ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದ ಶಶಿ ಹೆಹಡೆ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು.. ಇದೀಗ ಮದುವೆ ಮುಗಿದ ಎರಡು ದಿನಗಳ ನಂತರ ತಮ್ಮ ಮದುವೆ ಬಗ್ಗೆ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು ನಾಲ್ಕು ವರ್ಷಗಳಿಂದ ಕಂಡ ಕನಸು ನನಸಾಗಿ ಎರಡು ದಿನಗಳಾಯಿತು.. ಸಿಕ್ಕಳು ನಮ್ಮ ಮನೆಯ ಅರಸಿ.. ನೀವೆಲ್ಲರೂ ನಮಗೆ ಹರಸಿ.. ಎಂದು ಬರೆದು ಪೋಸ್ಟ್ ಮಾಡಿದ್ದು ಸ್ನೇಹಿತರು ಅಭಿಮಾನಿಗಳು ಎಲ್ಲರೂ ನೂತನ ಜೋಡಿಗೆ ಶುಭ ಹಾರೈಸಿದ್ದಾರೆ..

ಒಟ್ಟಿನಲ್ಲಿ ಕಳೆದ ಮೂರು ವರ್ಷದಿಂದ ಸಾಲು ಸಾಲಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕಿರುತೆರೆ ಹಾಗೂ ಸಿನಿಮಾ ತಾರೆಗಳ ಸಾಲಿಗೆ ಇದೀಗ ನಟ ಶಶಿ ಹಾಗೂ ನಟಿ ಲಾವಣ್ಯ ಸೇರ್ಪಡೆಗೊಂಡಿದ್ದು ತಮ್ಮ ಪ್ರೀತಿಯ ಬದುಕನ್ನು ದಾಂಪತ್ಯದ ಬದುಕನ್ನಾಗಿ ಮಾಡಿ ತಮ್ಮ ಪ್ರೀತಿಗೆ ನಿಜವಾದ ಅರ್ಥ ನೀಡಿದ್ದಾರೆನ್ನಬಹುದು.. ಈ ಜೋಡಿಗೆ ಶುಭವಾಗಲಿ.. ಮುಂದಿನ ವೃತ್ತಿ ಬದುಕೂ ಸಹ ಚೆನ್ನಾಗಿರಲಿ..