ಬಚ್ಚಲು ಮನೆಯಲ್ಲಿ‌ ಲೀಲಾವತಿ ಅವರಿಗೆ ನಿಜಕ್ಕೂ ಏನಾಯಿತು.. ಭಾವುಕರಾದ ಮಗ ವಿನೋದ್ ರಾಜ್ ಹೇಳಿದ್ದೇನು ಗೊತ್ತಾ..

0 views

ಹಿರಿಯ ನಟಿ ಲೀಲಾವತಿ ಅವರು ಹಾಗೂ ಅವರ ಮಗ ನಟ ವಿನೋದ್ ರಾಜ್ ಅವರು ಚಿತ್ರರಂಗದಿಂದ ದೂರ ಉಳಿದು ಸಧ್ಯ ತಾವಾಯ್ತು ತಮ್ಮ ಪಾಡಾಯ್ತು ಎನ್ನುವಂತೆ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಮೊನ್ನೆಮೊನ್ನೆಯಷ್ಟೇ ವಿನೋದ್ ರಾಜ್ ಅವರು ಪೊಲೀಸ್ ಠಾಣೆಗೆ ಆಗಮಿಸಿದ್ದ ವಿಚಾರ ಸುದ್ದಿಯಾಗಿತ್ತು.. ಆದರೀಗ ಇದ್ದಕಿದ್ದ ಹಾಗೆ ಲೀಲಾವತಿ ಅವರೊಟ್ಟಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಹೌದು ಕಳೆದ ವರ್ಷ ಹಾಗೂ ಈ ವರ್ಷ ಕೊರೊನಾ ಸಮಯದಲ್ಲಿಯೂ ನೂರಾರು ಜೂನಿಯರ್ ಕಲಾವಿದರಿಗೆ ಈ ವಯಸ್ಸಿನಲ್ಲಿಯೂ ನೆರವಾಗಿ ಮಾನವೀಯತೆ ಮೆರೆದಿದ್ದ ಲೀಲಾವತಿ ಅವರು ನಿನ್ನೆ ಬಚ್ಚಲ ಮನೆಯಲ್ಲಿ ಪಟ್ಟ ಕಷ್ಟ ನಿಜಕ್ಕೂ ಮನಕಲ್ಕುತ್ತದೆ..

ಹೌದು ಲೀಲಾವತಿ ಅವರು ಬಚ್ಚಲು ಮನೆಯಲ್ಲಿ ಜ್ಞಾನ ತಪ್ಪಿ ಬಿದ್ದು ಬಾಗಿಲು ಸಹ ತೆಗೆಯಲು ಹರಸಾಹಸ ಪಟ್ಟ ಮನಕಲಕುವ ಘಟನೆ ನಡೆದಿದೆ.. ಹೌದು ನೆಲಮಂಗಲ ತಾಲೂಕಿನ ಸೋಲದೇವನಹಳ್ಳೊ ತೋಟದ ಮನೆಯಲ್ಲಿ ವಿನೋದ್ ರಾಜ್ ಹಾಗೂ ಲೀಲಾವತಿ ಅವರು ವಾಸವಾಗಿದ್ದಾರೆ.. ಇತ್ತ ಲೀಲಾವತಿ ಅವರಿಗೆ ಎಂಭತ್ತ ಮೂರು ವರ್ಷ ವಯಸ್ಸಾಗಿದ್ದು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದಾರೆ.. ಕೆಲ ತಿಂಗಳಿಂದ ಮತ್ತೊಬ್ಬರ ಸಹಾಯ ಪಡೆದೇ ನಡೆಯುವ ಸ್ಥಿತಿಯಲ್ಲಿದ್ದು ಈಗಲೂ ಸಹ ಬಚ್ಚಲು ಮನೆಗೆ ತೆರಳಿದ್ದ ಸಮಯದಲ್ಲಿ ಅಲ್ಲಿಯೇ ಸುಸ್ತಾಗಿ ಬಿದ್ದಿದ್ದು ಬಾಗಿಲ ಚಿಲಕವನ್ನೂ ಸಹ ತೆಗೆಯಲಾಗದೇ ಅರ್ಧ ಮುಕ್ಕಾಲು ಗಂಟೆ ಬಚ್ಚಲು ಮನೆಯಲ್ಲಿಯೇ ಕಷ್ಟ ಪಟ್ಟಿದ್ದಾರೆ.. ಜೋರಾಗಿ ಕೂಗಲು ಸಹ ಆಗದೇ ಅಲ್ಲಿಯೇ ಮಲಗಿದ್ದರು ಎಂದು ತಿಳಿದು ಬಂದಿದೆ..

ಇನ್ನು ಸಧ್ಯ ಇದೀಗ ನೆಲಮಂಗಲದ ಖಾಸಗಿ ಆಸ್ಪತ್ರೆಯೊಂದರಲ್ಲಿ ಲೀಲಾವತಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಒಂದು ತಿಂಗಳು ವಿಶ್ರಾಂತಿಗೆ ತಿಳಿಸಿದ್ದಾರೆ ಎನ್ನಾಲಾಗಿದೆ.. ಇನ್ನು ಈ ಬಗ್ಗೆ ಮಾತನಾಡಿರುವ ವಿನೋದ್ ರಾಜ್ ಅವರು ಬಚ್ಚಲು ಮನೆಗೆ ಹೋದ ಸಮಯದಲ್ಲಿ ಕಾಲು ಜಾರಿ ಬಿದ್ದುಬಿಟ್ಟಿದ್ದಾರೆ.. ಅಲ್ಲಿಂದ ಎದ್ದು ಚಿಲಕ ತೆಗೆಯಲು ಸಾಧ್ಯವಾಗದೆ ಅರ್ಧ ಮುಕ್ಕಾಲು ಗಂಟೆ ಅಲ್ಲಿಯೇ ಒದ್ದಾಡಿದ್ದಾರೆ.. ಜೋರಾಗಿ ಕೂಗಿ ಯಾರನ್ನಾದರೂ ಕರೆಯಲು ಸಹ ಸಾಧ್ಯವಾಗದೇ ಬಚ್ಚಲ ಮನೆಯಲ್ಲಿಯೇ ನರಳಾಡಿದ್ದು ಕೊನೆಗೆ ಸುಧಾರಿಸಿಕೊಂಡು ಅವರೇ ಚಿಲಕ ತೆಗೆದು ಹೊರ ಬಂದಿದ್ದಾರೆ..

ಅಮ್ಮನಿಗೆ ಬಹಳ ನೋವಾಗುತಿತ್ತು ನೋವು ತಡೆಯಲಾಗುತ್ತಿಲ್ಲ ಎನ್ನುತ್ತಿದ್ದರು.. ಅದೇ ಕಾರಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದೆ.. ವೈದ್ಯರು ಪರೀಕ್ಷೆ ಮಾಡಿ ದೊಡ್ಡ ಸಮಸ್ಯೆ ಏನೂ ಆಗಿಲ್ಲ.. ಬೆನ್ನಿನ ಮೂಳೆಗೆ ಸಣ್ಣ ಗಾಯವಾಗಿದೆ ಎಂದು ತಿಳಿಸಿದ್ದಾರೆ.. ಬೆನ್ನಿಗೆ ಒಂದು ಪಟ್ಟಿ ಕಟ್ಟಿದ್ದು ಒಂದು ತಿಂಗಳ ಚಿಕಿತ್ಸೆಗೆ ತಿಳಿಸಿದ್ದಾರೆ.. ಎಂದಿದ್ದಾರೆ..

ಇನ್ನೂ ಕೆಲವೇ ದಿನಗಳ ಹಿಂದಷ್ಟೇ ಪೊಲೀಸ್ ಠಾಣೆಗೆ ಆಗಮಿಸಿದ್ದ ವಿನೋದ್ ರಾಜ್ ಅವರು ಸೈಬರ್ ಪೊಲೀಸರನ್ನು ಭೇಟಿ ಮಾಡಿ ತೆರಳಿದ್ದರು.. ಕೆಲ ತಿಂಗಳ ಹಿಂದೆ ತಮ್ಮ ಹಾಗೂ ಲೀಲಾವತಿ ಅವರ ಫೋಟೋಗಳನ್ನು ಬೇರೆಯ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.. ಅದನ್ನು ನೋಡಿ ವಿನೋದ್ ರಾಜ್ ಅವರ ಸ್ನೇಹಿತ ಸಾಯಿಪ್ರಕಾಶ್ ಅವರು ವಿನೋದ್ ರಾಜ್ ಅವರಿಗೆ ತಿಳಿಸಲಾಗಿ ಮನನೊಂದು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.. ಆ ಸಂಬಂಧ ಪೋಸ್ಟ್ ಹರಿಬಿಟ್ಟವನ ಬಗ್ಗೆ ಮಾಹಿತಿ ದೊರೆತಿದ್ದು ಅದೇ ಕಾರಣಕ್ಕೆ ವಿನೋದ್ ರಾಜ್ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಮತ್ತಷ್ಟು ದಾಖಲೆಗಳನ್ನು ಪಡೆದಿದ್ದರು.. ಅದೇ ದಿನ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ಸಹ ನಡೆಸಿದ್ದಾರೆ ಎಂದು ತಿಳಿದು ಬಂದಿದೆ..

ಇದೀಗ ಮನೆಯಲ್ಲಿ ನಡೆದ ಘಟನೆಯಿಂದಾಗಿ ಪೆಟ್ಟಾದ ಅಮ್ಮನನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿಕೊಂಡು ಮನೆಗೆ ಮರಳಿದ್ದು ಅಮ್ಮನ ಬಗ್ಗೆ ಮಾಧ್ಯಮದ ಜೊತೆ ಮಾತನಾಡುವ ಸಮಯದಲ್ಲಿ ಭಾವುಕರಾಗಿದ್ದಾರೆ.. ಎಂಭತ್ತಮೂರು ವರ್ಷದ ಅಮ್ಮನನ್ನು ಕಣ್ಣಲ್ಲಿ ಕಣ್ಣಿಟ್ಟು ಮದುವೆಯೂ ಆಗದೇ ವಿನೋದ್ ರಾಜ್ ಅವರು ಸದಾ ಜೊತೆಯಲ್ಲಿತೇ ಇದ್ದು ನೋಡಿಕೊಳ್ಳುತ್ತಿರುವುದು ನಿಜಕ್ಕೂ ಮಕ್ಕಳ ಕರ್ತವ್ಯ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ವಿನೋದ್ ರಾಜ್ ಅವರಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು ಲೀಲಾವತಿ ಅವರು ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ..