ಹೆರಿಗೆ ನೋವಿನಲ್ಲಿ ಒದ್ದಾಡುತ್ತಿದ್ದ ಪತ್ನಿಯ ಜೊತೆ ಯೂಟ್ಯೂಬ್ ವೀಡಿಯೋ ನೋಡಿಕೊಂಡು ಎಂತಹ ಕೆಲಸ ಮಾಡಿದ್ದಾನೆ ನೋಡಿ.. ಇವನ ಜನ್ಮಕ್ಕಿಷ್ಟು..

0 views

ಸಾಮಾಜಿಕ ಜಾಲತಾಣವಾಗಲಿ ಅಥವಾ ಟಿವಿ ಮಾದ್ಯಮವಾಗಲಿ ಅಥವಾ ಮತ್ತೊಂದಾಗಲಿ ಮನರಂಜನೆಗಾಗಿ ನೋಡಬೇಕು ಸುಮ್ಮನಾಗಬೇಕಷ್ಟೇ.. ಅದಕ್ಕೂ ಮೀರಿ ಜ್ಞಾನ ಸಂಪಾದನೆಯಾದರೆ ಅದನ್ನು ಪಡೆಯಬೇಕು.. ಆದರೆ ಸಾಮಾಜಿಕ ಜಾಲತಾಣವನ್ನು ನಂಬಿಕೊಂಡು ಅಲ್ಲಿನ ವೀಡಿಯೋಗಳು ಅಥವಾ ಮತ್ತಿನ್ನೊಂದನ್ನು ನೋಡಿ ಇಲ್ಲದ ಕೆಲಸಗಳಗಿ ಅದರಲ್ಲೂ ಇಂತಹ ಮಣ್ಣು ತಿನ್ನುವಂತಹ ಕೆಲಸವನ್ನು ಮಾಡಬಾರದು.. ಹೌದು ಇಲ್ಲೊಂದು ಅಂತಹುದೇ ಮನಕಲಕುವ ಘಟನೆ ನಡೆದಿದ್ದು ಪತಿರಾಯನೊಬ್ಬ ಯೂಟ್ಯೂಬ್ ನಲ್ಲಿನ ವೀಡಿಯೋಗಳನ್ನು ನೋಡಿ ಸ್ವಂತ ಹಂಡತಿಯ ಹೆರಿಗೆ ಸಮಯದಲ್ಲಿ ಮಾಡಿರುವ ಕೆಲಸ ನಿಜಕ್ಕೂ ಈತನ ನಡೆಯ ಮೇಲೆ ಕೋಪ ಬರುವಂತೆ ಮಾಡಿದ್ದಲ್ಲದೇ ಆತನ ಪತ್ನಿಯ ಬಗ್ಗೆ ಆಲೋಚನೆ ಮಾಡಿದರೆ ಮನಕಲಕುತ್ತದೆ..

ಹೌದು ಲೋಗನಾಥನ್… ವಯಸ್ಸು ಮೂವತ್ತೆರೆಡು.. ತಮಿಳುನಾಡಿನ ರಾಣಿಪೇಟ್ ಜಿಲ್ಲೆಯ ಅರಕ್ಕೋಣಂ ಸಮೀಪದ ನೆಡುಂಪುಲಿ ಗ್ರಾಮದ ನಿವಾಸಿ.. ಈತನ ಗರ್ಭಿಣಿ ಪತ್ನಿಯ ಹೆಸರು ಗೋಮತಿ.. ವಯಸ್ಸು ಇಪ್ಪತ್ತೆಂಟು ವರ್ಷ.. ಗಂಡನ ಪ್ರಯೋಗಕ್ಕೆ ತುತ್ತಾಗಿ ಇದೀಗ ನೋವು ಅನುಭವಿಸುತ್ತಿರುವ ನತದೃಷ್ಟ ಪತ್ನಿ ಇವಳೇ.. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ಗೋಮತಿ ಹಾಗೂ ಲೋಗನಾಥನ್ ಮದುವೆಯಾಗಿತ್ತು.. ಇಬ್ಬರದ್ದು ಮನೆಯವರು ನೋಡಿ ನಿಶ್ಚಯ ಮಾಡಿದ ಮದುವೆಯೇ ಆಗಿತ್ತು.. ಮದುವೆಯ ನಂತರ ಬಹಳ ಅನ್ಯೂನ್ಯವಾಗಿಯೇ ಇದ್ದರು.. ಇತ್ತ ಗೋಮತಿ ಗರ್ಭಿಣಿಯೂ ಆದಳು.. ದಿನಕಳೆದಂತೆ ಗೋಮತಿಗೆ ಒಂಭತ್ತು ತಿಂಗಳು ತುಂಬಿತು.. ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಗಂಡ ಮಾಡಿದ ಕೆಲಸವೇ ಬೇರೆ..

ಹೌದು ಗೋಮತಿಗೆ ಕಳೆದ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿದೆ.. ಈ ವಿಚಾರವನ್ನು ಗಂಡನಿಗೂ ಹೇಳಿದ್ದಾಳೆ.. ಮನೆಯಲ್ಲಿ ಗಂಡ ಬಿಟ್ಟರೆ ಬೇರೆ ಯಾರೂ ಸಹ ಇಲ್ಲ. ತಕ್ಷಣ ಆಸ್ಪತ್ರೆಗೆ ಸೇರಿಸಿ ಮಗು ಹಾಗೂ ತಾಯಿಯನ್ನು ಕಾಪಾಡಬೇಕಿದ್ದ ಗಂಡನೇ ಅಂತಹ ಸೂಕ್ಷ್ಮ ಸಮಯದಲ್ಲಿ ಅಧಿಕಪ್ರಸಂಗತನದ ನಿರ್ಧಾರ ತೆಗೆದುಕೊಂಡಿದ್ದಾನೆ.. ಹೌದು ನಾನು ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ನೋಡಿದ್ದೇನೆ.. ನಿನಗೆ ನಾನೇ ಹೆರಿಗೆ ಮಾಡಿಸುತ್ತೇನೆ ಎಂದಿದ್ದಾನೆ.. ಇತ್ತ ಬೇಡ ನನಗೆ ತಡೆಯಲಾಗುತ್ತಿಲ್ಲ ಎಂದು ಪತ್ನಿ ಎಷ್ಟೇ ಅಂಗಲಾಚಿದರೂ ಸಹ ಲೋಗನಾಥಮ್ ಮಾತ್ರ ತನ್ನ ಹುಚ್ಚಾಟವನ್ನು ನಿಲ್ಲಿಸಲಿಲ್ಲ.. ಯೂಟ್ಯೂಬ್ ನಲ್ಲಿನ ವೀಡಿಯೋ ನೋಡಿಕೊಂಡು ಹೆರಿಗೆ ಮಾಡಿಸಲು ಮುಂದಾಗಿದ್ದಾನೆ.. ಗಂಟೆಗಳು ಕಳೆದವು.. ಹೆಂಡತಿ ಚೀರುತ್ತಲೇ ಇದ್ದಳು.. ಆದರೆ ಹೆರಿಗೆ ಮಾತ್ರ ಆಗುತ್ತಲೇ ಇರಲಿಲ್ಲ..

ಆಗಲೂ ಸಹ ಆ ಕರುಣೆಯೇ ಇಲ್ಲದ ಲೋಗನಾಥನ್ ಆಸ್ಪತ್ರೆಗೆ ಸೇರಿಸಲೇ ಇಲ್ಲ.. ನಾನೇ ಹೆರಿಗೆ ಮಾಡಿಸುತ್ತೇನೆ ಎಂದು ಪ್ರಯತ್ನ ಪಡುತ್ತಲೇ ಇದ್ದನು.. ಹೆಂಡತಿಯ ಹೊಟ್ಟೆಯ ಭಾಗಕ್ಕೆ ಸಾಕಷ್ಟು ಹಿಂಸೆ ಕೊಟ್ಟು ಮಗುವನ್ನೇನೋ ಹೊರಗೆ ಎಳೆದ.. ಆದರೆ ಈತನ ಹುಚ್ಚಾಟಗಳಿಗೆ ಅದಾಗಲೇ ಮಗು ಇಹಲೋಕ ತ್ಯಜಿಸಿಬಿಟ್ಟಿತ್ತು.. ಹೌದು ಇಂತಹ ನಾಲಾಯಕ್ ಜನರು ಯಾಕೆ ಮದುವೆ ಆಗ್ತಾರೋ ಅಥವಾ ಇಂತವರಿಗೆ ಮಗು ಯಾಕೆ ಬೇಕೋ ತಿಳಿಯದು.. ಆದರೆ ಮನೆಗೆ ವಾರಸ್ದಾರನಾಗಬೇಕಿದ್ದ ಪುಟ್ಟ ಕಂದನನ್ನು ಆ ಮಗುವಿನ ಹುಟ್ಟಿಗೆ ಕಾರಣನಾದವನಿಂದಲೇ ಆತನ ಈ ಹುಚ್ಚಾಟಗಳಿಂದ ಮಗು ಜೀವ ಕಳೆದುಕೊಳ್ಳುವಂತಾಯಿತು. ಇತ್ತ ಹೆಂಡತಿಯ ಪರಿಸ್ಥಿತಿ ಗಂಭೀರವಾಯಿತು..

ತಕ್ಷಣ ಗಾಭರಿಗೊಂಡ ಲೋಗನಾಥನ್ ತನ್ನ ಪತ್ನಿಯನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.. ಹೆರಿಗೆ ನೋವಿನ ಸಮಯದಲ್ಲಿ ಸೂಕ್ತ ವಾದ ರೀತಿಯಲ್ಲಿ ನಡೆಯಬೇಕಿದ್ದ ಪ್ರಕ್ರಿಯೆಯನ್ನು ತನ್ನ ಗಂಡನ ಇಂತಹ ಕೆಲಸಗಳಿಂದ ಅತ್ತ ಮಗುವನ್ನೂ ಕಳೆದುಕೊಂಡು ಇತ್ತ ತಾನೂ ಸಹ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುವಂತಾಗಿದೆ.. ಇನ್ನು ಗೋಮತಿಯನ್ನು ನೋಡಿದ ಸರ್ಕಾರಿ ವೈದ್ಯರೇ ಪೊಲೀಸರಿಗೆ ವಿಚಾರ ತಿಳಿಸಿ ಅವನ ಮೇಲೆ ದೂರನ್ನು ಸಹ ನೀಡಿದ್ದಾರೆ.. ವಿಚಾರ ತಿಳಿದ ಕೂಡಲೇ ಇತ್ತ ಲೋಗನಾಥನ್ ನನ್ನು ಪೊಲೀಸರು ತಮ ವಶಕ್ಕೆ ಪಡೆದಿದ್ದಾರೆ.. ಇವನು ಮಾಡಿದ ಅಧಿಕಪ್ರಸಂಗತನದ ಕೆಲಸಕ್ಕೆ ಪ್ರಪಂಚವನ್ನು ನೋಡಬೇಕಾದ ಎಳೆ ಕಂದಮ್ಮ ಇಲ್ಲವಾಗಿ ಹೋಯ್ತು.. ಆ ಕಂದ ಅದೇನು ತಪ್ಪು ಮಾಡಿತ್ತು ಗುರು.. ಇಂತಹ ನಾಲಾಯಕ್ ಗಳಿಗೆ ಮದುವೆ ಬೇರೆ.. ಮಕ್ಕಳು ಬೇರೆ.. ಇವನ ಜನ್ಮಕ್ಕಿಷ್ಟು..

ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸಿಬಿಟ್ಟೆ ಅಂತ ಪ್ರಚಾರ ಪಡೆಯೋ ಆಸೆಯೋ ಅಥವಾ ಮತ್ತಿನ್ನೇನೋ.. ತನ್ನ ಹು ಪ್ರಯೋಗಗಳಿಗೆ ಮಗುವನ್ನೇ ಪಡೆದುಬಿಟ್ಟ.. ಇಂತಹವರಿಗೆ ಸರಿಯಾದ ಶಿಕ್ಷೆಯಾದರೆ ಇಂತಹ ಮನಸ್ಥಿತಿಯುಳ್ಳ ಬೇರೆಯವರು ಬುದ್ಧಿ ಕಲಿಯಬಹುದು. ಪಾಪ ಆ ಹೆಣ್ಣು ಮಗಳ‌ ಮನಸ್ಥಿತಿ ಏನಾಗಿರಬೇಡ.. ಹೆರಿಗೆ ನೋವೆನ್ನುವುದು ಮರುಜನ್ಮ ಪಡೆದು ಬರುವ ಪ್ರಕ್ರಿಯೆ ಎನ್ನುತ್ತಾರೆ ದೊಡ್ಡವರು.. ಆದರೆ ಈತ ಆಕೆಗೆ ಮೂರು‌ ಲೋಕ ತೋರಿಸಿಬಿಟ್ಟ.. ಇಂತಹ ಗಂಡ ಯಾರಿಗೂ ಸಿಗದಿರಲಿ.. ಮಗು ಬರುತ್ತಿದೆ ಎನ್ನುವ ಸಂತೋಷಕ್ಕೆ ಆಸ್ಪತ್ರೆಯ ಬಾಗಿಲ ಮುಂದೆ ಚಡಪಡಿಸಿ‌ ಮಗುವಿನ ಅಳುವಿನ ಸದ್ದು ಕೇಳಿದ ಕೂಡಲೇ ಸಂಭ್ರಮ ಪಟ್ಟು ಸಂತೋಷಕ್ಕೆ ಕಣ್ಣೀರಿಡುವ ತಂದೆಯಂದಿರ ಮುಂದೆ ಈತ ತನ್ನ ಮಗುವನ್ನೇ ತನ್ನ ಪ್ರಯೋಗಕ್ಕೆ ಇಲ್ಲವಾಗಿಸಿದ್ದು ನಿಜಕ್ಕೂ ಮಗುವನ್ನು ನೆನೆದರೆ.. ಆ ಕೊನೆ ಕ್ಷಣದಲ್ಲಿ ಆ ಕಂದ ಅನುಭವಿಸಿದ ನೋವು ನೆನೆದರೆ ಸಂಕಟವಾಗುತ್ತದೆ.. ಇನ್ನಾದರೂ ಇಂತವರಿಗೆ ಬುದ್ಧಿ ಬರಲಿ..