ತೆಂಗಿನ ಕಾಯಿ ಕೀಳಲು 55 ಅಡಿ ಮರವೇರಿದವ ನಾಪತ್ತೆ.. ಕೆಳಗೆ ನಿಂತಿದ್ದವರಿಗೆ ಶಾಕ್.. ಆತ ಏನಾದ ಗೊತ್ತಾ?

0 views

ಎತ್ತರದ ಮರಗಳನ್ನು ಏರಿ ತೆಂಗಿನ ಕಾಯಿ ಕೀಳಲು ಈಗಲೂ ಹಳ್ಳಿಗಳ ಕಡೆ ಅನುಭವ ಇರುವವರನ್ನು ಮಾತ್ರ ಕರೆಸುತ್ತಾರೆ.. ಸ್ವಲ್ಪ ಹೆಚ್ಚು ಕಡಿಮೆ ಆದರೂ ಕಷ್ಟ ಎಂಬ ನಿಟ್ಟಿನಲ್ಲಿ ವರ್ಷಗಳಿಂದ ಮರ ಹತ್ತುವ ಜನರನ್ನೇ ಹುಡುಕಿ ಕಾಯಿ ಕೀಳಿಸುತ್ತಾರೆ.. ಆದರೆ ತೆಂಗಿನ ಕಾಯಿ ಕೀಳಲೆಂದು ಮರ ಹತ್ತಿದವ ಮರಳೊ ಬಾರದೇ ಇದ್ದರೆ ಕೆಳಗೆ ಅವನಿಗಾಗಿ ಕಾದು ನಿಂತವರ ಕತೆ ಏನಾಗಬೇಕಿ ಹೇಳಿ.. ಹೌದು ಅಂತಹುದು ಒಂದು ಘಟನೆ ನಡೆದಿದ್ದು ಬರೋಬ್ಬರಿ 55 ಅಡಿ ಮರವೇರಿದವ ಮರಳಿ ಬಾರದೇ ಕೊನೆಗೆ ಗಂಟೆಗಳು ಕಳೆದಿವೆ..‌ಆಗಲೂ ಬಾರದಿದ್ದಾಗ ಎಲ್ಲರೂ ಶಾಕ್ ಆಗಿದ್ದಾರೆ..

ಹೌದು ತಂಜಾವೂರಿನ ಕರಂತೇಯ ಸರುಕ್ಕೆಯ ವೇಲೂರಿನಲ್ಲಿ ಈ ಘಟನೆ ನಡೆದಿದೆ.. ಅಲ್ಲಿನ ನಿವಾಸಿ ಎಂ.ಲೋಕನಾಥನ್ ತೆಂಗಿನ ಕಾಯಿ ಕೀಳುವುದರಲ್ಲಿ ಎಕ್ಸ್ಪರ್ಟ್.. ಎಷ್ಟೇ ಎತ್ತರದ ಮರವಾದರೂ ಸರಸರನೇ ಏರಿ ತೆಂಗಿನ ಕಾಯಿ ಕೀಳುವುದು ಆತನ ವೃತ್ತಿ.. ಅಂತೆಯೇ ನಿನ್ನೆ ವ್ಯಕ್ತಿಯೊಬ್ಬರ ತೋಟದಲ್ಲಿ ಕಾಯಿ‌ ಕೀಳಲು ಹೋಗಿದ್ದ.. ಎತ್ತರದ 55 ಅಡಿ ಮರದಲ್ಲಿ ಕಾಯಿ ಕೀಳಲೆಂದು ಮರ ಹತ್ತಿದ.. ಆದರೆ ಅಲ್ಲಿಂದ ವಾಪಸ್ ಬರಲೇ ಇಲ್ಲ.. ಇನ್ನೇನು ಕಾಯಿ ಕಿತ್ತು ಕೆಳಗೆ ಹಾಕುತ್ತಾನೆ ಎಂದು ಕೆಳಗೆ ನಿಂತು ಕಾಯಿಗಾಗಿ ಕಾಯುತ್ತಿದ್ದವರು ಕಾದು ಕಾದು ಸುಸ್ತಾದರು.. ಆತ ಮಾತ್ರ ನಾಪತ್ತೆ ಯಾಗಿದ್ದು.. ಎಲ್ಲರಿಗೂ ಒಂದು ಕ್ಷಣ ಗಾಭರಿ ಆಯಿತು.. ಕೆಳಗಿನಿಂದ ಕೂಗಿಕೊಂಡರು ಅಲ್ಲಿಂದ ಹಾ ಹೂ ಏನೂ ಇಲ್ಲ..

ಗಂಟೆಗಳು ಕಳೆದವು.. ಕೆಳಗೆ ನಿಂತವರು ಕೂಗಿ ಕೂಗಿ ಸಾಕಾದರು.. ಮೇಲಿಂದ ಯಾವುದೇ ಪ್ರತಿಕ್ರಿಯೆ ಬಾರಲಿಲ್ಲ.. ತೋಟದ ಮಾಲಿಕನಿಗೆ ದಿಗಿಲು ಬಡಿದಂತಾಯಿತು.. ಏನು ಮಾಡಬೇಕು ಎಂದು ತಿಳಿಯಲೇ ಇಲ್ಲ.. ಇಲ್ಲಸಲ್ಲದ ಆಲೋಚನೆಗಳು ಬಂದವು.. ಇನ್ನು ಅಷ್ಟು ದೊಡ್ಡ ಮರವನ್ನು ಏರಿ ಆತನನ್ನು‌‌‌ ನೋಡೋದಾದರೂ ಯಾರು.. ಮರ ಏರಲು ಯಾರೂ ಸಿಗಲಿಲ್ಲ.. ದಿಕ್ಕು ತೋಚದೆ ಕೊನೆಗೆ ಗ್ರಾಮಸ್ಥರು ತಂಜಾವೂರಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಅವರು ಅಗ್ನಿ ಶಾಮಕದಳದ ಸಿಬ್ಬಂದಿಗೆ ವಿಚಾರ ತಿಳಿಸಿ ಸ್ಥಳಕ್ಕೆ ಕರೆಸಿದ್ದಾರೆ..

ಅಗ್ನಿ ಶಾಮಕ ದಳದವರು ಬಂದು ಮರದ ಕೆಳಗೆ ನಿಂತು ಆತನನ್ನು ಕೂಗಿದ್ದಾರೆ.. ಆದರೆ ಆಗಲೂ ಅವನ ಪತ್ತೆಯೇ ಇಲ್ಲ.. ಕೊನೆಗೆ ಸ್ಟೀಲ್ ಏಣಿ ಇಟ್ಟು ಅಗ್ನಿಶಾಮಕ ಸಿಬ್ಬಂದಿ ಮರವನ್ನೇರಿ ನೋಡಿದ್ದಾರೆ.. ಆಗಲೇ ಅಲ್ಲಿದ್ದವರಿಗೆ ಗಾಭರಿಯಾಗಿದ್ದು.. ಹೌದು ಮರವೇರಿದ್ದ ಲೋಕನಾಥನ್ ಅಲ್ಲಿಯೇ ಕಣ್ಣು ಮುಚ್ಚಿದ್ದ ಸ್ಥಿತಿಯಲ್ಲಿದ್ದ.. ಬಹುಶಃ ಆತನಿಗೆ ಏನಾದರೂ ಆಗಿರಬಹುದು ಎಂದು ಹತ್ತಿರ ಹೋಗಿ ನೋಡಿದ್ದಾರೆ.. ಆದರೆ ಕಣ್ಣು ಮುಚ್ಚಿದ್ದ ಲೋಕನಾಥನ್ ಉಸಿರಾಡುತ್ತಿದ್ದ..‌ ತಕ್ಷಣ ಅವನನ್ನು ಅಗ್ನಿ ಶಾಮಕ ಸಿಬ್ಬಂದಿ ಎಚ್ಚರ ಗೊಳಿಸಿದ್ದಾರೆ.. ಆಗ ಲೋಕನಾಥನ್ ಅಗ್ನಿ ಶಾಮಕ ಸಿಬ್ಬಂಧಿ ಹಾಗೂ ಸ್ಟೀಲ್ ಏಣಿಯನ್ನು ನೋಡಿ ಶಾಕ್ ಆಗಿದ್ದಾನೆ.. ನೀವ್ಯಾಕೆ ಇಲ್ಲಿ ಬಂದಿರಿ ಎಂದು ಕೇಳಿದ್ದಾನೆ..

ಆಗ ಅಗ್ನಿ ಶಾಮಕ ಸಿಬ್ಬಂದಿ ನಡೆದ ವಿಚಾರ ತಿಳಿಸಿದ್ದಾರೆ.. ಅಯ್ಯೋ ಇಷ್ಟು ದೊಡ್ಡ ಮರ ಏರಿ ಬಂದನಲ್ಲ.. ಬಹಳ ಸುಸ್ತಾಗಿತ್ತು.. ಯಾವಾಗ ನಿದ್ರೆ ಬಂತೋ ಗೊತ್ತಿಲ್ಲ.. ಹಾಗೆಯೇ ಮಲಗಿಬಿಟ್ಟೆ.. ಗಾಡ ನಿದ್ರೆ ಬಂದುಬಿಟ್ಟಿತು ಎಂದಿದ್ದಾನೆ.‌. ಕೊನೆಗೆ ಆತನನ್ನು ಬೈದುಕೊಂಡು ಕೆಳಗೆ ಕರೆದು ತಂದಿದ್ದಾರೆ..

ವಿಚಾರ ಕೇಳಿ ಅಲ್ಲಿದ್ದವರೆಲ್ಲಾ ನಕ್ಕರೆ‌.. ಆದರೆ ನಿದ್ರೆ ಮಾಡುತ್ತಾ ಅಕಸ್ಮಾತ್ ಮರದಿಂದ ಬಿದ್ದು ಬಿಟ್ಟುದ್ದರೆ ನನ್ನ ಗತಿ ಏನು ಎಂದು ತೋಟದ ಮಾಲಿಕ ನಿಟ್ಟುಸಿರು ಬಿಟ್ಟಿದ್ದಾನೆ..ಇನ್ನು ಲೋಕನಾಥನ್ ನನ್ನು ಪೊಲೀಸ್ ಠಾಣೆಗೆ ಕರೆಸಿ ಮತ್ತೊಮ್ಮೆ ಹೀಗೆ ಮಾಡಬೇಡ.. ಎಚ್ಚರಿಕೆಯಿಂದ ಮರವೇರು ಎಂದು ಬುದ್ದಿ ಹೇಳಿ ಕಳುಹಿಸಿದ್ದಾರೆ..