ಕೊರಗಜ್ಜನ ಹುಂಡಿಗೆ ಡೋಮನ್ನು ಹಾಕಿದ ಒಬ್ಬನ ಗತಿ ಏನಾಗಿದೆ ನೋಡಿ.. ದೇವರ ಮುಂದೆ ಬಂದು ದಯವಿಟ್ಟು ಕ್ಷಮಿಸಿಬಿಡು ಎಂದು ಬೇಡುತ್ತಿದ್ದಾರೆ ಉಳಿದವರು..

0 views

ಕರಾವಳಿ ಭಾಗದಲ್ಲಿ ಅಲ್ಲಿಯದ್ದೇ ಒಂದು ಶೈಲಿಯ ಸಂಪ್ರದಾಯವಿದ್ದು ಕೊರಗಜ್ಜರನ್ನು ಪೂಜಿಸಲಾಗುತ್ತದೆ.. ಅಲ್ಲಿನ ದೇವರುಗಳು ಆಗಾಗ ತಮ್ನ ಕಾರಣಿಕ ಶಕ್ತಿಯನ್ನು ತೋರಿಸುತ್ತಲೇ ಇದ್ದು ಭಕ್ತರಲ್ಲಿ ಮೈ ರೋಮಾಂಚನವಾಗುವ ಪವಾಡಗಳು ಸಹ ನಡೆದಿವೆ.‌ ಇದೀಗ ಕೊರಗಜ್ಜನ ಹುಂಡಿಗೆಕಾಂ ಡೋಮನ್ನು ಹಾಕಿದವನ ಸ್ಥಿತಿ ಏನಾಗಿದೆ ಎಂದು ತಿಳಿದು ಜನರು ಬೆಚ್ಚಿಬಿದ್ದಿದ್ದಾರೆ.. ಹೌದು ಕೆಲ ದಿನಗಳ ಹಿಂದೆ ಕೊರಗಜ್ಜನ ಹುಂಡಿಗೆ ಕೆಲವರು ಈ ಕೆಲಸ ಮಾಡಿದ್ದರು.. ಹಾಗೂ ಕೆಟ್ಟ ಪತ್ರ ಬರೆದು ಹುಂಡಿಗೆ ಹಾಕಿದ್ದರು..

ಈ ಬಗ್ಗೆ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸುತ್ತಿದ್ದರು.. ಆದರೆ ಪೊಲೀಸರು ಇದರ ಬಗ್ಗೆ ಕಂಡು ಹಿಡಿಯುವ ಮುನ್ನವೇ ದೇವರೇ ಅವರಿಗೆಲ್ಲಾ ಶಿಕ್ಷೆ ನೀಡಿಯಾಗಿದೆ.. ಹೌದು ಮಂಗಳೂರಿನ ಎಮ್ಮೆಕೆರೆಯ ಕೋಟೆದ ಬಬ್ಬುಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕೆಲವರು ಆ ರೀತಿ ಮಾಡಿ ಕೆಟ್ಟ ಪತ್ರವನ್ನು ಬರೆದು ಹಾಕಿದ್ದರು.‌ ಅದರಲ್ಲಿ ಇಬ್ಬರು ಬಂದು ಇದೀಗ ಬುಧವಾರ ರಾತ್ರಿ ಎಮ್ಮೆಕೆರೆಯಲ್ಲಿ ನಡೆದ ಕೊರಗಜ್ಜ ಕೋಲದಲ್ಲಿ ದೇವರಿಗೆ ಶರಣಾಗಿ ದಯವಿಟ್ಟು ಕ್ಷಮಿಸಿಬಿಡು ಆ ತಪ್ಪು ಮಾಡಿದವರು ನಾವೇ ಎಂದು ಬೇಡುತ್ತಿದ್ದಾರೆ.. ಇವರು ಈ ರೀತಿ ಶರಣಾಗಲು ಬೇರೆ ಕಾರಣವೂ ಇದೆ..

ಹೌದು ಇವರ ಜೊತೆ ಕಾಣಿಕೆ ಹುಂಡಿಗೆ ಅದನ್ನು ಹಾಕಿದವ ಮತ್ತೊಬ್ಬನಿಗೆ ಹು ಚ್ಚು ಹಿಡಿದು ತಲೆಯನ್ನು ಗೋಡೆಗೆ ಗುದ್ದಿಕೊಂಡು ಜೀವ ಕಳೆದುಕೊಂಡಿದ್ದಾನೆ.. ಅಷ್ಟೇ ಅಲ್ಲದೇ ಮಿಕ್ಕವರಿಗೂ ಸಾಕಷ್ಟು ಕಷ್ಟಗಳು ಎದುರಾಗಿದ್ದು ತಾವು ಮಾಡಿದ ತಪ್ಪಿನ ಅರಿವಾಗಿ ಜೀವ ಉಳಿಸಿಕೊಳ್ಳುವ ಸಲುವಾಗಿ ದೇವರ ಮುಂದೆ ಬಂದು ಶರಣಾಗಿದ್ದಾರೆ.. ತಪ್ಪು ಕಾಣಿಕೆ ಸಲ್ಲಿಸಿ ಕೊರಗಜ್ಜ ದೇವರ ಮುಂದೆ ತಪ್ಪು ಒಪ್ಪಿಕೊಳ್ಳುತ್ತಿದ್ದ ಸಮಯದಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.. ಒಬ್ಬ ಅದಾಗಲೇ ಜೀವ ಕಳೆದುಕೊಂಡಿದ್ದು ಇನ್ನೂ ಹಲವರಿಗೆ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಈ ಇಬ್ಬರಿಗೆ ನಡುಕ ಹುಟ್ಟಿ ದೇವರ ಬಳಿ ಬಂದು ಶರಣಾಗಿದ್ದಾರೆ..

ಕೊರಗಜ್ಜರ ದರ್ಶನದ ಸಮಯದಲ್ಲಿ ನೆರೆದಿದ್ದ ನೂರಾರು ಜನರು ಈ ಘಟನೆಗೆ ಸಾಕ್ಷಿಯಾಗಿದ್ದು ದೇವರ ಶಕ್ತಿಯ ಬಗ್ಗೆ ಕೊಂಡಾಡಿದ್ದಾರೆ.. ಅಷ್ಟೇ ಅಲ್ಲದೇ ತಪ್ಪು ಮಾಡಿದವರನ್ನು ಎಂದೂ ಸಹ ಆ ದೇವರು ಬಿಡೋದಿಲ್ಲ ಎಂಬುದಕ್ಕೆ ಮತ್ತೊಂದು ನೈಜ್ಯ ಘಟನೆ ಉದಾಹರಣೆಯಾಗಿ ನಿಂತಿದೆ..