ಹೆಣ್ಣು ಕೊಟ್ಟ ಅತ್ತೆಗೆ ಕೊರೊನಾ ಬಂದ ಸಮಯದಲ್ಲಿ ಆಕೆಯ ಅಳಿಯ ಮಾಡಿರುವ ನೀಚ ಕೆಲಸ ನೋಡಿ.. ಈತನ ಜನ್ಮಕ್ಕಿಷ್ಟು..

0 views

ಕೊರೊನಾ ಬಂದು ನಿಜಕ್ಕೂ ಜನರಿಗೆ ಭಯವನ್ನು ಮಾತ್ರ ತರಿಸಿಲ್ಲ.. ಬದಲಿಗೆ ಮನುಷ್ಯರಲ್ಲಿ ಮಾನವೀಯತೆಯೂ ಮರೆಯಾಗಿ ಹೋಗಿದೆ ಎಂಬ ಸತ್ಯವನ್ನು ಬಯಲು ಮಾಡುತ್ತಿದೆ.. ಹೌದು ಹೇಗಾದರೂ ಮಾಡಿ ನಮ್ಮ ಅಪ್ಪನನ್ನು ಅಮ್ಮನನ್ನು ಉಳಿಸಿಕೊಡಿ.. ನನ್ನ ಗಂಡನನ್ನು ಉಳಿಸಿಬಿಡಿ.. ನನ್ನ ಮಕ್ಕಳನ್ನು ಉಳಿಸಿಕೊಡಿ ಎಂದು ಅಂಗಲಾಚುವ ಮನುಷ್ಯ ವರ್ಗ ಒಂದೆಡೆಯಾದರೆ ಕೊರೊನಾ ಬಂದರೆ ಸಾಕು ಅವರನ್ನು ಯಾವುದೋ ಪ್ರಾಣಿಯನ್ನು ನೋಡುವ ರೀತಿಯಲ್ಲಿ‌ ನೋಡಿ ಮನೆಯಿಂದ ಆಚೆ ಹಾಕುವ ಮನುಷ್ಯ ವರ್ಗ ಮತ್ತೊಂದೆಡೆ ಆಗಿದೆ.. ಅದರಲ್ಲಿಯೂ ಮಂಡ್ಯದಲ್ಲಿ ನಡೆದಿರುವ ಈ ಘಟನೆ ಮನೆ ಅಳಿಯನ ನೀಚತನವನ್ನು ತೋರುತ್ತಿದೆ..

ಹೌದು ಮಂಡ್ಯದ ಮದ್ದೂರು ತಾಲೂಕಿನ ಅರೇಚಾಕನ ಹಳ್ಳಿಯಲ್ಲಿ ಇಂತಹದೊಂದು ಘಟನೆ ನಡೆದಿದೆ.. ಅತ್ತೆಗೆ ಕೊರೊನಾ ಪಾಸಿಟಿವ್ ಬಂದಿದೆ.. ಆದರೆ ಅತ್ತೆಯನ್ನು ಆಕೆಯ ಅಳಿಯ ಮುದ್ದೇಗೌಡ ಮನೆಗೆ ಸೇರಿಸಿಕೊಳ್ಳೋದಿಲ್ಲ ಅಂತ ಮನೆಯಿಂದ ಹೊರ ಹಾಕಿರುವ ಘಟನೆ ನಡೆದಿದೆ.. ಆದರೆ ಇದರಲ್ಲಿ ಹೇಳಲೇ ಬೇಕಾದ ವಿಚಾರ ಎಂದರೆ ಇದೇ ಅಳಿಯ ಮುದ್ದೇಗೌಡನಿಗೆ ತನ್ನ ಮಗಳನ್ನು ಕೊಟ್ಟು ಮನೆ ಅಳಿಯನನ್ನಾಗಿ ಮಾಡಿಕೊಳ್ಳಲಾಗಿತ್ತು.. ಇದೀಗ ಆ ವೃದ್ದೆಯ ಮನೆಗೆ ಅವಳನ್ನೇ ಸೇರಿಸಿಕೊಳ್ಳದ ಸಂದರ್ಭ ಎದುರಾಗಿದೆ..

ಹೌದು ನಿನ್ನೆಯಷ್ಟೇ ಮೈಸೂರಿನಲ್ಲಿ ಕೊರೊನಾದಿಂದ ಜೀವ ಕಳೆದುಕೊಂಡ ತಂದೆ ನನಗೆ ಬೇಡ ಅವರ ಅಂತ್ಯ ಸಂಸ್ಕಾರವನ್ನು ನೀವೆ ಮಾಡಿಬಿಡಿ.. ಆದರೆ ಅವರು ಇಟ್ಟಿರುವ ಆರು ಲಕ್ಷ ರೂಪಾಯಿಗಳನ್ನು ತಂದು ನಾನು ಇರುವ ಜಾಗಕ್ಕೆ ಕೊಡಿ ಎಂದು ಪುತ್ರ ಮಹಾಶಯನೊಬ್ಬ ನಗರ ಪಾಲಿಕೆ ಸದಸ್ಯರಿಗೆ ತಿಳೊಸಿರುವ ವಿಚಾರ ಸುದ್ದಿಯಾಗಿತ್ತು.. ಮತ್ತಿನ್ನೆಲ್ಲೋ ಕೊರೊನಾದಿಂದ ಗುಣಮುಖರಾಗಿ ಮನೆಗೆ ಬಂದ ಹೆತ್ತ ತಾಯಿಯನ್ನೇ ಮನೆಗೆ ಸೇರಿಸದೇ ಬಾಗಿಲು ಹಾಕಿಕೊಂಡ ಮಗನನ್ನು ನೋಡಿ ಮನನೊಂದು ನಾನು ಇನ್ಯಾರಿಗಾಗಿ ಇರಬೇಕೆಂದು ಆ ಬಡ ತಾಯಿ ಕೆರೆಗೆ ಹಾರಿ ತನ್ನ ಜೀವವನ್ನೇ ಕಳೆದುಕೊಂಡಿದ್ದಳು.. ಇದೀಗ ತಾನೇ ಮಗಳನ್ನು ಕೊಟ್ಟು‌ ಮದುವೆ ಮಾಡಿ ಮನೆ ಅಳಿಯನನ್ನಾಗಿ ಮಾಡಿಕೊಂಡ ಅತ್ತೆಯನ್ನೇ ಆಕೆಯ ಮನೆಯಲ್ಲಿಯೇ ಇದ್ದ ಅಳಿಯ ಮನೆಗೆ ಸೇರಿಸದೇ ನೀಚತನ ತೋರಿರುವುದು ನಿಜಕ್ಕೂ ಆ ವೃದ್ದೆಯ ನೆನೆದರೆ ಮನಕಲಕುತ್ತದೆ..

ಸದ್ಯ ಆಕೆಗೆ ಪಾಸಿಟಿವ್ ಬಂದಿದೆಯಷ್ಟೇ ಆಕೆಗೆ ಆಸ್ಪತ್ರೆಯ ಅವಶ್ಯಕತೆ ಇಲ್ಲ ಹೋಮ್ ಐಸೋಲೇಷನ್ ನಲ್ಲಿ ಇಟ್ಟರೆ ಗುಣ ಆಗ್ತಾರೆ.. ಚೆನ್ನಾಗಿ ಹಾರೈಕೆ ಮಾಡಬೇಕು ಆಗ ಮಾತ್ರವೇ ಗುಣ ಆಗೋದು ಎಂದು ಆರೋಗ್ಯಾಧಿಕಾರಿಗಳು ಆಕೆಯ ಮನೆಯ ಬಳಿಯೇ ಬಂದು ಬಾಗಿಲಲ್ಲಿ ನಿಂತು ತಿಳಿಸಿದರೂ ಕೂಡ ಆಕೆಯನ್ನು ಮನೆಗೆ ಸೇರಿಸಲು ಅಳಿಯ ತಯಾರಿಲ್ಲ.. ಕೊನೆಗೆ ಆರೋಗ್ಯಾಧಿಕಾರಿಗಳೇ ಆಕೆಯನ್ನು ಮದ್ದೂರಿನ ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಿ ಅಲ್ಲಿಯೇ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.. ಈ ರೀತಿ ಮಾನವೀಯತೆ ಮರೆಯಾಗಿ ಮನುಷ್ಯ ತನ್ನ ನೀಚತನದ ತುತ್ತ ತುದಿ ತಲುಪಿರುವುದಕ್ಕೇ ಬಹುಶಃ ಭೂಮಿಗೆ ಈ ರೀತಿಯಾದ ಕಾಯಿಲೆಗಳು ಅಂಟುತ್ತಿರುವುದು.. ನಿನ್ನೆ ಇದ್ದವರು ಇಂದು ಇಲ್ಲ.. ಯಾರೂ ಶಾಶ್ವತವಲ್ಲ ಎಂಬುದು ಕಣ್ಣಿಗೆ ಸ್ಪಷ್ಟವಾಗಿ ಕಾಣುತ್ತಿದ್ದರೂ ಸಹ ಈ ರೀತಿ ಮಾನವೀಯತೆ ಇಲ್ಲದೇ ನಡೆದುಕೊಳ್ಳುತ್ತಿರುವುದು ಅದ್ಯಾವ ರಾಜ್ಯವಾಳಲೋ ತಿಳಿದಿಲ್ಲ.. ಇನ್ನಾದರೂ ಇಂತಹ ಮನಸ್ಸುಗಳು ಬದಲಾಗಲಿ..