ಮಧುಗಿರಿಯಲ್ಲಿ ಅಂತ್ಯ ಸಂಸ್ಕಾರವಾಗಿದ್ದ ವ್ಯಕ್ತಿ.. ಮೂರು ತಿಂಗಳ ನಂತರ ಏನಾಗಿ ಮರಳಿದ್ದಾರೆ ಗೊತ್ತಾ.. ಬೆಚ್ಚಿಬಿದ್ದ ಗ್ರಾಮಸ್ಥರು‌..

0 views

ಜೀವನದಲ್ಲಿ ಕೆಲವೊಮ್ಮೆ ಇಂತಹ ಘಟನೆಗಳು ಜನರನ್ನು ತಬ್ಬಿಬ್ಬು ಮಾಡಿಬಿಡುತ್ತವೆ.. ಹೌದು ವ್ಯಕ್ತಿಯೊಬ್ಬರನ್ನು ಕಳೆದುಕೊಂಡು ದುಃಖದಲ್ಲಿಯೇ ಅಂತ್ಯ ಸಂಸ್ಕಾರ ಮಾಡಿ ಕ್ರಮೇಣ ಆ ವ್ಯಕ್ತಿಯನ್ನು ಕಳೆದುಕೊಂಡ ನೋವನ್ನು ಮರೆಯುತ್ತಿರುವಾಗ ಇದ್ದಕಿದ್ದ ಹಾಗೆ ಆ ವ್ಯಕ್ತಿ ಕಣ್ಣಮುಂದೆ ಪ್ರತ್ಯಕ್ಷ ಆದರೆ ನಿನಕ್ಕೂ ಹೃದಯ ಗಟ್ಟಿ ಇಲ್ಲದ ವ್ಯಕ್ತಿ ನಿಂತ ಸ್ಥಳದಲ್ಲಿಯೇ ಎಲ್ಲವನ್ನೂ ಮಾಡಿಕೊಳ್ಳುವುದು ಖಚಿತ.. ಹೌದು ಅಗಲಿದ ವ್ಯಕ್ತಿಯೊಬ್ಬರಿಗೆ ಸಕಲ ಕಾರ್ಯಗಳನ್ನು ನೆರವೇರಿಸಿ ಇನ್ನೇನು ಆ ವ್ಯಕ್ತಿಯನ್ನು ಮರೆಯುತ್ತಿರುವಾಗಲೇ ಇದ್ದಕಿದ್ದ ಹಾಗೆ ಗ್ರಾಮಕ್ಕೆ ಬಂದ ಅದೇ ವ್ಯಕ್ತಿಯನ್ನು ನೋಡಿ ಇದೀಗ ಗ್ರಾಮಸ್ಥರು ಕಕ್ಕಾಬಿಕ್ಕಿಯಾಗಿದ್ದಾರೆ..

ಹೌದು ಇಂತಹದೊಂದು ಘಟನೆ ರಾಜ್ಯದ ಮಧುಗಿರಿಯಲ್ಲಿ ನಡೆದಿದೆ.. ಈತನ ಹೆಸರು ನಾಗರಾಜಪ್ಪ.. ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ ನಿವಾಸಿ.. ಈ ವ್ಯಕ್ತಿಗೆ ಬಹಳಷ್ಟು ವರ್ಷಗಳಿಂದ ಕುಡಿಯುವ ಅಭ್ಯಾಸವಿದ್ದು ಆರೋಗ್ಯ ತೀರಾ ಹದಗೆಟ್ಟಿತ್ತು.. ಇದೇ ಕಾರಣಕ್ಕೆ ನಾಗರಾಜಪ್ಪನನ್ನು ಬೆಂಗಳೂರಿನ ನಿಮಾಃನ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ಸೇರಿಸಲಾಗಿತ್ತು.‌ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಆದರೆ ಆ ಆಸ್ಪತ್ರೆಯಲ್ಲಿ ನಾಗರಾಜಪ್ಪ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರೆಂದು ಕುಟುಂಬಸ್ಥರಿಗೆ ಪಾರ್ಥೀವವನ್ನು ಹಸ್ತಾಂತರ ಮಾಡಿದ್ದರು..

ನಂತರ ಗ್ರಾಮಕ್ಕೆ ತಂದು ಸಂಪ್ರದಾಯದಂತೆ ಎಲ್ಲಾ ಕಾರ್ಯಗಳನ್ನು ಮಾಡಿ ಅಂತ್ಯ ಸಂಸ್ಕಾರ ಮಾಡಲಾಗಿತ್ತು.. ಮೂರನೇ ದಿನ ಹಾಲು ತುಪ್ಪ.. ಹನ್ನೊಂದನೇ ದಿನ ತಿಥಿ ಕಾರ್ಯ ಎಲ್ಲವನ್ನೂ ಸಹ ನೆರವೇರಿಸಿ ಅನ್ನಸಂತರ್ಪಣೆಯನ್ನೂ ಸಹ ಮಾಡಲಾಗಿತ್ತು.. ಹೀಗೆ ದಿನ ಕಳೆದು ನಾಗರಾಜಪ್ಪನನ್ನು ಮರೆಯುತಲಿದ್ದರು ಜನ.. ಆದರೆ ಇದೀಗ ಇದ್ದಕಿದ್ದ ಹಾಗೆ ಗ್ರಾಮಕ್ಕೆ ಬಂದ ಬಸ್ ನಲ್ಲಿ ನಾಗರಾಜಪ್ಪ ಆಗಮಿಸಿದ್ದು ಜನರು ಬೆಚ್ಚಿಬಿದ್ದಿದ್ದಾರೆ..

ಹೌದು ನಾಗರಾಜಪ್ಪ ಇಂದು ಬೆಳಿಗ್ಗೆ ಕೋಡಿಗೇನಹಳ್ಳಿ ಗ್ರಾಮಕ್ಕೆ ಬಸ್ ನಲ್ಲಿ ಬಂದು ಇಳಿದಿದ್ದು ಅದರಲ್ಲೂ ಕೋಟ್ ಎಲ್ಲವನ್ನು ಧರಿಸಿಕೊಂಡು ಬಂದು ಆಶ್ಚರ್ಯ ಮೂಡಿಸಿದ್ದಾರೆ‌. ಇತ್ತ ಗ್ರಾಮಸ್ಥರು ಕೆಲವರು ನಾಗರಾಜಪ್ಪನನ್ನು ನೋಡಿ ಎದ್ನೋ ಬಿದ್ನೋ ಎನ್ನುವಂತೆ ಓಡಿ ಹೋದರೆ ಮತ್ತೆ ಕೆಲವರು ಧೈರ್ಯ ಮಾಡಿ ಮಾತನಾಡಿಸಿದ್ದಾರೆ.. ಆಗ ನಾನು ನಾಗರಾಜಪ್ಪ ಎಂದಿರುವ ವ್ಯಕ್ತಿ ಸಧ್ಯ ತಮ್ಮ ಮನೆಗೆ ತೆರಳಿದ್ದಾರೆ..

ಇವರು ನಾಗರಾಜಪ್ಪನಾದರೆ ಮೂರು ತಿಂಗಳ ಹಿಂದೆ ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಿದ ವ್ಯಕ್ತಿ ಯಾರು ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಗ್ರಾಮಸ್ಥರು ಪೊಲಿಸರ ಮೊರೆಯೋಗಿದ್ದು ತನಿಖೆಯ ಬಳಿಕ ಸತ್ಯ ಹೊರ ಬೀಳಲಿದೆ.. ನಾಗರಾಜಪ್ಪ ಮಧುಗಿರಿ ತಾಲೂಕಿನ ಚಿಕ್ಕ ಮಾಲೂರು ಗ್ರಾಮದ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ ಎಂಬುವರ ತಂದೆಯಾಗಿದ್ದಾರೆ.. ಇತ್ತ ತಂದೆ ಮನೆಗೆ ಮರಳಿ ಬಂದ ಸಂತೋಷ ಒಂದು ಕಡೆಯಾದರೆ ಅತ್ತ ಅಂತ್ಯ ಸಂಸ್ಕಾರ ಮಾಡಿದ ಆ ವ್ಯಕ್ತಿ ಯಾರು ಎಂಬ ಕುತೂಹಲ ಮೂಡಿದೆ.. ಒಟ್ಟಿನಲ್ಲಿ ಅಂತ್ಯ ಸಂಸ್ಕಾರ ಆಯಿತು ಎಂದುಕೊಂಡ ನಾಗರಾಜಪ್ಪ ಮೂರು ತಿಂಗಳ ನಂತರ ವಾಪಸ್ ಗ್ರಾಮಕ್ಕೆ ಬಂದಿಳಿದಿದ್ದು ಅವರನ್ನು ನೋಡಲು ಗ್ರಾಮದ ಜನರು ಕಿಕ್ಕಿರಿದು ನಿಂತಿದ್ದಾರೆ..