ಮಧು ಸಾಗರ್ ಬರೆದ ಸಂಪೂರ್ಣ ಪತ್ರ.. ನೋಡಿ ಶಾಕ್ ಆದ ಪೊಲೀಸರು..

0 views

ಒಬ್ಬರಲ್ಲ ಇಬ್ಬರಲ್ಲ ಒಂದೇ ಕುಟುಂಬದ ಐದು ಮಂದಿ ಒಂದೇ ದಿನ ಇಲ್ಲವಾದ ಘಟನೆಗೀಗ ಊಹಿಸಿರದ ತಿರುವು ದೊರೆತಿದೆ.. ಹೌದು ಪತ್ರಕರ್ತ ಶಂಕರ್ ಪತ್ನಿ ಹೆಣ್ಣು ಮಕ್ಕಳು ಹಾಗೂ ಗಂಡು ಮಗ ಹಾಗೂ ಒಂಭತ್ತು ತಿಂಗಳ ಮೊಮ್ಮಗು ಸೇರಿದಂತೆ ಒಟ್ಟು ಐದು ಮಂದಿ ಒಂದೇ ದಿನ ಇಲ್ಲವಾದ ಮನಕಲಕುವ ಘಟನೆಗೆ ನಿಜವಾದ ಕಾರಣ ಯಾರೆಂದು ಇದೀಗ ಮಧು ಸಾಗರ್ ಜೀವ ಕಳೆದುಕೊಳ್ಳುವ ಮುನ್ನ ಸಂಪೂರ್ಣವಾಗಿ ಬರೆದಿಟ್ಟಿದ್ದಾನೆ.. ಹೌದು ಇಷ್ಟಕ್ಕೆಲ್ಲಾ ಕಾರಣ ಮತ್ಯಾರೂ ಅಲ್ಲ ಅವನ ತಂದೆ ಶಂಕರ್.. ಹೌದು ಮಕ್ಕಳು ಮೊಮ್ಮಕ್ಕಳು ಇರುವ ಈ ವಯಸ್ಸಿನಲ್ಲಿ ಒಬ್ಬರಲ್ಲ ಇಬ್ಬರಲ್ಲ ಒಟ್ಟು ಐದು ಜನರ ಜೊತೆ ಸಂಬಂಧ ಹೊಂದಿದ್ದಾನೆ ಶಂಕರ್.. ತನ್ನ ಸಂಪೂರ್ಣ ಕುಟುಂಬ ಇಲ್ಲವಾದರೂ ಸಹ ಒಂದು ಹನಿ ಕಣ್ಣೀರಿಡದ ಮನುಷ್ಯನ ನಿಜ ಬಣ್ಣ ಇದೀಗ ಬಯಲಾಗಿದೆ.. ಹೌದು ಆ ದಿನ ತನ್ನ ಕುಟುಂಬ ಇಲ್ಲವಾಯಿತು ಎಂದು ಒಂದು ಸಣ್ಣ ನೋವಿನ ಮಾತನ್ನೂ ಸಹ ಆಡದೇ ನನ್ನ ಜೀವನ ಹೋಯ್ತು.. ನನ್ನ ಹೆಸರು ಹೋಯ್ತು ಎಂದು ಹೇಳಿಕೆ ನೀಡಿದ್ದ ವ್ಯಕ್ತಿಯ ನಿಜರೂಪ ಮಗನ ಪತ್ರದಲ್ಲಿದೆ ನೋಡಿ‌..

ನನ್ನ ಅಪ್ಪ ಎನಿಸಿಕೊಂಡವ ಒಬ್ಬ ಆಗಿದ್ದ.. ಅಷ್ಟೇ ಅಲ್ಲದೇ ಅವನಿಗೆ ಸಂಬಂಧಗಳು ಹೆಚ್ಚಾಗಿದ್ದವು‌‌‌.. ಅವನಿಗೆ ಐದು ಜನ ಅದರಲ್ಲಿಯೂ ಎಲ್ಲಾ ಮದುವೆಯಾಗಿರುವವರ ಜೊತೆ ಸಂಬಂಧವಿದೆ.. ಅಷ್ಟೇ ಅಲ್ಲ ನಮ್ಮದೇ ಏರಿಯಾದಲ್ಲಿರುವ ಒಬ್ಬರ ಜೊತೆಯೂ ಸಂಬಂಧ ಇದೆ.‌. ಅದರಲ್ಲೂ ಅವನು ಸಂಬಂಧ ಇಟ್ಟುಕೊಂಡಿರುವವರ ಮಗಳ ಜೊತೆಯೇ ನನ್ನನ್ನು ಮದುವೆ ಆಗು ಮದುವೆ ಆಗು ಅಂತ ನನಗೆ ಒತ್ತಾಯಮಾಡುತ್ತಿದ್ದ‌. ಅವನ ಕಚೇರಿಯಲ್ಲಿ ಒಬ್ಬರ ಜೊತೆ ಸಂಬಂಧ ಇದೆ.. ಹೀಗೆ ಒಂದಲ್ಲಾ ಎರಡಲ್ಲಾ ಐದು ಜನರ ಜೊತೆ ಸಂಬಂಧವಿದೆ‌‌.. ಇವನ ಈ ಆಟಗಳನ್ನು ನೋಡಿ ನೋಡಿ ನಾನು ಹಾಗೂ ಅಮ್ಮ ಬೇಸತ್ತುಹೋಗಿದ್ದೆವು.. ಅವನಿಂದ ನಾನು ಮತ್ತು ಅಮ್ಮ ದೂರ ಉಳಿದಿದ್ದೆವು.. ನಮ್ಮ ಅಮ್ಮ ಹಾಗೂ ಅಕ್ಕಂದಿರಿಗೆ ನೋವು ನೀಡುತ್ತಿದ್ದರು.. ಅವನ ಬಗ್ಗೆ ಅಮ್ಮನಿಗೆ ಎಲ್ಲವೂ ಗೊತ್ತಿತ್ತು.. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ ಮನಸ್ತಾಪಗಳು ನಡೆಯುತ್ತಲೇ ಇದ್ದವು‌‌.. ನಮ್ಮ ಅಕ್ಕಂದಿರ ಜೀವನವನ್ನೂ ಸಹ ಮಾಡಿಬಿಟ್ಟರು..

ಮನೆಯಲ್ಲಿ ನಮ್ಮಗಳನ್ನು ಒಳಗೆ ಇಟ್ಟು ಬೀಗ ಹಾಕುತ್ತಿದ್ದರು.. ಅಮ್ಮನಿಗೆ ಇದರಿಂದ ಬಹಳಷ್ಟು ನೋವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆವು..‌ ಈ ಬಗ್ಗೆ ಈ ಮೊದಲೇ ಪೊಲೀಸ್ ಠಾಣೆಯಲ್ಲಿ ಅವನ ಮೇಲೆ ದೂರು ನೀಡಲಾಗಿತ್ತು.. ಬಹಳಷ್ಟು ವರ್ಷಗಳಿಂದಲೂ ನಮ್ಮ ಅಪ್ಪನದ್ದು ಇದೇ ಕತೆ.. ಈ ಹಿಂದೆ 3 ಕೋಟಿ ಹಣ ಖರ್ಚು ಮಾಡಿ ಮನೆ ಕಟ್ಟಿಸಿದ್ರು.. ಆದರೆ ಮನೆಯೂ ಸೋರುತ್ತದೆ.. ಕಿಟಕಿಯಿಂದ ನೀರು ಮನೆ ಒಳಗೆ ಬರುತ್ತದೆ.. ಅಕ್ಕನ ಗಂಡಂದಿರ ಮನೆಯವರು ಸಹ ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ‌.. ಅಕ್ಕಂದಿರಿಗೆ ಅಪ್ಪ ಯಾವುದೇ ಹಣವಾಗಲಿ ಆಸ್ತಿಯಾಗಲು ನೀಡಿರಲಿಲ್ಲ.. ಹೀಗಾಗಿ ಗಂಡಂದಿರ ಮನೆಯವರು ನೋವು ನೀಡುತ್ತಿದ್ದರು.. ನನ್ನ ತಂದೆಗೆ ಅಭ್ಯಾಸವೂ ಇದೆ.. ಹೀಗಾಗಿ ಮನೆಯ ಬಾಗಿಲು ಲಾಕ್ ಮಾಡುತ್ತಿರಲಿಲ್ಲ.. ನಮ್ಮ ಅಪ್ಪ ಒಬ್ಬ ಆಗಿದ್ದನು.. ನನ್ನ ಅಮ್ಮನಿಗೆ ಪದೇ ಪದೇ ನೋವು ಕೊಡುತ್ತಿದ್ದರು.. ನನ್ನ ಅಮ್ಮನ ಬಗ್ಗೆ ಇಲ್ಲಸಲ್ಲದನ್ನು ಹೇಳಿಕೊಂಡು ತಿರುಗುತ್ತಿದ್ದನು‌..

ನಮ್ಮ ಅಪ್ಪ ಆತನ ಸಹೋದರಿಯನ್ನು ಆಕೆಯ ಗಂಡನಿಂದ ದೂರ ಮಾಡಿದ್ದಾರೆ.. ನನ್ನ ಮೊದಲ ಸಹೋದರಿಗೆ ಆಕೆಯ ಅತ್ತೆ ಮತ್ತು ಮಾವ, ಗಂಡನಿಗೆ ಹೇಳಿ ನೋವು ನೀಡುತ್ತಿದ್ದರು. ಗಂಡ ಹೆಂಡತಿ ನಡುವಿನ ಭಿನ್ನಾಭಿಪ್ರಾಯಕ್ಕೆ ನಮ್ಮಪ್ಪನೇ ಕಾರಣ.. ನನ್ನ ಎರಡನೇ ಸಹೋದರಿಗೂ ನನ್ನ ತಂದೆ ತೊಂದರೆ ಕೊಟ್ಟಿದ್ದರು. ನಮ್ಮಮ್ಮನನ್ನು ಬೇರೆ ರೀತಿ‌ ನಡೆಸಿಕೊಳ್ಳುತ್ತಿದ್ದರು. ಬಾಯಲ್ಲಿ ತಮ್ಮ ಗಳನ್ನು ಇಟ್ಟು ನೋವು ನೀಡುತ್ತಿದ್ದರು‌.. ನಮ್ಮಮ್ಮನಿಗೆ ಇನ್ನೊಂದು ಸಂಬಂಧ ಇದೆ ಎಂದು ಇಲ್ಲದನ್ನು ಹೇಳಿಕೊಂಡು ಮನಸ್ಸಿಗೆ ನೋವು ನೀಡುತ್ತಿದ್ದರು‌‌.. ನಮ್ಮಪ್ಪನ ಜೊತೆ ನಾವು ಊಟನೂ ಮಾಡುತ್ತಿರಲಿಲ್ಲ. ಅವರು ಮನೆಗೆ ಬರುವ ಮೊದಲೇ ಊಟ ಮಾಡಿ ಮಲಗಿಬಿಡುತ್ತಿದ್ದೆವು.. ನಾನು ಕೆಲಸದಲ್ಲಿ ಇದ್ದೆ.. ಕೆಲಸ ಬಿಡುವಂತೆ ನನಗೆ ನನ್ನ ಸಹೋದರಿಯರಿಗೆ ಒತ್ತಾಯ ಮಾಡುತ್ತಿದ್ದರು‌.. ಅದನ್ನು ತಾಳಲಾರದೇ ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದೆ.. ನಾನು ಅಮ್ಮ ಅಕ್ಕಂದಿರನ್ನು ಬೇರೆ ಬೇರೆ ಇಟ್ಟಿದ್ದರು..

ನಮ್ಮ ಅಪ್ಪನಿಂದಲೇ ನನ್ನ ಸಹೋದರಿಯರ ಶಿಕ್ಷಣವೂ ಸಹ ಒಂದು ವರ್ಷ ನಿಂತಿತ್ತು. ಎಂದು ಬರೆದಿದ್ದಾರೆ.. ಒಟ್ಟಿನಲ್ಲಿ ಸಂಪೂರ್ಣವಾಗಿ ಈ ಕುಟುಂಬದ ಸ್ಥಿತಿಗೆ ಶಂಕರ್ ಕಾರಣ ಎಂಬುದು ಮಗನ ಪತ್ರದಲ್ಲಿ ಕಾಣುತ್ತಿದ್ದು.. ಪೊಲೀಸರು ಅದಾಗಲೇ ಶಂಕರ್ ವಿಚಾರಣೆ ನಡೆಸುತ್ತಿದ್ದು ಸಧ್ಯದಲ್ಲಿಯೇ ಸತ್ಯ ಹೊರಬರಲಿದೆ.. ಈತನಿಗೆ ಹೆದರಿ ಹೆಂಡತಿ ಮಕ್ಕಳು ನಾಲ್ವರೇನೋ ಇಲ್ಲವಾದರು.. ಆದರೆ ಆ ಒಂಭತ್ತು ತಿಂಗಳ ಆ ಪುಟ್ಟ ಕಂದ ಮಾಡಿದ ತಪ್ಪಾದರು ಏನು.. ಈಗ ಉಳಿದಿರುವ ಎರಡೂವರೆ ವರ್ಷದ ಪುಟ್ಟ ಕಂದ ಜೀವನ ಪೂರ್ತಿ ಅಮ್ಮನಿಲ್ಲದೆ ಕೊರಗುವ ಜೀವನ ನಡೆಸಬೇಕಿದೆ ಆ ಮಗು ಮಾಡಿದ ತಪ್ಪಾದರೂ ಏನು.. ಈ ಪುಟ್ಟ ಕಂದಮ್ಮಗಳಿಗೆ ಆಗಿರುವುದಕ್ಕಾದರೂ ನ್ಯಾಯ ಸಿಗುವಂತಾಗಲಿ..