ಅಂದು ಅಮ್ಮನ ಮೊಬೈಲ್ ವಾಪಸ್ ಕೊಟ್ಟುಬಿಡಿ ಎಂದು ಅಂಗಲಾಚಿದ್ದ ಮಡಿಕೇರಿಯ ಪುಟ್ಟ ಹುಡುಗಿಯ ಕತೆಗೆ ತಿರುವು.. ನಿಜಕ್ಕೂ ಆಕೆಯ ಅಮ್ಮನ ಮೊಬೈಲ್ ಯಾರ ಬಳಿ ಇತ್ತು ಗೊತ್ತಾ?

0 views

ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ಮಡಿಕೇರಿಯ ಪುಟ್ಟ ಹುಡುಗಿ ಹೃತೀಕ್ಷಾ ತನ್ನ ಅಮ್ಮನ ಮೊಬೈಲ್ ಅನ್ನು ಮರಳಿ ನೀಡುವಂತೆ ಮನವಿ ಮಾಡಿಕೊಂಡಿದ್ದ ವಿಚಾರ ವೈರಲ್ ಆಗಿತ್ತು. ಆದರೀಗ ಆ ಕತೆಗೆ ತಿರುವೊಂದು ದೊರೆತಿದೆ.. ಹೌದು ಆ ದಿನ ಕೊರೊನಾದಿಂದ ತೀರಿ ಹೋಗಿದ್ದ ತಾಯಿಯ ಮೊಬೈಲ್ ಅನ್ನು ಮರಳಿ ಕೊಡಿ ಅದರಲ್ಲಿ ನನ್ನ ಅಮ್ಮನ ನೆನಪುಗಳಿವೆ ಎಂದು ಅಂಗಲಾಚಿದ್ದಳು.. “ಕೊಡಗು ಜಿಲ್ಲಾಧಿಕಾರಿಗಳು ಮತ್ತು ಶಾಸಕರುಗಳು ಹಾಗೂ ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿಗಳಲ್ಲಿ ಮನವಿ.. ಸುಮಾರು ಹದಿನೈದು ದಿನಗಳ ಹಿಂದೆ ನಾನು ಅಪ್ಪ ಅಮ್ಮ ರವರು ಕೋವಿಡ್ ಗೆ ತುತ್ತಾಗಿದ್ದು ತಾಯಿಯವರು ಹದಿನೈದು ದಿನಗಳ ಹಿಂದೆ ಕೋವಿಡ್ ಆಸ್ಪತ್ರೆ ಮಡಿಕೇರಿ ಇಲ್ಲಿಗೆ ಕಾಯಿಲೆ ಉಲ್ಬಣಗೊಂಡು ಸೇರಿರುತ್ತಾರೆ.. ನಾನು ಮತ್ತು ಅಪ್ಪ ಹೋಂ ಕ್ವಾರಂಟೈನ್ ಆಗಿದ್ದು ಹೊರಗೆ ಬರಲಾರದ ಸ್ಥಿತಿಯಲ್ಲಿದ್ದು ತಂದೆಯವರು ದಿನಗೂಲಿ ನೌಕರರಾಗಿದ್ದು ಅಕ್ಕಪಕ್ಕದವರ ಸಹಾಯದಿಂದ ಈ ದಿನಗಳನ್ನು ಕಳೆದೆವು..

ಮೇ ಹದಿನಾರರಂದು ನಮ್ಮ ತಾಯಿಯವರು ಕೊರೊನಾದಿಂದಾಗಿ ಜೀವ ಕಳೆದುಕೊಂಡರು.. ಆದರೆ ಜೊತೆಯಲ್ಲಿ ಇದ್ದಂತಹ ಮೊಬೈಲ್ ಅನ್ನು ಯಾರೋ ತೆಗೆದುಕೊಂಡಿರುತ್ತಾರೆ.. ನಾನು ತಬ್ಬಲಿಯಾಗಿದ್ದು ನನ್ನ ತಾಯಿಯ ನೆನಪುಗಳು ಆ ಮೊಬೈಲ್ ನಲ್ಲಿ ಇರುತ್ತದೆ.. ಆದ್ದರಿಂದ ಯಾರಾದರು ತೆಗೆದುಕೊಂಡಿದ್ದರೆ ಅಥವಾ ಸಿಕ್ಕಿದ್ದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ ಕೊಡಬೇಕಾಗಿ ಕೇಳಿಕೊಳ್ಳುತ್ತೇನೆ.. ಇಂತಿ ತಾಯಿಯನ್ನು ಕಳೆದು ಕೊಂಡ ನತದೃಷ್ಟೆ.. ಎಂದು ಬರೆದು ಶಾಸಕರಿಗೆ ಆಸ್ಪತ್ರೆಯ ಸಿಬ್ಬಂದಿಗೆ ಪತ್ರವನ್ನು ತಲುಪಿಸಿದ್ದಳು‌..

ಅದಾದ ಬಳಿಕ ಇದೀಗ ಅದೇ ಕತೆಗೆ ಹೊಸ ತಿರುವೊಂದು ದೊರೆತಿದೆ.. ಹೌದು ಆ ಪತ್ರ ನೋಡಿದ ಎಲ್ಲರೂ ಬಹುಶಃ ಆಸ್ಪತ್ರೆಯ ಸಿಬ್ಬಂದಿಗಳು ಯಾರಾದರು ಫೋನ್ ತೆಗೆದುಕೊಂಡಿರಬಹುದು ಎಂದುಕೊಳ್ಳಲಾಗಿತ್ತು.. ಆದರೆ ಅಲ್ಲಿನ ಸತ್ಯವೇ ಬೇರೆ ಇದೆ.. ಆ ಪುಟ್ಟ ಹುಡುಗಿಯ ಪತ್ರ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಈ ಕುರಿತು ತನಿಖೆ ನಡೆಸಿದ್ದಾರೆ.. ಆಗಲೇ ತಿಳಿದದ್ದು ಅದೇ ರೀತಿ ಆಸ್ಪತ್ರೆಯಲ್ಲಿ ಸಾಕಷ್ಟು ಜನರ ಮೊಬೈಲ್ ಗಳು ನಾಪತ್ತೆಯಾಗಿದ್ದವು.. ಇದೆಲ್ಲವನ್ನು ಗಮನಿಸಿ ಸೂಕ್ಷ್ಮವಾಗಿ ತನಿಖೆ ನಡೆಸಿ ಆಸ್ಪತ್ರೆಯಲ್ಲಿ ನೋವಿನಲ್ಲಿರುವ ಜನರ ಮೊಬೈಲ್ ತೆಗೆದುಕೊಳ್ಳುತ್ತಿದ್ದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ..

ಹೌದು ಅದೇ ಆಸ್ಪತ್ರೆಗೆ ಬಟ್ಟೆ ತೊಳೆಯುವ ಕೆಲಸಕ್ಕೆ ಬರುತ್ತಿದ್ದ ವಸಂತ್ ಎಂಬಾತನೇ ಆಸ್ಪತ್ರೆಯ ಹಲವಾರು ರೋಗಿಗಳ ಅದರಲ್ಲೂ ಕೊರೊನಾದಿಂದ ಜೀವ ಕಳೆದುಕೊಂಡವರ ಫೋನ್ ಗಳನ್ನು ಸಹ ತೆಗೆದುಕೊಂಡು ಇರಿಸಿಕೊಂಡಿದ್ದನೆನ್ನಲಾಗಿದೆ.. ಪೊಲೀಸರು ವಶಕ್ಕೆ ಪಡೆದಾಗ ವಸಂತ್ ಬಳಿ ಹಲವಾರು ಫೋನ್ ಗಳು ಸಿಕ್ಕಿ ಬಿದ್ದಿದ್ದು ಆ ಪುಟ್ಟ ಹುಡುಗಿ ಹೃತೀಕ್ಷಾ ಅವರ ತಾಯಿಯ ಫೋನ್ ಕೂಡ ಅತನ ಬಳಿಯೇ ಇರಬಹುದಾಗಿದ್ದು ವಿಚಾರಣೆ ನಡೆಸಿ ಫೋನ್ ಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ..

ಅದಕ್ಕೇ ಹೇಳೋದು ಕೆಟ್ಟದ್ದಕ್ಕೆ ಕಾಲವಿಲ್ಲವೆಂದು.. ಫೋನ್ ಗಳನ್ನು ಎತ್ತಿಕೊಂಡು ಅದೆಷ್ಟು ದಿನ ಶೋಕಿ ಮಾಡಿದ? ಅದೇನು ಸಂತೋಷ ಉಂಡ? ಮೂರೇ ದಿನದ ಆ ತಿರುಕೆ ಬಾಳಿಗೆ ಗೌರವದಿಂದ ಬದುಕಬಹುದಾದ ತನ್ನ ಜೀವನವನ್ನೇ ಹಾಳು ಮಾಡಿಕೊಂಡನಷ್ಟೇ.. ನೋವಿನಲ್ಲಿದ್ದ ಅದೆಷ್ಟೋ ಜನರ ಕಣ್ಣೀರು ಆತನನ್ನೀಗ ಪೊಲಿಒಸರಿಗೆ ಸಿಗುವಂತೆ ಮಾಡಿದೆ.. ಇನ್ನಾದರು ಇಂತವರು ಬದಲಾಗಲಿ.. ಮಾನವೀಯತೆ ಮನುಷ್ಯತ್ವ ಬದುಕಾಗಲಿ..