ಕನ್ನಡ ಕಿರುತೆರೆಯಲ್ಲಿ ಎಲ್ಲಾ ಧಾರಾವಾಹಿಗಳು ಒಂದು ತೂಕವಾದರೆ ಟಿ ಎನ್ ಸೀತಾರಾಮ್ ಅವರ ಧಾರಾವಾಹಿಯೇ ಒಂದು ತೂಕ ಎಂದರೆ ನಿಜಕ್ಕೂ ಅದು ಅತಿಶಯೋಕ್ತಿಯಲ್ಲ.. ಧಾರಾವಾಹಿ ಎಂದರೆ ಕೇವಲ ಅತ್ತೆ ಸೊಸೆ ಜಗಳ ಎನ್ನುತ್ತಿದ್ದ ಕಾಲದಲ್ಲಿಯೇ ಅರ್ಥಪೂರ್ಣವಾದ ಧಾರಾವಾಹಿಗಳ ಜೊತೆಗೆ ಪ್ರೇಕ್ಷಕರಿಗೆ ಧಾರಾವಾಹಿಯ ಮೂಲಕ ಸಂದೇಶವನ್ನೂ ಸಹ ನೀಡುತ್ತಾ ಬದುಕಿನ ಆಗುಹೋಗುಗಳಿಗೆ ನೈಜ್ಯತೆಯನ್ನು ತುಂಬಿ ತೆರೆ ಮೇಲೆ ತರುತ್ತಿದ್ದ ರೀತಿಯೇ ಅದ್ಭುತ ಎನ್ನಬಹುದು..

ಇನ್ನು ಮುಕ್ತ.. ಮುಕ್ತ ಮುಕ್ತ.. ಮನ್ವಂತರ ಹೀಗೆ ಸಾಕಷ್ಟು ಧಾರಾವಾಹಿಗಳು ನಮ್ಮಂತೆ ಎಷ್ಟೋ ಜನರ ಬಾಲ್ಯವನ್ನು ಸುಂದರವನ್ನಾಗಿಸಿತ್ತು.. ಇನ್ನು ಇತ್ತೀಚಿನ ದಿನಗಳಲ್ಲಿ ಮತ್ತೆ ನಿರ್ದೇಶನಕ್ಕೆ ಮರಳಿದ್ದ ಸೀತಾರಾಮ್ ಅವರು ಮಗಳು ಜನಾಕಿ ಎಂಬ ಅದ್ಭುತ ಧಾರಾವಾಹಿಯನ್ನು ತಂದಿದ್ದರು.. ಕಲರ್ಸ್ ಸೂಪರ್ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.. ಅಷ್ಟೇ ಅಲ್ಲದೇ ದೊಡ್ಡ ಅಭಿಮಾನಿ ಬಳಗವನ್ನೂ ಸಹ ಹೊಂದಿತ್ತು.. ಆದರೆ ಕೊರೊನಾ ಬಂದು ಎಷ್ಟೋ ಇಂಡಸ್ಟ್ರಿಗಳಿಗೆ ಪೆಟ್ಟು ಕೊಟ್ಟ ಹಾಗೆ ಸಿನಿಮಾ ಹಾಗೂ ಕಿರುತೆರೆಗೆ ಕೊಂಚ ಹೆಚ್ಚಾಗಿಯೇ ಪೆಟ್ಟು ನೀಡಿತ್ತು..ಎಷ್ಟೋ ಧಾರಾವಾಹಿಗಳು ಅರ್ಧಕ್ಕೆ ನಿಲ್ಲುವಂತಾಯಿತು.. ಅದರಲ್ಲೂ ಕನ್ನಡದಲ್ಲಿ ಒಂದು ವಾಹಿನಿಯೇ ಸ್ಥಗಿತವಾಗುವಂತಾಯಿತು..

ಹೌದು ಕಲರ್ಸ್ ಸೂಪರ್ ವಾಹಿನಿ ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡು ವಾಹಿನಿಯಲ್ಲಿನ ಅಷ್ಟೂ ಧಾರಾವಾಹಿಗಳು ಅರ್ಧಕ್ಕೆ ನಿಲ್ಲುವಂತಾಯಿತು.. ಅದೇ ಸಮಯದಲ್ಲಿ ಮಗಳು ಜಾನಕಿ ಧಾರಾವಾಹಿಯೂ ಅರ್ಧಕ್ಕೆ ನಿಲ್ಲುವಂತಾಯಿತು.. ಇದರಿಂದ ಬೇಸರಗೊಂಡ ಅಭಿಮಾನಿಗಳು ಮರಳಿ ಬಾ ಜಾನಕಿ ಎಂಬ ಅಭಿಯಾನವನ್ನೂ ಸಹ ಮಾಡಿ ಮತ್ತೆ ಕಲರ್ಸ್ ಕನ್ನಡದಲ್ಲಿ ಮುಂದುವರೆಸಿ ಎಂದು ಮನವಿ ಮಾಡಿಕೊಂಡಿದ್ದರು.. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ..

ಕೊನೆಗೆ ಬೇಸರದಿಂದಲೇ ಮಗಳು ಜಾನಕಿ ಧಾರಾವಾಹಿಯ ಅಂತ್ಯವನ್ನು ಒಪ್ಪಿಕೊಳ್ಳಬೇಕಾಗಿತ್ತು.. ಆದರೆ ಇದೀಗ ಮಗಳು ಜಾನಕಿ ಧಾರಾವಾಹಿಯ ಪ್ರಿಯರಿಗೆ ಸಿಹಿ ಸುದ್ದಿ ಬಂದಿದ್ದು ಧಾರಾವಾಹಿ ಮತ್ತೆ ಶುರುವಾಗುತ್ತಿದೆ.. ಹೌದು ಮಗಳು ಜಾನಕಿ ಧಾರಾವಾಹಿಯನ್ನು ಮತ್ತೆ ಶುರು ಮಾಡುವ ನಿರ್ಧಾರವನ್ನು ಟಿ ಎನ್ ಸೀತಾರಾಮ್ ಅವರು ಮಾಡಿದ್ದು ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.. ಆದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿಲ್ಲ..

ಹೌದು ಟಿ ಎನ್ ಸೀತಾರಾಮ್ ಅವರು ತಮ್ಮದೇ ಆದ ಯೂಟ್ಯೂಬ್ ವಾಹಿನಿಯನ್ನು ಹೊಂದಿದ್ದು ಭೂಮಿಕಾ ಟಾಕೀಸ್ ಎಂಬ ವಾಹಿನಿಯಲ್ಲಿ ಕಳೆದ ಕೆಲ ತಿಂಗಳುಗಳಿಂದ ಸೀತಾರಾಮ್ ಅವರ ಹಳೆಯ ಧಾರಾವಾಹಿಗಳು ಪ್ರಸಾರವಾಗುತ್ತಿದ್ದವು.. ಆ ಧಾರಾವಾಹಿಗೆ ಒಳ್ಳೆಯ ಪ್ರತಿಕ್ರಿಯೆ ಬಂದ ಕಾರಣ ಇದೀಗ ಮಗಳು ಜಾನಾಕಿ ಧಾರಾವಾಹಿಯನ್ನು ಯೂಟ್ಯೂಬ್ ನಲ್ಲಿಯೇ ಮುಂದುವರೆಸುವ ನಿರ್ಧಾರ ಮಾಡಿದ್ದಾರೆ.. ವೆಬ್ ಸೀರೀಸ್ ಮಾದರಿಯಲ್ಲಿ ಧಾರಾವಾಹಿ ಪ್ರಸಾರವಾಗಲಿದ್ದು ಒಂದು ಸಂಚಿಕೆ ಅರ್ಧ ಗಂಟೆಯ ಅವಧಿಯದ್ದಾಗಿದ್ದು ಮುನ್ನೂರಕ್ಕೂ ಹೆಚ್ಚು ಸಂಚಿಕೆಗಳು ಪ್ರಸಾರವಾಗಲಿದೆ ಎನ್ನಲಾಗಿದೆ..

ಇನ್ನೂ ಈ ಹಿಂದೆ ಮಗಳು ಜಾನಕಿ ಧಾರಾವಾಹಿಯಲ್ಲಿದ್ದ ಅಷ್ಟೂ ತಾರಾಬಳಗ ಮುಂದುವರೆಯಲಿದ್ದು ಯೂಟ್ಯೂಬ್ ನಲ್ಲಿ ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ನೋಡಬಹುದಾಗಿದೆ.. ಇಂದಿನಿಂದ ಅದಾಗಲೇ ಧಾರಾವಾಹಿಯ ಚಿತ್ರೀಕರಣ ಶುರುವಾಗಿದ್ದು ಆಗಸ್ಟ್ ತಿಂಗಳ ಕೊನೆಯಲ್ಲಿ ಧಾರಾವಾಹಿ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ಸೀತಾರಾಮ್ ಅವರೇ ಅಧಿಕೃತವಾಗಿ ತಿಳಿಸಿದ್ದು ಆಗಸ್ಟ್ ಕೊನೆಯಲ್ಲಿ ಮತ್ತೆ ಮಗಳು ಜಾನಕಿಯನ್ನು ಮನೆ ಮನ ತುಂಬಿಸಿಕೊಳ್ಳಬಹುದಾಗಿದೆ..