ತಾಯಿ ಮತ್ತೊಬ್ಬನ ಜೊತೆ ಆ ಕೆಲಸ ಮಾಡಿದಳೆಂದು ತಿಳಿದು ಆಕೆಯ ಚಿಕ್ಕ ಮಗನೇ ಏನು ಮಾಡಿಬಿಟ್ಟ ಗೊತ್ತಾ? ಬೆಚ್ಚಿಬಿದ್ದ ಪೊಲೀಸರು..

0 views

ಪ್ರಪಂಚದಲ್ಲಿ ಅದ್ಯಾವ ಪ್ರೀತಿ ಸುಳ್ಳಾದರೂ ತಾಯಿ ಪ್ರೀತಿ ಮಾತ್ರ ಸುಳ್ಳಾಗದು ಎನ್ನುವ ಮಾತಿದೆ.. ಇತ್ತ ತಾಯಿಯ ಮೇಲೆ ಗಂಡು ಮಕ್ಕಳಿಗೆ ಅತಿ ಹೆಚ್ಚು ಪ್ರೀತಿ ಎಂದೂ ಸಹ ಹೇಳಲಾಗುತ್ತದೆ.. ಆದರೆ ಇಲ್ಲೊಬ್ಬ ಮಗ ಅದರಲ್ಲೂ ಕೇವಲ ಹದಿನಾಲ್ಜು ವರ್ಷದ ಮಗ ತನ್ನ ತಾಯಿಗೆ ಮತ್ತೊಬ್ಬನ ಜೊತೆ ಸಂಬಂಧ ಇದೆ ಎಂದು ತಿಳಿದು ಮಾಡಿರುವ ಕೆಲಸ ಅಕ್ಷರಶಃ ಸಂಪೂರ್ಣ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.. ಹೌದು ಇಂತಹ ವಿಚಿತ್ರ ಘಟನೆ ನಡೆದಿರೋದು ಬೇರೆ ಯಾವುದೋ ರಾಜ್ಯದಲ್ಲಲ್ಲ.. ನಮ್ಮದೇ ರಾಜ್ಯದ ಬಾಗಲಕೋಟೆಯಲ್ಲಿ.. ಹೌದು ಬಾಗಲಕೋಟೆ ಜಿಲ್ಲೆಯ ಜಮಕಂಡಿ ತಾಲೂಕಿನ ತುಂಗಳ ಎಂಬ ಗ್ರಾಮದಲ್ಲಿ ಇಂತಹ ಘಟನೆ ನಡೆದು ಹೋಗಿದ್ದು ಗ್ರಾಮಸ್ಥರು ಈ ಚಿಕ್ಕ ಹುಡುಗ ಮಾಡಿರುವ ಕೆಲಸಕ್ಕೆ ಬೆಚ್ಚಿಬಿದ್ದಿದ್ದಾರೆ..

ಹೌದು ಆಕೆಯ ಹೆಸರು ಮಹಾದೇವಿ.. ವಯಸ್ಸು ನಲವತ್ತು.. ಈಕೆಯ ಗಂಡನ ಹೆಸರು ಹನುಮಂತ ವಡ್ರಾಲ ಹಾಗೂ ಆಕೆಗೆ ಹದಿನಾಲ್ಕು ವರ್ಷದ ಮಗನೂ ಸಹ ಇದ್ದನು.. ಯಾವುದೇ ಬೇರೆ ಆಲೋಚನೆಗಳು ಇಲ್ಲದೇ ನೆಮ್ಮದಿಯ ಜೀವನ ಸಾಗಿಸಬಹುದಾಗಿತ್ತು‌.. ಚೆಂದದ ಸಂಸಾರ ಅದಾಗಿತ್ತು.. ಆದರೆ ಕೆಲವೊಮ್ಮೆ ಮಹಿಳೆಯರು ಸಹ ತಾವು ಮದುವೆಯಾಗಿದ್ದರೂ ಒಮ್ಮೊಮ್ಮೆ ತಪ್ಪಿನ ಹೆಜ್ಜೆ ಇಟ್ಟು ಸಂಸಾರವನ್ನು ಹಾಳು ಮಾಡಿಕೊಂಡು ಬಿಡುತ್ತಾರೆ.. ಆದರೆ ಇಲ್ಲಿ ಆ ಮಹಿಳೆ ತಪ್ಪು‌ ಮಾಡಿದ್ದಾಳೋ ಇಲ್ಲವೋ ತಿಳಿಯದು.. ಆದರೆ ಮಹಾದೇವಿಗೆ ಮತ್ತೊಬ್ಬನ ಜೊತೆ ಸಂಬಂಧ ಇದೆ ಎಂಬ ವಿಚಾರ ಆಕೆಯ ಗಂಡ ಹನುಮಂತ ವಡ್ರಾಲ ಹಾಗೂ ಹದಿನಾಲ್ಕು ವರ್ಷದ ಮಗನಿಗೆ ತಿಳಿಯುತ್ತದೆ..

ವಿಚಾರ ತಿಳಿಯುತ್ತಿದ್ದಂತೆ ಅಪ್ಪ ಮಗ ಇಬ್ಬರೂ ಸಹ ಸೇರಿಕೊಂಡು ಒಂದು ನಿರ್ಧಾರಕ್ಕೆ ಬರುತ್ತಾರೆ.. ಅದೇ ತಮ್ನ ಹೆತ್ತ ತಾಯಿಯನ್ನೇ ಇಲ್ಲವಾಗಿಸೋದು.. ಹೌದು ತಾಯಿಯ ಬೇರೊಂದು ಸಂಬಂಧಕ್ಕೆ ಬೇಸತ್ತ ಚಿಕ್ಕ ವಯಸ್ಸಿನ ಮಗ ಹಾಗೂ ಆಕೆಯ ಗಂಡ ಈ ನಿರ್ಧಾರಕ್ಕೆ ಬಂದು ಕೊನೆಗೊಂದು ದಿನ ಇಬ್ಬರೂ ಸಹ ಸೇರಿಕೊಂಡು ಜೂನ್ ಏಳನೇ ತಾರೀಕಿನಂದು ಬೆಳಗಿನ ಜಾವ ಅಪ್ಪ ಮಗ ಇಬ್ಬರೂ ಸಹ ಸೇರಿಕೊಂಡು ಮಹಾದೇವಿ ಮಲಗಿದ್ದ ಸಮಯದಲ್ಲಿಯೇ ಇನ್ನಿಲ್ಲವಾಗಿಸಿದ್ದಾರೆ.. ನಂತರ ಬೆಳಗ್ಗೆ ಅಪ್ಪ ಮಗ ಇಬ್ಬರೂ ಸೇರಿಕೊಂಡು ಮಹಾದೇವಿಯೇ ತಾನೇ ಜೀವ ಕಳೆದುಕೊಂಡಿದ್ದಾಳೆಂದು ನಾಟಕವಾಡಿದ್ದಾರೆ.. ನಂತರ ಆತುರಾತುರವಾಗಿ ಅಂತ್ಯ ಸಂಸ್ಕಾರವನ್ನೂ ಸಹ ಮಾಡಿ ಮುಗಿಸಿದ್ದಾರೆ..

ಆದರೆ ಅಷ್ಟು ಆತುರಾತುರವಾಗಿ ಅಂತ್ಯ ಸಂಸ್ಕಾರ ಮಾಡಿದ್ದನ್ನು ಕಂಡ ಗ್ರಾಮಸ್ಥರು ಅನುಮಾನಗೊಂಡಿದ್ದಾರೆ.. ಅನುಮಾನಗೊಂಡ ತುಂಗಳ ಗ್ರಾಮಸ್ಥರಲ್ಲಿ ಯಾರೋ ಒಬ್ಬರು ಸಾವಳಗಿ ಪೊಲೀಸ್ ಠಾಣೆಗೆ ಫೋನ್ ಮಾಡಿ ಹೆಸರು ಹೇಳದೆ ವಿಚಾರ ತಿಳಿಸಿದ್ದಾರೆ.. ತಕ್ಷಣ ಎಚ್ಚೆತ್ತ ಪೊಲೀಸರು ಪ್ರಕರಣದ ಜಾಡು ಹಿಡಿದು ಹೊರಟಿದ್ದಾರೆ.. ಕೊನೆಗೆ ಹನುಮಂತ ವಡ್ರಾಲ ಹಾಗೂ ಆತನ ಹದಿನಾಲ್ಕು ವರ್ಷದ ಮಗ ಪೊಲೀಸರ ಮುಂದೆ ಎಲ್ಲವನ್ನೂ ಸಹ ಬಾಯಿಬಿಟ್ಟಿದ್ದಾರೆ.. ಇತ್ತ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.. ನನ್ನ ಅಮ್ಮನಿಗೆ ಮತ್ತೊಂದು ಸಂಬಂಧ ಇತ್ತು ಎಂದು ಈ ರೀತಿ ಮಾಡಿದ್ದೇವೆ ಎಂದು ಆಕೆಯ ಮಗನೇ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ..

ಈ ಹಿಂದೆ ಇಂತಹ ಸಾಕಷ್ಟು ಪ್ರಕರಣಗಳನ್ನು ನೋಡಿದ್ದೇವೆ.. ಗಂಡ ಹೆಂಡತಿ‌ ಮೇಲೆ ಅನುಮಾನಗೊಂಡು ಆಕೆಯನ್ನು ಇಲ್ಲವಾಗಿಸಿದ ಅನೇಕ ಘಟನೆಗಳು ನಡೆದಿವೆ.. ಆದರೆ ಮಗನೇ ಈರೀತಿ ತಾಯಿಗೆ ಇಂತಹ ಸ್ಥಿತಿ ತಂದಿರುವುದು ನೋಡಿ ಇನ್ನೂ ಸಮಾಜದ ಅರಿವು ಇಲ್ಲದ ಹುಡುಗ ಈ ರೀತಿಯ ಘಟನೆಯಲ್ಲಿ ಭಾಗಿಯಾಗಿದ್ದ ಕಂಡು ಪೊಲೀಸರು ಸಹ ಬೆಚ್ಚಿಬಿದ್ದಿದ್ದಾರೆನ್ನಬಹುದು.. ಒಟ್ಟಿನಲ್ಲಿ ಸುಂದರವಾಗಿರಬೇಕಾದ ಒಂದು ಸಂಸಾರ ಆಕೆಯದ್ದೋ ಆತನದ್ದೋ ಒಂದು ತಪ್ಪಿನಿಂದಾಗಿ ಇಂದು ಆಕೆ ಇಲ್ಲವಾದಳು ಇತ್ತ ಅಪ್ಪ ಮಗ ಪೊಲೀಸರ ವಶದಲ್ಲಿರಬೇಕಿದೆ.. ಇದರಿಂದ ಯಾರಿಗೆ ತಾನೆ ನೆಮ್ಮದಿ ದೊರಕಿತು.. ದಯವಿಟ್ಟು ಹೆಣ್ಣಾಗಲಿ ಗಂಡಾಗಲಿ ಚೆಂದದ ಸಂಸಾರಗಳನ್ನು ಬೇಡದ ವಿಚಾರಗಳಿಗಾಗಿ ಹಾಳು ಮಾಡಿಕೊಳ್ಳಬೇಡಿ.. ಇರುವುದೊಂದು ಜೀವನ ಇದ್ದಷ್ಟು ದಿನ ನೆಮ್ಮದಿಯಾಗಿ ಸಂತೋಷವಾಗಿ ಇರುವಂತೆ ರೂಪಿಸಿಕೊಳ್ಳಿ..