ಕನಸಿನ ರಾಣಿ‌ ಮಾಲಾಶ್ರೀ ಅವರ ಮಗಳು ಯಾರು ಗೊತ್ತಾ?

0 views

ಮಾಲಾಶ್ರೀ ಎಂಬ ಹೆಸರು ಕೇಳಿದರೆ ಸಾಕು ಈಗಲೂ ಒಂದು ಕ್ಷಣ 90 ರ ದಶಕದ ಗಂಡ್ ಹೈಕಳ ಎದೆ ಝಲ್ ಎನಿಸೋದು ಖಂಡಿರ.. ಮಾಲಾಶ್ರೀ ಅವರು ಚಾಮುಂಡಿ ದುರ್ಗಿ ಈ ರೀತಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಸರು ಮಾಡಿದ್ದು ನಿಜ.. ಆದರೆ ಮಾಲಾಶ್ರೀ ಅವರು ರಾಮಾಚಾರಿ.. ನಂಜುಂಡಿ ಕಲ್ಯಾಣ.. ಈ ರೀತಿಯ ಸಿನಿಮಾಗಳಲ್ಲಿಯೇ ಹೆಚ್ಚು ಇಷ್ಟವಾಗಿದ್ದರು.. ಕನಸಿನ ರಾಣಿ ಎಂದೇ ಖ್ಯಾತರಾಗಿದ್ದರು.. ಇನ್ನೂ ಹೇಳಬೇಕೆಂದರೆ ಈಗ ನಟಿ‌ಮಣಿಯರು ನನ್ನದು ಹೆಚ್ಚು ನನ್ನದು ಹೆಚ್ಚು ಸಂಭಾವನೆ ಎನ್ನುವ ಕಾಲ.. ಆದರೆ ಆ ಕಾಲದಲ್ಲಿಯೇ ಮಾಲಾಶ್ರೀ ಅವರಿಗೆ ಲಕ್ಷಗಳ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತಿತ್ತು.. ಕನ್ನಡದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರಲ್ಲಿ ಮಾಲಾಶ್ರೀ ಅವರೇ ಟಾಪ್ ನಲ್ಲಿದ್ದವರು..

ಮಾಲಾಶ್ರೀ ಅವರು ಯಾವ ಮಟ್ಟಕ್ಕೆ ಬ್ಯುಸಿ ಆಗಿದ್ದರು ಎಂದರೆ ರಾಮಾಚಾರಿ‌ ಸಿನಿಮಾದ ಸಮಯದಲ್ಲಿ ಒಂದು ದಿನಕ್ಕೆ ಮೂರು ಸಿನಿಮಾಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು.. ಬೇರೆ ಸಿನಿಮಾಗಳ ಚಿತ್ರೀಕರಣ ಮುಗಿಸಿ ರಾಮಾಚಾರಿ ಸಿನಿಮಾದ ಚಿತ್ರೀಕರಣಕ್ಕೆ ಬಂದು ಸುಸ್ತಾಗಿ ಮಲಗಿದ್ದಾಗಲೂ ಸಹ ಅದೇ ಸಮಯದಲ್ಲಿ ರವಿಚಂದ್ರನ್ ಅವರು ಒಂದು ಸಂಪೂರ್ಣ ಹಾಡಿನ ಚಿತ್ರೀಕರಣವನ್ನು ಮಾಲಾಶ್ರೀ ಅವರಿಗೆ ತಿಳಿಯದಂತೆಯೇ ಚಿತ್ರೀಕರಣ ಮಾಡಿ ಮುಗಿಸಿದ್ದರು.. ಅಷ್ಟು ಖ್ಯಾತಿ ಹೆಸರು ಹಣ ಗಳಿಸಿದ್ದರೂ ಸಹ ನಿರ್ದೇಶಕರಿಗಾಗಲಿ ನಿರ್ಮಾಪಕರಿಗಾಗಲಿ ಎಂದೂ ಸಹ ಏನೂ ಮಾತನಾಡಿದವರಲ್ಲ..

ದೊಡ್ಡ ನಿರ್ಮಾಪಕನನ್ನು ಮದುವೆಯಾದರೂ ಸಹ ಚಿತ್ರೀಕರಣಕ್ಕೆ ಬಂದರೆ ನಿರ್ದೇಶಕರಿಗೆ ಕಲಾವಿದರಿಗೆ ಎಂದಿನಂತೆ ಗೌರವ ನೀಡಿ ತಮ್ಮ ಕೆಲಸ ಮಾಡುತ್ತಿದ್ದರು.. ಇನ್ನು ಬರುಬರುತ್ತಾ ಮಹಿಳಾ ಪ್ರಧಾನ ಸಿನಿಮಾಗಳತ್ತ ಮಾಲಾಶ್ರೀ ಅವರ ಒಲವು ಹೆಚ್ಚಾಯಿತು.. ಸದ್ಯ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದಿರುವ ಮಾಲಾಶ್ರೀ ಅವರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.. ಇನ್ನು ಮಾಲಾಶ್ರೀ ಅವರ ಮಕ್ಕಳು ಹೇಗಿದ್ದಾರೆಂಬ ಸಣ್ಣ ಕುತೂಹಲ ಅಭಿಮಾನಿಗಳಿಗೆ ಇದ್ದೇ ಇರುತ್ತದೆ.. ಇಲ್ಲಿದೆ ನೋಡಿ..

ಹೌದು ಮಾಲಾಶ್ರೀ ಅವರು ನಿರ್ಮಾಪಕ ರಾಮು ಅವರನ್ನು ಮದುವೆಯಾಗಿದ್ದು ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.. ಅನನ್ಯ ಹಾಗೂ ಆರ್ಯನ್ ಎಂಬ ಇಬ್ಬರು ಮಕ್ಕಳಿದ್ದು ಇಬ್ಬರೂ ಸಹ ತಮ್ಮ ಓದಿನಲ್ಲಿ ಬ್ಯುಸಿಯಾಗಿದ್ದು ಸಿನಿಮಾ ರಂಗದ ಕಡೆ ಮುಖ ಮಾಡುವುದು ಸಂದೇಹವಾಗಿದೆ.. ಅಪ್ಪ ಅಮ್ಮ ಇಬ್ಬರೂ ಸಿನಿಮಾ ಇಂಡಸ್ಟ್ರಿಯಾದರೂ ಸಹ ಮಕ್ಕಳು ತಮ್ಮ ಗುರಿ ಏನಿದೆಯೋ ಅದನ್ನು ಸಾಧಿಸಲಿ ಎನ್ನುತ್ತಾರೆ ಮಾಲಾಶ್ರೀ ಅವರು..

ಸದ್ಯ ಇಂದು ಮಾಲಾಶ್ರೀ ಅವರ ಮಗಳು ಅನನ್ಯರ ಹುಟ್ಟುಹಬ್ಬವಿದ್ದು ಮಗಳಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಮಗಳ ಫೋಟೋಗಳನ್ನು ಹಂಚಿಕೊಂಡಿರುವ ಮಾಲಾಶ್ರೀ ಅವರು “ಹುಟ್ಟುಹಬ್ಬದ ಶುಭಾಶಯಗಳು ನನ್ನ ಮಗಳೇ.. ನೀನು ನಿಜಕ್ಕೂ ನನಗೆ ಅತ್ಯಮೂಲ್ಯ.. ನೀನೇ ನನಗೆಲ್ಲಾ ಎಂಬುದು ನಿನಗೆ ತಿಳಿದಿದೆ ಎಂದುಕೊಳ್ಳುವೆ.. ನಿನ್ನ ಜೀವನ ಪೂರ್ತಿ ಸಂತೋಷ ಪ್ರೀತಿಯೇ ತುಂಬಿರಲಿ ಎಂದು ಹಾರೈಸುವೆ..” ಎಂದು ಬರೆದು ಪೋಸ್ಟ್ ಮಾಡಿದ್ದು ಅಭಿಮಾನಿಗಳು ಹಾಗೂ ಸ್ನೇಹಿತರ್ಯ್ ಸಹ ಅನನ್ಯ ರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದು ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ..