ಮಾಲಾಶ್ರೀ ಅವರು ಕೊನೆಯದಾಗಿ ಗಂಡನಿಗೆ ಹೇಳಿದ್ದ ಮಾತು ನೋಡಿ.. ನಿಜಕ್ಕೂ ಮನಕಲಕುವಂತಿದೆ..

0 views

ಕೊರೊನಾ ನಿಜಕ್ಕೂ ಜನರ ಜೀವ ಜೀವನ ಎಲ್ಲವನ್ನೂ ಸಹ ಒಮ್ಮೆಲೆ ಬೀದಿಗೆ ತಳ್ಳುತ್ತಿದೆ.. ಒಂದು ಕಡೆ ಲಕ್ಷ ಲಕ್ಷ ಜನ ಕೊರೊನಾಗೆ ತುತ್ತಾಗುತ್ತಿದ್ದರೆ ಮತ್ತೊಂದು ಕಡೆ ಎಷ್ಟೋ ಜನರು ತಮ್ಮ ತಮ್ಮ ಕುಟುಂಬದ ಅಮೂಲ್ಯ ಜೀವಗಳನ್ನು ಕಳೆದುಕೊಂಡು ಚಿತಾಗಾರದ ಮುಂದೆ ಕಣ್ಣೀರಿಡುತ್ತಿದ್ದಾರೆ.. ಇನ್ನು ಈ ಕೊರೊನಾ ನೋವಿಗೆ ಸ್ಟಾರ್ ಗಳು ಸೆಲಿಬ್ರೆಟಿಗಳು ದೊಡ್ಡ ದೊಡ್ಡ ಕಲಾವಿದರು ಯಾರೂ ಸಹ ಹೊರತಾಗಿಲ್ಲ.. ಇನ್ನು ನಿನ್ನೆಯಷ್ಟೇ ಕನ್ನಡದ ಖ್ಯಾತ ನಟಿ ಮಾಲಾಶ್ರೀ ಅವರ ಪತಿ ಸ್ಯಾಂಡಲ್ವುಡ್ ನ ಕೋಟಿ‌ ನಿರ್ಮಾಪಕ ರಾಮು ಅವರು ಕೊರೊನಾದಿಂದಾಗಿ ಜೀವ ಕಳೆದುಕೊಂಡಿರುವುದು ನಿಜಕ್ಕೂ ಸ್ಯಾಂಡಲ್ವುಡ್ ಗೆ ತುಂಬಲಾರದ ನಷ್ಟವೇ ಸರಿ.. ಅದರಲ್ಲಿಯೂ ಆ ಸುಂದರ ಕುಟುಂಬದ ಯಜಮಾನ ಇನ್ನಿಲ್ಲವಾಗಿರುವುದು ಮಾಲಾಶ್ರೀ ಅವತು ಹಾಗೂ ಎರಡು ಚಿಕ್ಕ ಮಕ್ಕಳ ಪರಿಸ್ಥಿತಿ ನಿಜಕ್ಕೂ ಮನಕಲಕುವಂತಿದೆ. ಹೌದು ನಿನ್ನೆ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ರಾಮು ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ..

ಆದರೆ ಕೆಲವೇ ದಿನಗಳ ಹಿಂದಷ್ಟೇ ಮಾಲಾಶ್ರೀ ಅವರು ತಮ್ಮ ಪತಿಗೆ ಹೇಳಿದ್ದ ಮಾತು ನೋಡಿದರೆ ನಿಜಕ್ಕೂ ಭಗವಂತನ್ಯಾಕೆ ಒಮ್ಮೊಮ್ಮೆ ಇಷ್ಟು ಕಲಾಗಿ ಬಿಡುತ್ತಾನೆ ಎನಿಸುವುದಂತೂ ಸತ್ಯ.. ಹೌದು ಕಳೆದ ವಾರ ಏಳು ದಿನಗಳ ಹಿಂದಷ್ಟೇ ರಾಮು ಅವರಿಗೆ ಕೊರೊನಾ ಪಾಸಿಟಿವ್ ಆಗಿ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾದರು.. ಒಂದು ವಾರಗಳು ಸತತ ಚಿಕಿತ್ಸೆ ನೀಡಲಾಯಿತಾದರು ಚಿಕಿತ್ಸೆ ಫಲಕಾರೊಯಾಗಲಿಲ್ಲ.. ನಿನ್ನೆ ಉಸಿರಾಟದ ಸಮಸ್ಯೆ ಇಂದಾಗಿ ಕೊನೆಯುಸಿರೆಳೆದೇ ಬಿಟ್ಟರು.. ಆದರೆ ಎರಡು ತಿಂಗಳ ಹಿಂದಷ್ಟೇ ರಾಮು ಅವರು ಹಾಗೂ ಮಾಲಾಶ್ರೀ ಅವರು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.. ಆ ಸಮಯದಲ್ಲಿ ಗಂಡನ ಬಗ್ಗೆ ಮಾಲಾಶ್ರೀ ಅವರು ಬಹಳ ಭಾವನಾತ್ಮಕವಾದ ಮಾತುಗಳನ್ನು ಆಡಿದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹಂಚಿಕೊಂಡಿದ್ದರು.. ಅವರು ಆ ದಿನ ಆಡಿದ ಮಾತುಗಳು ನಿಜಕ್ಕೂ ಇದೀಗ ಮನಕಲಕುವಂತೆ ಮಾಡಿದೆ..

ಹೌದು ಮಾಲಾಶ್ರೀ ಅವರ ಕನ್ನಡ ಸಿನಿಮಾ ಇಂಡಸ್ಟ್ರಿಯ ಟಾಪ್ ಹೀರೋಯಿನ್ ಆಗಿದ್ದವರು.. ಸ್ಟಾರ್ ನಟರಿಗೂ ಸಹ ಮಾಲಾಶ್ರೀ ಅವರ ಡೇಟ್ ಸಿಗುವುದು ಬಹಳ ಅಪರೂಪವಾಗಿತ್ತು.. ಅಂತಹ ಸಮಯದಲ್ಲಿ ಮಾಲಾಶ್ರೀ ಹಾಗೂ ರಾಮು ಅವರು ಪ್ರೀತಿಸಿ ಮದುವೆಯಾಗಿದ್ದರು.. ಮಾಲಾಶ್ರೀ ಹಾಗೂ ರಾಮು ಅವರ ಕುಟುಂಬಕ್ಕೆ ಎರಡು ಮಕ್ಕಳ ಆಗಮನವೂ ಆಯಿತು.. ಅದೊಂದು ಸುಂದರ ಸಂಸಾರವಾಗಿತ್ತು.. ಆಗಿನ ಕಾಲದಲ್ಲಿಯೇ ಸ್ಟಾರ್ ಜೋಡಿ ಎನಿಸಿಕೊಂಡಿದ್ದರು.. ಕಳೆದ ಫೆಬ್ರವರಿ ಹತ್ತರಂದು ಇಬ್ಬರೂ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು ಮಾಲಾಶ್ರೀ ಅವರು ರಾಮು ಅವರೊಟ್ಟಿಗಿನ ಆತ್ಮೀಯವಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.. ಜೊತೆಗೆ “ನಮ್ಮ ಜೀವನದ ಈ ವಿಶೇಷ ದಿನದಂದು ನಾನು ನಿಮಗೆ ಹೇಳಲು.. ತಿಳಿಸಲು ಇಷ್ಟ ಪಡುವುದು ಒಂದೇ.. ಅದು ನೀವೆ ನನ್ನ ಸರ್ವಸ್ವ.. ನಾನು ಪ್ರತಿಕ್ಷಣ ಬಯಸುವುದು ನಿಮ್ಮನ್ನು ಮಾತ್ರ..

ನನ್ನ ಜೊತೆ ಸದಾ ಇರುವುದಕ್ಕೆ ನಾನು ನಿಮಗೆ ಧನ್ಯವಾದಗಳನ್ನು ತಿಳಿಸುವೆ.. ನಾನು ನಿಮ್ಮನ್ನು ಅತಿ ಹೆಚ್ಚು ಪ್ರೀತಿಸುತ್ತಿರುವೆ.. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು.. ಮಾಲಾಶ್ರೀ ಅವರು ಗಂಡನ ಬಳಿ ಕೇಳಿಕೊಂಡ ಕೊನೆಯ ಮಾತು ಅದೇ ಆಗಿತ್ತು.. ಸದಾ ಜೊತೆಯಾಗಿರಿ ಎನ್ನುವುದು.. ಮಾಲಾಶ್ರೀ ಅವರ ಪ್ರತಿ ಮಾತಿನಲ್ಲಿಯೂ ರಾಮು ಅವರು ಸದಾ ಜೊತೆಯಾಗಿ ಇರಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದರು.. ಎಲ್ಲಾ ಸಂದರ್ಭದಲ್ಲಿಯೂ ಜೊತೆಯಾಗಿ ಇದ್ದದ್ದಕ್ಕೂ ಧನ್ಯವಾದಗಳನ್ನು ತಿಳಿಸಿದ್ದರು.. ಆದರೆ ದುರ್ಧೈವ ಎರಡೇ ತಿಂಗಳಿನಲ್ಲಿ ರಾಮು ಅವರು ದೂರಾಗಿ ಬಿಟ್ಟರು.. ಮಾಲಾಶ್ರೀ ಅವರ ಪ್ರತಿಯೊಂದು ಕನಸನ್ನು ಸಹ ನನಸು ಮಾಡಿದ್ದ ರಾಮು ಅವರು ಈ ಒಂದು ಆಸೆಯನ್ನೇಕೋ ನಿಜ ಮಾಡಲೇ ಇಲ್ಲ..

ಕೊರೊನಾ ಎಂಬ ಕಾಣದ ಕೈನಲ್ಲಿ ಸಿಲುಕಿ ದೂರಾಗಿಬಿಟ್ಟರು.. ನಿಜಕ್ಕೂ ಭಗವಂತ ಒಮ್ಮೊಮ್ಮೆ ಎಷ್ಟು ಕಲ್ಲು ಎನಿಸಿಬಿಡುತ್ತದೆ.. ಮಾಲಾಶ್ರೀ ಅವರ ರೀತಿಯಲ್ಲಿ ಇಂದು ರಾಜ್ಯದಲ್ಲಿ ಅದೆಷ್ಟೋ ಕುಟುಂಬಗಳು ತಮ್ಮ ತಮ್ಮ ಕುಟುಂಬದ ಸದಸ್ಯರನ್ನು ಆತ್ಮೀಯರನ್ನು ಆಪ್ತರನ್ನು ಸಂಗಾತಿಗಳನ್ನು ಕಳೆದುಕೊಂಡು ದುಃಖ್ಹಿಸುತ್ತಿದ್ದು ನಿಜಕ್ಕೂ ಯಾತಕ್ಕಾಗಿ ಹೀಗೆಲ್ಲಾ ಆಯಿತು.. ಮನುಕುಲದ ಅದ್ಯಾವ ತಪ್ಪಿಗೆ ಭಗವಣ್ತನ ಈ ಶಿಕ್ಷೆ ಎನಿಸುತ್ತಿದೆ.. ಇನ್ನಾದರೂ ಈ ನೋವುಗಳು ಕಡಿಮೆಯಾಗಲಿ..