ಷರತ್ತು ಹಾಕಿ ಸ್ಯಾಂಡಲ್ವುಡ್ ನ ಸಾಲು ಸಾಲು ನಟಿಯರನ್ನು ಮಾಲ್ಡೀವ್ಸ್ ಗೆ ಕರೆಸಿಕೊಂಡಿರುವವರು ಯಾರು ಗೊತ್ತಾ? ಆ ಕಂಡೀಷನ್ ಏನು ಗೊತ್ತಾ?

0 views

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅದರಲ್ಲೂ ನಟಿಮಣಿಯರ ಪೇಜ್ ಗಳಲ್ಲಿ ಮಾಲ್ಡೀವ್ಸ್ ನ ಸಮುದ್ರದ ತೀರಗಳಲ್ಲಿ ತುಂಡುಡುಗೆ ತೊಟ್ಟು ತೆಗೆದುಕೊಂಡಿರುವ ಫೋಟೋಗಳೇ ಹರಿದಾಡುತ್ತಿವೆ.. ಒಬ್ಬರು ಇಬ್ಬರು ಎಂದರೆ ಪ್ರವಾಸಕ್ಕೆ ಹೋದರು ಎಂದುಕೊಳ್ಳಬಹುದು.. ಆದರೆ ಡಜನ್ ಗಟ್ಟಲೇ ನಟಿಯರು ಮಾಲ್ಡೀವ್ಸ್ ನಲ್ಲಿಯೇ ಉಳಿದಿದ್ದು ಇದಕ್ಕೆಲ್ಲಾ ಹಣ ಕೊಟ್ಟು ಹೋಗಿದ್ದಾರಾ? ಎಂಬ ಪ್ರಶ್ನೆ ಮೂಡೋದು ಸಹಜ.. ಹಾಗೆಯೇ ಇಷ್ಟು ನಟಿಯರು ಒಟ್ಟಿಗೆ ಮಾಲ್ಡೀವ್ಸ್ ಗೆ ಹೋಗಲು ಏನು ಕಾರಣ ಎಂದು ಸಣ್ಣದಾಗಿ ಅನುಮಾನವೂ ಮೂಡುತ್ತದೆ.. ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ..

ಹೌದು ನಟಿಮಣಿಯರು ಯಾರೂ ಸಹ ಸ್ವಂತ ಖರ್ಚಿನಲ್ಲಿ ಹಣ ಕೊಟ್ಟು ಮಾಲ್ಡೀವ್ಸ್ ಗೆ ತೆರಳಿಲ್ಲ.. ಇದೆಲ್ಲವೂ ಉಚಿತವಾಗಿದೆ.. ಹೌದು ಮಾಲ್ಡಿವ್ಸ್ ಎಂದ ಕೂಡಲೇ ನೆನಪಾಗುವುದೇ ಪ್ರವಾಸೋದ್ಯಮ.. ಮಾಲ್ಡೀವ್ಸ್ ನ ಮೂಲ ಆದಾಯವೇ ಪ್ರವಾಸೋದ್ಯಮ.. ಆದರೆ ಕೊರೊನಾ ಬಂದ ನಂತರ ಅಲ್ಲಿನ ಪ್ರವಾಸೋದ್ಯಮ ನೆಲಕಚ್ವಿದ್ದು.. ಅದನ್ನು ಮತ್ತೆ ತರಲು ಹರಸಾಹಸ ಪಡುತ್ತಿದ್ದಾರೆ..

ಈ ಬಗ್ಗೆ ಜಾಹಿರಾತು ಕೊಟ್ಟರೆ ಅಷ್ಟೇನು ಉಪಯೋಗವಿಲ್ಲ ಎಂದು ಅರಿತ ಅಲ್ಲಿನ ರೆಸಾರ್ಟ್ ಮಾಲಿಕರು ಇದೀಗ ಹೊಸ ಪ್ಲಾನ್ ಮಾಡಿದ್ದಾರೆ.. ನಮ್ಮ ನಟಿಮಣಿಯರು ಮಾಲ್ಡಿವ್ಸ್ ನಲ್ಲಿ ಮಜಾ ಮಾಡುತ್ತಿರುವುದು ಇವರ ಸ್ವಂತ ಖರ್ಚಿನಿಂದಲ್ಲ ಬದಲಿಗೆ ರೆಸಾರ್ಟ್ ಮಾಲೀಕರ ಕರಾಮತ್ತಿನಿಂದ.. ವಿದೇಶಿ ಪ್ರವಾಸಕ್ಕೆ ಅನುಮತಿ ನೀಡಿದರೂ ಕೊರೊನಾ ಭಯದಿಂದ ಯಾರೂ ಸಹ ಪ್ರವಾಸಕ್ಕೆ ಹೋಗುತ್ತಿಲ್ಲ. ಹೀಗಾಗಿ ಅಲ್ಲಿನ ರೆಸಾರ್ಟ್ ಮಾಲೀಕರು ಪ್ಲಾನ್ ಒಂದನ್ನು‌ ಮಾಡಿದ್ದು ಕನ್ನಡ ತಮಿಳು ತೆಲುಗು ಸೇರಿದಂತೆ ವಿಬಿಧ ಭಾಷೆಯ ನಟಿಮಣಿಯರನ್ನು ಮಾಲ್ಡೀವ್ಸ್ ಗೆ ಆಹ್ವಾನಿಸಿದ್ದಾರೆ..

ಹೌದು ನಟಿಯರನ್ನು ಆಹ್ವಾನಿಸಿ ಅವರಿಗ್ರ್ ರೆಸಾರ್ಟ್ ಮಾಲೀಕರು ತಾರೆಯರಿಗೆ ಸೂಪರ್ ಕೊಡುಗೆಗಳನ್ನು ಆಫರ್ ಮಾಡಿದ್ದಾರೆ.. ನಟಿಮಣಿಯರ ಪ್ರಯಾಣ ವೆಚ್ಚ, ಊಟ-ವಸತಿ, ಶಾಪಿಂಗ್ ಸೇರಿದಂತೆ ಎಲ್ಲವನ್ನೂ ಅಲ್ಲಿನ ಆಯೋಜಕರೇ ಒದಗಿಸಿ ನಟಿಮಣಿಯರನ್ನು ಕರೆಸಿಕೊಂಡಿದ್ದಾರೆ. ಇದರೊಂದಿಗೆ ಕೆಲ ಷರತ್ತುಗಳನ್ನು ಸಹ ವಿಧಿಸಿದ್ದಾರೆ. ಈ ಮೂಲಕ ಪ್ರವಾಸೋದ್ಯಮ ಮೇಲೆತ್ತಲು ಪ್ರಯತ್ನ ಮಾಡುತ್ತಿದ್ದಾರೆ.. ಆ ಷರತ್ತು ಗಳು ಇಲ್ಲಿವೆ ನೋಡಿ..

ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೇ ತಮಿಳು ತೆಲುಗು ಹಿಂದಿ ಭಾಷೆಯ ನಟಿಯರು ಸೇರಿದಂತೆ ಇನ್ನೂ ಅನೇಕ ಸಿನಿಮಾ ಕಲಾವಿದರು ಮಾಲ್ಡಿವ್ಸ್‍ಗೆ ತೆರಳಿದ್ದಾರೆ. ಸ್ಯಾಂಡಲ್‍ವುಡ್‍ನ ಶಾನ್ವಿ ಶ್ರೀವಾಸ್ತವ್.. ಪ್ರಣಿತಾ.. ಬಾಲಿವುಡ್‍ನ ರಾಕುಲ್ ಪ್ರೀತ್ ಸಿಂಗ್ ತಾಪ್ಸಿ ಪನ್ನು.. ಕತ್ರಿನಾ ಕೈಫ್.. ಸೋನಾಕ್ಷಿ ಸಿನ್ಹಾ.. ಇಲಿಯಾನಾ.. ಮೌನಿ ರಾಯ್.. ತೆಲುಗಿನ ಸಮಂತಾ.. ಕಾಜಲ್ ಅಗರ್‍ವಾಲ್ ಹೀಗೆ ಸಾಲು ಸಾಲು ನಟಿಯರು ಮಾಲ್ಡೀವ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ..

ನಟಿ ಮಣಿಯರಿಗೆ ಊಟ, ವಸತಿ, ಶಾಪಿಂಗ್ ಜೊತೆಗೆ ಪ್ರತ್ಯೇಕ ಫೋಟೋಗ್ರಾಫರ್‍ಗಳನ್ನೂ ವ್ಯವಸ್ಥೆ ಮಾಡಿದ್ದಾರೆ. ಪ್ರತಿ ದಿನ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ 2-3 ಫೋಟೋ ಅಪ್‍ಲೋಡ್ ಮಾಡಬೇಕು ಎಂಬುವುದು ಕಂಡೀಷನ್ ಆಗಿದೆ… ಪ್ರತಿ ಚಿತ್ರಗಳಲ್ಲಿಯೂ ಹಾಟ್, ಗ್ಲಾಮರ್ ಆಗಿ ಕಾಣಿಸಿಕೊಳ್ಳಬೇಕು. ಇದರ ಜೊತೆಗೆ ಪ್ರತಿ ಫೋಟೋಗೆ ಲೊಕೇಶನ್ ಜೊತೆಗೆ ರೆಸಾರ್ಟ್ ಹೆಸರು ಹಾಕಬೇಕು. ಆದರೆ ಈ ಗುಟ್ಟು ಯಾರಿಗೂ ತಿಳಿಯಬಾರದು. ಈ ಮೂಲಕ ಮಾಲ್ಡಿವ್ಸ್ ಕೊರೊನಾ ಫ್ರೀ, ಇಲ್ಲಿ ಮಸ್ತ್ ಮಜಾ ಮಾಡಬಹುದು. ಕೊರೊನಾ ಬಂದ ನಂತರ ಮೊದಲ ವಿದೇಶ ಪ್ರವಾಸ ಮಾಲ್ಡೀವ್ಸ್ ಎಂಬುದನ್ನು ಸಾಬೀತು ಪಡಿಸಬೇಕು.. ಎಂದು ನಟಿಮಣಿಯರಿಗೆ ತಿಳಿಸಿದ್ದಾರೆ.. ಈ ಎಲ್ಲ ಷರತ್ತುಗಳಿಗೆ ಒಪ್ಪಿರುವ ತಾರೆಯರು ತಂಡೋಪತಂಡವಾಗಿ ತೆರಳಿ, ಮಜಾ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತುಂಡುಡುಗೆ ತೊಟ್ಟು ಪಡ್ಡೆ ಹೈಕಳ ನಿದ್ದೆ ಗೆಡಿಸುತ್ತಿದ್ದಾರೆನ್ನಬಹುದು..