ಮಧ್ಯರಾತ್ರಿ ಕುಡಿದು ನಡುರಸ್ತೆಯಲ್ಲಿಯೇ ಸ್ನೇಹಿತನ ಜೊತೆ ಜೀವ ಕಳೆದುಕೊಂಡ ಕನ್ನಡದ ಕಿರುತೆರೆ ನಟಿ.. ಯಾಕ್ ಬೇಕಿತ್ತು ಇದೆಲ್ಲಾ..

0 views

ಬಡವರು ಮತ್ತು ಮದ್ಯಮವರ್ಗದವರು ಪ್ರತಿಭೆ ಇದ್ದು ಅವಕಾಶಗಳಿಗಾಗಿ ಕಾಯುತ್ತಿರುತ್ತಾರೆ.. ಸಿಕ್ಕ ಅವಕಾಶವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಸೆಟಲ್ ಕೂಡ ಆಗುತ್ತಾರೆ.. ತಾವು ನಡೆದು ಬಂದ ಕಷ್ಟದ ದಿನಗಳ ಅರಿವು ಇರುವ ಯಾರೊಬ್ಬರೂ ಸಹ ತಮ್ಮ ಜೀವನವನ್ನು ಬೇರೆ ದಾರಿಗೆ ಕೊಂಡೊಯ್ಯುವುದಿಲ್ಲ.. ಕುಟುಂಬ ಜವಾಬ್ದಾರಿ ಮತ್ತಷ್ಟು ಸಾಧನೆ ದ್ಂಬ ಹಾದಿಯಲ್ಲಿ ಮುನ್ನಡೆಯುತ್ತಿರುತ್ತಾರೆ.. ಆದರೆ ಕೆಲವರು ಮಾತ್ರ ಅದರಲ್ಲಿಯೂ ಬಣ್ಣದ ಲೋಕದಲ್ಲಿ ಸ್ವಲ್ಪ ಗುರುತಿಸಿಕೊಂಡರೂ ಸಾಕು ಇತ್ತ ಬೇರೆ ಬೇರೆ ಅಭ್ಯಾಸಗಳನ್ನು ಶುರು ಮಾಡಿಕೊಂಡಿರುತ್ತಾರೆ.. ಹೌದು ಕೈಯಲ್ಲಿ ಸ್ವಲ್ಪ ಹಣ ಬಂದರೆ ಸಾಕು ಹೆಣ್ಣು ಮಕ್ಕಳೂ ಸಹ ಎಲ್ಲಾ ಅಭ್ಯಾಸಗಳನ್ನು ಮಾಡಿಕೊಳ್ಳುವುದು ಬೆಂಗಳೂರಿನಲ್ಲೀಗ ಸಾಮಾನ್ಯವಾಗಿ ಬಿಟ್ಟಿದೆ.. ಅದೇ ರೀತಿ ಅಂತಹ ಅಭ್ಯಾಸ ಮಾಡಿಕೊಂಡಿದ್ದ ಕನ್ನಡದ ಕಿರುತೆರೆ ನಟಿಯೊಬ್ಬರು ಮಧ್ಯ ರಾತ್ರಿ ರಸ್ತೆಯಲ್ಲಿಯೇ ಜೀವ ಕಳೆದುಕೊಳ್ಳುವಂತಾಗಿದೆ‌..

ಹೌದು ಕನ್ನಡ ಹಾಗೂ ತೆಲುಗಿನ ಕಿರುತೆರೆ ನಟಿ ನಿನ್ನೆ ರಾತ್ರಿ ಕುಡಿದು ಮಧ್ಯ ರಾತ್ರಿಯಲ್ಲಿ ಸ್ನೇಹಿತರೊಟ್ಟಿಗೆ ಹೊರಗೆ ತೆರಳಿ ಕಾರ್ ನಿಯಂತ್ರಣ ತಪ್ಪಿದ್ದು ನಡುರಸ್ತೆಯಲ್ಲಿಯೇ ಒಬ್ಬನನ್ನು ಬಿಟ್ಟು ಎಲ್ಲರೂ ಜೀವ ಕಳೆದುಕೊಂಡಿದ್ದಾರೆ.. ಹೌದು ಇಬ್ಬರು ನಟಿಯರು ಹಾಗೂ ಇವರ ಸ್ನೇಹಿತ ಅಬ್ದುಲ್ ರಹೀಮ್ ಎಂಬಾತ ಜೀವ ಕಳೆದುಕೊಂಡವರಾಗಿದ್ದು ಮತ್ತೊಬ್ಬ ಸ್ನೇಹಿತ ಸಾಯಿಸಿಧು ಎಂಬಾತ ಉಳಿದುಕೊಂಡಿದ್ದಾನೆ.. ಹೌದು ಈ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಗಚ್ಚಿಬೌಲಿ ಪ್ರದೇಶದಲ್ಲಿ ನಡೆದಿದೆ.. ಆದರೆ ಇವರೆಲ್ಲಾ ಆ ರಾತ್ರಿಯಲ್ಲಿ ಅಲ್ಲೇಕೆ ಹೋದರು.. ಅದಕ್ಕೂ ಬೇರೆ ಕಾರಣವಿದೆ..

ಹೌದು ಈ ನಟಿ ಮತ್ಯಾರೂ ಅಲ್ಲ ಮಾನಸ ನಾರಾಯಣ್.. ಬೆಂಗಳೂರಿನ ಮಾನಸ ನಾರಾಯಣ್ ಕನ್ನಡದ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದಳು. ನಂತರ ತೆಲುಗಿನಲ್ಲಿ ಅವಕಾಶ ಸಿಕ್ಕು ಅಲ್ಲಿನ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದರು.. ಹೌದು ಮಾನಸ ನಾರಾಯಣ್ ಮಾನಸ ಎಂ ಹಾಗೂ ಸಾಯಿ ಸಿಧು ಎಂಬಾತ ಒಟ್ಟು ಮೂವರು ಸಹ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರಂತೆ.. ಇತ್ತ ಅಬ್ದುಲ್ ರಹೀಮ್ ಬ್ಯಾಂಕ್‌ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದನಂತೆ.. ಈ ಸಾಯಿ ಸಿಧು ಎಂಬ ನಟ ಗಚ್ವಿಬೌಲಿಯಲ್ಲಿ ವಾಸವಾಗಿದ್ದನು.. ಈತನನ್ನು ನೋಡಲು ಅಬ್ದುಲ್ ರಹೀಮ್ ಕೂಡ ಇವರ ಮನೆಗೆ ಬಂದನು.. ಇನ್ನು ಶನಿವಾರ ಗಚ್ಚಿಬೌಲಿ ಬಳಿ ಧಾರಾವಾಹಿಯ ಚಿತ್ರೀಕರಣ ಇತ್ತು ಎಂದು ಮಾನಸ ನಾರಾಯಣ್ ಹಾಗೂ ಮಾನಸ ಎಂ ಇಬ್ಬರೂ ನಟಿಯರು ಸಹ ಶುಕ್ರವಾರ ರಾತ್ರಿ ಸಾಯಿ ಸಿಧು ಮನೆಗೆ ರಾತ್ರಿ ಉಳಿದುಕೊಳ್ಳಲು ಬಂದಿದ್ದಾರೆ..

ಅದೇ ದಿಮ ಶುಕ್ರವಾರ ರಾತ್ರಿ ಎಲ್ಲರೂ ಗಂಟಲು ಪೂರ್ತಿ ಮಾಡಿಕೊಂಡಿದ್ದಾರೆ.. ಅಷ್ಟಕ್ಕೆ ಸುಮ್ಮನಾಗಿದ್ದರೆ ಬಹುಶಃ ಇಂದು ಎಲ್ಲರೂ ಉಳಿಯುತ್ತಿದ್ದರು.. ಆದರೆ ಅವರೆಲ್ಲರೂ ಆ ರಾತ್ರಿ ಮತ್ತೆ ಟೀ ಕುಡಿಯೋಕೆ ಅಂತ ಕಾರಿನಲ್ಲಿ ಹೊರಟರಂತೆ.. ಗಚ್ವಿಬೌಲಿಯಿಂದ ಲಿಂಗಂಪಲ್ಲಿ ಕಡೆಗೆ ಹೋಗುವಾಗ ಅಲ್ಲಿಯೇ ಒಂದು ಎಲ್ಲಮನ ದೇವಸ್ಥಾನವಿದೆ..ಆ ದೇವಸ್ಥಾನದ ಬಳಿ ವಾಹಮ ನಿಯಂತ್ರಣ ತಪ್ಪಿದ್ದು ಮರಕ್ಕೆ ಡಿಕ್ಕಿಯಾಗಿದೆ.. ಇತ್ತ ಕಾರು ಚಲಾಯಿಸುತ್ತಿದ್ದ ಅಬ್ದುಲ್ ರಹೀಮ್, ನಟಿಯರಾದ ಮಾನಸ ನಾರಾಯಣ್ ಹಾಗೂ ಮಾನಸ ಎಂ ಮೂವರೂ ಸಹ ಸ್ಥಳದಲ್ಲಿಯೇ ಜೀವ ಕಳೆದುಕೊಂಡಿದ್ದಾರೆ.. ಇತ್ತ ತೀವ್ರವಾಗಿ ಪೆಟ್ಟಾಗಿದ್ದ ಸಾಯಿ ಸಿಧುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.. ಈತನೂ ಸಹ ಘಟನೆ ಬಗ್ಗೆ ಹೇಳಿಕೆ ಕೊಟ್ಟಿದ್ದು ಆ ರಾತ್ರಿ ಏನು ನಡೆಯಿತೆಂದು ಬಾಯಿಬಿಟ್ಟಿದ್ದಾನೆ..

ಹೌದು ಆ ಮೂರು ಜನ ಶುಕ್ರವಾರ ರಾತ್ರಿ ನನ್ನ ಮನೆಗೆ ಬಂದಿದ್ದರು.. ಅವರೆಲ್ಲರೂ ಕುಡಿದಿದ್ದರು.. ನಾನು ಸೇವಿಸಿರಲಿಲ್ಲ.. ಟೀ ಕುಡಿಯಲು ಹೊರಗೆ ಹೋಗೋಣ ಎಂದು ಅವರು ಬಹಳ ಒತ್ತಾಯ ಮಾಡಿದರು.. ನಾನು ಬೇಡ ಎಂದು ಬಹಳಷ್ಟು ಬಾರಿ ಹೇಳಿದೆ.. ಆದರೆ ಅವರು ಒಪ್ಪಲಿಲ್ಲ.. ಕೊನೆಗೆ ನಾಲ್ಕು ಜನ ಕಾರ್ ನಲ್ಲಿಯೇ ಹೋದೆವು.. ದೇವಸ್ಥಾನದ ಬಳಿ ಈ ರೀತಿ ಆಯಿತು.. ಆನಂತರ ಏನಾಯಿತೆಂದು ನನಗೆ ನೆನಪಿಲ್ಲ ಎಂದಿದ್ದಾನೆ.. ಒಟ್ಟಿ‌ನಲ್ಲಿ ಅರೆಕ್ಷಣದ ಮೋಜಿಗೆ ಮೂರು ಜೀವಗಳೇ ಹೋಗಿಬಿಟ್ಟವು.. ದುಡಿಯಲು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋದೆವಾ ನಮ್ಮ ಕೆಲಸ ಮಾಡಿದೆವಾ ಬಂದೆವಾ ಎನ್ನುವಂತಿರಬೇಕು.. ಅದನ್ನು ಬಿಟ್ಟು ಈ ರೀತಿ ಬೇರೆ ಬೇರೆ ಅಭ್ಯಸಗಳಿಗೆ ದಾಸರಾದರೆ ಈ ರೀತಿ ಅವುಗಳಿಂದಲೇ ಜೀವನ ಅಂತ್ಯವಾಗಿಬಿಡುತ್ತದೆ ಅಷ್ಟೇ.. ಜೀವನದಲ್ಲಿ ಎಲ್ಲವೂ ಮುಖ್ಯ ನಿಜ..

ಆದರೆ ಎಲ್ಲವೂ ಮಿತಿಯಲ್ಲಿದ್ದರೆ ಮಾತ್ರ ಎಲ್ಲಾದಕ್ಕೂ ಬೆಲೆ.. ಇತ್ತ ಮಗಳು ದುಡಿಯಲು ಹೋಗಿದ್ದಾಳೆ ಧಾರಾವಾಹಿಯಲ್ಲಿ ಅಭಿನಯಿಸಿ ನಮ್ಮನ್ನು ನೋಡಿಕೊಳ್ಳುತ್ತಾಳೆ ಎಂದುಕೊಳ್ಳುತ್ತಿದ್ದ ಮಾನಸ ತಾಯಿ ಹಾಗೂ ಸಹೋದರಿಯ ಕನಸು ನನಸಾಗುವುದಿರಲಿ ಜೀವನ ಪೂರ್ತಿ ನೋವಿನಲ್ಲಿಯೇ ದಿನ ಕಳೆಯುವಂತಾಗಿ ಹೋಯ್ತು.. ಯಾಕ್ ಬೇಕಿತ್ತು ಇದೆಲ್ಲಾ.. ಆ ರಾತ್ರಿ ಸ್ನೇಹಿತರ ಮನೆಗೆ ಹೋಗುವ ಅನಿವಾರ್ಯತೆ ಏನಿತ್ತು.. ಇತ್ತ ಹುಡುಗರು ಇದ್ದಾರೆ ಎಂದರೂ ಸಹ ಕುಡಿಯುವ ಅನಿವಾರ್ಯತೆ ಏನಿತ್ತು.. ಕುಡಿದ ನಂತರ ಲಾಂಗ್ ರೈಡ್ ಹೋಗಿ ಜೀವನದ ರೈಡ್ ಅನ್ನೇ ಮುಗಿಸಿಕೊಳ್ಳುವ ಆತುರವೇನಿತ್ತು.. ಒಟ್ಟಿನಲ್ಲಿ ಮಕ್ಕಳು ದೂರದೂರಿಗೆ ಹೋಗಿ ಒಳ್ಳೆಯ ದಾರಿಯಲ್ಲಿ ದುಡಿಯುತ್ತಿದ್ದಾರೆ ಎಂದು ನಂಬಿಕೊಳ್ಳುವ ಅಪ್ಪ ಅಮ್ಮನಿಗೆ ಇಂತಹ ಕೆಲವರಿಂದ ಸಿಗುವುದು ಈ ರೀತಿಯ ನೋವಷ್ಟೇ..